ಗದಗ ವೈಜ್ಞಾನಿಕ ವಿಜ್ಞಾನಗಳ ಸಂಸ್ಥೆ : ಬಯೋ ಮೆಡಿಕಲ್ ಇಂಜಿನಿಯರ್ ಹುದ್ದೆಗೆ ಅರ್ಜಿ ಆಹ್ವಾನ

Advertisements

ಗದಗ ವೈಜ್ಞಾನಿಕ ವಿಜ್ಞಾನಗಳ ಸಂಸ್ಥೆ ಆಸ್ಪತ್ರೆಯಲ್ಲಿನ ವಿವಿಧ ವೈದ್ಯಕೀಯ ಉಪಕರಣ ಹಾಗೂ ಯಂತ್ರೋಪಕರಣಗಳ‌ ನಿರ್ವಹಣೆ ಗಾಗಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಹುದ್ದೆ: ಬಯೋ ಮೆಡಿಕಲ್ ಇಂಜಿನಿಯರ್ ಹುದ್ದೆಯನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡುವುದಕ್ಕಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಹುದ್ದೆಯ ವಿವರ: ಬಯೋ ಮೆಡಿಕಲ್ ಇಂಜಿನಿಯರ್ ( ಜೀವ ವೈದ್ಯಕೀಯ ಅಭಿಯಂತರರು)

ವಿದ್ಯಾರ್ಹತೆ: ಬಯೋ ಮೆಡಿಕಲ್ ಇಂಜಿನಿಯರಿಂಗ್/ ಮೆಡಿಕಲ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್

ಹುದ್ದೆಗಳ ಸಂಖ್ಯೆ : 01

ವೇತನ : ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.40,800/- ವೇತನವಿರುತ್ತದೆ.

ವಯೋಮಿತಿ : ಅಭ್ಯರ್ಥಿಗಳು 40 ವರ್ಷ ವಯೋಮಿತಿ ಮೀರಿರಬಾರದು.

ಸಂದರ್ಶನದ ದಿನಾಂಕ : 08-07-2021 ರಂದು ಬೆಳಿಗ್ಗೆ 11.00 ಗಂಟೆಗೆ ನೇರ ನೇಮಕಾತಿ ಸಂದರ್ಶನ ಕರೆಯಲಾಗಿದ್ದು, ಅರ್ಹ ಇಚ್ಛೆಯುಳ್ಳ ಅಭ್ಯರ್ಥಿಗಳು ಸಂಬಂಧಪಟ್ಟ ದಾಖಲೆಗಳೊಂದಿಗೆ ಸಂಸ್ಥೆಯ ವೆಬ್‌ಸೈಟ್‌ www.karnataka.gov.in/gimsgadag ನಲ್ಲಿ ಲಭ್ಯವಿರುವ ಅರ್ಜಿಯೊಂದಿಗೆ ನೇರ ನೇಮಕಾತಿ ಸಂದರ್ಶನಕ್ಕೆ ಹಾಜರಾಗಬಹುದು.

Leave a Comment