CBSE Recruitment 2024: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ತನ್ನ ಅಧಿಕೃತ ಅಧಿಸೂಚನೆಯ ಮೂಲಕ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಒಟ್ಟು 118 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಸಹಾಯಕ ಕಾರ್ಯದರ್ಶಿ, ಜೂನಿಯರ್ ಅಕೌಂಟೆಂಟ್ ಪೋಸ್ಟ್‌ಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಖಿಲ ಭಾರತ ಸರ್ಕಾರದಲ್ಲಿ ಕೆಲಸ ಮಾಡಲು ಇಚ್ಛಿಸುವವರು ಈ ಉದ್ಯೋಗದ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 11-Apr-2024 ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು.
ಪ್ರಮುಖ ದಿನಾಂಕಗಳು
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 12-03-2024
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:11-04-2024
ಹುದ್ದೆಗಳ ವಿವರ ಈ ಕೆಳಗೆ ನೀಡಲಾಗಿದೆ;
ಹುದ್ದೆ: ಅಸಿಸ್ಟಂಟ್ ಸೆಕ್ರೆಟರಿ (ಆಡಳಿತ ವಿಭಾಗ), ಅಸಿಸ್ಟಂಟ್ ಸೆಕ್ರೆಟರಿ (ಶೈಕ್ಷಣಿಕ ವಿಭಾಗ), ಜೂನಿಯರ್ ಇಂಜಿನಿಯರ್, ಲೆಕ್ಕಿಗ, ಇತರೆ ಪೋಸ್ಟ್‌ಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆ ಸಂಖ್ಯೆ:
ಅಸಿಸ್ಟಂಟ್ ಸೆಕ್ರೇಟರಿ (ಆಡಳಿತ ವಿಭಾಗ ) : 18
ಅಸಿಸ್ಟಂಟ್ ಸೆಕ್ರೇಟರಿ (ಶೈಕ್ಷಣಿಕ ವಿಭಾಗ ) : 16
ಅಸಿಸ್ಟಂಟ್ ಸೆಕ್ರೇಟರಿ (ಕೌಶಲ ಶಿಕ್ಷಣ ) : 08
ಅಸಿಸ್ಟಂಟ್ ಸೆಕ್ರೇಟರಿ (ತರಬೇತಿ) : 22
ಲೆಕ್ಕಿಗ ಅಧಿಕಾರಿ : 03
ಜೂನಿಯರ್ ಇಂಜಿನಿಯರ್ : 17
ಜೂನಿಯರ್ ಟ್ರಾನ್ಸ್‌ಲೇಷನ್ ಆಫೀಸರ್ : 07
ಅಕೌಂಟಂಟ್ : 07
ಜೂನಿಯರ್ ಅಕೌಂಟಂಟ್ : 20
ಒಟ್ಟು 118 ಹುದ್ದೆಗಳು
ವೇತನ: ಗ್ರೂಪ್ ಎ ಹುದ್ದೆಯಾದ ಅಸಿಸ್ಟಂಟ್ ಸೆಕ್ರೆಟರಿ ಹುದ್ದೆಗೆ ವೇತನ ಶ್ರೇಣಿ -10 ಸಂಭಾವನೆ ಇರಲಿದೆ. ಗ್ರೂಪ್ ಸಿ ಹುದ್ದೆಗಳಾದ ಲೆಕ್ಕಿಗ ಹುದ್ದೆಗಳಿಗೆ ಪೇ ಲೆವಲ್ -4/ಪೇ ಲೆವೆಲ್ 2 ಸಂಭಾವನೆ ಸಿಗಲಿದೆ. ಗ್ರೂಪ್ ಬಿ ಹುದ್ದೆಗಳಾದ ಜೂನಿಯರ್ ಇಂಜಿನಿಯರ್/ಭಾಷಾಂತರ ಅಧಿಕಾರಿ ಹುದ್ದೆಗಳಿಗೆ ಪೇ ಲೆವೆಲ್ 6 ಸಂಭಾವನೆ ಇದೆ.
ವಿದ್ಯಾರ್ಹತೆ: ಮೇಲ್ಕಂಡ ಹುದ್ದೆಗಳಿಗನುಸಾರವಾಗಿ ಅಭ್ಯರ್ಥಿಗಳು ಸ್ನಾತಕೋತ್ತರ ಪದವಿ, ಪದವಿ ಪಾಸ್ ಮಾಡಿರಬೇಕು. ಹಾಗೂ ಕರ್ತವ್ಯದ ಅನುಭವ ಹೊಂದಿರಬೇಕು.
ಅರ್ಜಿ ಸಲ್ಲಿಸುವುದು ಹೇಗೆ?
ಈ ಮೇಲೆ ತಿಳಿಸಿದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕೇಂದ್ರ ಪ್ರೌಢಶಿಕ್ಷಣ ಮಂಡಳಿಯ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಬೇಕು. ಅಲ್ಲಿ career section ನಲ್ಲಿ ಅರ್ಜಿ ಸಲ್ಲಿಸಬೇಕು.
ಮಾರ್ಚ್ 12 ರಂದು ಆನ್‌ಲೈನ್ ಅರ್ಜಿ ಲಿಂಕ್ ಬಿಡುಗಡೆ ಆಗಲಿದ್ದು, ಹುದ್ದೆಯ ಕುರಿತ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಅಂದೇ ಕೇಂದ್ರ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) ಬಿಡುಗಡೆ ಮಾಡುತ್ತದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಯನ್ನು ಆ ಸಂದರ್ಭದಲ್ಲಿ ಓದಿ, ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಈ ಲಿಂಕ್ ಕ್ಲಿಕ್ ಮಾಡಿ