CLW Jobs: ಸಿಎಲ್‌ಡಬ್ಲ್ಯೂನಿಂದ ನೇಮಕ ಅಧಿಸೂಚನೆ; 592 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

Advertisements

Chittaranjan Locomotive Works Act Recruitment 2024: ರೈಲ್ವೆ ಸಚಿವಾಲಯದ ಚಿತ್ತರಂಜನ್‌ ಲೋಕೋಮೊಟಿವ್‌ ವರ್ಕ್ಸ್‌ ನಲ್ಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಒಟ್ಟು 592 ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಫಿಟ್ಟರ್/ಟರ್ನರ್‌, ಮಷನಿಸ್ಟ್‌, ವೆಲ್ಡರ್‌, ಇತರೆ ಟ್ರೇಡ್‌ ಹುದ್ದೆಗಳಿದ್ದು, ಹುದ್ದೆಯ ಕುರಿತ ಹೆಚ್ಚಿನ ಮಾಹಿತಿ ಇಲ್ಲಿ ನೀಡಲಾಗಿದೆ. ಈ ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಅರ್ಜಿ ಸಲ್ಲಿಸಲು 18-04-2024 ಕೊನೆಯ ದಿನವಾಗಿದ್ದು, ಬೇಗನೇ ಅರ್ಜಿ ಸಲ್ಲಿಸಿ.

ಪ್ರಮುಖ ದಿನಾಂಕಗಳು
ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 27-03-2024
ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 18-04-2024 (ರಾತ್ರಿ 11.59 ಗಂಟೆವರೆಗೆ)

ಹುದ್ದೆಯ ಕುರಿತ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ;
ಹುದ್ದೆಯ ಹೆಸರು ಮತ್ತು ಸಂಖ್ಯೆ;
ಟ್ರೇಡ್‌ವಾರು ಹುದ್ದೆಗಳ ವಿವರ
ಫಿಟ್ಟರ್ – 200 ಹುದ್ದೆಗಳು
ಟರ್ನರ್ – 20 ಹುದ್ದೆಗಳು
ಮಷಿನಿಸ್ಟ್‌ – 56 ಹುದ್ದೆಗಳು
ವೆಲ್ಡರ್ – 88 ಹುದ್ದೆಗಳು
ಇಲೆಕ್ಟ್ರೀಷಿಯನ್ – 112 ಹುದ್ದೆಗಳು
ಎಸಿ ಮೆಕ್ಯಾನಿಕ್ – 04 ಹುದ್ದೆಗಳು
ಪೇಂಟರ್ – 12 ಹುದ್ದೆಗಳು

ವಿದ್ಯಾರ್ಹತೆ
ಮೇಲ್ಕಂಡ ಹುದ್ದೆಗಳಿಗೆ ಅಭ್ಯರ್ಥಿಗಳು ಟ್ರೇಡ್‌ಗಳಲ್ಲಿ ಐಟಿಐ ಪಾಸ್‌ ಮಾಡಿರಬೇಕು. ಎನ್‌ಸಿವಿಟಿ ಅಥವಾ ಎಸ್‌ಸಿವಿಟಿ ಪ್ರಮಾಣ ಪತ್ರವನ್ನು ಪಡೆದಿರಬೇಕು. ಈ ಎಲ್ಲಾ ಪ್ರಮಾಣ ಪತ್ರವನ್ನು ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಲಗತ್ತಿಸಬೇಕು.

ವಯೋಮಿತಿ: ಅಭ್ಯರ್ಥಿಗಳ ಕನಿಷ್ಠ ವಯೋಮಿತಿಯು 15 ವರ್ಷ ಆಗಿರಬೇಕು. ಗರಿಷ್ಠ 24 ವರ್ಷ ಮೀರಿರಬಾರದು. ವರ್ಗಾವಾರ ವಯೋಮಿತಿಯ ಸಡಿಲಿಕೆಯ ನಿಯಮವನ್ನು ನೀಡಲಾಗಿದೆ.

ಅರ್ಜಿ ಸಲ್ಲಿಸುವ ರೀತಿ ಹೇಗೆ?
ಮೊದಲಿಗೆ ಅಭ್ಯರ್ಥಿಗಳು ಆನ್‌ಲೈನ್‌ ಪೋರ್ಟಲ್‌ ನ ಈ ಲಿಂಕ್‌ಗೆ ಭೇಟಿ ನೀಡಬೇಕು. ನಂತರ ರಿಜಿಸ್ಟ್ರೇಷನ್‌ ಪಡೆದು, ಕೆಳಲಾದ ಎಲ್ಲಾ ವಿವರಗಳನ್ನು ನೀಡಿ ಭರ್ತಿ ಮಾಡಿ, ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಸಮಯದಲ್ಲಿ ಅಭ್ಯರ್ಥಿಗಳು ತಮ್ಮ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಐಟಿಐ ಅಂಕಪಟ್ಟಿ, ಆಧಾರ್‌ ಕಾರ್ಡ್‌, ಮೀಸಲಾತಿ ಪ್ರಮಾಣ ಪತ್ರಗಳು, ಇ-ಮೇಲ್‌ ವಿಳಾಸ, ಮೊಬೈಲ್‌ ನಂಬರ್‌ ಇತರೆ ಮಾಹಿತಿಯನ್ನು ಹೊಂದಿರಬೇಕು.