CMMACS Recruitment 2024: CMMACS ತನ್ನ ಅಧಿಕೃತ ಅಧಿಸೂಚನೆಯಲ್ಲಿ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಒಟ್ಟು 06 ಹುದ್ದೆಗಳಿದ್ದು, ಆಸಕ್ತರು ಹಿರಿಯ ಪ್ರಾಜೆಕ್ಟ್ ಅಸೋಸಿಯೇಟ್, ಪ್ರಾಜೆಕ್ಟ್ ಅಸೋಸಿಯೇಟ್-I ಪೋಸ್ಟ್‌ಗಳಿಗೆ ಅರ್ಜಿ ಸಲ್ಲಿಸಬಹುದು. ಬೆಂಗಳೂರು – ಕರ್ನಾಟಕ ಸರ್ಕಾರದಲ್ಲಿ ಉದ್ಯೋಗ ಹುಡುಕುವವರು ಈ ಅವಕಾಶವನ್ನು ತಮ್ಮದಾಗಿಸಿಕೊಳ್ಳಬಹುದು. ಈ ಹುದ್ದೆಗೆ 05-Mar-2024 09:00 (ಬೆಳಗ್ಗೆ) ನೇರ ಸಂದರ್ಶನಕ್ಕೆ ಹಾಜರಾಗಬಹುದು. ಹುದ್ದೆಯ ಕುರಿತ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಕೆಳಗೆ ನೀಡಲಾದ ಮಾಹಿತಿಯನ್ನು ಓದಿ.
ಪ್ರಮುಖ ದಿನಾಂಕಗಳು;
ಅಧಿಸೂಚನೆ ಬಿಡುಗಡೆಗೊಂಡ ದಿನಾಂಕ: 21-02-2024
ನೇರ ಸಂದರ್ಶನಕ್ಕೆ ಹಾಜರಾಗಬೇಕಾದ ದಿನಾಂಕ: 05-03-2024 (ಬೆಳಗ್ಗೆ 9.00)
ಹುದ್ದೆಗಳ ವಿವರ ಈ ಕೆಳಗೆ ನೀಡಲಾಗಿದೆ;
ಹುದ್ದೆ: ಸೀನಿಯರ್ ಪ್ರಾಜೆಕ್ಟ್ ಅಸೋಸಿಯೇಟ್, ಪ್ರಾಜೆಕ್ಟ್ ಅಸೋಸಿಯೇಟ್-I ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆ ಸಂಖ್ಯೆ:
ಸೀನಿಯರ್ ಪ್ರಾಜೆಕ್ಟ್ ಅಸೋಸಿಯೇಟ್-1 ಹುದ್ದೆ
ಪ್ರಾಜೆಕ್ಟ್ ಅಸೋಸಿಯೇಟ್-I – 5 ಹುದ್ದೆ
ಒಟ್ಟು 06 ಹುದ್ದೆಗಳು
ವಿದ್ಯಾರ್ಹತೆ: ಸೀನಿಯರ್ ಪ್ರಾಜೆಕ್ಟ್ ಅಸೋಸಿಯೇಟ್ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಂಎಸ್ಸಿ, ಎಂಟೆಕ್, ಪಿಎಚ್‌ಡಿ ತೇರ್ಗಡೆ ಹೊಂದಿರಬೇಕು
ಪ್ರಾಜೆಕ್ಟ್ ಅಸೋಸಿಯೇಟ್-I ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಇ ಅಥವಾ ಬಿ.ಟೆಕ್, ಎಂಸಿಎ, ಎಂಎಸ್ಸಿ ಮಾಡಿರಬೇಕು.
ವಯೋಮಿತಿ: ಸೀನಿಯರ್ ಪ್ರಾಜೆಕ್ಟ್ ಅಸೋಸಿಯೇಟ್ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯು 40ವರ್ಷ ಮೀರಿರಬಾರದು. ಪ್ರಾಜೆಕ್ಟ್ ಅಸೋಸಿಯೇಟ್-I ಹುದ್ದೆಗೆ ಅರ್ಜಿ ಸಲ್ಲಿಸುವವರ ವಯೋಮಿತಿಯು ಗರಿಷ್ಠ 35 ವರ್ಷ ಆಗಿರಬೇಕು. ಈ ಹುದ್ದೆಗಳಿಗೆ ವಯೋಮಿತಿ ಸಡಿಲಿಕೆಯನ್ನು ನಿಯಮಾನುಸಾರ ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ: ಮೇಲ್ಕಂಡ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ವೇತನ: ಸೀನಿಯರ್ ಪ್ರಾಜೆಕ್ಟ್ ಅಸೋಸಿಯೇಟ್- ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿ ಮಾಸಿಕ ರೂ.42,000 ವೇತನ ಇರಲಿದೆ.
ಪ್ರಾಜೆಕ್ಟ್ ಅಸೋಸಿಯೇಟ್-I- ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ರೂ.31,000 ಮಾಸಿಕ ವೇತನ ಸಿಗಲಿದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ತಮ್ಮ ಅಗತ್ಯ ದಾಖಲೆಗಳೊಂದಿಗೆ ಇಲ್ಲಿ ನೀಡಲಾದ ವಿಳಾಸದಲ್ಲಿ ನೇರ ಸಂದರ್ಶನಕ್ಕೆ ಹಾಜರಾಗಬಹುದು.
ವಿಳಾಸ: CSIR-4PI, NAL ಬೇಲೂರು ಕ್ಯಾಂಪಸ್, ವಿಂಡ್ ಟನಲ್ ರಸ್ತೆ, ಬೆಂಗಳೂರು-560037. ಈ ವಿಳಾಸದಲ್ಲಿ ದಿನಾಂಕ 05-ಮಾರ್ಚ್-2024 ಬೆಳಗ್ಗೆ 09:00ಗೆ ನೇರ ಸಂದರ್ಶನ ನಡೆಯಲಿದೆ.
ಹುದ್ದೆಯ ಕುರಿತ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ನೋಟಿಫಿಕೇಶನ್ ಕ್ಲಿಕ್ ಮಾಡಿ