ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣದಲ್ಲಿ ಉದ್ಯೋಗ

Advertisements

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಹುದ್ದೆ : ಎಂ.ಬಿ.ಬಿ.ಎಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ವೈದ್ಯಾಧಿಕಾರಿಗಳು ( ಎನ್‌ಸಿಡಿ) : ಒಟ್ಟು 07 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಎಂಬಿಬಿಎಸ್ ವಿದ್ಯಾರ್ಹತೆಯನ್ನು ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 45,000/- ರೂ.ವೇತನವಿರುತ್ತದೆ. 40 ವರ್ಷಕ್ಕಿಂತ ಕಡಿಮೆ ವಯೋಮಿತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವೈದ್ಯಾಧಿಕಾರಿಗಳು ( ಆರ್‌.ಎನ್‌.ಟಿ.ಸಿ.ಪಿ) : ಒಟ್ಟು ಎರಡು ಹುದ್ದೆಗಳಿದ್ದು, ಎಂಬಿಬಿಎಸ್ ವಿದ್ಯಾರ್ಹತೆಯನ್ನು ಹೊಂದಿದ್ದು, ಮಾಸಿಕ 45,000/-ರೂ.ವೇತನವಿರುತ್ತದೆ. 40 ವರ್ಷಕ್ಕಿಂತ ಕಡಿಮೆ ವಯೋಮಿತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವೈದ್ಯಾಧಿಕಾರಿಗಳು (ರಾಜ್ಯ ರಕ್ತ ವಾಹಿನಿ ವಿಭಾಗ) : ಒಂದು ಹುದ್ದೆಯನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಎಂಬಿಬಿಎಸ್ ವಿದ್ಯಾರ್ಹತೆಯನ್ನು ಹೊಂದಿರಬೇಕು. ರೂ. 36,750/- ಮಾಸಿಕ ವೇತನವಿರುತ್ತದೆ. 40 ವರ್ಷಕ್ಕಿಂತ ಕಡಿಮೆ ವಯೋಮಿತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಅರ್ಹ ಅಭ್ಯರ್ಥಿಗಳು ಎಲ್ಲಾ ದಾಖಲಾತಿಗಳೊಂದಿಗೆ ದಿನಾಂಕ : 29-04-2021 ರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎನ್‌ಹೆಚ್‌ಎಂ ವಿಭಾಗದ ವಿಷಯ ನಿರ್ವಾಹಕರಾದ ಶ್ರೀ.ಎಮ್‌.ಎಸ್‌.ಮಕಾನದಾರ (ಪ್ರ.ದ.ಸ) ಮೊ. 9606345997 ಇವರಲ್ಲಿ ಅರ್ಜಿ ಪಡೆದು ಬೆಳಿಗ್ಗೆ ಹತ್ತುಗಂಟೆಯಿಂದ ಸಾಯಂಕಾಲ ಐದು ಗಂಟವರೆಗೆ ದಾಖಲಾತಿ ಸಲ್ಲಿಸಲು ಸೂಚಿಸಲಾಗಿದೆ.

Leave a Comment