ರಾಜ್ಯ ಸಮಗ್ರ ಮಕ್ಕಳ ರಕ್ಷಣಾ ಯೋಜನೆಯ ಮಾರ್ಗಸೂಚಿಗಳಿಗನುಗುಣವಾಗಿ ಸರಕಾರಿ ಬಾಲಕಿಯರ ಬಾಲ ಮಂದಿರದಲ್ಲಿ ಯಾದಗಿರಿ ವಿಶೇಷ ಮತ್ತು ದತ್ತು ಕೇಂದ್ರ ಸಂಸ್ಥೆಯನ್ನು ತಾತ್ಕಾಲಿಕವಾಗಿ ಪ್ರಾರಂಭಿಸಲಾಗಿದ್ದು, ನೂತನವಾಗಿ ಪ್ರಾರಂಭವಾಗಿರುವ ವಿಶೇಷ ದತ್ತು ಕೇಂದ್ರ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಅತೀ ಅವಶ್ಯಕತೆವಿರುವ ಎಲ್ಲಾ ಹುದ್ದೆಗಳನ್ನು ಹೊರಗುತ್ತಿಗೆ ಆಧಾರ ಮೇಲೆ ತಾತ್ಪೂತಿಕವಾಗಿ ಸೇವೆ ಸಲ್ಲಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 05-07-2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 20-07-2021
ಹುದ್ದೆ : ಮ್ಯಾನೇಜರ್ / ಕೋರ್ಡಿನೇಟರ್: 1 ಮಹಿಳಾ ಹುದ್ದೆ . ಎಂಎ/ ಎಂಎಸಡಬ್ಲೂ ಸೋಶಿಯಲ್ ವರ್ಕ್ಸ್ ಹಾಗೂ2 ವರ್ಷಗಳು ಕಾರ್ಯನಿರ್ವಹಿಸಿದ ಅನುಭವ ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ಸೋಶಿಯಲ್ ವರ್ಕರ್ ಕಮ್ ಅರ್ಲಿ ಚೈಲ್ಡ್ ಹುಡ್ ಎಜುಕೇಟರ್ : 1 ಮಹಿಳಾ ಹುದ್ದೆ. ಎಂ.ಎ/ಎಂಎಸ್ ಡಬ್ಲ್ಯೂ ಸೋಶಿಯಲ್ ವರ್ಕ್ಸ್ ಮಾಡಿರಬೇಕು.
ಚೈಲ್ಡ್ ಡಾಕ್ಟರ್ : 1 ಮಹಿಳಾ ಹುದ್ದೆ. ಮಕ್ಕಳ ತಜ್ಞರು.ಎಂಬಿಬಿಎಸ್ ಮಾಡಿರಬೇಕು.
ಸ್ಟಾಫ್ ನರ್ಸ್ : 1 ಮಹಿಳಾ ಹುದ್ದೆ. ಎ/ಎನ್/ಎಂ/ಜಿಎನ್ ಎಂ/ಡಿ.ಹೆಚ್.ಐ/ ಬಿ.ಎಸ್ಸಿ ನರ್ಸಿಂಗ್. 2 ವರ್ಷಗಳು ಕಾರ್ಯನಿರ್ವಹಿಸಿದ ಅನುಭವ ಹಾಗೂ ಕಂಪ್ಯೂಟರ್ ಜ್ಞಾನ.
ಆಯಾ : 6 ಮಹಿಳಾ ಹುದ್ದೆ. 7 ನೇ ತರಗತಿ ಪಾಸಾಗಿರಬೇಕು.
ಚೌಕಿದಾರ್ : 1 ಮಹಿಳಾ ಹುದ್ದೆ. 7 ನೇ ತರಗತಿ ಪಾಸಾಗಿರಬೇಕು.
ಅಭ್ಯರ್ಥಿಗಳು ಹುದ್ದೆಗೆ ಅನುಗುಣವಾಗಿ ಕರ್ನಾಟಕ ರಾಜ್ಯದ ಅಂಗೀಕೃತ ಕಾಲೇಜು / ವಿಶ್ವ ವಿದ್ಯಾಲಯಗಳಿಂದ ಶಿಕ್ಷಣ ಪಡೆದಿರಬೇಕು. ಕಂಪ್ಯೂಟರ್ ಜ್ಞಾನದ ಬಗ್ಗೆ ಖಾತ್ರಿ ಪಡಿಸಿಕೊಂಡು ಕೌಶಲ್ಯ ಪರೀಕ್ಷೆ ನಡೆಸಿ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು.
ಅರ್ಜಿ ಜೊತೆಗೆ ರೂ.100/- ಡಿಡಿಯನ್ನು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು,ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಯಾದಗಿರಿ ರವರ ಹೆಸರಿನಲ್ಲಿ ಪಡೆದು ಲಗತ್ತಿಸಬೇಕು. ಮಕ್ಕಳ ರಕ್ಷಣಾ ಘಟಕ ಯೋಜನೆಯ ಕೇಂದ್ರ ಪುರಸ್ಕೃತ ಯೋಜನೆಯಾಗಿದ್ದು, ಕನ್ನಡ ಮತ್ತು ಇಂಗ್ಲೀಷ್ ಜ್ಞಾನ ಅಗತ್ಯವಾಗಿರುತ್ತದೆ. ಅಭ್ಯರ್ಥಿಗಳು ಕನ್ನಡ/ ಇಂಗ್ಲೀಷ್ / ನುಡಿ / ಬರಹ ಜ್ಞಾನ ಹೊಂದಿರಬೇಕು. ಅಭ್ಯರ್ಥಿಗಳ ಆಯ್ಕೆ ಬಗ್ಗೆ ಜಿಲ್ಲಾಧಿಕಾರಿಗಳ ತೀರ್ಮಾನವೇ ಅಂತಿಮವಾಗಿರುತ್ತದೆ. ಕನಿಷ್ಠ ಅರ್ಹತೆಗಿಂತ ಹೆಚ್ಚಿನ ಅರ್ಹತೆ ಹಾಗೂ ಅನುಭವ ಇದ್ದರೆ ಆದ್ಯತೆ ನೀಡಿ ಪರಿಗಣಿಸಲಾಗುವುದು.