ಕೋವಿಡ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಲು ತುರ್ತು ನೇಮಕಾತಿಗಾಗಿ ಖಾಲಿ ಇರುವ ವಿವಿಧ ಹುದ್ದೆಗೆ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ 06 ತಿಂಗಳ ಅವಧಿಗೆ ಅಥವಾ ಕೋವಿಡ್ ಪರಿಸ್ಥಿತಿ ಸುಧಾರಿಸುವವರೆಗೆ ಯಾವುದು ಮೊದಲೋ ಅಲ್ಲಿಯವರೆಗೆ ನೇಮಕಾತಿಯನ್ನು ಮೊದಲು ಅರ್ಹ ಅಭ್ಯರ್ಥಿಗಳಿಂದ ನೇರ ಸಂದರ್ಶನಕ್ಕೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು ನೇರ ಸಂದರ್ಶನಕ್ಕೆ ಅಗತ್ಯ ಶೈಕ್ಷಣಿಕ ಹಾಗೂ ಅನುಭವದ ಮೂಲ ದಾಖಲಾತಿಯ ಮತ್ತು ಎರಡು ನಕಲು ಪ್ರತಿ, ಭಾವಚಿತ್ರ (3) ಗಳೊಂದಿಗೆ ಹಾಜರಾಗಲು ಪ್ರಕಟಣೆ ಹೊರಡಿಸಲಾಗಿದೆ. ಸಂದರ್ಶನವು ದಿ. 10-05-2021 ರಿಂದ 15-05-2021 ರವರೆಗೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 01 ಗಂಟೆಯವರೆಗೆ ( ರಜಾ ದಿನ ಹೊರತು ಪಡಿಸಿ) ನಡೆಯುತ್ತದೆ.
ಹುದ್ದೆ : ಫಿಸಿಶಿಯನ್ -4 ಅನಸ್ತೇಸಿಯಾಲಾಜಿಸ್ಟ್ – 8
ಪಿಡಿಯಾಟ್ರಿಷಿಯನ್ -7
ಜಿಡಿ ಎಂಒ- 4
ನರ್ಸಿಂಗ್ ಆಫೀಸರ್ – 52
ಜ್ಯೂನಿಯರ್/ ಲ್ಯಾಬ್ ಟೆಕ್ನಿಶಿಯನ್ – 30
ಫಾರ್ಮಸಿಸ್ಟ್ – 19
ಎಕ್ಸ್ ರೇ ಟೆಕ್ನಿಶಿಯನ್ – 4
ಜ್ಯೂನಿಯರ್ ಹೆಲ್ತ್ ಅಸಿಸ್ಟೆಂಟ್ ( ಫಿಮೇಲ್) – 78
ಡಾಟಾ ಎಂಟ್ರಿ ಅಪರೇಟರ್ – 10
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿ : 08272- 225443