ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಬೀದರ್, ಬಳ್ಳಾರಿ, ಕಲಬುರಗಿ, ರಾಯಚೂರು, ಚಿಕ್ಕಮಗಳೂರು, ವಿಜಯಪುರ, ಬಾಗಲಕೋಟೆ, ಕೊಪ್ಪಳ, ಉತ್ತರ ಕನ್ನಡ ಹಾಗೂ ಯಾದಗಿರಿ ಜಿಲ್ಲೆಗಳಿಗೆ ( ಹೆಚ್ಚಿನ ಆಧ್ಯತೆಯುಳ್ಳ ಜಿಲ್ಲೆಗಳು) ಹಾಗೂ ಹಾವೇರಿ, ಕೋಲಾರ, ಬೆಳಗಾವಿ, ತುಮಕೂರು, ಮೈಸೂರು, ದಕ್ಷಿಣ ಕನ್ನಡ, ಮಂಡ್ಯ, ಉಡುಪಿ, ಚಿಕ್ಕಬಳ್ಳಾಪುರ, ಕೊಡಗು, ದಾವಣಗೆರೆ, ಬೆಂಗಳೂರು ನಗರ ಮತ್ತು ಧಾರವಾಡ ಜಿಲ್ಲೆಗಳಿಗೆ ( ಆದ್ಯತೆ ಹೊರತು ಪಡಿಸಿದ ಇತರ ಜಿಲ್ಲೆಗಳು ) ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಇಚ್ಛೆಯುಳ್ಳ ಅಭ್ಯರ್ಥಿಗಳು ಹೆಲ್ತ್ ಆಂಡ್ ವೆಲ್ ನೆಸ್ ಸೆಂಟರ್, ಎನ್ ಎಚ್ ಎಂ ಯೋಜನೆಯಡಿಯಲ್ಲಿ ಎಂ ಎಲ್ ಎಚ್ ಪಿ ಹುದ್ದೆ ಗಳಿಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ವಿವರಣೆ ಈ ಕೆಳಗಿನಂತಿವೆ :
ವಿದ್ಯಾರ್ಹತೆ : ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿಎಸ್ಸಿ ನರ್ಸಿಂಗ್ / ಪೋಸ್ಟ್ ಬಿಎಸ್ಸಿ ನರ್ಸಿಂಗ್ ಜೊತೆಗೆ ರಾಜ್ಯ ನರ್ಸಿಂಗ್ ಕೌನ್ಸಿಲ್ ಕೆ ಎನ್ ಸಿ/ ಐ ಎನ್ ಸಿ ನಿಂದ ನೋಂದಣಿ ಹೊಂದಿರಬೇಕು. ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಪ್ರಾವೀಣ್ಯತೆ ಹೊಂದಿರಬೇಕು.
ಮಾಸಿಕ ಸಂಭಾವನೆ : ರೂ.24,200/- ಹೆಚ್ಚಿನ ಆದ್ಯತೆವುಳ್ಳ ಜಿಲ್ಲೆಗಳು ಹಾಗೂ ರೂ. 22,000 ಆದ್ಯತೆ ಹೊರತುಪಡಿಸಿದ ಇತರೆ ಜಿಲ್ಲೆಗಳಲ್ಲಿ ನೇಮಕಾತಿ ಬಯಸುವವರಿಗೆ ನೀಡಲಾಗುವುದು. ಜೊತೆಗೆ ಹೆಚ್ಚುವರಿಯಾಗಿ ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹ ಧನ ರೂ.8000/- ವರೆಗೆ ನೀಡಲಾಗುವುದು.
ವಯೋಮಿತಿ : ಸಾಮಾನ್ಯ ಅಭ್ಯರ್ಥಿ : 35 ವರ್ಷ, ಎಸ್ ಸಿ/ ಎಸ್.ಟಿ/ ಪ್ರವರ್ಗ 1 / ಮಾಜಿ ಸೈನಿಕ, ವಿಧವೆ, ಅಂಗವಿಕಲರಿಗೆ 40 ವರ್ಷ, 2ಎ/2ಬಿ/3 ಎ/ 3 ಬಿ ಹಾಗೂ ಇತರೆ ಹಿಂದುಳಿದ ವರ್ಗ ( ರಾಜ್ಯ) 38 ವರ್ಷ, ಅಧಿಸೂಚನೆ ಹೊರಡಿಸಿದ ದಿನಾಂಕ ಒಳಗಾಗಿ (ವಿ.ಸೂ.ಐದನೇ ನೇಮಕಾತಿ ಪ್ರಕಟಣೆಯಾದ್ದರಿಂದ ಕಲ್ಯಾಣ ಕರ್ನಾಟಕ ( HK) ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ ರೋಸ್ಟರ್ ನಿಯಮಾನುಸಾರ ಇತರೆ ( non HK) ಅಭ್ಯರ್ಥಿಗಳ ನ್ನು ಕಲ್ಯಾಣ ಕರ್ನಾಟಕ ( ಹೆಚ್ ಕೆ) ಜಿಲ್ಲೆಗಳಲ್ಲಿ ನೇಮಕಾತಿಗಾಗಿ ಪರಿಗಣಿಸಲಾಗುವುದು.
ಒಟ್ಟು ಹುದ್ದೆಗಳು : 3006 ಹುದ್ದೆಗಳು. ಅಭ್ಯರ್ಥಿಗಳು ಕರ್ನಾಟಕದಲ್ಲಿ ಕನಿಷ್ಠ 10 ವರ್ಷ ವಾಸವಿರಬೇಕು ಹಾಗೂ ಕನ್ನಡವನ್ನು ಒಂದು ಭಾಷೆಯಾಗಿ ಎಸ್ ಎಸ್ ಎಲ್ ಸಿ / 10 ನೇ ತರಗತಿಯಲ್ಲಿ ಅಭ್ಯಾಸಿಸಿರಬೇಕು.
ಅರ್ಜಿಯನ್ನು ಕೇವಲ ಆನ್ಲೈನ್ ಮುಖಾಂತರ ಸಂಬಂಧಪಟ್ಟ ದಾಖಲಾತಿಗಳೊಂದಿಗೆ ಸಲ್ಲಿಸಬೇಕು. ಹಾಗೂ ಪರೀಕ್ಷೆಯನ್ನು ಆನ್ಲೈನ್ ಮುಖಾಂತರ ನಡೆಸಲಾಗುವುದು ( ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್ ಸಂಪರ್ಕಿಸಬಹುದು )
ಆನ್ಲೈನ್ ಅರ್ಜಿ ಪ್ರಾರಂಭ ದಿನಾಂಕ : 28/09/2021
ಹಣ ಪಾವತಿಗಾಗಿ ಆನ್ಲೈನ್ ಗೇಟ್ವೇ ಪ್ರಾರಂಭ ದಿನಾಂಕ : 29/09/2021 ಮಧ್ಯಾಹ್ನ 1.30 ಗಂಟೆಗೆ
ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 18/10/2021 ( ಸಾಯಂಕಾಲ 5:00 ಗಂಟೆಯವರೆಗೆ )
ಲಿಖಿತ ಪರೀಕ್ಷೆ ಮತ್ತು ಫಲಿತಾಂಶ ಪ್ರಕಟಣೆ ದಿನಾಂಕ: 23/10/2021
ಮೂಲ ದಾಖಲೆಗಳ ಪರಿಶೀಲನೆ ಪ್ರಾರಂಭ : 26/10/2021 ರಂದು ಪ್ರಾರಂಭ
ಹೆಚ್ಚಿನ ಮಾಹಿತಿಗಾಗಿ : https://karunadu.karnataka.gov.in/hfw/pages/home.aspx ಸಂಪರ್ಕಿಸಬಹುದು.
ಸೂಚನೆ : ನೇಮಕಾತಿ ಸಂಬಂಧಿಸಿದ ತಿದ್ದೋಲೆಗಳನ್ನು ಮೇಲೆ ಸೂಚಿಸಿರುವ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು.
ಬೆಂಗಳೂರು ಮೆಟ್ರೋ ರೈಲು ನಿಗಮಿತ ( ಬಿಎಂಆರ್ ಸಿಎಲ್) ಗುತ್ತಿಗೆ ಆಧಾರದ ಅಥವಾ ನಿಯೋಜನೆ ಮೇರೆಗೆ ಕೆಳಕಂಡ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಅರ್ಹ ಮತ್ತು ಅನುಭವವುಳ್ಳ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ.
ಹುದ್ದೆ : ಉಪ ಪ್ರಧಾನ ವ್ಯವಸ್ಥಾಪಕರು ( ಎಫ್ & ಎ) – 02 ಹುದ್ದೆಗಳು
ಸಹಾಯಕ ಪ್ರಧಾನ ವ್ಯವಸ್ಥಾಪಕರು ( ಎಫ್ & ಎ) – 01 ಹುದ್ದೆ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 27-10-2021 ಸಂಜೆ 04.00 ಗಂಟೆಯವರೆಗೆ.
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್ಸೈಟ್ ಭೇಟಿ ನೀಡಬಹುದು.