ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಕೋವಿಡ್ – 19ರ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಶ್ರುಶ್ರೂಷಾಧಿಕಾರಿಗಳ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಮಾನ್ಯ ನಿರ್ದೇಶಕರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಬೆಂಗಳೂರು ಇವರು ಅನುಮತಿ ನೀಡಿರುತ್ತಾರೆ.
ಗದಗ ವೈದ್ಯಕೀಯ ವಿಜ್ಞಾನಿಗಳ ಸಂಸ್ಥೆ ಬೋಧಕ ಆಸ್ಪತ್ರೆಯಲ್ಲಿ ( ಜಿಲ್ಲಾ ಆಸ್ಪತ್ರೆಯಲ್ಲಿ) ಖಾಲಿ ಇರುವ 05 ಶುಶ್ರೂಷಾಧಿಕಾರಿಗಳ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ದಿನಾಂಕ 30-09-2021 ರ ವರೆಗೆ ಅಥವಾ ನೇರ ನೇಮಕಾತಿ ಹುದ್ದೆಗಳು ಭರ್ತಿ ಆಗುವವರೆಗೆ ವರ್ಗಾವಣೆ ಮೂಲಕ ಹುದ್ದೆಗಳು ಭರ್ತಿ ಆಗುವ ಅಥವಾ ಮುಂದಿನ ಆದೇಶದವರೆಗೆ ಇದರಲ್ಲಿ ಯಾವುದು ಮೊದಲು ಅಲ್ಲಿಯವರೆಗೆ.
ಹುದ್ದೆ: 05 ಶ್ರುಶ್ರೂಷಾಧಿಕಾರಿಗಳ ಹುದ್ದೆ.
ಅರ್ಜಿಯ ಜೊತೆಗೆ ರೂ.500/- ಗಳ ಡಿಡಿಯನ್ನು ನಿರ್ದೇಶಕರು, ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಗದಗ ಇವರ ಹೆಸರಿನಲ್ಲಿ ಪಡೆದು ಅರ್ಜಿಯೊಂದಿಗೆ ಸಲ್ಲಿಸುವುದು.
ಅಭ್ಯರ್ಥಿಯು ಕಡ್ಡಾಯವಾಗಿ ಜಾತಿ, ಆದಾಯ ಪ್ರಮಾಣ ಪತ್ರ ಹಾಗೂ ಇತರೆ ದಾಖಲಾತಿಗಳನ್ನು ಸಲ್ಲಿಸತಕ್ಕದ್ದು.
ವಯೋಮಿತಿ : ಅಭ್ಯರ್ಥಿಗಳು 40 ವರ್ಷ ವಯೋಮಿತಿ ಮೀರಿರಬಾರದು.
ಪ್ರತಿ ಮಾಸಿಕ ರೂ.25,000/- ರಂತೆ ವೇತನ ನಿಗದಿಪಡಿಸಿ ದಿನಾಂಕ 08-06-2021 ರ ಬೆಳಿಗ್ಗೆ 10.00 ಗಂಟೆಗೆ ನೇರ ನೇಮಕಾತಿ ಸಂದರ್ಶನ ಏರ್ಪಡಿಸಿದೆ.
ಅರ್ಹ ಅಭ್ಯರ್ಥಿಗಳು ಸಂಬಂಧಪಟ್ಟ ದಾಖಲೆಗಳೊಂದಿಗೆ ಸಂಸ್ಥೆಯ ವೆಬ್‌ಸೈಟ್‌ನಲ್ಲಿ www.karnataka.gov.in/gimsgadag. ನಲ್ಲಿ ಲಭ್ಯವಿರುವ ನಮೂನೆಯೊಂದಿಗೆ ನೇರ ನೇಮಕಾತಿ ಸಂದರ್ಶನಕ್ಕೆ ಹಾಜರಾಗಬಹುದು.