ಡಿಎಸ್ ಆರ್ ವಿ ಎಸ್ (ಡಿಜಿಟಲ್ ವಿಕಾಸ್ ಆಂಡ್ ರೋಜರ್ ವಿಕಾಸ್ ಸಂಸ್ಥಾನ್) ನಲ್ಲಿ 443 ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದ್ದು ಅರ್ಜಿ ಸಲ್ಲಿಸಲು 11, ಮಾರ್ಚ್ 2021 ಕೊನೆಯ ದಿನಾಂಕವಾಗಿದೆ. ಒಟ್ಟು ಹುದ್ದೆಗಳ ವಿವರ, ವಿದ್ಯಾರ್ಹತೆ,ನೇಮಕಾತಿ, ಅರ್ಜಿ ಶುಲ್ಕ ಇತ್ಯಾದಿ ವಿವರಗಳನ್ನು ಮುಂದೆ ನೀಡಲಾಗಿದೆ.
ಅರ್ಜಿ ಸಲ್ಲಿಕೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ. ಆನ್ಲೈನ್ ಹೊರತು ಪಡಿಸಿ ಬೇರೆ ಯಾವುದೇ ವಿಧಾನದಲ್ಲಿ ಅರ್ಜಿ ಸಲ್ಲಿಸುವಂತಿಲ್ಲ.
ಡಿಇಒ, ಆಫೀಸ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ವಿವರಗಳು ಈ ಕೆಳಗಿನಂತಿವೆ :
ಡಾಟಾ ಎಂಟ್ರಿ ಅಪರೇಟರ್ 168, ವೆಬ್ ಡಿಸೈನರ್ 15, ಕಂಟೆಂಟ್ ರೈಟರ್ 165,
ಕಂಪ್ಯೂಟರ್ ನೆಟ್ವರ್ಕಿಂಗ್ ಟೆಕ್ನಿಶಿಯನ್ 46, ಆಫೀಸ್ ಅಸಿಸ್ಟೆಂಟ್ 39 ಸೇರಿದಂತೆ ಒಟ್ಟು 433 ಹುದ್ದೆಗಳಿವೆ.
ವಿದ್ಯಾರ್ಹತೆ : ಡಾಟಾ ಎಂಟ್ರಿ, ಆಫೀಸ್ ಅಸಿಸ್ಟೆಂಟ್, ಕಂಟೆಂಟ್ ರೈಟರ್ ಹುದ್ದೆಗೆ 12th ಅಥವಾ ಡಿಪ್ಲೋಮಾ ಹೊಂದಿರಬೇಕು. ವೆಬ್ ಡಿಸೈನರ್ ಹುದ್ದೆಗೆ ಬ್ಯಾಚುಲರ್ಸ್ ಡಿಗ್ರಿ ಹಾಗೂ ಎಂಸಿಎ,
ಕಂಪ್ಯೂಟರ್ ನೆಟ್ವರ್ಕಿಂಗ್ ಟೆಕ್ನಿಶಿಯನ್ ಹುದ್ದೆಗೆ ಬ್ಯಾಚುಲರ್ಸ್ ಡಿಗ್ರಿ ಅಥವಾ ಡಿಪ್ಲೋಮಾ ವಿದ್ಯಾರ್ಹತೆ ಬಯಸಲಾಗಿದೆ.
ವಯೋಮಿತಿ : ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ಹಾಗೂ ಗರಿಷ್ಠ 35 ಹೊಂದಿರಬೇಕು.
ಅರ್ಜಿ ಶುಲ್ಕ ಎಷ್ಟು ?
ಸಾಮಾನ್ಯ/ ಒಬಿಸಿ ಅಭ್ಯರ್ಥಿಗಳಿಗೆ ರೂ.550/- ಪಾವತಿಸಬೇಕು. ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ರೂ.400/- ನಿಗದಿಪಡಿಸಲಾಗಿದೆ. ಅಂಗವಿಕಲ ಅಭ್ಯರ್ಥಿಗಳಿಗೆ ರೂ. 400/- ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 11 ಮಾರ್ಚ್ 2021
ವೆಬ್ ಮಾಹಿತಿ : www.dsrvsindia.ac.in.recruitment
ಆನ್ಲೈನ್ ಅಪ್ಲಿಕೇಶನ್ ಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಮಾಡಿ