Advertisements
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ( ರಿ), ಚಿತ್ರದುರ್ಗ ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನದಡಿಯಲ್ಲಿ ಗುತ್ತಿಗೆ ಆಧಾರದಲ್ಲಿ ವೈದ್ಯರನ್ನು ನೇಮಕ ಮಾಡಲು ಅಧಿಸೂಚನೆ ಪ್ರಕಟಿಸಿದೆ.
ಹುದ್ದೆ : ಎಂಬಿಬಿಎಸ್/ ಆಯುಷ್ ವೈದ್ಯರನ್ನು ನೇಮಕಾತಿ ಮಾಡಲು ಆದೇಶವಿರುತ್ತದೆ.
ಮಾಸಿಕ ವೇತನ : ಎಂಬಿಬಿಎಸ್ ವೈದ್ಯರಿಗೆ ರೂ.35,000/- ಹಾಗೂ ಆಯುಷ್ ವೈದ್ಯರಿಗೆ ರೂ.26,000/-
ಸೂಚನೆ : ಎಂಬಿಬಿಎಸ್ ವೈದ್ಯರು ಬಾರದೇ ಇದ್ದಲ್ಲಿ ಆಯುಷ್ ವೈದ್ಯರನ್ನು ಪರಿಗಣಿಸಲಾಗುವುದು.
ಆಸಕ್ತಿಯುಳ್ಳ ಅಭ್ಯರ್ಥಿಗಳು ದಿ 02-06-2021 ರಿಂದ 10-06-2021 ರ ಸಂಜೆ 5.00 ರೊಳಗೆ ಜಿಲ್ಲಾ ಯೋಜನಾ ನಿರ್ವಹಣಾ ಘಟಕ, ಎನ್.ಹೆಚ್.ಎಂ ಜಿಲ್ಲಾ ಪ್ರಯೋಗಶಾಲಾ ಆವರಣ, ಜಿಲ್ಲಾ ಆಸ್ಪತ್ರೆ ಹಿಂಭಾಗ, ಚಿತ್ರದುರ್ಗ ಇಲ್ಲಿಗೆ ಅರ್ಜಿ ಸಲ್ಲಿಸಬಹುದು.