ರಾಮನಗರ ಜಿಲ್ಲೆಯಲ್ಲಿ 2021-22 ನೇ ಸಾಲಿನ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ವಿವಿಧ ಕಾರ್ಯಕ್ರಮದಡಿಯಲ್ಲಿ ಕಾರ್ಯನಿರ್ವಹಿಸಲು ಈ ಕೆಳಕಂಡ ವಿವಿಧ ಹುದ್ದೆಗಳಿಗೆ ಎನ್.ಹೆಚ್.ಎಮ್ ಮಾರ್ಗಸೂಚಿಯನ್ವಯ ನಿಯಮಾನುಸಾರವಾಗಿ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳನ್ನು ನೇರ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ. ಹಾಗೂ ಸದರಿ ಪ್ರಕಟಣೆಯು ( Rolling Advertisement) ಆಗಿರುವುದರಿಂದ ಇದರ ಕಾಲಾವಧಿಯು 31-03-2022 ವರೆಗೆ ಇರುತ್ತದೆ. ಪ್ರತಿಯೊಂದು ಹುದ್ದೆಯ ಸಾಮಾನ್ಯ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ.
ಹುದ್ದೆಯ ಹೆಸರು : ಶುಶ್ರೂಷಕಿ, ಮಕ್ಕಳ ತಜ್ಞರು, ವೈದ್ಯಾಧಿಕಾರಿಗಳು, ಆಡಿಯೋಮೆಟ್ರಿಕ್ ಅಸಿಸ್ಟೆಂಟ್, ಡಯಟ್ ಕೌನ್ಸಿಲರ್, ಕಿ.ಮ.ಆ.ಸ, ಹಿ.ಮ.ಆ.ಸ, OT Technician, Maintenance engineer, DEIC manager, ಫಿಜಿಯೋಥೆರಪಿಸ್ಟ್, ತಜ್ಞ ವೈದ್ಯರುಗಳು
ದಿನಾಂಕ 08-10-2021 ರಂದು ಅರ್ಹ ಅಭ್ಯರ್ಥಿಗಳು ಜಾಹಿರಾತಿನಲ್ಲಿ ಸೂಚಿಸಿದ ದಾಖಲಾತಿಗಳ ಪರಿಶೀಲನೆಗಾಗಿ ಅವಶ್ಯ ಪೂರಕ ದಾಖಲಾತಿಯೊಂದಿಗೆ ಬೆಳಗ್ಗೆ 10:00 ರಿಂದ 12 ಗಂಟೆಯೊಳಗೆ ನಿಗದಿತ ಅರ್ಜಿ ನಮೂನೆಯನ್ನು ಪಡೆದು ನೋಂದಣಿ ಮಾಡಿಕೊಳ್ಳಲು ಸೂಚಿಸಿದೆ. ನೋಂದಣಿಯಾದ ಅಭ್ಯರ್ಥಿಗಳನ್ನು ಮಾತ್ರ ದಾಖಲಾತಿ ಪರಿಶೀಲನೆಗೆ ಪರಿಗಣಿಸಲಾಗುವುದು.
ನೇರ ಸಂದರ್ಶನವನ್ನು ಸದರಿ ದಿನದಂದೇ ನಡೆಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿಗಳು, ಜಿ.ಆ.ಕು.ಕ.ಕಛೇರಿ, ರಾಮನಗರ ( 9449843120) ಇಲ್ಲಿ ಸಂಪರ್ಕಿಸಬಹುದು.