Cochin Shipyard Limited Recruitment 2024: ಉಡುಪಿಯಲ್ಲಿ ಉದ್ಯೋಗಾವಕಾಶ; ಮಾಸಿಕ 1 ಲಕ್ಷಕ್ಕೂ ಮೀರಿದ ಸಂಬಳ, ಈ ಕೂಡಲೇ ಅರ್ಜಿ ಸಲ್ಲಿಸಿ

Advertisements

Cochin Shipyard Limited Recruitment 2024: ಕೇಂದ್ರ ಸರಕಾರದ ಹುದ್ದೆ ಹುಡುಕುವವರಿಗೆ ಇದೊಂದು ಸುವರ್ಣಾವಕಾಶ. ಹೌದು, ಕೊಚ್ಚಿನ ಶಿಪ್‌ಯಾರ್ಡ್‌ ಲಿಮಿಟೆಡ್‌ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಿಂದಿ ಟ್ರಾನ್ಸ್‌ಲೇಟರ್‌ ಹುದ್ದೆಯ ಭರ್ತಿಗೆ ನೇಮಕಾತಿ ನಡೆಯಲಿದ್ದು, ಫೆ.26, 2024 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಈ ಹುದ್ದೆಗೆ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು. ಈ ಹುದ್ದೆಯ ಪೋಸ್ಟಿಂಗ್‌ ಉಡುಪಿಯಲ್ಲಿ ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಹುದ್ದೆಯ ಕುರಿತು ಹೆಚ್ಚಿನ ಮಾಹಿತಿ ಅಂದರೆ ವೇತನ, ಅರ್ಜಿ ಶುಲ್ಕ, ವಯೋಮಿತಿ ಇತ್ಯಾದಿ ತಿಳಿದುಕೊಳ್ಳುವುದು ಮುಖ್ಯ. ಈ ಕೆಳಗೆ ಹುದ್ದೆಯ ಕುರಿತ ಮಾಹಿತಿಯನ್ನು ಸವಿವರವಾಗಿ ನೀಡಲಾಗಿದೆ.

ಪ್ರಮುಖ ದಿನಾಂಕಗಳು:
ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ: 05-02-2024
ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 26-02-2024

ವೇತನ: ಈ ಹುದ್ದೆಗೆ ಆಯ್ಕೆಯಾದವರಿಗೆ ಮಾಸಿಕ 28,000 ರೂ.-ರೂ.1,10,000 ವೇತನವಿರುತ್ತದೆ.

ಹುದ್ದೆ: ಹಿಂದಿ ಟ್ರಾನ್ಸ್‌ಲೇಟರ್‌ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆ ಸಂಖ್ಯೆ: 01 ಹುದ್ದೆ

ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪದವಿಯಲ್ಲಿ ಇಂಗ್ಲಿಷ್ ಕಡ್ಡಾಯ ಆಯ್ಕೆ ವಿಷಯವಾಗಿ ಪಡೆದಿರಬೇಕು. ಹಾಗೂ ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಜೊತೆಗೆ ಮಾನ್ಯತೆ ಪಡೆದ ಸಂಸ್ಥೆಯಿಂದ ಅನುವಾದದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಹೊಂದಿರಬೇಕು.

ಅನುಭವ: ಕೇಂದ್ರ/ರಾಜ್ಯ ಸರ್ಕಾರಿ ಕಚೇರಿಗಳಲ್ಲಿ ಇಂಗ್ಲಿಷ್‌ನಿಂದ ಹಿಂದಿಗೆ ಭಾಷಾಂತರದಲ್ಲಿ ಐದು ವರ್ಷಗಳ ಅನುಭವ ಹೊಂದಿರುವವರಿಗೆ ಆದ್ಯತೆ.

ವಯೋಮಿತಿ: ಕೊಚ್ಚಿನ್‌ ಶಿಪ್‌ಯಾರ್ಡ್‌ ಲಿಮಿಟೆಡ್‌ ನೇಮಕಾತಿ ಅಧಿಸೂಚನೆ ಪ್ರಕಾರ, ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ವಯಸ್ಸು 45 ವರ್ಷ ಮೀರಿರಬಾರದು. PwBD ಅಭ್ಯರ್ಥಿಗಳಿಗೆ ಹತ್ತು ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

ಅರ್ಜಿ ಶುಲ್ಕ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.

ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ, ಪವರ್‌ ಪಾಯಿಂಟ್‌ ಪ್ರೆಸೆಂಟೇಶನ್‌, ಸಂದರ್ಶನದ ಮೂಲಕ ಈ ಹುದ್ದೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸುವುದು ಹೇಗೆ?
ಕೊಚ್ಚಿನ್‌ ಶಿಪ್‌ ಯಾರ್ಡ್‌ ಲಿಮಿಟೆಡ್‌ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅಪ್ಲೈ ಮಾಡಲು ತಿಳಿಸಲಾಗಿದೆ. ಈ ಲಿಂಕ್‌ ಕ್ಲಿಕ್‌ ಮಾಡುವ ಮೂಲಕ ಅಭ್ಯರ್ಥಿಗಳು ನೇರವಾಗಿ ಅಪ್ಲೈ ಮಾಡಬಹುದು.

ಶಾರ್ಟ್‌ ಲಿಸ್ಟ್‌ ಆದ ಅಭ್ಯರ್ಥಿಗಳಿಗೆ ಅಂಚೆ ಮೂಲಕ ಸಂದರ್ಶನದ ಲೆಟರ್‌ ಕಳುಹಿಸಲಾಗುವುದಿಲ್ಲ. ಇ-ಮೇಲ್ ಮೂಲಕ ತಿಳಿಸಲಾಗುವುದು. ಆಯ್ಕೆಯ ವೇಳಾಪಟ್ಟಿಯನ್ನು ಇ-ಮೇಲ್/CSL ವೆಬ್‌ಸೈಟ್ www.cochinshipyard.in ಮೂಲಕ ಶಾರ್ಟ್‌ಲಿಸ್ಟ್ ಮಾಡಿದ ಅರ್ಜಿದಾರರಿಗೆ ತಿಳಿಸಲಾಗುತ್ತದೆ. ಆಯ್ಕೆಗೆ ಸಂಬಂಧಿಸಿದ ಕುರಿತ ಎಲ್ಲಾ ಮಾಹಿತಿಗಳನ್ನು ಅಭ್ಯರ್ಥಿಗಳು ಸಂಸ್ಥೆಯ ವೆಬ್‌ಸೈಟ್‌ ಮೂಲಕ ಆಗಾಗ್ಗೆ ಪರಿಶೀಲಿಸಲು ವಿನಂತಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್‌ ಕ್ಲಿಕ್‌ ಮಾಡಿ