DRDO Apprentice Recruitment 2024: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಒಟ್ಟು 127 ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಕಂಪ್ಯೂಟರ್ ಅಪರೇಟಿಂಗ್, ಪ್ರೋಗ್ರಾಮಿಂಗ್ ಅಸಿಸ್ಟಂಟ್, ಇಲೆಕ್ಟ್ರಿಕಲ್, ಫಿಟ್ಟರ್, ಪೇಂಟರ್, ಇತರೆ ಹಲವು ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಹೈದರಾಬಾದ್‌ನಲ್ಲಿ ಪೋಸ್ಟಿಂಗ್ ನಡೆಯಲಿದ್ದು, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮೇ.31, 2024 ಕೊನೆಯ ದಿನಾಂಕವಾಗಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-05-2024
ಹುದ್ದೆ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ;
ಉದ್ಯೋಗದ ಸ್ಥಳ: ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಹೈದರಾಬಾದ್ ನಲ್ಲಿ ಪೋಸ್ಟಿಂಗ್ ಇರಲಿದೆ.
ಉದ್ಯೋಗದ ಅವಧಿ ಮತ್ತು ಸಂಭಾವನೆ: ಒಂದು ವರ್ಷ ತರಬೇತಿ ಇರಲಿದ್ದು, ಅಭ್ಯರ್ಥಿಗಳಿಗೆ ರೂ.8000-9000 ಪ್ರತಿ ತಿಂಗಳು ದೊರೆಯಲಿದೆ.
ಹುದ್ದೆ ಹೆಸರು ಮತ್ತು ಹುದ್ದೆ ಸಂಖ್ಯೆ;
ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ರಾಮಿಂಗ್ ಅಸಿಸ್ಟಂಟ್: 60 ಹುದ್ದೆಗಳು
ಫಿಟ್ಟರ್ : 20 ಹುದ್ದೆಗಳು
ಟರ್ನರ್ : 08 ಹುದ್ದೆಗಳು
ಮಷಿನಿಸ್ಟ್ : 16 ಹುದ್ದೆಗಳು
ವೆಲ್ಡರ್ : 04 ಹುದ್ದೆಗಳು
ಇಲೆಕ್ಟ್ರೀಷಿಯನ್ : 12 ಹುದ್ದೆಗಳು
ಇಲೆಕ್ಟ್ರಾನಿಕ್ಸ್ : 04 ಹುದ್ದೆಗಳು
ಕಾರ್ಪೆಂಟರ್ : 02 ಹುದ್ದೆಗಳು
ಬುಕ್ ಬೈಂಡರ್ : 01 ಹುದ್ದೆ
ವಿದ್ಯಾರ್ಹತೆ: ಐಟಿಐ ಶಿಕ್ಷಣವನ್ನು ಹುದ್ದೆಯ ವಿಭಾಗಗಳಿಗೆ ಸಂಬಂಧಿಸಿದ ವಿಷಯದಲ್ಲಿ ತೇರ್ಗಡೆ ಹೊಂದಿರಬೇಕು. ಎನ್‌ಸಿವಿಟಿ ಅಥವಾ ಎಸ್‌ಸಿವಿಟಿ ಪ್ರಮಾಣ ಪತ್ರವನ್ನು ಪಡೆದಿರಬೇಕು.
ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ