HGML Recruitment 2024: ಹಟ್ಟಿ ಚಿನ್ನದ ಗಣಿಯಲ್ಲಿ ವಿವಿಧ ಉದ್ಯೋಗಾವಕಾಶ; ಆನ್‌ಲೈನ್‌ ಅರ್ಜಿ ಸಲ್ಲಿಕೆಯ ಲಿಂಕ್‌ ಇಲ್ಲಿದೆ

ಉದ್ಯೋಗ ವಿವರ- ಕ್ವಿಕ್‌ ಲುಕ್

  • ಎಲ್ಲಿ ಉದ್ಯೋಗ?: ಹಟ್ಟಿ ಚಿನ್ನದ ಗಣಿ ಕಂಪನಿ
  • ಹುದ್ದೆಯ ಹೆಸರು: ಹಟ್ಟಿ ಚಿನ್ನದ ಗಣಿಯಲ್ಲಿ ಜಿ8 ಹಾಗೂ ಜಿ5 ದರ್ಜೆಯ ಹುದ್ದೆಗಳ ಭರ್ತಿ
  • ಹುದ್ದೆಗಳ ಸಂಖ್ಯೆ: 157
  • ಅರ್ಜಿ ಸಲ್ಲಿಸುವುದು ಹೇಗೆ?: ಆನ್‌ಲೈನ್‌ ಮೂಲಕ
  • ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: June 4, 2024
  • ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: June 15, 2024
  • ವೆಬ್‌ ವಿಳಾಸ: https://huttigoldkarnataka.co.in/
Advertisements

HGML Recruitment 2024: ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದ್ದು, ಆಸಕ್ತರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ವಿವಿಧ ವಿಭಾಗಗಳಲ್ಲಿ ಉಳಿಕೆ ಮೂಲ/ಕಲ್ಯಾಣ ಕರ್ನಾಟಕ ವೃಂದ ದಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇರ ನೇಮಕಾತಿ ಮಾಡುವ ಮೂಲಕ ಅರ್ಜಿಯನ್ನು ಆಹ್ವಾನಿಸಿದೆ. ಕಲ್ಯಾಣ ಕರ್ನಾಟಕ ವೃಂದ, ಸ್ಥಳಿಯೇತರ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಯ ಕುರಿತ ಹೆಚ್ಚಿನ ವಿವರಗಳನ್ನು ಈ ಕೆಳಗೆ ನೀಡಲಾಗಿದ್ದು, ಅಭ್ಯರ್ಥಿಗಳನ್ನು ಸಂಪೂರ್ಣ ವಿವರಗಳನ್ನು ಓದಿ ಅರ್ಜಿ ಸಲ್ಲಿಸಬಹುದು.

ಪ್ರಮುಖ ದಿನಾಂಕಗಳು;
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 04-06-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15-06-2024

ಹುದ್ದೆಯ ಕುರಿತ ಸಂಪೂರ್ಣ ವಿವರ ಇಲ್ಲಿದೆ;
ಸಂಸ್ಥೆಯ ಹೆಸರು ಮತ್ತು ವಿವರ: ಹಟ್ಟಿ ಚಿನ್ನದ ಗಣಿಯಲ್ಲಿ ಜಿ8 ಹಾಗೂ ಜಿ5 ದರ್ಜೆಯ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಉಳಿಕೆ ಮೂಲ/ಸ್ಥಳೀಯೇತರ ವೃಂದ ಹಾಗೂ ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳ ವಿವರ ಇಲ್ಲಿ ನೀಡಲಾಗಿದೆ.

ಉಳಿಕೆ ಮೂಲ/ ಸ್ಥಳೀಯೇತರ ವೃಂದದ ಹುದ್ದೆಗಳ ವಿವರ ಇಲ್ಲಿದೆ;
ಸಹಾಯಕ ಫೋರೈನ್ (ಗಣಿ) 01 ಹುದ್ದೆ
ಸಹಾಯಕ ಫೋರೈನ್ (ಲೋಹ ಶಾಸ್ತ್ರ) 02 ಹುದ್ದೆಗಳು
ಲ್ಯಾಬ್‌ ಸಹಾಯಕ 01 ಹುದ್ದೆ
ಸಹಾಯಕ ಫೋರೈನ್ (ಭೂ -ಗರ್ಭಶಾಸ್ತ್ರ) 01 ಹುದ್ದೆ
ಸಹಾಯಕ ಫೋರೈನ್ (ಡೈಮಂಡ್ ಡ್ರಿಲ್ಲಿಂಗ್ / ಭೂಕೆಳಮ್ಮೈ ವಜ್ರಭೈರಿಗೆ) 01 ಹುದ್ದೆ
ಸಹಾಯಕ ಫೋರೈನ್ (ಮೆಕ್ಯಾನಿಕಲ್) 03 ಹುದ್ದೆಗಳು
ಐಟಿಐ ಫಿಟ್ಟರ್ ದರ್ಜೆ-II (ಗಣಿ ವಿಭಾಗ) 09 ಹುದ್ದೆಗಳು
ಐಟಿಐ ಫಿಟ್ಟರ್ ದರ್ಜೆ-II (ಲೋಹ ವಿಭಾಗ) 02 ಹುದ್ದೆಗಳು
ಐಟಿಐ ಇಲೆಕ್ಟ್ರಿಕಲ್ ದರ್ಜೆ-II (ತಾಂತ್ರಿಕ ವಿಭಾಗ) 02 ಹುದ್ದೆಗಳು

ಕಲ್ಯಾಣ ಕರ್ನಾಟಕ (ಸ್ಥಳೀಯ) ವೃಂದದ ಹುದ್ದೆಗಳ ವಿವರ ಇಲ್ಲಿದೆ;
ಸಹಾಯಕ ಫೋರೈನ್ (ಗಣಿ) 15 ಹುದ್ದೆಗಳು
ಸಹಾಯಕ ಫೋರೈನ್ (ಲೋಹ ಶಾಸ್ತ್ರ) 05 ಹುದ್ದೆಗಳು
ಸಹಾಯಕ ಫೋರೈನ್ ( ಸಿವಿಲ್) 01 ಹುದ್ದೆ
ಸಹಾಯಕ ಫೋರೈನ್ ( ಇಲೆಕ್ಟ್ರಿಕಲ್) 01 ಹುದ್ದೆ
ಸಹಾಯಕ ಫೋರೈನ್ (ಭೂಗರ್ಭಶಾಸ್ತ್ರ) 02 ಹುದ್ದೆಗಳು
ಸಹಾಯಕ ಫೋರೈನ್ (ಡೈಮಂಡ್ ಡ್ರಿಲ್ಲಿಂಗ್ / ಭೂಕೆಳಮ್ಮೈ ವಜ್ರಭೈರಿಗೆ) 01 ಹುದ್ದೆ
ಸಹಾಯಕ ಫೋರೈನ್ (ಮೆಕ್ಯಾನಿಕಲ್) 16 ಹುದ್ದೆಗಳು
ಭದ್ರತಾ ನಿರೀಕ್ಷಕರು 06 ಹುದ್ದೆಗಳು
ಐಟಿಐ ಫಿಟ್ಟರ್ ದರ್ಜೆ-II (ಗಣಿ ವಿಭಾಗ) 45 ಹುದ್ದೆಗಳು
ಐಟಿಐ ಫಿಟ್ಟರ್ ದರ್ಜೆ-II (ಲೋಹ ವಿಭಾಗ) 15 ಹುದ್ದೆಗಳು
ಐಟಿಐ ಫಿಟ್ಟರ್ ದರ್ಜೆ-II (ಭೂ ಅನ್ವೇಷಣೆ ವಿಭಾಗ) 02 ಹುದ್ದೆಗಳು
ಐಟಿಐ ಇಲೆಕ್ಟ್ರಿಕಲ್ ದರ್ಜೆ-II (ತಾಂತ್ರಿಕ ವಿಭಾಗ) 02 ಹುದ್ದೆಗಳು
ಸೆಕ್ಯೂರಿಟಿ ಗಾರ್ಡ್‌ 24 ಹುದ್ದೆಗಳು

ವಿದ್ಯಾರ್ಹತೆ : ಮೇಲ್ಕಂಡ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗೆ ಅನುಸಾರವಾಗಿ 3 ವರ್ಷದ ಡಿಪ್ಲೊಮ ಹಾಗೂ 2 ವರ್ಷದ ಐಟಿಐ, ಮೂರು ವರ್ಷದ ಪದವಿ, ದ್ವಿತೀಯ ಪಿಯುಸಿ ತೇರ್ಗಡೆ ಹೊಂದಿರಬೇಕು.

ವೇತನ ಶ್ರೇಣಿ: Rs.25000-48020 + ಅನ್ವಯಿಸುವ ಕೈಗಾರಿಕೆ ತುಟ್ಟಿ ಭತ್ಯೆ ನೀಡಲಾಗುವುದು ಎಂದು ಅಧಿಸೂಚನೆಯಲ್ಲಿ ವಿವರಿಸಲಾಗಿದೆ.

ಅರ್ಜಿ ಶುಲ್ಕ: ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ ರೂ.600, ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.300, ಎಸ್‌ಸಿ / ಎಸ್‌ಟಿ / ಪ್ರವರ್ಗ-1 ಅಭ್ಯರ್ಥಿಗಳಿಗೆ ರೂ.100 ಅರ್ಜಿ ಶುಲ್ಕವಿರಲಿದೆ.

ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು https://huttigoldkarnataka.co.in/ ಈ ವೆಬ್‌ಸೈಟ್‌ಗೆ ಭೇಟಿ ನೀಡಿ ಕ್ಲಿಕ್‌ ಮಾಡಬೇಕು. ನಂತರ ರಿಜಿಸ್ಟ್ರೇಷನ್‌-ಲಾಗಿನ್‌ ಕ್ಲಿಕ್‌ ಮಾಡಿ, ಅಲ್ಲಿ ಕೇಳಲಾದ ಮಾಹಿತಿಯನ್ನು ನೀಡಬೇಕು. ನಂತರ ರಿಜಿಸ್ಟ್ರೇಷನ್‌ ಪಡೆದು ಅರ್ಜಿ ಸಲ್ಲಿಸಬೇಕು.

ಕೆಲವು ಸೂಚನೆಗಳು
ಮೇಲ್ಕಂಡ ಹುದ್ದೆಗೆ ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಹಾಜರಾಗುವುದು. ಪರೀಕ್ಷೆ ನಡೆಸುವ ದಿನಾಂಕ ಹಾಗೂ ಸ್ಥಳದ ವಿವರಗಳನ್ನು ಅರ್ಜಿ ಹಾಕಿದ ಅಭ್ಯರ್ಥಿಗಳಿಗೆ ಇಮೇಲ್‌/ ಎಸ್‌ಎಂಎಸ್‌ ಮೂಲಕ ತಿಳಿಸಲಾಗುವುದು.
ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಅಭ್ಯರ್ಥಿಗೆ ದೈಹಿಕ/ ಸಹಿಷ್ಣುತಾ ಪರೀಕ್ಷೆ ಇರಲಿದೆ. ಇದರ ವಿವರಗಳನ್ನು ವೆಬ್‌ಸೈಟ್‌ ಹಾಗೂ ಇ-ಮೇಲ್‌/ಎಸ್‌ಎಂಎಸ್‌ ಮೂಲಕ ತಿಳಿಸಲಾಗುವುದು.
ಅಭ್ಯರ್ಥಿಗಳನ್ನು ತಾತ್ಕಾಲಿಕ ಆಯ್ಕೆ ಪಟ್ಟಿ, ಮೆರಿಟ್‌, ರೋಸ್ಟರ್‌ ಮೀಸಲಾತಿ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.