ಬೆಂಗಳೂರು ನಗರ ಜಿಲ್ಲೆಯಲ್ಲಿ 2021-22 ನೇ ಸಾಲಿಗೆ ಎನ್ ಹೆಚ್ ಎಂ ಯೋಜನೆಯ ವಿವಿಧ ಕಾರ್ಯಕ್ರಮದಡಿ ಖಾಲಿ ಇರುವ ವೈದ್ಯಕೀಯ ಮತ್ತು ಅರೆವೈದ್ಯಕೀಯ ಹುದ್ದೆಗನ್ನು ಗುತ್ತಿಗೆ ಆಧಾರದ ಮೇಲೆ ಎನ್ ಹೆಚ್ ಎಂ ಮಾರ್ಗಸೂಚಿಯಂತೆ ನಿಯಮಾನುಸಾರ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳ ನೇರ ಸಂದರ್ಶನಕ್ಕೆ ಆಹ್ವಾನಿಸಿದೆ
ಹುದ್ದೆಗಳ ವಿವರ : ಎಸ್.ಎನ್.ಸಿ ಯು ವೈದ್ಯಾಧಿಕಾರಿಗಳು : 10 ಹುದ್ದೆ ಗಳು : ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 50,000/- ವೇತನವಿರುತ್ತದೆ. ಅಭ್ಯರ್ಥಿಗಳು ಎಂ.ಬಿ.ಬಿ.ಎಸ್ ಉತ್ತೀರ್ಣರಾಗಿ ಕಡ್ಡಾಯವಾಗಿ ಇಂಟರ್ನ್ ಶಿಪ್ ಪೂರೈಸಿ ಕೆ.ಎಂ.ಸಿ ನೋಂದಣಿ ಹೊಂದಿರಬೇಕು. ಅಭ್ಯರ್ಥಿಗಳ ವಯೋಮಿತಿಯು 60 ವರ್ಷ ಒಳಗಿರತಕ್ಕದ್ದು.
ಟೆಲಿಮಡಿಸಿನ್ ವೈದ್ಯಾಧಿಕಾರಿಗಳು : 8 ಹುದ್ದೆಗಳು: ಮಾಸಿಕ ವೇತನ ರೂ.45,000/- ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು ಎಂ.ಬಿ.ಬಿ.ಎಸ್ ಉತ್ತೀರ್ಣರಾಗಿ ಕಡ್ಡಾಯವಾಗಿ ಇಂಟರ್ನ್ ಶಿಪ್ ಪೂರೈಸಿ ಕೆ.ಎಂ.ಸಿ ನೋಂದಣಿ ಹೊಂದಿರಬೇಕು.ಅಭ್ಯರ್ಥಿಗಳ ವಯೋಮಿತಿಯು 60 ವರ್ಷ ಒಳಗಿರತಕ್ಕದ್ದು.
ಎನ್.ಪಿ.ಸಿ.ಡಿ.ಸಿ.ಎಸ್. ವೈದ್ಯಾಧಿಕಾರಿಗಳು : 2 ಹುದ್ದೆಗಳು : ಅಭ್ಯರ್ಥಿಗಳಿಗೆ ಮಾಸಿಕ ರೂ.46,200/- ವೇತನವಿರುತ್ತದೆ. ಅಭ್ಯರ್ಥಿಗಳು ಎಂ.ಬಿ.ಬಿ.ಎಸ್ ಉತ್ತೀರ್ಣರಾಗಿ ಕಡ್ಡಾಯವಾಗಿ ಇಂಟರ್ನ್ ಶಿಪ್ ಪೂರೈಸಿ ಕೆ.ಎಂ.ಸಿ ನೋಂದಣಿ ಹೊಂದಿರಬೇಕು.ಅಭ್ಯರ್ಥಿಗಳ ವಯೋಮಿತಿಯು 60 ವರ್ಷ ಒಳಗಿರತಕ್ಕದ್ದು.
ಶ್ರುಶ್ರೂಷಕಿಯರು: 126 ಹುದ್ದೆಗಳು : ಮಾನ್ಯತೆ ಪಡೆದ ನರ್ಸಿಂಗ್ ಶಾಲೆಯಲ್ಲಿ ಬಿಎಸ್ ಸಿ/ ಜಿಎನ್ ಎಂ ತರಬೇತಿ ಹಾಗೂ ಕೆಎನ್ ಸಿ ನೋಂದಣಿ ಹೊಂದಿ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಮಾಸಿಕ ವೇತನ ರೂ.11,500/+ 13% EPF. ಅಭ್ಯರ್ಥಿಗಳ ವಯೋಮಿತಿಯು 40 ವರ್ಷ ಒಳಗಿರತಕ್ಕದ್ದು.
ಫಾರ್ಮಸಿಸ್ಟ್ : 4 ಹುದ್ದೆಗಳು : ಡಿ.ಫಾರ್ಮ/ಬಿ.ಫಾರ್ಮ ಪದವಿಯೊಂದಿಗೆ ಕರ್ನಾಟಕ ಫಾರ್ಮಸಿ ಕೌನ್ಸಿಲ್ ನಲ್ಲಿ ನೋಂದಣಿ ಹೊಂದಿ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಮಾಸಿಕ ವೇತನ ರೂ.11,025/+ 13% EPF. ಅಭ್ಯರ್ಥಿಗಳ ವಯೋಮಿತಿಯು 40 ವರ್ಷ ಒಳಗಿರತಕ್ಕದ್ದು.
ಪ್ರಯೋಗಶಾಲಾ ತಂತ್ರಜ್ಞರು : 1 ಹುದ್ದೆ : DMLT ಪದವಿಯೊಂದಿಗೆ ಕಡ್ಡಾಯವಾಗಿ ಕರ್ನಾಟಕ ರಾಜ್ಯ ಅರೆ ವೈದ್ಯಕೀಯ ಮಂಡಳಿಯಲ್ಲಿ ನೋಂದಣಿಯನ್ನು ಹೊಂದಿ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.ಮಾಸಿಕ ವೇತನ ರೂ.14,000/- + 13% EPF. ಅಭ್ಯರ್ಥಿಗಳ ವಯೋಮಿತಿಯು 40 ವರ್ಷ ಒಳಗಿರತಕ್ಕದ್ದು.
ಈ ಮೇಲ್ಕಂಡ ಹುದ್ದೆಗಳಿಗೆ ಪ್ರತಿ ಸೋಮವಾರ ಬೆಳಿಗ್ಗೆ 10.00 ಗಂಟೆಯಿಂದ ಮಧ್ಯಾಹ್ನ 1.00 ಗಂಟೆ ಒಳಗಾಗಿ ನಿಗದಿತ ಅರ್ಜಿ ನಮೂನೆಯನ್ನು ಜಿಲ್ಲಾ ಆರ್ ಸಿ ಹೆಚ್ ಅಧಿಕಾರಿಗಳ ಕಚೇರಿಯಲ್ಲಿ ಪಡೆದು ನೋಂದಣಿ ಮಾಡಿಕೊಂಡು, ನೋಂದಣಿಯಾದ ಅರ್ಹ ಅಭ್ಯರ್ಥಿಗಳನ್ನು ಮಾತ್ರ ದಾಖಲಾತಿ ಪರಿಶೀಲನೆಗೆ ಪರಿಗಣಿಸಲಾಗುತ್ತದೆ.
ಈ ಪ್ರಕಟಣೆಯು Rolling Advertisement ಆಗಿರುವುದರಿಂದ ಅವಧಿಯು 31-03-2022 ರವರೆಗೆ ಇರುತ್ತದೆ.
ಆಸಕ್ತಿಯುಳ್ಳ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ತಮ್ಮ ಮೂಲ ದಾಖಲೆಗಳೊಂದಿಗೆ ಒಂದು ಸೆಟ್ ಜೆರಾಕ್ಸ್ ಪ್ರತಿಗಳೊಂದಿಗೆ ಜಿಲ್ಲಾ ಆರ್ ಸಿಹೆಚ್ ಅಧಿಕಾರಿಗಳ ಕಚೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಆವರಣ,ಹಳೇ ಟಿ.ಬಿ.ಆಸ್ಪತ್ರೆ, ಹಳೇ ಮದ್ರಾಸ್ ರಸ್ತೆ, ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣ, ಇಂದಿರಾನಗರ, ಬೆಂಗಳೂರು-38 ಇಲ್ಲಿ ಹಾಜರಾಗುವುದು.