Coffee Board Recruitment 2024: ಕಾಫಿ ಮಂಡಳಿಯಲ್ಲಿ ಉದ್ಯೋಗಾವಕಾಶ, ಮಾಸಿಕ ಸಂಬಳ 25 ಸಾವಿರ, ಕೊಡಗಿನಲ್ಲಿ ಕೆಲಸ

Advertisements

Coffee Board Recruitment 2024: ಕಾಫಿ ಬೋರ್ಡ್ ಆಫ್ ಇಂಡಿಯಾ ದಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಕಾಫಿ ಬೋರ್ಡ್ ನ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಜಿ ಸಲ್ಲಿಸಬಹುದು. ಕೊಡಗು-ಕರ್ನಾಟಕ ಸರಕಾರದಲ್ಲಿ ಕೆಲಸ ಮಾಡಲು ಇಚ್ಛೆ ಪಡುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಒಟ್ಟು ಒಂದು ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಲಾದ ವಿವರಗಳನ್ನು ಓದಿ ಅರ್ಜಿ ಸಲ್ಲಿಸಬಹುದು. 22-Feb-2024 ರಂದು ನಡೆಯುವ ನೇರ ಸಂದರ್ಶನದಲ್ಲಿ ಅಭ್ಯರ್ಥಿಗಳು ಪಾಲ್ಗೊಳ್ಳಬಹುದು.

ಹುದ್ದೆಗಳ ಸಂಖ್ಯೆ: ಒಟ್ಟು 1 ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಯ ಹೆಸರು: ಕಾಫಿ ಬೋರ್ಡ್ ಆಫ್ ಇಂಡಿಯಾದಲ್ಲಿ ಯಂಗ್ ಪ್ರೊಫೆಷನಲ್ (ಯುವ ವೃತ್ತಿಪರ) ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

ವೇತನ: ಯುವ ವೃತ್ತಿಪರ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.21000-25000/- ವೇತನ ಸಿಗಲಿದೆ.

ಶೈಕ್ಷಣಿಕ ಅರ್ಹತೆ: ಕಾಫಿ ಬೋರ್ಡ್ ಇಂಡಿಯಾ ಸಂಸ್ಥೆಯ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ M.Sc ತೇರ್ಗಡೆ ಹೊಂದಿರಬೇಕು.

ವಯೋಮಿತಿ: ಕಾಫಿ ಬೋರ್ಡ್ ಆಫ್ ಇಂಡಿಯಾ ನೇಮಕಾತಿ ಅಧಿಸೂಚನೆಯ ಪ್ರಕಾರ, ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಕನಿಷ್ಠ ವಯಸ್ಸು 22, ಹಾಗೂ ಗರಿಷ್ಠ 35 ಮೀರಿರಬಾರದು.

ಆಯ್ಕೆ ಪ್ರಕ್ರಿಯೆ: ಯುವ ವೃತ್ತಿಪರ ಹುದ್ದೆಗೆ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಸಂದರ್ಶನ ನಡೆಯುವ ಸ್ಥಳ: ಅಭ್ಯರ್ಥಿಗಳು ಈ ಕೆಳಗಿನ ಸ್ಥಳದಲ್ಲಿ ಅಗತ್ಯ ದಾಖಲೆಗಳೊಂದಿಗೆ (ಅಧಿಕೃತ ಅಧಿಸೂಚನೆಯಲ್ಲಿ ಉಲ್ಲೇಖಿಸಿದಂತೆ) ನೇರ ಸಂದರ್ಶನಕ್ಕೆ ಹಾಜರಾಗಲು ಸೂಚಿಸಲಾಗಿದೆ.
ವಿಳಾಸ: ಉಪನಿರ್ದೇಶಕರ (ಸಂಶೋಧನೆ) ಕಚೇರಿ, ಕೊಡಗು ಜಿಲ್ಲೆ, ಕರ್ನಾಟಕ. 22- ಫೆಬ್ರವರಿ-2024 ರಂದು ನೇರ ಸಂದರ್ಶನ ನಡೆಯಲಿದೆ.

ಆಸಕ್ತ ಅಭ್ಯರ್ಥಿಗಳು 22/02/2024 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಕೊಡಗು ಜಿಲ್ಲೆಯ ಉಪನಿರ್ದೇಶಕರ (ಸಂಶೋಧನೆ) ಕಛೇರಿಯಲ್ಲಿ ತಮ್ಮ ಬಯೋಡೇಟಾ, ಪಾಸ್‌ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ ಎಲ್ಲಾ ಮೂಲ ದಾಖಲೆಗಳೊಂದಿಗೆ ವಾಕ್-ಇನ್-ಇಂಟರ್‌ವ್ಯೂಗೆ ಹಾಜರಾಗಬೇಕು. ವಯಸ್ಸು ಮತ್ತು ವಿದ್ಯಾರ್ಹತೆಗಳನ್ನು ಬೆಂಬಲಿಸುವ ಪ್ರಮಾಣಪತ್ರಗಳ ಒಂದು ಸೆಟ್ ಪ್ರತಿಗಳನ್ನು ತರಬೇಕು.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ