EPFO Recruitment 2024: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು (EPFO) ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಒಟ್ಟು 92 ಹುದ್ದೆಗಳು ಖಾಲಿ ಇದ್ದು, ಆಸಕ್ತ ಅಭ್ಯರ್ಥಿಗಳು ಹುದ್ದೆಯ ಕುರಿತು ಹೆಚ್ಚಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಸಹಾಯಕ ನಿರ್ದೇಶಕ, ಉಪ ನಿರ್ದೇಶಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅಖಿಲ ಭಾರತ ಸರ್ಕಾರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಸಕ್ತರು ಈ ಅವಕಾಶವನ್ನು ತಮ್ಮದಾಗಿಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 15-Apr-2024 ರಂದು ಅಥವಾ ಮೊದಲು ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 29-02-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15-04-2024
ಹುದ್ದೆಯ ವಿವರ ಈ ಕೆಳಗೆ ನೀಡಲಾಗಿದೆ;
ಹುದ್ದೆ: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಯಲ್ಲಿ ಒಟ್ಟು 92 ಹುದ್ದೆಗಳು ಖಾಲಿ ಇದ್ದು, ಸಹಾಯಕ ನಿರ್ದೇಶಕ, ಉಪನಿರ್ದೇಶಕ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಒಟ್ಟು 92 ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.15600-209200/- ದೊರಕಲಿದೆ.
ಹುದ್ದೆ ಹೆಸರು ಮತ್ತು ಸಂಖ್ಯೆ: ಉಪ ನಿರ್ದೇಶಕರು (ವಿಜಿಲೆನ್ಸ್) 10, ಸಹಾಯಕ ನಿರ್ದೇಶಕರು (ವಿಜಿಲೆನ್ಸ್) 12, ಉಪ ನಿರ್ದೇಶಕರು (ಆಡಿಟ್) 13, ಸಹಾಯಕ ನಿರ್ದೇಶಕರು (ಆಡಿಟ್) 15, ಜಂಟಿ ನಿರ್ದೇಶಕ (IS) 6
ಉಪ ನಿರ್ದೇಶಕರು (IS) 12, ಸಹಾಯಕ ನಿರ್ದೇಶಕ (IS) 24 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಶೈಕ್ಷಣಿಕ ಅರ್ಹತೆ: ಉಪ ನಿರ್ದೇಶಕರು (ವಿಜಿಲೆನ್ಸ್) , ಸಹಾಯಕ ನಿರ್ದೇಶಕ (ವಿಜಿಲೆನ್ಸ್), ಉಪ ನಿರ್ದೇಶಕರು (ಆಡಿಟ್), ಸಹಾಯಕ ನಿರ್ದೇಶಕ (ಆಡಿಟ್) ಹುದ್ದೆಗಳಿಗೆ ಇಪಿಎಫ್ಒ ನಿಯಮಗಳ ಪ್ರಕಾರ ವಿದ್ಯಾರ್ಹತೆಯನ್ನು ಅಭ್ಯರ್ಥಿಗಳು ಹೊಂದಿರಬೇಕು.
ಜಂಟಿ ನಿರ್ದೇಶಕ (IS), ಉಪ ನಿರ್ದೇಶಕ (IS), ಸಹಾಯಕ ನಿರ್ದೇಶಕ (IS) ಹುದ್ದೆಗೆ ಅಭ್ಯರ್ಥಿಗಳು ಪದವಿ, B.E ಅಥವಾ B.Tech, MCA, M.Sc ಪಾಸ್ ಆಗಿರಬೇಕು.
ವಯೋಮಿತಿ: EPFO ಸಂಸ್ಥೆಯ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 56 ವರ್ಷಗಳನ್ನು ಮೀರಿರಬಾರದು. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆಯು ಅನ್ವಯವಾಗಲಿದೆ.
ಆಯ್ಕೆ ಪ್ರಕ್ರಿಯೆ : ಅಭ್ಯರ್ಥಿಗಳನ್ನು ಹುದ್ದೆಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ವೇತನ: ಉಪ ನಿರ್ದೇಶಕರು (ವಿಜಿಲೆನ್ಸ್) , ಸಹಾಯಕ ನಿರ್ದೇಶಕ (ವಿಜಿಲೆನ್ಸ್), ಉಪ ನಿರ್ದೇಶಕರು (ಆಡಿಟ್), ಸಹಾಯಕ ನಿರ್ದೇಶಕ (ಆಡಿಟ್) ಹುದ್ದೆಗೆ ಆಯ್ಕೆಯಾದವರಿಗೆ ರೂ.15600-39100/-ರವರೆಗೆ ವೇತನ ಇರಲಿದೆ.
ಜಂಟಿ ನಿರ್ದೇಶಕರು ಈ ಹುದ್ದೆಗೆ ಆಯ್ಕೆಯಾದವರಿಗೆ (IS) ರೂ.78800-209200/- ವೇತನ ಸಿಗಲಿದೆ.
ಉಪ ನಿರ್ದೇಶಕರು ಈ ಹುದ್ದೆಗೆ ಆಯ್ಕೆಯಾದವರಿಗೆ (IS) ರೂ.67700-208700/- ವೇತನ ಸಿಗಲಿದೆ.
ಸಹಾಯಕ ನಿರ್ದೇಶಕರು ಈ ಹುದ್ದೆಗೆ ಆಯ್ಕೆಯಾದವರಿಗೆ (IS) ರೂ.56100-177500/- ವೇತನ ಸಿಗಲಿದೆ.
ಅಭ್ಯರ್ಥಿಗಳು ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ಎಪ್ರಿಲ್ 15,2024 ರೊಳಗೆ ತಲುಪುವಂತೆ ಕಳುಹಿಸಬೇಕು.
ವಿಳಾಸ ಇಲ್ಲಿದೆ;
Shri Deepak Arya, Regional Provident Fund Commissioner-II (HRM-II), Bhavishya Nidhi Bhawan, 14 Bhikaiji Cama Place, New Delhi-110066