ಯುಪಿಎಸ್‌ಸಿ ಫಲಿತಾಂಶ ಪ್ರಕಟ, ಪ್ರದೀಪ್‌ ದೇಶಕ್ಕೆ ಟಾಪ್

Advertisements

ಕೇಂದ್ರ ಲೋಕ ಸೇವಾ ಆಯೋಗವು ೨೦೧೯ರ ಸಾಲಿನ ಫಲಿತಾಂಶವನ್ನು ಪ್ರಕಟಿಸಿದ್ದು, ಸಂಭಾವ್ಯ ಆಯ್ಕೆಪಟ್ಟಿಯನ್ನೂ ಪ್ರಕಟಿಸಿದೆ. ಈಗಾಗಲೇ ಪ್ರಿಲಿಮ್ಸ್‌, ಮೇನ್ಸ್‌, ಸಂದರ್ಶನದ ಎದುರಿಸಿ ಫಲಿತಾಂಶದ ನಿರೀಕ್ಷೆಯಲ್ಲಿರುವವರು ಯುಪಿಎಸ್‌ಸಿ ವೆಬ್‌ಸೈಟ್‌ನಲ್ಲಿ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ.

೨೦೧೯ರಲ್ಲಿ ನಡೆದ ಲಿಖಿತ ಪರೀಕ್ಷೆ ಮತ್ತು ೨೦೨೦ರ ಫೆಬ್ರವರಿ-ಆಗಸ್ಟ್ ನಲ್ಲಿ ನಡೆದ ಸಂದರ್ಶನದ ಆಧಾರದಲ್ಲಿ ಈ ಫಲಿತಾಂಶವನ್ನು ಪ್ರಕಟಿಸಿದೆ. ಈ ಪರೀಕ್ಷೆಯಲ್ಲಿ ಅಗ್ರ ಸ್ಥಾನದಲ್ಲಿರುವವರಿಗೆ ಐಎಎಸ್‌, ಐಪಿಎಸ್‌ ಇತ್ಯಾದಿ ಕೇಡರ್ ಗಳು ದೊರಕಲಿವೆ.

ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪ್ರದೀಪ್‌ ಸಿಂಗ್ ಅಗ್ರಸ್ಥಾನ ಪಡೆದಿದ್ದಾರೆ. ನಂತರದ ಸ್ಥಾನಗಳನ್ನು ಜತಿನ್‌ ಕಿಶೋರ್‌ ಮತ್ತು ಪ್ರತೀಭಾ ವರ್ಮಾ ಪಡೆದಿದ್ದಾರೆ.

ಯುಪಿಎಸ್‌ಸಿ ಫಲಿತಾಂಶ ಪ್ರಕಟ, ಪ್ರದೀಪ್‌ ದೇಶಕ್ಕೆ ಟಾಪ್ 2

ನೀವು ಯುಪಿಎಸ್‌ಸಿ ಪರೀಕ್ಷೆ ಬರೆದಿದ್ದರೆ ಫಲಿತಾಂಶ ನೋಡಲು ಈ ಲಿಂಕ್‌ಗೆ ಭೇಟಿ ನೀಡಿ

Leave a Comment