ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ‘ ಕಾನೂನು ಸಲಹೆಗಾರ’ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ನೇಮಕಾತಿ ಕೇವಲ 2 ವರ್ಷಗಳ ಅವಧಿಗೆ ಒಪ್ಪಂದದ ಆಧಾರದ ಮೇಲೆ ಹಿಂದಿನ ವರ್ಷದ ಕಾರ್ಯಕ್ಷಮತೆಯ ಪರಿಶೀಲನೆಯ ನಂತರ ಒಂದು ವರ್ಷದವರೆಗೆ ವಿಸ್ತರಿಸಬಹುದಾಗಿದೆ. ಕೆಲಸಕ್ಕೆ ಸಂಭಾವನೆ ಸೂಕ್ತವಾಗಿದೆ.
ಅರ್ಹತಾ ಮಾನದಂಡಗಳು :
1.ಅಭ್ಯರ್ಥಿಯು ಬಾರ್ ಕೌನ್ಸಿಲ್ ಕರ್ನಾಟಕದಲ್ಲಿ ನೊಂದಾಯಿಸಿರಬೇಕು.
2.ಹೆಚ್ಚಿನ ವಿದ್ಯಾರ್ಹತೆ ಹೊಂದಿರಬೇಕು.
3.ಕೆಎಟಿ ಮತ್ತು ಹೈಕೋರ್ಟ್ ನಲ್ಲಿ ಆಡಳಿತ ಮತ್ತು ಕಾನೂನು ವಿಷಯಗಳನ್ನು ನಿರ್ವಹಿಸುವಲ್ಲಿ ಅನುಭವ ಹೊಂದಿರಬೇಕು.
4. ಅಭ್ಯರ್ಥಿಯು ಕಾನೂನು ಸೇವೆಗಳಲ್ಲಿ ಕನಿಷ್ಠ 15 ವರ್ಷಗಳ ಅನುಭವವನ್ನು ಹೊಂದಿರಬೇಕು.
5. ಅಭ್ಯರ್ಥಿಯು 60 ವರ್ಷಕ್ಕಿಂತ ಕಡಿಮೆ ವಯೋಮಾನದವರಾಗಿರಬೇಕು.
6. ಅಭ್ಯರ್ಥಿಯು ಅರ್ಜಿಯ ಹಾರ್ಡ್ ಕಾಪಿಯನ್ನು ಈ ಕೆಳಕಂಡ ವಿಳಾಸಕ್ಕೆ ಸಲ್ಲಿಸುವುದು.
ಮುಖ್ಯ ಆಡಳಿತಾಧಿಕಾರಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಆರೋಗ್ಯ ಸೌಧ, ಮಾಗಡಿ ರಸ್ತೆ, ಬೆಂಗಳೂರು – 560023
ಅರ್ಜಿದಾರರು ಸ್ಕ್ಯಾನ್ ಮಾಡಿದ ದಾಖಲಾತಿಗಳನ್ನು ಇ- ಮೇಲ್ [email protected] ಗೆ ಕಳುಹಿಸತಕ್ಕದ್ದು.
ಕಾನೂನು ಸಲಹೆಗಾರರ ಕಛೇರಿಯು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಆರೋಗ್ಯ ಸೌಧ, ಮಾಗಡಿ ರಸ್ತೆ, ಬೆಂಗಳೂರು – ಈ ಆವರಣದಲ್ಲಿರುತ್ತದೆ.
ಅರ್ಜಿ ಸಲ್ಲಿಸಲುಕೊನೆಯ ದಿನಾಂಕ : 12-04-2021 ರ ಸಂಜೆ 05.00 ಗಂಟೆಯವರೆಗೆ.
ಹೆಚ್ಚಿನ ಮಾಹಿತಿ ಅಥವಾ ವಿವರಗಳಿಗಾಗಿ ಅರ್ಜಿದಾರರು ಇ – ಮೇಲ್ [email protected] ಗೆ ಕಳುಹಿಸಬಹುದು