ಸೇಡಂ ತಾಲೂಕಿನ ಕೋಡ್ಲಾ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಹುದ್ದೆ : ಅತಿಥಿ ಶಿಕ್ಷಕರ ನೇಮಕಾತಿ
ಅರ್ಜಿ ಸಲ್ಲಿಸಬೇಕಾದ ಕೊನೆಯ ದಿನಾಂಕ : ಎಪ್ರಿಲ್ 10, 2021
ಸಮಾಜ ಕಲ್ಯಾಣ ಇಲಾಖೆ ( ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ) ವ್ಯಾಪ್ತಿಯಲ್ಲಿ ಕೋಡ್ಲಾ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಖಾಲಿ ಇರುವ ಸಮಾಜ ವಿಜ್ಞಾನ ( ಆಂಗ್ಲ ಮಾಧ್ಯಮ ) ಅತಿಥಿ ಶಿಕ್ಷಕರ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ.
ವಿದ್ಯಾರ್ಹತೆ : ಅರ್ಜಿಗಳನ್ನು ಸಲ್ಲಿಸುವವರು ಬಿ.ಎ, ಬಿ.ಇಡಿ ಪಾಸಾಗಿರಬೇಕು. ಶಿಕ್ಷಕರನ್ನು ಗೌರವ ಧನದ ಆಧಾರದ ಮೇಲೆ ಶಾಲಾ ಹಂತದಲ್ಲಿ ನಿಯಮಾವಳಿಗೆ ಒಳಪಟ್ಟು ನೇಮಕ ಮಾಡಲಾಗುವುದು. ನಿವೃತ ಶಿಕ್ಷಕರು ಕೂಡಾ ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಬಂಧಪಟ್ಟ ಶೈಕ್ಷಣಿಕ ದಾಖಲೆಗಳೊಂದಿಗೆ 2021, ಎಪ್ರಿಲ್ 10 ರೊಳಗಾಗಿ ಅರ್ಜಿಯನ್ನು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕೋಡ್ಲಾ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲರನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ : 8747924789