CRPF Recruitment 2024: ಕೇಂದ್ರೀಯ ಮೀಸಲು ಪೊಲೀಸ್ ಪಡೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಸೆಂಟ್ರಲ್ ರಿಸರ್ವ್ ಪೊಲೀಸ್ ಪೋರ್ಸ್ ನೇಮಕಾತಿ ಮಾಡಲಿದ್ದು, ಇಲ್ಲಿ 03 ಖಾಲಿ ಹುದ್ದೆಗಳಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಫಿಸಿಯೋಥೆರಪಿಸ್ಟ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗೆ ನೇರ ಸಂದರ್ಶನವು ದಿ.17-06-2024 ರಂದು ನಡೆಯಲಿದ್ದು, ಆಸಕ್ತರು ಭಾಗವಹಿಸಬಹುದು.
ಹುದ್ದೆಯ ವಿವರ ಇಲ್ಲಿದೆ:
ಹುದ್ದೆ ಸಂಖ್ಯೆ ಹೆಚ್ಚಿನ ವಿವರ: ಕೇಂದ್ರೀಯ ಮೀಸಲು ಪಡೆಯಲ್ಲಿ 03 ಹುದ್ದೆಗಳು ಖಾಲಿ ಇದ್ದು, ಫಿಸಿಯೋಥೆರಪಿಸ್ಟ್ ಹುದ್ದೆಯನ್ನು ಭರ್ತಿ ಮಾಡಲಾಗುತ್ತಿದ್ದು, ಈ ಹುದ್ದೆಗೆ ಆಯ್ಕೆಯಾದವರಿಗೆ ಮಾಸಿಕ ರೂ.55000 ವೇತನವಿರಲಿದೆ.
ವಿದ್ಯಾರ್ಹತೆ: ಮಾನ್ಯತೆ ಪಡೆದ ಭಾರತೀಯ ಅಥವಾ ವಿದೇಶಿ ವಿಶ್ವವಿದ್ಯಾಲಯದಿಂದ ಭೌತಚಿಕಿತ್ಸೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.
ವಯೋಮಿತಿ: ಫಿಸಿಯೋಥೆರಪಿಸ್ಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯು ಗರಿಷ್ಠ 40 ವರ್ಷ ಮೀರಿರಬಾರದು.
ವೇತನ: ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನವು ರೂ.55,000 ಇರುತ್ತದೆ.
ಆಯ್ಕೆ ಪ್ರಕ್ರಿಯೆ: ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗೆ ಒಂದು ವರ್ಷದ ಪ್ರೊಬೆಷನರಿ ಪಿರಿಯೇಡ್ ಇರುತ್ತದೆ. ಇದನ್ನು ಅಭ್ಯರ್ಥಿಗಳ ಕಾರ್ಯಕ್ಷಮತೆಯ ಆಧಾರದ ಮೇಲೆ ಎರಡು ವರ್ಷಕ್ಕೆ ವಿಸ್ತರಣೆ ಮಾಡಲಾಗುವುದು.
ನೇಮಕ ಸ್ಥಳ: ಎಸ್‌ಎಂಸಿ, ಜಿಸಿ ನವದೆಹಲ್ಲಿ ಈ ಹುದ್ದೆಗೆ ಆಯ್ಕೆಯಾದವರನ್ನು ಪೋಸ್ಟಿಂಗ್ ಮಾಡಲಾಗುವುದು. ಹಾಗೆನೇ ಜಿಸಿ, ಸೋನೆಪತ್, ಜಿಸಿ ಜಲಂಧರ್, ಜಿಸಿ ಕತ್ಗೊಡಮ್, ಜಿಸಿ ಜಮ್ಶೆಡ್‌ಪುರ, ಜಿಸಿ-1&2 ಅಜ್ಮೀರ್, ಜಿಸಿ ಕೇಂದ್ರೀತ ಕೇಂದ್ರ ಕ್ರೀಡಾ ತಂಡ ಹೆಚ್ಚಾಗಿ ಇರುವ ರಂಗಾರೆಡ್ಡಿ ಜಿಲ್ಲೆ, ಚಂಡೀಗಢ, ಹಾಗೂ ಇತರ ಸ್ಥಳಗಳಲ್ಲಿ ಕೆಲಸವಿರುತ್ತದೆ.
ಅರ್ಜಿ ಸಲ್ಲಿಸಬೇಕಾದ ವಿಳಾಸ; ಅಭ್ಯರ್ಥಿಗಳು ಭರ್ತಿ ಮಾಡಿದ ದಾಖಲೆಗಳ ಜೊತೆ ಈ ಕೆಳಗೆ ನೀಡಿದ ವಿಳಾಸಕ್ಕೆ ನೇರ ಸಂದರ್ಶನಕ್ಕೆ ಹಾಜರಿರಬೇಕು.
ವಿಳಾಸ ಇಲ್ಲಿದೆ;
Training Directorate,
East Block No 10,
Level 7, R K Puram,
New Delhi, 110066
ಸಂಪರ್ಕ ಸಂಖ್ಯೆ -011-20867225 ಇಲ್ಲಿ ದಿ.17-06-2024 ರಂದು ನೇರ ಸಂದರ್ಶನವಿರಲಿದೆ.
ಅಭ್ಯರ್ಥಿಗಳು ಹುದ್ದೆಯ ಕುರಿತ ಹೆಚ್ಚಿನ ಮಾಹಿತಿಯನ್ನು ಇಲ್ಲಿ ನೀಡಲಾದ ಲಿಂಕ್ ಕ್ಲಿಕ್ ಮೂಲಕ ಪಡೆದುಕೊಳ್ಳಬಹುದು.