DWCD Bidar Recruitment 2024: ಬೀದರ್ ಜಿಲ್ಲೆಯಲ್ಲಿ “ಮಿಷನ್ ಶಕ್ತಿ” ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸ್ಥಾಪಿಸಲಾದ ಉಪ ಯೋಜನೆಯ ಜಿಲ್ಲಾ ಮಹಿಳಾ ಸಬಲೀಕರಣ ಘಟಕದಲ್ಲಿ ಕಾರ್ಯನಿರ್ವಹಿಸಲು ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿದೆ.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ: ಫೆಬ್ರವರಿ 09, 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮಾರ್ಚ್ 05, 2024
ಶೈಕ್ಷಣಿಕ ಅರ್ಹತೆ; ಡಿಸ್ಟ್ರಿಕ್ಟ್‌ಮಿಷನ್ ಕೋಆರ್ಡಿನೇಟರ್- ಸೋಷಿಯಲ್ ಸೈನ್ಸ್/ ಲೈಪ್ ಸೈನ್ಸ್/ ನ್ಯೂಟ್ರಿಷನ್/ ಮೆಡಿಸಿನ್/ ಹೆಲ್ತ್ ಮ್ಯಾನೇಜ್ಮೆಂಟ್/ ಸೋಷಿಯಲ್ ವರ್ಕ್/ ರೂರಲ್ ಮ್ಯಾನೇಜ್ಮೆಂಟ್‌ನಲ್ಲಿ ಪದವಿ ಹೊಂದಿರುವವರು ಅರ್ಜಿ ಸಲ್ಲಿಸಬೇಕು.
ಸ್ಪೆಷಲಿಸ್ಟ್ ಇನ್ ಫೈನಾನ್ಸಿಯಲ್ ಲಿಟರೆಸಿ ಆಂಡ್ ಅಕೌಂಟೆಂಟ್- ಎಕನಾಮಿಕ್ಸ್/ ಬ್ಯಾಂಕಿಂಗ್/ ಇತರ ವಿಭಾಗಗಳಲ್ಲಿ ಪದವಿ ಹೊಂದಿರುವವರು ಅರ್ಜಿ ಸಲ್ಲಿಸಬೇಕು.
ಹುದ್ದೆಗಳ ವಿವರ: ಡಿಸ್ಟ್ರಿಕ್ ಮಿಷನ್ ಕೊರ್ಡಿನೇಟರ್, ಸ್ಪೆಷಲಿಸ್ಟ್ ಇನ್ ಫೈನಾನ್ಶಿಯಲ್ ಲಿಟೆರೆಸಿ ಆಂಡ್ ಅಕೌಂಟೆಂಟ್
ಹುದ್ದೆಗಳ ಸಂಖ್ಯೆ: 2
ಅನುಭವ: ಅಭ್ಯರ್ಥಿಗಳು ಈ ಹುದ್ದೆಗೆ ಸಂಬಂಧಿಸಿದ ವಿಷಯದಲ್ಲಿ ಮೂರು ವರ್ಷಗಳ ಕಾರ್ಯಾನುಭವ ಹೊಂದಿರಬೇಕು.
ಅರ್ಜಿ ಶುಲ್ಕ: ಈ ಹುದ್ದೆಗೆ ಯಾವುದೇ ಅರ್ಜಿ ಶುಲ್ಕವಿಲ್ಲ.
ಆಯ್ಕೆ: ಈ ಹಿಂದೆ ಉತ್ತಮ ಕಾರ್ಯ ನಿರ್ವಹಿಸುವ ಬಗ್ಗೆ ದಾಖಲೆ ಹೊಂದಿರುವ ಹಾಗೂ ಕನಿಷ್ಠ ಉಸ್ತುವಾರಿಯಲ್ಲಿ ಉತ್ತಮ ಕೆಲಸ ನಿರ್ವಹಿಸಬಲ್ಲ, ತರಬೇತಿಗಳನ್ನು ಹಮ್ಮಿಕೊಳ್ಳಲು ಸಾರ್ಮರ್ಥ್ಯ ಹೊಂದಿರುವ, ಗಣಕಯಂತ್ರ ನಿರ್ವಹಣೆಯಲ್ಲಿ ಪರಿಣಿತಿ, ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಪರಿಪೂರ್ಣ ಹಿಡಿತವುಳ್ಳ ಅಭ್ಯರ್ಥಿಗಳನ್ನು ನೇರವಾಗಿ ಸಂದರ್ಶನಕ್ಕೆ ಆಹ್ವಾನಿಸಿ ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳು, ಅನುಭವ, ಕಂಪ್ಯೂಟರ್ ಪರೀಕ್ಷೆಗಳ ಮೂಲಕ ನೇಮಕಾತಿ ಮಾಡಲಾಗುವುದು.
ಅರ್ಜಿ ಸಲ್ಲಿಕೆ ಹೇಗೆ?
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಕಚೇರಿ ಅಥವಾ ಬೀದರ ಜಿಲ್ಲಾ ಎನ್.ಐ.ಸಿ. ವೆಬ್‌ಸೈಟ್ https;//bidar.nic.in ನಲ್ಲಿ ಪಡೆದು ದಿನಾಂಕ 05/03/2024 ರ ವರೆಗೆ ಅಗತ್ಯ ದಾಖಲಾತಿಗಳೊಂದಿಗೆ ಈ ಕಚೇರಿ ಸಮಯದಲ್ಲಿ ಸಂಜೆ 5.30 ರ ಒಳಗೆ ಅರ್ಜಿಯನ್ನು ಸಲ್ಲಿಸಲು ಸೂಚಿಸಲಾಗಿದೆ.
ಅಭ್ಯರ್ಥಿಗಳಿಗೆ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಸೂಚಿಸಲಾಗಿರುವುದರಿಂದ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ ನಂತರ ಅರ್ಜಿ ಸಲ್ಲಿಸಬೇಕು
ಸಂಸ್ಥೆಯ ವೆಬ್‌ಸೈಟ್‌ಗೆ ಭೇಟಿ ನೀಡಿ ಅಪ್ಲಿಕೇಶನ್ ಫಾರ್ಮ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ಡೌನ್ಲೋಡ್ ಮಾಡಿ
ಅದರಲ್ಲಿ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ.
ಕೊನೆಯದಾಗಿ ಯಾವುದೇ ಪ್ರಮಾಣ ಪತ್ರ/ದಾಖಲೆಗಳನ್ನು ಲಗತ್ತಿಸಲು ಸೂಚಿಸಿದ್ದರೆ ಅವುಗಳನ್ನು ಲಗತ್ತಿಸಿ. ನಂತರ ಭರ್ತಿ ಮಾಡಿದ ಅರ್ಜಿಯನ್ನು ಕಚೇರಿಯ ವಿಳಾಸಕ್ಕೆ ಸಲ್ಲಿಸಿ.
ವಿಳಾಸ: ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮೈಲೂರ ರಸ್ತೆ, ಬೀದರ್
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಉಪ ನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮೈಲೂರ ರೋಡ್, ಬೀದರ, ಫೋನ್ ಸಂಖ್ಯೆ 08482-233146, 9591914358 ಸಂಪರ್ಕಿಸಲು ಸೂಚಿಸಲಾಗಿದೆ.