ಜಿಲ್ಲಾ ಆರೋಗ್ಯ ಮತ್ತು ಕುಟು ಕಲ್ಯಾಣ ಅಧಿಕಾರಿಗಳ ಕಚೇರಿ, ಚಿಕ್ಕಬಳ್ಳಾಪುರ ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ.
ಹುದ್ದೆ : ವೈದ್ಯರು – 15
ಶ್ರುಶ್ರೂಷಕರು – 15
ಗ್ರೂಪ್ ಡಿ – 15
ವೇತನ : ವೈದ್ಯರು ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಜ ರೂ.60,000/- ವೇತನವಿರುತ್ತದೆ. ಈ ಹುದ್ದೆಗೆ ಅಭ್ಯರ್ಥಿಗಳು ಎಂ.ಬಿ.ಬಿ.ಎಸ್ ತರಬೇತಿಯಲ್ಲಿ ತೇರ್ಗಡೆ ಹೊಂದಿರಬೇಕು. KMC ( ಕರ್ನಾಟಕ ಮೆಡಿಕಲ್ ಕೌನ್ಸಿಲ್) ನೋಂದಣಿ ಆಗಿರಬೇಕು.
ಶುಶ್ರೂಷಕರು ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.25,000/- ವೇತನವಿರುತ್ತದೆ. ಈ ಹುದ್ದೆಗೆ ಬಿಎಸ್ಸಿ ನರ್ಸಿಂಗ್/ಜಿಎನ್ ಎಂ ತರಬೇತಿಯಲ್ಲಿ ತೇರ್ಗಡೆ/ ಪದವಿ ಹೊಂದಿರಬೇಕು. ಕರ್ನಾಟಕ ನರ್ಸಿಂಗ್ ಕೌನ್ಸಿಲ್ ನಲ್ಲಿ ನೋಂದಣಿ ಆಗಿರಬೇಕು. ವಯಸ್ಸು ಕನಿಷ್ಠ 18 ಆಗಿರಬೇಕು. ಗರಿಷ್ಠ 40 ಮೀರಿರಬಾರದು. ಗಣಕ ಯಂತ್ರ ತರಬೇತಿ ಪೂರೈಸಿರಬೇಕು.
ಗ್ರೂಪ್ ಡಿ ಗೆ ಮಾಸಿಕ ರೂ.20,000/- ವೇತನವಿರುತ್ತದೆ. ಈ ಹುದ್ದೆಗೆ ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿರಬೇಕು. ವಯಸ್ಸು ಕನಿಷ್ಠ 18 ರಿಂದ 40 ವರ್ಷ ಮೀರಿರಬಾರದು.
ಕಚೇರಿಯಿಂದಲೇ ನೇರ ಸಂದರ್ಶನ ನಡೆಸಿ ದಾಖಲೆಗಳನ್ನು ಪರಿಶೀಲಿಸಿ ಮಾನ್ಯ ಜಿಲ್ಲಾಧಿಕಾರಿಗಳ ಸಹಮತದೊಂದಿಗೆ ನೇಮಿಸಿಕೊಳ್ಳಲು ಸೂಚಿಸಲಾಗಿರುವ ಮೇರೆಗೆ ಗುತ್ತಿಗೆ ಆಧಾರದಲ್ಲಿ ದಿನಾಂಕ 30-09-2021 ರ ಅವಧಿಯವರೆಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ದಿನಾಂಕ 29-05-2021 ರಂದು ಸಂಜೆ 5:00 ಗಂಟೆ ಒಳಗೆ ಅರ್ಜಿಗಳನ್ನು ಸಲ್ಲಿಸುವಂತೆ ಸೂಚಿಸಿದೆ. ಹಾಗೂ ದಿನಾಂಕ 30-05-2021 ರಂದು ಸಂಜೆ ಬೆಳಿಗ್ಗೆ 11.00 ಗಂಟೆಗೆ ಎಲ್ಲಾ ಅರ್ಜಿದಾರರು ಮೂಲ ದಾಖಲೆಗಳೊಂದಿಗೆ ಪರಿಶೀಲನೆಗಾಗಿ ಈ ಕಚೇರಿಗೆ ಹಾಜರಾಗತಕ್ಕದ್ದು.
ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ