ಜಿಲ್ಲಾ ಆಸ್ಪತ್ರೆ ಮತ್ತು ಕೋವಿಡ್-19 ಆಸ್ಪತ್ರೆ ಚಿಕ್ಕಬಳ್ಳಾಪುರದಲ್ಲಿ ರಚಿಸಲಾದ ಐಸಿಯುಗಳು ಮತ್ತು ಆಮ್ಲಜನಕ ಬೆಂಬಲಿತ ಹಾಸಿಗೆಗಳನ್ನು ಕಾರ್ಯಗತಗೊಳಿಸಿ ಕಾರ್ಯನಿರ್ವಹಿಸಲು ಹೆಚ್ಚುವರಿ ಮಾನವ ಸಂಪನ್ಮೂಲವನ್ನು 06 ತಿಂಗಳ ಮಟ್ಟಿಗೆ ಅಥವಾ ಕೋವಿಡ್ ಪರಿಸ್ಥಿತಿ ಸುಧಾರಿಸುವವರೆಗೆ ಯಾವುದು ಮೊದಲೋ ಅಲ್ಲಿಯವರೆಗೆ ನೇಮಕಾತಿಯನ್ನು ಮಾಡಲು ಅರ್ಹ ಅಭ್ಯರ್ಥಿಗಳಿಂದ ನೇರ ಸಂದರ್ಶನಕ್ಕೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು ನೇರ ಸಂದರ್ಶನಕ್ಕೆ ಅಗತ್ಯ ಶೈಕ್ಷಣಿಕ ಹಾಗೂ ಅನುಭವದ ಮೂಲ ದಾಖಲಾತಿಗಳು ಮತ್ತು ಎರಡು ನಕಲು ಪ್ರತಿ, ಭಾವಚಿತ್ರಗಳೊಂದಿಗೆ ಹಾಜರಾಗಲು ಪ್ರಕಟಣೆ ಹೊರಡಿಸಲಾಗಿದೆ.
ಹುದ್ದೆ : ತಜ್ಞ ವೈದ್ಯರು – 06
ವೈದ್ಯರು – 12
ಶುಶ್ರೂಷಕರು – 18
ಐಸಿಯು ಟೆಕ್ನಿಶಿಯನ್ – 1
ಗ್ರೂಪ್ ಡಿ- 6
ಮೆಂಟೆನೆನ್ಸ್ ಇಂಜಿನಿಯರ್ – 01
ಬಯೋ ಮೆಡಿಕಲ್ ಇಂಜಿನಿಯರ್ – 01
ಒಟ್ಟು ಹುದ್ದೆ -45
ಸದರಿ ಹುದ್ದೆಯು ಖಾಯಂ ನೌಕರಿ ಆಗಿರುವುದಿಲ್ಲ. ಸಂದರ್ಶನ ಸ್ಥಳ : ಜಿಲ್ಲಾ ಶಸ್ತ್ರಚಿಕಿತ್ಸಕರ ಕೊಠಡಿ, ಜಿಲ್ಲಾ ಆಸ್ಪತ್ರೆ, ಚಿಕ್ಕಬಳ್ಳಾಪುರ.
ದಿನಾಂಕ : 24-05-2021 ರಿಂದ 28-05-2021 ರವರೆಗೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 01 ಘಂಟೆಯವರೆಗೆ (ರಜಾ ದಿನ ಹೊರತುಪಡಿಸಿ)
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ದೂರವಾಣಿ ಸಂಖ್ಯೆ 08156-272388 ನ್ನು ಕರ್ತವ್ಯದ ಅವಧಿಯಲ್ಲಿ ಸಂಪರ್ಕಿಸಬಹುದು.