Category: UPSC Notifications

  • UPSC: ಯುಪಿಎಸ್‌ಸಿ ಇಂದ ಅರಣ್ಯ ಸೇವೆ ಹುದ್ದೆಗಳಿಗೆ ನೋಟಿಫಿಕೇಶನ್‌ ಪ್ರಕಟ, ಅರ್ಜಿ ಲಿಂಕ್‌ ಕುರಿತ ಮಾಹಿತಿ ಇಲ್ಲಿದೆ

    UPSC: ಯುಪಿಎಸ್‌ಸಿ ಇಂದ ಅರಣ್ಯ ಸೇವೆ ಹುದ್ದೆಗಳಿಗೆ ನೋಟಿಫಿಕೇಶನ್‌ ಪ್ರಕಟ, ಅರ್ಜಿ ಲಿಂಕ್‌ ಕುರಿತ ಮಾಹಿತಿ ಇಲ್ಲಿದೆ

    UPSC IFS Exam Notification 2024: ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಭಾರತೀಯ ಅರಣ್ಯ ಸೇವಾ ಪರೀಕ್ಷೆ 2024 ರ ಅರಣ್ಯ ಸೇವೆಗಳ ಪೂರ್ವಭಾವಿ ಪರೀಕ್ಷೆಯ ಕುರಿತು ಅಧಿಸೂಚನೆಯನ್ನು ಪ್ರಕಟಿಸಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಪರೀಕ್ಷೆಯ ಕುರಿತ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಹುದ್ದೆಯ ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ್ದರೆ ಆನ್‌ಲೈನ್‌ ಮುಖಾಂತರ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಭಾರತೀಯ ಅರಣ್ಯ ಸೇವಾ ಪರೀಕ್ಷೆಗೆ ಮತ್ತು ನಾಗರಿಕ ಸೇವೆಗಳ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅಪೇಕ್ಷಿಸುವ ಅಭ್ಯರ್ಥಿಗಳು ಆನ್‌ಲೈನ್ ಅರ್ಜಿ ನಮೂನೆಯ ಮೂಲಕ ಅರ್ಜಿ ಸಲ್ಲಿಸಬಹುದು.

    ಪ್ರಮುಖ ದಿನಾಂಕಗಳು;
    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 14-02-2024
    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05-03-2024 ಸಂಜೆ 06:00 ರವರೆಗೆ
    ತಿದ್ದುಪಡಿ ದಿನಾಂಕ: 06-03-2024 ರಿಂದ 12-03-2024
    ಪ್ರಿಲಿಮ್ಸ್‌ ಪರೀಕ್ಷೆಯ ದಿನಾಂಕ: 26-05-2024

    ಹುದ್ದೆ: ಭಾರತೀಯ ಅರಣ್ಯ ಸೇವಾ ಪರೀಕ್ಷೆ ನೇಮಕಾತಿ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ
    ಹುದ್ದೆ ಸಂಖ್ಯೆ: ಶೀಘ್ರದಲ್ಲೇ ತಿಳಿಸಲಾಗುವುದು

    ಅರ್ಜಿ ಶುಲ್ಕ:
    SC/ ST/ ಸ್ತ್ರೀ ಮತ್ತು PwBD ಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ. ಇತರೆ ಎಲ್ಲಾ ಅಭ್ಯರ್ಥಿಗಳಿಗೆ: ರೂ. 100/- ನ್ನು ಅರ್ಜಿ ಶುಲ್ಕವಾಗಿ ಪಾವತಿ ಮಾಡಬೇಕು. ಅಭ್ಯರ್ಥಿಗಳು ಯಾವುದೇ ಬ್ಯಾಂಕಿನ ನೆಟ್ ಬ್ಯಾಂಕಿಂಗ್ ಸೌಲಭ್ಯದ ಮೂಲಕ ಅಥವಾ ವೀಸಾ/ಮಾಸ್ಟರ್/ರುಪೇ/ಕ್ರೆಡಿಟ್/ಡೆಬಿಟ್ ಕಾರ್ಡ್/ಯುಪಿಐ ಮೂಲಕ ಅರ್ಜಿ ಶುಲ್ಕ ಪಾವತಿ ಮಾಡಬಹುದು.

    ವಯೋಮಿತಿ: ಈ ಹುದ್ದೆಗೆ ಕನಿಷ್ಠ ವಯಸ್ಸು: 21 ವರ್ಷ ಆಗಿರಬೇಕು, ಗರಿಷ್ಠ ವಯಸ್ಸು: 32 ವರ್ಷಗಳಾಗಿರಬೇಕು. ವಯೋಮಿತಿ ಸಡಿಲಿಕೆಯನ್ನು ನಿಯಮಗಳ ಅನುಸಾರ ನೀಡಲಾಗುತ್ತದೆ.

    ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಭ್ಯರ್ಥಿಗಳು ಪದವಿಯಲ್ಲಿ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ವಿಜ್ಞಾ/ಸಸ್ಯಶಾಸ್ತ್ರ/ ರಸಾಯನ ಶಾಸ್ತ್ರ, ಭೂ ವಿಜ್ಞಾನ/ ಗಣಿತ/ ಭೌತಶಾಸ್ತ್ರ/ ಅಂಕಿಅಂಶ ಮತ್ತು ಪ್ರಾಣಿ ಶಾಸ್ತ್ರ/ ಕೃಷಿ ಪದವಿ/ ಅರಣ್ಯ ಶಾಸ್ತ್ರದಲ್ಲಿ ಯಾವುದಾದರೂ ಒಂದು ವಿಷಯದಲ್ಲಿ ತೇರ್ಗಡೆ ಹೊಂದಿರಬೇಕು.

    ಭಾರತೀಯ ಅರಣ್ಯ ಸೇವೆ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅವರು ನಾಗರಿಕ ಸೇವೆಗಳಲ್ಲಿ (ಪ್ರಾಥಮಿಕ) ಪರೀಕ್ಷೆಯಲ್ಲಿ ಪಾಸಾಗಬೇಕು. ನಂತರ ಎರಡನೇ ಹಂತದ ಪರೀಕ್ಷೆ ಭಾರತೀಯ ಅರಣ್ಯ ಸೇವೆ ಪರೀಕ್ಷೆಗೆ ಹಾಜರಾಗಲು ಅಭ್ಯರ್ಥಿಗಳು ಅರ್ಹರಾಗುತ್ತಾರೆ.
    ಅಭ್ಯರ್ಥಿಗಳು ನಾಗರಿಕ ಸೇವೆಗಳ (ಪ್ರಿಲಿಮಿನರಿ) ಪರೀಕ್ಷೆಗಾಗಿ www.upsconline.nic.in ಲಿಂಕ್ ಅನ್ನು ಬಳಸಿಕೊಂಡು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಭಾರತೀಯ ಅರಣ್ಯ ಸೇವೆ (ಮುಖ್ಯ) ಪರೀಕ್ಷೆಗೆ ಅಭ್ಯರ್ಥಿಗಳ ಆಯ್ಕೆಯು ಸ್ಕ್ರೀನಿಂಗ್ ಮೆಕಾನಿಸಂ ಮೂಲಕ ನಡೆಯುತ್ತದೆ. ನಾಗರಿಕ ಸೇವೆಗಳ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು, (ಅವರು ನಿಗದಿತ ಅರ್ಹತಾ ಷರತ್ತುಗಳನ್ನು ಪೂರೈಸುವ ಮೂಲಕ) ಭಾರತೀಯ ಅರಣ್ಯ ಸೇವಾ ಪರೀಕ್ಷೆ ಮತ್ತು ನಾಗರಿಕ ಸೇವಾ ಪರೀಕ್ಷೆ ಎರಡಕ್ಕೂ ಹಾಜರಾಗಲು ಉದ್ದೇಶಿಸಿದ್ದರೆ ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಸೂಕ್ತವಾಗಿ ಸೂಚಿಸಿ, ಒಮ್ಮೆ ಅರ್ಜಿ ಸಲ್ಲಿಸಬೇಕು.

    UPSC IFS Prelims Exam 2024-ಆನ್‌ಲೈನ್‌ ಅಪ್ಲೈ ಮಾಡಲು ಈ ಲಿಂಕ್‌ ಕ್ಲಿಕ್‌ ಮಾಡಿ

  • UPSC Recruitment 2024: ಕೇಂದ್ರ ಲೋಕಸೇವಾ ಆಯೋಗದಲ್ಲಿ 1056 ಸಿವಿಲ್‌ ಸರ್ವಿಸ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

    UPSC Recruitment 2024: ಕೇಂದ್ರ ಲೋಕಸೇವಾ ಆಯೋಗದಲ್ಲಿ 1056 ಸಿವಿಲ್‌ ಸರ್ವಿಸ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

    UPSC Recruitment 2024: ಕೇಂದ್ರ ಸರಕಾರದ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಗುಡ್‌ನ್ಯೂಸ್‌. ಹೌದು, ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) 2024 ರ ಸಿವಿಲ್ ಸರ್ವೀಸಸ್ ಪರೀಕ್ಷೆಯ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ. ಕೇಂದ್ರ ಲೋಕಸೇವಾ ಆಯೋಗದಲ್ಲಿ ಖಾಲಿ ಇರುವ ನಾಗರಿಕ ಸೇವೇಗಳ ಪರೀಕ್ಷೆಯ ಹುದ್ದೆಗಳು ಖಾಲಿ ಇದ್ದು, ಅಭ್ಯರ್ಥಿಗಳು ಹುದ್ದೆಯ ಕುರಿತು ಆಸಕ್ತಿ ಹೊಂದಿದ್ದಲ್ಲಿ ಹಾಗೂ ಹುದ್ದೆಯ ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿರುವವರು ಅಧಿಸೂಚನೆಯನ್ನು ಓದಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

    ಪ್ರಮುಖ ದಿನಾಂಕಗಳು;
    ಅಧಿಸೂಚನೆಯ ಪ್ರಕಟಗೊಂಡ ದಿನಾಂಕ: 14-02-2024
    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05-03-2024 ಸಂಜೆ 06:00 ರವರೆಗೆ. ನೋಂದಾಯಿತ ಅಭ್ಯರ್ಥಿಗಳು ತಮ್ಮ ಅರ್ಜಿಗಳಲ್ಲಿ ಮಾರ್ಚ್ 6 ರಿಂದ ಮಾರ್ಚ್ 12 ರವರೆಗೆ ತಿದ್ದುಪಡಿಗಳನ್ನು ಮಾಡಬಹುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
    ಪೂರ್ವಭಾವಿ ಪರೀಕ್ಷೆಯ ದಿನಾಂಕ: 26-05-2024

    ಹುದ್ದೆ: ಸಿವಿಲ್‌ ಸರ್ವಿಸ್‌ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಹುದ್ದೆಯ ಎಲ್ಲಾ ಅರ್ಹತೆಗಳನ್ನು ಪೂರ್ಣಗೊಳಿಸುವವರು ಅರ್ಜಿ ಸಲ್ಲಿಸಬಹುದು.

    UPSC ಈ ಕೆಳಗಿನ ಸೇವೆಗಳಿಗೆ ಪರೀಕ್ಷೆಯನ್ನು ನಡೆಸುತ್ತದೆ;
    ಭಾರತೀಯ ಆಡಳಿತ ಸೇವೆ (IAS), ಭಾರತೀಯ ಪೊಲೀಸ್ ಸೇವೆ (IPS), ಭಾರತೀಯ ವಿದೇಶಾಂಗ ಸೇವೆ (IFS) ಮತ್ತು ಭಾರತೀಯ ಕಂದಾಯ ಸೇವೆ (IRS) ಗಳಲ್ಲಿ ಪ್ರಮುಖ ಸರ್ಕಾರಿ ಹುದ್ದೆಗಳಿಗೆ ಗ್ರೂಪ್ A ಮತ್ತು B ಮಟ್ಟದ ಅಧಿಕಾರಿಗಳನ್ನು ನೇಮಿಸಿಕೊಳ್ಳಲು‌ ಪರೀಕ್ಷೆ ನಡೆಸಲಾಗುತ್ತದೆ.

    ಹುದ್ದೆಗಳ ಸಂಖ್ಯೆ: UPSC ಕಳೆದ ವರ್ಷ ನಾಗರಿಕ ಸೇವೆಗಳಿಗೆ ಒಟ್ಟು 1105 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿತ್ತು. ಆದರೆ ಈ ಬಾರಿ ಒಟ್ಟು 1056 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಖಾಲಿ ಇರುವ ಒಟ್ಟು 1056 ಹುದ್ದೆಗಳಲ್ಲಿ ಬೆಂಚ್‌ಮಾರ್ಕ್ ಅಸಾಮರ್ಥ್ಯ ವರ್ಗದ ವ್ಯಕ್ತಿಗಳಿಗೆ 40 ಹುದ್ದೆಗಳನ್ನು ಕಾಯ್ದಿರಿಸಲಾಗಿದೆ.

    ಅರ್ಜಿ ಶುಲ್ಕ: SC/ ST/ ಸ್ತ್ರೀ ಮತ್ತು PwBD ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿ ಮಾಡುವಂತಿಲ್ಲ. ಉಳಿದ ಎಲ್ಲಾ ಅಭ್ಯರ್ಥಿಗಳು ರೂ.100 ನ್ನು ಪಾವತಿ ಮಾಡಬೇಕು. ಅಭ್ಯರ್ಥಿಗಳು ನೆಟ್‌ ಬ್ಯಾಂಕಿಂಗ್‌ ಸೌಲಭ್ಯದ ಮೂಲಕ ವೀಸಾ/ಮಾಸ್ಟರ್/ರುಪೇ/ಕ್ರೆಡಿಟ್/ಡೆಬಿಟ್‌ ಕಾರ್ಡ್‌/ ಯುಪಿಐ ಮೂಲಕ ಅರ್ಜಿ ಶುಲ್ಕವನ್ನು ಪಾವತಿ ಮಾಡಬಹುದು.

    ವಯೋಮಿತಿ: ಈ ಹುದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು: 21 ವರ್ಷಗಳು ಆಗಿರಬೇಕು. ಗರಿಷ್ಠ ವಯಸ್ಸು: 32 ವರ್ಷಗಳು ಆಗಿರಬೇಕು. ಅಂದರೆ, ಅಭ್ಯರ್ಥಿಯು 2ನೇ ಆಗಸ್ಟ್, 1992 ಕ್ಕಿಂತ ಮೊದಲು ಮತ್ತು 1 ಆಗಸ್ಟ್, 2003 ಕ್ಕಿಂತ ನಂತರ ಜನಿಸಿದವರು ಅರ್ಜಿ ಸಲ್ಲಿಸಬಾರದು. ಹುದ್ದೆಗಳಿಗೆ ನಿಯಮಗಳ ಅನುಸಾರ ವಯೋಮಿತಿ ಸಡಿಲಿಕೆ ಅನ್ವಯವಾಗುತ್ತದೆ.

    ವಿದ್ಯಾರ್ಹತೆ: ಕನಿಷ್ಠ ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಯು ಭಾರತದಲ್ಲಿನ ಕೇಂದ್ರ ಅಥವಾ ರಾಜ್ಯದ ಯಾವುದೇ ವಿಶ್ವವಿದ್ಯಾಲಯಗಳಲ್ಲಿ ಅಥವಾ ಇತರ ಶಿಕ್ಷಣ ಸಂಸ್ಥೆಗಳಲ್ಲಿ ಪದವಿಯನ್ನು ಹೊಂದಿರಬೇಕು.

    ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಪ್ರಾಥಮಿಕ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

    ಅಭ್ಯರ್ಥಿಗಳು upsconline.nic.in ವೆಬ್‌ಸೈಟ್ ಬಳಸಿಕೊಂಡು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಜಿದಾರರು ಆಯೋಗದ ಒನ್ ಟೈಮ್ ರಿಜಿಸ್ಟ್ರೇಶನ್ (OTR) ಪ್ಲಾಟ್‌ಫಾರ್ಮ್‌ನಲ್ಲಿ ಮೊದಲು ನೋಂದಾಯಿಸಿಕೊಳ್ಳಬೇಕು. ನಂತರ ಪರೀಕ್ಷೆಗಾಗಿ ಆನ್‌ಲೈನ್ ಅರ್ಜಿಯನ್ನು ಭರ್ತಿ ಮಾಡಲು ಮುಂದುವರಿಯುತ್ತದೆ. OTR ಅನ್ನು ಒಮ್ಮೆ ಮಾತ್ರ ನೋಂದಾಯಿಸಬೇಕು. ಇದನ್ನು ವರ್ಷದ ಯಾವುದೇ ಸಮಯದಲ್ಲಿ ಮಾಡಬಹುದು. ಅಭ್ಯರ್ಥಿಯು ಈಗಾಗಲೇ ನೋಂದಾಯಿಸಿಕೊಂಡಿದ್ದರೆ, ಅವನು/ಅವಳು ಪರೀಕ್ಷೆಗಾಗಿ ಆನ್‌ಲೈನ್ ಅರ್ಜಿಯನ್ನು ಭರ್ತಿ ಮಾಡಲು ನೇರವಾಗಿ ಮುಂದುವರಿಯಬಹುದು.

    ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

  • UPSC Recruitment 2024: UPSC ಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ, 122 ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನ

    UPSC Recruitment 2024: UPSC ಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ, 122 ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನ

    UPSC Recruitment 2024: ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಸಂಸ್ಥೆಯು ಸಹಾಯಕ ನಿರ್ದೇಶಕ, ಸೈಂಟಿಸ್ಟ್‌-ಬಿ, ಆಡಳಿತಾಧಿಕಾರಿ ಗ್ರೇಡ್-I ಮತ್ತು ಸ್ಪೆಷಲಿಸ್ಟ್ ಗ್ರೇಡ್ III ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದೆ. ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಿ, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಹುದ್ದೆಯ ಕುರಿತು ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಹುದ್ದೆಯ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬಹುದು.

    ಪ್ರಮುಖ ದಿನಾಂಕಗಳು
    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 10-02-2024
    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 29-02-2024 (23:59 ಗಂಟೆಗಳು)

    ಹುದ್ದೆಗಳ ವಿವರ: ಸಹಾಯಕ ನಿರ್ದೇಶಕ, ಸೈಂಟಿಸ್ಟ್‌-ಬಿ, ಆಡಳಿತಾಧಿಕಾರಿ ಗ್ರೇಡ್-I ಮತ್ತು ಸ್ಪೆಷಲಿಸ್ಟ್ ಗ್ರೇಡ್ III ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

    ಹುದ್ದೆ ಸಂಖ್ಯೆ: 122 ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಸಂಬಂಧಿತ ಹುದ್ದೆಗೆ ಬೇಕಾದ ಯಾವುದೇ ಪದವಿ/ಪಿಜಿ ತೇರ್ಗಡೆ ಹೊಂದಿರಬೇಕು.

    ಅರ್ಜಿ ಶುಲ್ಕ: ಮಹಿಳೆಯರಿಗೆ/ SC/ ST ಮತ್ತು ಇತರೆ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ
    ಇತರರಿಗೆ ಅರ್ಜಿ ಶುಲ್ಕ: ರೂ. 25/-
    SBI ಯ ಯಾವುದೇ ಶಾಖೆಯಲ್ಲಿ ಹಣವನ್ನು ನಗದು ಮೂಲಕ ಅಥವಾ ವೀಸಾ/ಮಾಸ್ಟರ್/ರುಪೇ ಕ್ರೆಡಿಟ್/ಡೆಬಿಟ್ ಕಾರ್ಡ್/ಯುಪಿಐ ಪಾವತಿಯನ್ನು ಬಳಸಿಕೊಂಡು ಅಥವಾ ಯಾವುದೇ ಬ್ಯಾಂಕಿನ ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯವನ್ನು ಬಳಸಿ ಅರ್ಜಿ ಶುಲ್ಕ ಪಾವತಿಸಬಹುದು.

    ಪೋಸ್ಟಿಂಗ್‌: ನವದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾ, ಬೆಂಗಳೂರು, ಹೈದರಾಬಾದ್, ಅಹಮದಾಬಾದ್, ಡೆಹ್ರಾಡೂನ್, ಲಕ್ನೋ, ಭೋಪಾಲ್, ನಾಗ್ಪುರ, ಪಾಟ್ನಾ, ಗುವಾಹಟಿ, ಜೈಪುರ ಈ ಸ್ಥಳಗಳಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಇಲ್ಲಿ ಪೋಸ್ಟಿಂಗ್‌ ಮಾಡಲಾಗುತ್ತದೆ:

    ವಯಸ್ಸಿನ ಮಿತಿಗಳು: ವಿವಿಧ ಹುದ್ದೆಗಳಿಗೆ ವಯಸ್ಸಿನ ಮಿತಿಯನ್ನು ಜಾಹೀರಾತಿನಲ್ಲಿ ನೀಡಲಾಗಿದೆ. ವಿವಿಧ ವರ್ಗಗಳಿಗೆ ನೀಡಿದ ವಯಸ್ಸಿನ ರಿಯಾಯಿತಿಗಳಿಗಾಗಿ ಅಭ್ಯರ್ಥಿಗಳು ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು. ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ

    ಅರ್ಜಿ ಸಲ್ಲಿಸುವುದು ಹೇಗೆ?
    ಅಭ್ಯರ್ಥಿಗಳು ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. http://www.upsconline.nic.in ಈ ಲಿಂಕ್‌ ಮೂಲಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು. ಯಾವುದೇ ಇತರ ವಿಧಾನದ ಮೂಲಕ ಕಳುಹಿಸಿದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.
    ಅಭ್ಯರ್ಥಿಗಳು ತಮ್ಮ ಜನ್ಮ ದಿನಾಂಕ, ಅನುಭವ, ವಿದ್ಯಾರ್ಹತೆಗಳು ಇತ್ಯಾದಿ ದಾಖಲೆಗಳು/ಪ್ರಮಾಣಪತ್ರಗಳನ್ನು ಅಪ್‌ಲೋಡ್ ಮಾಡಬೇಕು. pdf ಫೈಲ್‌ನಲ್ಲಿ ಪ್ರತಿ ಫೈಲ್ ಗಾತ್ರವು 1 MB ಮತ್ತು “ಅಪ್‌ಲೋಡ್ ಇತರ ಡಾಕ್ಯುಮೆಂಟ್ ಮಾಡ್ಯೂಲ್‌ಗೆ 2 MB ಮೀರದ ರೀತಿಯಲ್ಲಿ ಅಪ್‌ಲೋಡ್‌ ಮಾಡಬೇಕು. ಪೇ ಸ್ಲಿಪ್, ರೆಸ್ಯೂಮ್, ನೇಮಕಾತಿ ಪತ್ರ, ರಿಲೀವಿಂಗ್ ಲೆಟರ್, ಅನ್-ಸೈನ್ಡ್ ಎಕ್ಸ್‌ಪೀರಿಯೆನ್ಸ್ ಸರ್ಟಿಫಿಕೇಟ್ ಇತ್ಯಾದಿಗಳನ್ನು ಅಭ್ಯರ್ಥಿಗಳು ಅಪ್‌ಲೋಡ್‌ ಮಾಡಬಾರದು.

  • ಸೇನಾ ಹುದ್ದೆಗಳಿಗೆ ಯುಪಿಎಸ್ ಸಿ ಪರೀಕ್ಷಾ ದಿನಾಂಕ ಪ್ರಕಟ

    ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ನೌಕಾ ಅಕಾಡೆಮಿಯ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ.

    ಸೆಪ್ಟೆಂಬರ್ 05 ರಂದು ಪರೀಕ್ಷೆ ನಡೆದಲು ನಿರ್ಧರಿಸಲಾಗಿದೆ. ಸೇನೆಯಲ್ಲಿ ಸೇವೆ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು upsc.gov.in ಮತ್ತು upsconline.nic.in ವೆಬ್ ಸೈಟ್ ಗಳ ಮೂಲಕ ಅರ್ಜಿಯನ್ನು ಸಲ್ಲಿಸಲು ಅವಕಾಶ‌ ನೀಡಲಾಗಿದೆ.

    ಆನ್ಲೈನ್ ಅರ್ಜಿ‌ ಸಲ್ಲಿಸಲು ಕೊನೆಯ ದಿನಾಂಕ : ಜೂನ್ 29 ಕೊನೆಯ ದಿನಾಂಕವಾಗಿರುತ್ತದೆ ಎಂದು ಯುಪಿಎಸ್ ಸಿಯ ಪ್ರಕಟಣೆ ತಿಳಿಸಿದೆ.

    ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರನ್ನು ಸಂದರ್ಶನಕ್ಕೆ ಕರೆಯಲಾಗುವುದು. ಇಲ್ಲಿ ಆಯ್ಕೆ ಯಾದವರನ್ನು ಭೂಸೇನೆ, ವಾಯುದಳ ಮತ್ತು ನೌಕಾದಳದ ಹುದ್ದೆಗಳಿಗೆ ನೇಮಕ ಮಾಡಲಾಗುತ್ತದೆ.

    ವಿದ್ಯಾರ್ಹತೆ : ಈ ಪರೀಕ್ಷೆ ತೆಗೆದುಕೊಳ್ಳಲು ಬಯಸುವ ಅಭ್ಯರ್ಥಿಗಳು ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. 18 ವರ್ಷ ವಯಸ್ಸಿನವರಾಗಿರಬೇಕು.

    ಅಭ್ಯರ್ಥಿಗಳು ಯುಪಿಎಸ್ ಸಿ ಅಧಿಕೃತ ವೆಬ್‌ಸೈಟ್‌ upsconline.nic.in ಗೆ ಭೇಟಿ ನೀಡಿ, ಅಲ್ಲಿರುವ, ಆನ್ಲೈನ್ ಅಪ್ಲಿಕೇಶನ್ ಫಾರ್ ವೇರಿಯಸ್ ಪೋಸ್ಟ್ ಎಂಬ ಸಾಲಿನ ಮೇಲೆ ಕ್ಲಿಕ್ ಮಾಡಿ. ನಂತರ registration link ಮೇಲೆ ಕ್ಲಿಕ್ ಮಾಡಿ. ಅರ್ಜಿಯಲ್ಲಿ ರುವ ಎಲ್ಲಾ ಮಾಹಿತಿಯನ್ನು ತುಂಬಿ, ನಿಮ್ಮ‌ಭಾವಚಿತ್ರ ಮತ್ತು ಸಹಿಯನ್ನು ಅಲ್ಲಿ ನೀಡಿರುವ ಮಾಹಿತಿಯಂತೆ ಅಪ್ಲೋಡ್ ಮಾಡಿ. ಶುಲ್ಕ ಭರಿಸಿ. ದಾಖಲಾಗಿರುವ ಅರ್ಜಿಯನ್ನು ಪರಿಶೀಲಿಸಿ, ಸಬ್ಮಿಟ್ ಮಾಡಿ. ದಾಖಲಾತಿ ನಂಬರ್ ಬರೆದಿಟ್ಟುಕೊಳ್ಳಿ.

  • ಯುಪಿಎಸ್ಸಿ ಎನ್ ಡಿಎ ಪರೀಕ್ಷೆಗೆ ಅಧಿಸೂಚನೆ ಪ್ರಕಟ, ಜೂನ್ 29ರ ಮೊದಲು ಅರ್ಜಿ ಸಲ್ಲಿಸಿ

    ಯುನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ 400 ವಿವಿಧ ಹುದ್ದೆಗಳನ್ನು ನೇಮಕಾತಿ ಮಾಡಲು ನೋಟಿಫಿಕೇಶನ್ ಪ್ರಕಟಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

    ಹುದ್ದೆ : ನ್ಯಾಷನಲ್ ಡಿಫೆನ್ಸ್ ಅಕಾಡೆಮಿ – 370
    ನವಲ್ ಅಕಾಡೆಮಿ – 30 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 09-06-2021
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 29-06-2021 ( 6pm)
    ಅರ್ಜಿ ಶುಲ್ಕ ಸಲ್ಲಿಸಲು ಕೊನೆಯ ದಿನಾಂಕ: 28-06-2021
    ಪರೀಕ್ಷೆಯ ದಿನಾಂಕ : 05-09-2021

    ರಾಜ್ಯದಲ್ಲಿ ಪರೀಕ್ಷಾ ಕೇಂದ್ರ : ಬೆಂಗಳೂರು ಮತ್ತು ಧಾರವಾಡ

    ಹುದ್ದೆ ಸ್ಥಳ : ಭಾರತದೆಲ್ಲೆಡೆ

    ಒಟ್ಟು ಹುದ್ದೆ ಸಂಖ್ಯೆ : 400

    ವಿದ್ಯಾರ್ಹತೆ : ಅಭ್ಯರ್ಥಿಗಳು ಅಂಗೀಕೃತ ಯುನಿವರ್ಸಿಟಿಯಿಂದ 12th ತೇರ್ಗಡೆ ಹೊಂದಿರಬೇಕು.

    ನ್ಯಾಷನಲ್ ಡಿಫೆನ್ಸ್‌ ಅಕಾಡೆಮಿಗೆ 370 ( ಭೂ ಸೇನೆ 208, ನೌಕಾಪಡೆ 42, ವಾಯುಪಡೆ 120) ಮತ್ತು ನೇವಲ್ ಅಕಾಡೆಮಿ ಗೆ 30 ಸೇರಿ ಈ ಬಾರಿ ಒಟ್ಟು 400 ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

    ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 02 ಜನವರಿ 2003 ಮತ್ತು 1 ಜನವರಿ 2006 ರ ನಡುವೆ ಜನಿಸಿರಬೇಕು( ಅವಿವಾಹಿತ ಪುರುಷ ಅಭ್ಯರ್ಥಿಗಳು)

    ಅರ್ಜಿ ಶುಲ್ಕ : ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಮತ್ತು ಸೇನೆಯ ಅಧಿಕಾರಿಗಳ ( ಜೆಸಿಎ/ಎನ್ ಸಿಎ/ಒಆರ್) ಪುತ್ರರಾಗಿದ್ದಲ್ಲಿ ಅಂಥ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಉಳಿದ ಅಭ್ಯರ್ಥಿಗಳಿಗೆ ರೂ.100/- ಶುಲ್ಕ ನಿಗದಿಪಡಿಸಲಾಗಿದೆ. ಯಾವುದೇ ಎಸ್ ಬಿಐ ಶಾಖೆಯಲ್ಲಿ ಶುಲ್ಕ ಪಾವತಿಸಬಹುದಾಗಿದೆ. ಅಥವಾ ವೀಸಾ ಕಾರ್ಡ್/ ಮಾಸ್ಟರ್ ಕಾರ್ಡ್/ ರುಪೇ ಕಾರ್ಡ್/ ಡೆಬಿಟ್ ಕಾರ್ಡ್ ಗಳ ಮೂಲಕ ಆನ್ಲೈನ್ ನಲ್ಲಿಯೇ ಶುಲ್ಕ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.

    ಆಯ್ಕೆ ಪ್ರಕ್ರಿಯೆ ಹೇಗೆ ?

    ನ್ಯಾಷನಲ್ ಡಿಫೆನ್ಸ್‌ ಅಕಾಡೆಮಿ ಅಥವಾ ನೇವಲ್ ಅಕಾಡೆಮಿಗೆ ಆಯ್ಕೆಯಾಗಲು ಅಭ್ಯರ್ಥಿಯು ಮೂರು ಹಂತಗಳನ್ನು ದಾಟಬೇಕು. ಕೇಂದ್ರ ಲೋಕಸೇವಾ ಆಯೋಗ ನಡೆಸುವ ಪ್ರವೇಶ ಪರೀಕ್ಷೆ ಮೊದಲನೇ ಹಂತವಾಗಿರುತ್ತದೆ. ಇದರ ನಂತರ ಎಸ್ ಎಸ್ ಬಿ ನಡೆಸುವ ಬೌದ್ಧಿಕ ಹಾಗೂ ವ್ಯಕ್ತಿತ್ವ ಪರೀಕ್ಷೆಯನ್ನು ಮಾಡಲಾಗುತ್ತದೆ. ಈ ಎರಡು ಹಂತದ ನಂತರ ಎಸ್ಎಸ್ ಬಿ ನಡೆಸುವ ದೈಹಿಕ ಸಾಮರ್ಥ್ಯ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ವೈದ್ಯಕೀಯ ಪರೀಕ್ಷೆಗೆ ಹಾಜರಾಗಬೇಕು. ಈ ಮೂರೂ ಹಂತ ದಾಟಿದ ನಂತರ ಯಶಸ್ವಿಯಾದ ಅಭ್ಯರ್ಥಿಗಳಿಗೆ ಅವರವರ ಆಯ್ಕೆಯ ಕೋರ್ಸ್ ಗಳಿಗೆ ಲಭ್ಯತೆಯ ಆಧಾರದ ಮೇಲೆ ನೇಮಕಾತಿ ಮಾಡಲಾಗುವುದು.

    ನೋಟಿಫಿಕೇಶನ್

  • UPSC : ಪರೀಕ್ಷೆ ಮುಂದೂಡಿಕೆ

    UPSC : ಪರೀಕ್ಷೆ ಮುಂದೂಡಿಕೆ

    ನಾಗರಿಕ ಸೇವಾ ಆಯೋಗಗಳಲ್ಲಿ ತೇರ್ಗಡೆಯಾಗಿರುವ ಅಭ್ಯರ್ಥಿಗಳಿಗೆ ನಿಗದಿಪಡಿಸಲಾಗಿರುವ ಸಂದರ್ಶನ ದಿನಾಂಕವನ್ನು ಮುಂದೂಡಲಾಗಿದೆ ಎಂದು ಕೇಂದ್ರೀಯ ಲೋಕಸೇವಾ ಆಯೋಗ (ಯುಪಿಎಸ್ ಸಿ) ಪ್ರಕಟಣೆಯಲ್ಲಿ ತಿಳಿಸಿದೆ.

    ದೂರ ಪ್ರದೇಶಗಳಿಂದ ಪ್ರವಾಸ ಮಾಡಬೇಕಾಗಿರುವ ಹಿನ್ನೆಲೆಯಲ್ಲಿ ಹಾಗೂ ಸದ್ಯದ ಪರಿಸ್ಥಿತಿಯಲ್ಲಿ ಮುಂದೂಡಲಾಗಿದೆ.

    15 ದಿನಗಳ ಮುಂಚಿತವಾಗಿ ಪರಿಷ್ಕೃತ ದಿನಾಂಕವನ್ನು ಯುಪಿಎಸ್ ಸಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು.

    2020 ನೇ ಸಾಲಿನ ಇಂಡಿಯನ್ ಎಕನಾಮಿಕ್ ಸರ್ವಿಸ್ / ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಸರ್ವಿಸ್ ಎಕ್ಸಾಮಿನೇಷನ್ ಬರೆದ ಅರ್ಹ ಅಭ್ಯರ್ಥಿಗಳಿಗೆ ಸಂದರ್ಶನ ಎ‌.20 ರಿಂದ 23 ರವರೆಗೆ ನಡೆಯಬೇಕಿತ್ತು. 2020ನೇ ಸಾಲಿನ ಸಿವಿಲ್ ಸರ್ವಿಸ್ ಎಕ್ಸಾಮಿನೇಷನ್ ಅರ್ಹ ಅಭ್ಯರ್ಥಿಗಳಿಗೆ ಸಂದರ್ಶನ ಏ.26 ರಿಂದ ಜೂನ್ 18 ರವರೆಗೆ ನಡೆಯಬೇಕಿತ್ತು.