HAL ಸಂಸ್ಥೆಯಲ್ಲಿ ಇಂಜಿನಿಯರ್‌ ಹುದ್ದೆಗೆ ಅರ್ಜಿ ಆಹ್ವಾನ; 16 ಹುದ್ದೆಗಳು ಖಾಲಿ ಇದೆ, ಭರ್ಜರಿ ವೇತನ

ಉದ್ಯೋಗ ವಿವರ- ಕ್ವಿಕ್‌ ಲುಕ್

  • ಎಲ್ಲಿ ಉದ್ಯೋಗ?: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್
  • ಹುದ್ದೆಯ ಹೆಸರು: ಇಂಜಿನಿಯರ್
  • ಹುದ್ದೆಗಳ ಸಂಖ್ಯೆ: 16
  • ಅರ್ಜಿ ಸಲ್ಲಿಸುವುದು ಹೇಗೆ?: ಆನ್‌ಲೈನ್‌ ಮೂಲಕ
  • ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: May 29, 2024
  • ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: June 7, 2024
  • ವೆಬ್‌ ವಿಳಾಸ: https://hal-india.co.in/home
Advertisements

HAL India Recruitment 2024: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಇಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಒಟ್ಟು 16 ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಇಂಜಿನಿಯರ್‌ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಈ ಕೆಳಗೆ ನೀಡಲಾದ ಹುದ್ದೆಯ ವಿವರಗಳನ್ನು ಓದಿ ಅರ್ಜಿ ಸಲ್ಲಿಸಬಹುದು. ಬೆಂಗಳೂರು – ಕರ್ನಾಟಕ ಸರ್ಕಾರದಲ್ಲಿ ವೃತ್ತಿ ಮಾಡಲಿಚ್ಛಿಸುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಇಂಜಿನಿಯರ್‌ ಹುದ್ದೆಗೆ ಅರ್ಜಿ ಸಲ್ಲಿಸಲು 07-Jun-2024 ಕೊನೆಯ ದಿನಾಂಕವಾಗಿದ್ದು. ಅದರೊಳಗೆ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.

ಪ್ರಮುಖ ದಿನಾಂಕಗಳು;
ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 29-05-2024
ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ; 07-06-2024

ಹುದ್ದೆಯ ಕುರಿತ ವಿವರ ಇಲ್ಲಿದೆ;
ಸಂಸ್ಥೆಯ ಹೆಸರು: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL ಇಂಡಿಯಾ) ಇಲ್ಲಿ ಇಂಜಿನಿಯರ್‌ ಹುದ್ದೆ ಖಾಲಿ ಇದ್ದು, ಒಟ್ಟು 16 ಪೋಸ್ಟ್‌ಗಳಿಗೆ ಭರ್ತಿ ನಡೆಯಲಿದೆ. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 40,000 – 60,000/- ವೇತನ ದೊರಕಲಿದೆ.

ಹುದ್ದೆ ಹೆಸರು ಮತ್ತು ಸಂಖ್ಯೆ:
CMM (ಹಂತ5) ಇಂಜಿನಿಯರ್ 4 ಹುದ್ದೆಗಳು
ಮಧ್ಯಮ ತಜ್ಞ 6 ಹುದ್ದೆಗಳು
ಜೂನಿಯರ್ ಸ್ಪೆಷಲಿಸ್ಟ್ 6 ಹುದ್ದೆಗಳು

ವಿದ್ಯಾರ್ಹತೆ: HAL ಭಾರತದ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಪದವಿ, BE/ B.Tech ತೇರ್ಗಡೆ ಹೊಂದಿರಬೇಕು.

ವೇತನ:
CMM (ಹಂತ5) ಎಂಜಿನಿಯರ್ ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 60,000/- ವೇತನವಿರಲಿದೆ.
ಮಧ್ಯಮ ತಜ್ಞ ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 50,000/- ಸಂಬಳವಿರಲಿದೆ.
ಜೂನಿಯರ್ ಸ್ಪೆಷಲಿಸ್ಟ್ ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 40,000/- ವೇತನ ಸಿಗಲಿದೆ.

ವಯೋಮಿತಿ:
CMM (ಹಂತ5) ಇಂಜಿನಿಯರ್ – 45 ವರ್ಷ ಮೀರಿರಬಾರದು.
ಮಧ್ಯಮ ತಜ್ಞ 40 ವರ್ಷ ಮೀರಿರಬಾರದು.
ಜೂನಿಯರ್ ಸ್ಪೆಷಲಿಸ್ಟ್ 35 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ:
OBC ಅಭ್ಯರ್ಥಿಗಳಿಗೆ 3 ವರ್ಷ, PWBD ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

ಅರ್ಜಿ ಶುಲ್ಕ: ಎಲ್ಲಾ ಇತರ ಅಭ್ಯರ್ಥಿಗಳಿಗೆ ರೂ. 500/-, SC/ST/PwB ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿ ಮಾಡುವಂತಿಲ್ಲ. ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರವೇ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು.

ಆಯ್ಕೆ ಪ್ರಕ್ರಿಯೆ: HAL ನಲ್ಲಿ ಇಂಜಿನಿಯರ್‌ ಹುದ್ದೆಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.