ಸರಕಾರಿ ವೈಮಾನಿಕ ತರಬೇತಿ ಶಾಲೆ ಇಲ್ಲಿ ಗುತ್ತಿಗೆ ಆಧಾರದ ಮೇಲೆ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹೆಚ್ಚಿನ ವಿವರಗಳು ಈ ಕೆಳಗೆ ನೀಡಲಾಗಿದೆ.
ಹುದ್ದೆ : ಸಹಾಯಕ ವಿಮಾನ ಬೋಧಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳ ಆಹ್ವಾನಿಸಿದೆ.
ಅರ್ಹತೆ : ಡೈರೆಕ್ಟರ್ ಜನರಲ್ ಆಫ್ ಸಿವಿಲ್ ಏವಿಯೇಷನ್ ರವರ ಸಿವಿಲ್ ಏವಿಯೇಷನ್ ನಿಯಮ ( CAR) ವಿಭಾಗ 7 ರ ಸರಣಿ ಡಿ ವಿಭಾಗ 1 ರಲ್ಲಿನ ಅರ್ಹತೆಗಳನ್ನು ಪೂರ್ಣಗೊಳಿಸಿರಬೇಕು.
ಒಟ್ಟು ಹುದ್ದೆ : 2
ವಯೋಮಿತಿ : 50 ವರ್ಷಗಳು( ದಿನಾಂಕ : 25-06-2021 ರಂತೆ)
ಅರ್ಜಿದಾರರು ಇ- ಮೇಲ್ ಅಥವಾ ಅಂಚೆ ಮೂಲಕ ಅರ್ಜಿಗಳನ್ನು ದಿನಾಂಕ 11-07-2021 ರೊಳಗೆ ನಿರ್ದೇಶಕರು, ಸರಕಾರಿ ವೈಮಾನಿಕ ತರಬೇತಿ ಶಾಲೆ, ಜಕ್ಕೂರು ವಿಮಾನ ನಿಲ್ದಾಣ, ಯಲಹಂಕ ಅಂಚೆ, ಬೆಂಗಳೂರು – 560064 ಇವರಿಗೆ ಕಳುಹಿಸಬೇಕು.
ಗುತ್ತಿಗೆ ಅವಧಿ : 2 ವರ್ಷಗಳು
ವೇತನ : ರೂ.82,000/- ಮಾಸಿಕ ವೇತನ ನಿಗದಿಪಡಿಸಲಾಗಿದೆ.
ಇ-ಮೇಲ್ ವಿಳಾಸ : [email protected]
ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್‌ಸೈಟ್ www.getgnaa.com ಭೇಟಿ ನೀಡಿ ಅರ್ಜಿ ನಮೂನೆಯನ್ನು ಪಡೆಯಬಹುದಾಗಿದೆ.