ಗುಲ್ಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತ ಅಪ್ರೆಂಟಿಸ್ ತರಬೇತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ -18-03-2021
ಎನ್ ಸಿವಿಟಿ ಪ್ರಮಾಣ ಪತ್ರ ಪಡೆದವರಿಗೆ ಒಂದು ವರ್ಷದ ಎಲೆಕ್ಟ್ರೀಷಿಯನ್ ವೃತ್ತಿಯಲ್ಲಿ ತರಬೇತಿ ನೀಡಲಾಗುತ್ತದೆ.
ಎಸ್ ಎಸ್ ಎಲ್ ಸಿ ನಂತರ ಐಟಿಐ ತರಬೇತಿ ಹೊಂದಿ, ಕುಶಲಕರ್ಮಿ ಯೋಜನೆಯಡಿ ನಡೆಯುವ ವೃತ್ತಿ ಪರೀಕ್ಷೆಯ ಎಲೆಕ್ಟ್ರೀಶಿಯನ್ ವೃತ್ತಿಯಲ್ಲಿ ತೇರ್ಗಡೆಯಾಗಿ ರಾಜ್ಯ ವೃತ್ತಿ ಪ್ರಮಾಣ ಪತ್ರ, ರಾಷ್ಟ್ರೀಯ ವೃತ್ತಿ ಪ್ರಮಾಣ ಪತ್ರ ಪಡೆದಿರುವ ಅಭ್ಯರ್ಥಿಗಳು ಈ ತರಬೇತಿಗೆ ಅರ್ಹರು.
ಆಯ್ಕೆಯಾದ ಅಭ್ಯರ್ಥಿಗಳಿಗೆ ಒಂದು ವರ್ಷದ ತರಬೇತಿಗೆ ಅವಧಿಯಲ್ಲಿ ರೂ.7000/- ತಿಂಗಳ ವೇತನ ನೀಡಲಾಗುತ್ತದೆ.
ಕರ್ನಾಟಕದ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ. ಅಂಗವಿಕಲ ಅಭ್ಯರ್ಥಿಗಳ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ. ಅಭ್ಯರ್ಥಿಗೆ ಕನ್ನಡ ಓದಲು ಬರೆಯಲು ಬರಬೇಕು.
ವಯೋಮಿತಿ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 16 ವರ್ಷ( 26-02-2021ಕ್ಕೆ) ಗರಿಷ್ಠ 25 ( 18-03-2021ಕ್ಕೆ) ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ದ ಅಭ್ಯರ್ಥಿಗಳಿಗೆ ಗರಿಷ್ಠ 30 ವರ್ಷ (18-03-2021ಕ್ಕೆ) ಆಗಿರಬೇಕು. ಹಿಂದುಳಿದ ಹಾಗೂ ಸಾಮಾನ್ಯ ಅಭ್ಯರ್ಥಿಗಳ ವಯಸ್ಸು ಗರಿಷ್ಠ 25 ಮೀರಿರಬಾರದು. ಅಭ್ಯರ್ಥಿಗಳು ಪೂರ್ವ ವಿವರವಿರುವ ಸ್ವಯಂ ಲಿಖಿತ ಅಥವಾ ಬೆರಳಚ್ಚು ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕು. ಅರ್ಜಿ ಕಳುಹಿಸುವಾಗ ಲಕೋಟೆ ಮೇಲೆ 2021-22 ನೇ ಸಾಲಿನ ಶಿಶಿಕ್ಷು ಆಯ್ಕೆಗೆ ಅರ್ಜಿ ಎಂದು ಸ್ಪಷ್ಟವಾಗಿ ಬರೆಯಬೇಕು.
ಅರ್ಜಿಗಳನ್ನು ಸಲ್ಲಿಸುವ ವಿಳಾಸ : ಪ್ರಧಾನ ವ್ಯವಸ್ಥಾಪಕರು(ಆ ಮತ್ತು ಮಾ.ಸಂ.ಅ) ನಿಗಮ ಕಚೇರಿ,ಗು.ವಿ.ಸ.ಕಂ.ನಿ, ಸ್ಟೇಷನ್ ರೋಡ್, ಕಲಬುರಗಿ 585102
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ