DGPM Recruitment 2024: ಡೈರೆಕ್ಟರೇಟ್ ಜನರಲ್ ಆಫ್ ಪರ್ಫಾರ್ಮೆನ್ಸ್ ಮ್ಯಾನೇಜ್‌ಮೆಂಟ್ (DGPM) ಅಧಿಕೃತ ಅಧಿಸೂಚನೆಯ ಮೂಲಕ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಒಟ್ಟು 110 ಹುದ್ದೆಗಳು ಖಾಲಿ ಇದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು. ಹೆಚ್ಚುವರಿ ಸಹಾಯಕ ನಿರ್ದೇಶಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಗುವಾಹಟಿ – ಅಸ್ಸಾಂ, ಅಹಮದಾಬಾದ್ – ಗುಜರಾತ್, ಹೈದರಾಬಾದ್ – ತೆಲಂಗಾಣ, ಬೆಂಗಳೂರು – ಕರ್ನಾಟಕ, ಚೆನ್ನೈ – ತಮಿಳುನಾಡು, ಕೋಲ್ಕತ್ತಾ – ಪಶ್ಚಿಮ ಬಂಗಾಳ, ಮುಂಬೈ – ಮಹಾರಾಷ್ಟ್ರ, ದೆಹಲಿ – ನವದೆಹಲಿಯಲ್ಲಿ ಪೋಸ್ಟಿಂಗ್ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು 06-ಮೇ-2024 ರಂದು ಅಥವಾ ಮೊದಲು ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 23-03-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 06-05-2024
ಹುದ್ದೆಯ ಕುರಿತು ಮಾಹಿತಿ ಇಲ್ಲಿದೆ;
ಹುದ್ದೆ ಸ್ಥಳ ಮತ್ತು ಸಂಖ್ಯೆ: ಡೈರೆಕ್ಟರೇಟ್ ಜನರಲ್ ಆಫ್ ಪರ್ಫಾರ್ಮೆನ್ಸ್ ಮ್ಯಾನೇಜ್ಮೆಂಟ್ (DGPM) ನಲ್ಲಿ ಒಟ್ಟು 110 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಗುವಾಹಟಿ – ಅಸ್ಸಾಂ, ಅಹಮದಾಬಾದ್ – ಗುಜರಾತ್, ಹೈದರಾಬಾದ್ – ತೆಲಂಗಾಣ, ಬೆಂಗಳೂರು – ಕರ್ನಾಟಕ, ಚೆನ್ನೈ – ತಮಿಳುನಾಡು, ಕೋಲ್ಕತ್ತಾ – ಪಶ್ಚಿಮ ಬಂಗಾಳ, ಮುಂಬೈ – ಮಹಾರಾಷ್ಟ್ರ, ದೆಹಲಿ – ನವದೆಹಲಿ ಯಲ್ಲಿ ಉದ್ಯೋಗದ ಸ್ಥಳವಿರಲಿದೆ.
ಹುದ್ದೆಯ ಹೆಸರು: ಹೆಚ್ಚುವರಿ ಸಹಾಯಕ ನಿರ್ದೇಶಕ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ವೇತನ: ಮೇಲ್ಕಂಡ ಹುದ್ದೆಗಳಿಗೆ ಮಾಸಿಕ ರೂ. 47,600 – 1,51,100/- ವೇತನವಿರಲಿದೆ.
ಶೈಕ್ಷಣಿಕ ಅರ್ಹತೆ: DGPM ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಪದವಿ ತೇರ್ಗಡೆ ಹೊಂದಿರಬೇಕು. ವಯೋಮಿತಿ ಸಡಿಲಿಕೆಯನ್ನು ಸಂಸ್ಥೆಯ ನಿಯಮಾನುಸಾರ ನೀಡಲಾಗುವುದು.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಆಫ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು. ಭರ್ತಿ ಮಾಡಿದ ಅರ್ಜಿಯನ್ನು ಅಭ್ಯರ್ಥಿಗಳು ಈ ಕೆಳಗೆ ನೀಡಿದ ವಿಳಾಸಕ್ಕೆ ತಲುಪಿಸಬೇಕು.
ವಿಳಾಸ ಈ ರೀತಿ ಇದೆ; Director (CCA), DGPM Hqrs., 5th Floor, Drum Shaped Building, I.P. Estate, New Delhi-110002 .ಇಲ್ಲಿಗೆ ದಿನಾಂಕ 06-May-2024 ರೊಳಗೆ ತಲುಪುವಂತೆ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ