Advertisements
ರಾಷ್ಟ್ರೀಯ ಆರೋಗ್ಯ ಅಭಿಯಾನದ, ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದಡಿ ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರ, ಹಾಸನ ಇಲ್ಲಿ ಎನ್.ಟಿ.ಇ.ಪಿ ಗುತ್ತಿಗೆ ನೇಮಕಾತಿ ಮಾರ್ಗಸೂಚಿ ಅನ್ವಯ ಅನುಮೋದನೆಗೊಂಡು ಖಾಲಿ ಇರುವ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆ ಮತ್ತು ಹುದ್ದೆಗೆ ಸಂಬಂಧಪಟ್ಟ ಮಾಹಿತಿಯನ್ನು ಈ ಕಚೇರಿಯ ವೇಳೆಯಲ್ಲಿ ಪಡೆಯಲು ತಿಳಿಸಿದೆ.
ಹುದ್ದೆಯ ಹೆಸರು : 1. ಕ್ಷಯರೋಗ ವೀಕ್ಷಕರು ( TBHV)
ಹುದ್ದೆಗಳ ಸಂಖ್ಯೆ : 02
ವಿದ್ಯಾರ್ಹತೆ : ವಿಜ್ಞಾನದಲ್ಲಿ ಪದವಿ ಹೊಂದಿರಬೇಕು.
- ಪ್ರಯೋಗಶಾಲಾ ತಂತ್ರಜ್ಞಾನ (LT): ಹುದ್ದೆಗಳ ಸಂಖ್ಯೆ : 01, ವಿದ್ಯಾರ್ಹತೆ : 10+2 (PUC) DMLT ಅಭಿಯಾನ ನಿರ್ದೇಶಕರು, ಎನ್.ಹೆಚ್.ಎಂ ರವರ ಪತ್ರದನ್ವಯ ಕಂಪ್ಯೂಟರ್ ಸಾಕ್ಷರತೆಯನ್ನು ಸರಕಾರದಿಂದ ಅಥವಾ ಸರಕಾರದ ಮಾನ್ಯತೆ ಹೊಂದಿರುವ ಕಂಪ್ಯೂಟರ್ ಶಿಕ್ಷಣ ಸಂಸ್ಥೆಗಳಿಂದ ಪಡೆದಿರುವ ಕಂಪ್ಯೂಟರ್ ಸಾಕ್ಷರತಾ ಪ್ರಮಾಣ ಪತ್ರವನ್ನು ಮೇಲ್ಕಂಡ 2 ಹುದ್ದೆಗಳಿಗೂ ಕಡ್ಡಾಯವಾಗಿ ಸಲ್ಲಿಸಲು ಸೂಚಿಸಿದೆ.
ಭರ್ತಿ ಮಾಡಿದ ಅರ್ಜಿ ಮತ್ತು ಮೂಲ ದಾಖಲಾತಿಗಳನ್ನು ಗೆಜೆಟೆಡ್ ಅಧಿಕಾರಿಗಳಿಂದ ದೃಢೀಕರಿಸಿದ ನಕಲು ಪ್ರತಿಗಳೊಂದಿಗೆ ದಿನಾಂಕ 11-08-2021 ರಂದು ಬೆಳಿಗ್ಗೆ 10.30 ಕ್ಕೆ ಸರಿಯಾಗಿ ದಾಖಲಾತಿ ಪರಿಶೀಲನೆಗಾಗಿ ಹಾಜರಾಗಲು ತಿಳಿಸಿದೆ.