ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ದೇಶದ ವಿವಿಧ ಬ್ರ್ಯಾಂಚ್ ಗಳಲ್ಲಿ ಅಗತ್ಯವಿರುವ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ಹುದ್ದೆಗಳಿಗೆ ಡಿಗ್ರಿ, ಸ್ನಾತಕೋತ್ತರ ಪದವಿ ಪಾಸಾದವರು ಹಾಗೂ ಬಿಇ/ ಬಿಟೆಕ್ ಇತರೆ ವಿದ್ಯಾರ್ಹತೆ ಪಡೆದವರು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳ ನೇಮಕಾತಿ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
ಹುದ್ದೆ : ಸ್ಪೆಷಲಿಸ್ಟ್ ಆಫೀಸರ್
ಹುದ್ದೆ ಸಂಖ್ಯೆ : 115
ವಿದ್ಯಾರ್ಹತೆ : ಪದವಿ/ ಸ್ನಾತಕೋತ್ತರ ಪದವಿ/ ಬಿಇ/ ಬಿಟೆಕ್/ ಸಿಎ/ ಪಿಹೆಚ್ ಡಿ/ ಎಂಬಿಎ ಪಾಸ್ ಮಾಡಿರಬೇಕು. ಜೊತೆಗೆ ಅಗತ್ಯ ಕಾರ್ಯಾನುಭವ ಹೊಂದಿರಬೇಕು.
ಪ್ರಮುಖ ದಿನಾಂಕ : ಆನ್ಲೈನ್ ಅಪ್ಲಿಕೇಶನ್ ಸಲ್ಲಿಸಲು ಆರಂಭಿಕ ದಿನಾಂಕ : 23-11-2021
ಆನ್ಲೈನ್ ಅಪ್ಲಿಕೇಶನ್ ಸಲ್ಲಿಸಲು ಕೊನೆಯ ದಿನಾಂಕ ವ: 17-12-2021
ಆನ್ಲೈನ್ ಲಿಖಿತ ಪರೀಕ್ಷೆಗೆ ಅಡ್ಮಿಟದ ಕಾರ್ಡ್ ಡೌನ್‌ಲೋಡ್ ಮಾಡಲು ಆರಂಭ ದಿನಾಂಕ -11-01-2021
ಆನ್ಲೈನ್ ಪರೀಕ್ಷೆಯ ಸಂಭಾವ್ಯ ದಿನಾಂಕ – 22-01-2021
ಅಪ್ಲಿಕೇಶನ್ ಶುಲ್ಕ ವಿವರ
ಸಾಮಾನ್ಯ ಮತ್ತು ಇತರೆ ಹಿಂದುಳಿದ ಅಭ್ಯರ್ಥಿಗಳಿಗೆ ರೂ. 850
ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ರೂ.175
ಅಪ್ಲಿಕೇಶನ್ ಶುಲ್ಕವನ್ನು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇತರೆ ಆನ್ಲೈನ್ ಪೇಮೆಂಟ್ ಮೋಡ್ ನಲ್ಲಿ ಸಹ ಪಾವತಿಸಬಹುದು.
ಕನಿಷ್ಠ 20 ವರ್ಷ ಆಗಿರುವ ಗರಿಷ್ಠ 45 ವರ್ಷ ವಯಸ್ಸು ಮೀರದ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು.
ಹುದ್ದೆವಾರು ವಯೋಮಿತಿ ಅರ್ಹತೆ ಬೇರೆ ಬೇರೆ ಆಗಿದ್ದು, ಕಂಪ್ಲೀಟ್ ನೋಟಿಫಿಕೇಶನಲ್ಲಿ ತಿಳಿಸಲಾಗಿದೆ.
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಎಸ್ಒ ಹುದ್ದೆಗಳ ಪೈಕಿ ಎಕಾನಮಿಸ್ಟ್, ಇನ್ ಕಮ್ ಟ್ಯಾಕ್ಸ್ ಆಫೀಸರ್, ಡಾಟಾ ಎಂಜಿನಿಯರ್, ಕ್ರೆಡಿಟ್ ಆಫೀಸರ್, ಫೈನಾನ್ಸಿಯಲ್ ಆಫೀಸರ್, ಟೆಕ್ನಿಕಲ್ ಆಫೀಸರ್, ಇನ್ಫಾರ್ಮೇಶನ್ ಟೆಕ್ನಾಲಜಿ ಮ್ಯಾನೇಜರ್, ಕಾನೂನು ಅಧಿಕಾರಿ, ಸೆಕ್ಯುರಿಟಿ, ರಿಸ್ಕ್ ಮ್ಯಾನೇಜರ್, ಟೆಕ್ನಿಕಲ್ ಆಫೀಸರ್ ಹುದ್ದೆಗಳಿವೆ.
ಉದ್ಯೋಗ ವಿಧ : ಫುಲ್ ಟೈಮ್
ವೇತನ ವಿವರ : ₹36,000/- ರಿಂದ ₹ 1,00,350/- ವರೆಗೆ
ಹೆಚ್ಚಿನ ಮಾಹಿತಿಗಾಗಿ ಈ ನೋಟಿಫಿಕೇಶನ್ ಕ್ಲಿಕ್ ಮಾಡಿ