Indian Coast Guard Recruitment 2024: ಭಾರತೀಯ ಕರಾವಳಿ ರಕ್ಷಣಾ ಪಡೆಯಲ್ಲಿ ಕೆಲಸ ಮಾಡಲು ಆಸಕ್ತಿ ಇದೆಯೇ? ಭಾರತೀಯ ಕರಾವಳಿ ಪಡೆಯಲ್ಲಿ ನಿಮಗೆ ಸಾಕಷ್ಟು ಅವಕಾಶಗಳಿದ್ದು, ಇದನ್ನು ನೀವು ಸದುಪಯೋಗ ಪಡೆದುಕೊಳ್ಳಬಹುದು. ಭಾರತೀಯ ಕರಾವಳಿಯ ರಕ್ಷಣಾ ಪಡೆಯಲ್ಲಿ ಜೆನೆರಲ್ ಡ್ಯೂಟಿ ನಾವಿಕ ಹುದ್ದೆಗಳನ್ನು ವಿವಿಧ ವಲಯಗಳಲ್ಲಿ ನೇಮಕಾತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗೆ ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಸಾಧ್ಯ. ಹುದ್ದೆಯ ಕುರಿತ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದ್ದು, ಪೂರ್ಣಾವಧಿಯ ಹುದ್ದೆ ಇದಾಗಿದ್ದು, ಆಸಕ್ತ ಅಭ್ಯರ್ಥಿಗಳು 27-02-2024 ರೊಳಗೆ ಅರ್ಜಿ ಸಲ್ಲಿಸಬಹುದು.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆಯ ಆರಂಭಿಕ ದಿನಾಂಕ: 13-02-2024
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ: 27-02-2024
ಹುದ್ದೆಗಳ ವಿವರ;
ಹುದ್ದೆ ಹೆಸರು: ಭಾರತೀಯ ಕರಾವಳಿ ರಕ್ಷಣಾ ಪಡೆಯು ನಾವಿಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
ಒಟ್ಟು ಹುದ್ದೆಗಳು: ಭಾರತೀಯ ಕರಾವಳಿ ರಕ್ಷಣಾ ಪಡೆಯು ಒಟ್ಟು 260 ಹುದ್ದೆಗಳಿಗೆ ನೇಮಕಾತಿ ನಡೆಸಲಿದೆ.
ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 01 ಸೆಪ್ಟಂಬರ್ 2002 ಮತ್ತು 31 ಆಗಸ್ಟ್ 2006 ನಡುವೆ ಜನಿಸಿರುವವರು ಮಾತ್ರ ಅರ್ಜಿ ಸಲ್ಲಿಸಬಹುದು. ಕನಿಷ್ಟ 18 ವಯಸ್ಸಾಗಿದ್ದು, ಗರಿಷ್ಠ 22 ವರ್ಷ ಮೀರದವರು ಅರ್ಜಿ ಸಲ್ಲಿಸಲು ಅರ್ಹರು. ಈ ಹುದ್ದೆಗೆ ವಯೋಮಿತಿ ಮೀಸಲಾತಿ ಸಡಿಲಿಕೆಯನ್ನು ನೀಡಲಾಗಿದ್ದು ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ನೀಡಲಾಗಿದೆ.
ವೇತನ: ಈ ಹುದ್ದೆಗಳಿಗೆ ಆಯ್ಕೆಯಗುವ ಅಭ್ಯರ್ಥಿಗಳಿಗೆ ಬೇಸಿಕ್ ಪೇ ರೂ.21,700 ನೀಡಲಾಗುವುದು. ಇದರ ಜೊತೆಗೆ ಎಲ್ಲಾ ಭತ್ಯೆಗಳು ದೊರಕುತ್ತದೆ. ಇದರಲ್ಲಿ ಪ್ರಮೋಷನ್ ಕೂಡಾ ಇರಲಿದೆ.
ಅರ್ಜಿ ಶುಲ್ಕ: ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು ಶುಲ್ಕ ಪಾವತಿ ಮಾಡಬೇಕಾಗಿಲ್ಲ. ಉಳಿದಂತೆ ಎಲ್ಲರೂ ರೂ.300 ಅರ್ಜಿ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ನೆಟ್ ಬ್ಯಾಂಕಿಂಗ್, ಇತರೆ ಯುಪಿಐ ಪೇ ಮಾದರಿಯಲ್ಲಿ ಅರ್ಜಿ ಶುಲ್ಕ ಪಾವತಿ ಮಾಡಬಹುದು.
ವಿದ್ಯಾರ್ಹತೆ: ನಾವಿಕ ಹುದ್ದೆಗೆ ದ್ವಿತೀಯ ಪಿಯುಸಿ ಸೈನ್ಸ್ ಪಾಸಾದವರು ಅರ್ಜಿ ಸಲ್ಲಿಸಬಹುದು. ಗಣಿತ ಮತ್ತು ಭೌತಶಾಸ್ತ್ರದಲ್ಲಿ ಓದಿದವರಿಗೆ ಆದ್ಯತೆ ನೀಡಲಾಗುವುದು.
ಅರ್ಜಿ ಸಲ್ಲಿಸುವ ರೀತಿ ಇಲ್ಲಿದೆ;
ಅಭ್ಯರ್ಥಿಗಳು https://joinindiancoastguard.cdac.in/cgept/ ವೆಬ್‌ಸೈಟ್‌ಗೆ ಭೇಟಿ ನೀಡಬೇಕು
ನಂತರ ನಾವಿಕ ನೇಮಕಾತಿ ಹುದ್ದೆಯ ರಿಜಿಸ್ಟ್ರೇಷನ್ ಲಿಂಕ್ ನೀಡಲಾಗಿರುವುದು ಅದನ್ನು ಕ್ಲಿಕ್ ಮಾಡಬೇಕು
ರಿಜಿಸ್ಟ್ರೇಷನ್ ಮೊದಲಿಗೆ ಪಡೆದ ನಂತರ, ಡಿಟೇಲ್ಡ್ ಅಪ್ಲಿಕೇಶನನ್ನು ಭರ್ತಿ ಮಾಡಿ
ಅನಂತರ ನಿಮಗೆ ಫೆ.13 ರ ಅಪ್ಲಿಕೇಶನ್ ಲಿಂಕ್ ನೀಡಲಾಗುವುದು.
ಹುದ್ದೆಯ ಕುರಿತ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ