ಆತ್ಮ ನಿರ್ಭರ ಭಾರತ ಅಭಿಯಾನದ ಭಾಗವಾಗಿ ಕೇಂದ್ರ ಸರಕಾರದ ಆಹಾರ ಸಂಸ್ಕರಣ ಉದ್ದಿಮೆಗಳ ಮಂತ್ರಾಲಯವು ಪಿಎಂಎಫ್ಎಂಇ ಯೋಜನೆಯನ್ನು ಅನುಷ್ಠಾನಕ್ಕೆ ತರುತ್ತಿದೆ.
ಧಾರವಾಡದಲ್ಲಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಯೋಜನೆಯಡಿ ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳು ಮಹತ್ತರವಾದ ಪಾತ್ರ ನಿಭಾಯಿಸಲು ಅವಕಾಶ ಇದೆ.
ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆಯ ಯೋಜನೆಯು ಅನುಷ್ಠಾನಗೊಳ್ಳುತ್ತಿದೆ.
ಸಂಪನ್ಮೂಲ ವ್ಯಕ್ತಿ ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಯಾವುದೇ ನಿಗದಿತ ವೇತನವನ್ನು ನೀಡಲಾಗುವುದಿಲ್ಲ. ಪ್ರತಿ ಫಲಾನುಭವಿಯನ್ನು ಆಧರಿಸಿ, ಮಂಜೂರಾದ ಪ್ರತಿ ಸಾಲದ ಮೇಲೆ ಗರಿಷ್ಠ ರೂ.20,000/- ಗಳನ್ನು 2 ಕಂತುಗಳಲ್ಲಿ ಪಾವತಿಸಲಾಗುತ್ತದೆ.
ಇದರಲ್ಲಿ 50% ಮೊತ್ತವನ್ನು ಬ್ಯಾಂಕಿನಿಂದ ಸಾಲ ಮಂಜೂರಾದ ನಂತರ ಹಾಗೂ ಉಳಿದ 50% ಹಣವನ್ನು ಘಟಕಗಳು ಜಿ.ಎಸ್.ಟಿ ಮತ್ತು ಉದ್ಯೋಗ ಆಧಾರ್ ನೋಂದಣಿಗಳನ್ನು ಹೊಂದಿ ಎಫ್.ಎಸ್.ಎಸ್.ಎ.ಐ ನಿಂದ ಪ್ರಮಾಣಿತ ಅನುಸರಣೆಯು ಸಿಕ್ಕ ನಂತರ ನೀಡಲಾಗುತ್ತದೆ.
ವಿದ್ಯಾರ್ಹತೆ : ಅಭ್ಯರ್ಥಿಗಳು ಆಹಾರ ತಂತ್ರಜ್ಞಾನ, ಆಹಾರ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮಾ, ಪದವಿಯನ್ನು ಹೊಂದಿರಬೇಕು.
ಬ್ಯಾಂಕಿಂಗ್, ಡಿಪಿಆರ್ ಸಿದ್ಧಪಡಿಸುವಿಕೆ ಹಾಗೂ ತರಬೇತಿ, ಆಹಾರ ಸಂಸ್ಕರಣ ಕೈಗಾರಿಕೆ ಯಲ್ಲಿ ಅನುಭವವುಳ್ಳ ವ್ಯಕ್ತಿಗಳಿಗೆ ಆದ್ಯತೆ ನೀಡಲಾಗುತ್ತದೆ.
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಜೂನ್,06,2021 ರೊಳಗಾಗಿ ಅರ್ಜಿಯನ್ನು ಧಾರವಾಡ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು.