Category: teaching jobs

Find Latest Govt and Private Teaching Jobs, University Jobs, Govt teaching jobs, teaching jobs in bangalore, teaching jobs in delhi, teaching jobs in hyderabad, part time teaching jobs, full time teaching jobs and all teaching jobs in state and city and Indian colleges.

  • SSA Jobs: ಶಿಕ್ಷಕ ವೃತ್ತಿಯ ಹುಡುಕಾಟದಲ್ಲಿದ್ದೀರೇ? ಇಲ್ಲಿದೆ ಭರ್ಜರಿ ಉದ್ಯೋಗಾವಕಾಶ; 240061 ಹುದ್ದೆಗಳ ನೇಮಕಾತಿ, ಕೂಡಲೇ ಅರ್ಜಿ ಸಲ್ಲಿಸಿ

    SSA Jobs: ಶಿಕ್ಷಕ ವೃತ್ತಿಯ ಹುಡುಕಾಟದಲ್ಲಿದ್ದೀರೇ? ಇಲ್ಲಿದೆ ಭರ್ಜರಿ ಉದ್ಯೋಗಾವಕಾಶ; 240061 ಹುದ್ದೆಗಳ ನೇಮಕಾತಿ, ಕೂಡಲೇ ಅರ್ಜಿ ಸಲ್ಲಿಸಿ

    SSA Recruitment 2024: ಸರ್ವಶಿಕ್ಷಣ ಅಭಿಯಾನವು (SSA) ತನ್ನ ಅಧಿಕೃತ ಅಧಿಸೂಚನೆಯ ಮೂಲಕ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 240061 ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಶಿಕ್ಷಕ, ಪ್ಯೂನ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅಖಿಲ ಭಾರತ ಸರ್ಕಾರದಲ್ಲಿ ಉದ್ಯೋಗ ಹುಡುಕುವವರು ಈ ಉದ್ಯೋಗಾದವಕಾಶವನ್ನು ಉಪಯೋಗಿಸಿಕೊಳ್ಳಬಹುದು. ಈ ಹುದ್ದೆಗೆ ಅರ್ಜಿ ಸಲ್ಲಿಸಲು 25-ಫೆಬ್ರವರಿ-2024 ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಸೂಚಿಸಲಾಗಿತ್ತು. ಇದೀಗ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದ್ದು, ಅಭ್ಯರ್ಥಿಗಳು 1st March 2024 ವರೆಗೆ ಅರ್ಜಿ ಸಲ್ಲಿಸಬಹುದು.

    ಸಂಸ್ಥೆಯ ಹೆಸರು: ಸರ್ವ ಶಿಕ್ಷಾ ಅಭಿಯಾನ (SSA)
    ಹುದ್ದೆಯ ಹೆಸರು: ಶಿಕ್ಷಕ, ಪ್ಯೂನ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 240061 ಹುದ್ದೆಗಳು ಖಾಲಿ ಇದ್ದು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

    ಹುದ್ದೆ ಹೆಸರು ಮತ್ತು ಹುದ್ದೆ ಸಂಖ್ಯೆ:
    ಪ್ರೈಮರಿ ಟೀಚರ್‌ – 98305
    ಲ್ಯಾಬ್‌ ಟೆಕ್ನಿಷಿಯನ್‌-18650
    ಪ್ಯೂನ್‌-24300
    ಕಾರ್ಯಾಲಯ ಸ್ಟಾಫ್‌ -25964
    ಕಂಪ್ಯೂಟರ್‌ ಟೀಚರ್‌ – 72842

    ವಿದ್ಯಾರ್ಹತೆ: ಪ್ರೈಮರಿ ಟೀಚರ್‌ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 12th, ಗ್ರಾಜ್ಯುಯೇಷನ್‌ ಪೂರೈಸಿರಬೇಕು.
    ಲ್ಯಾಬ್‌ ಟೆಕ್ನಿಷಿಯನ್‌ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವಿ ಪಾಸಾಗಿರಬೇಕು.
    ಪ್ಯೂನ್‌ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 8 ನೇ ತರಗತಿ ಪಾಸಾಗಿದ್ದರೆ ಸಾಕು.
    ಕಾರ್ಯಾಲಯ ಸ್ಟಾಫ್‌ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10th,12th ಪಾಸಾಗಿರಬೇಕು.
    ಕಂಪ್ಯೂಟರ್‌ ಟೀಚರ್‌ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 12th, ಡಿಪ್ಲೋಮಾ ತೇರ್ಗಡೆ ಹೊಂದಿರಬೇಕು.

    ವಯೋಮಿತಿ: ಪ್ರೈಮರಿ ಟೀಚರ್‌ – ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯು ಕನಿಷ್ಠ 18 ವರ್ಷ-45 ವರ್ಷ ಆಗಿರಬೇಕು.
    ಲ್ಯಾಬ್‌ ಟೆಕ್ನಿಷಿಯನ್‌- ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ವಯೋಮಿತಿಯು ಕನಿಷ್ಠ 18ವರ್ಷ ಹಾಗೂ ಗರಿಷ್ಠ 45 ವರ್ಷ ಆಗಿರಬೇಕು.
    ಪ್ಯೂನ್‌- ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ವಯೋಮಿತಿಯು ಕನಿಷ್ಠ 18 ವರ್ಷ ಗರಿಷ್ಠ 40 ವರ್ಷ ವಯಸ್ಸು ಮೀರಿರಬಾರದು.
    ಕಾರ್ಯಾಲಯ ಸ್ಟಾಫ್‌ -ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಗರಿಷ್ಠ 42 ವರ್ಷ ವಯಸ್ಸಾಗಿರಬೇಕು.
    ಕಂಪ್ಯೂಟರ್‌ ಟೀಚರ್‌ – ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 18 ವರ್ಷ ಗರಿಷ್ಠ 40 ವರ್ಷ ಆಗಿರಬೇಕು.

    ಅರ್ಜಿ ಶುಲ್ಕ: ಈ ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ರೂ.980 ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು. ಅರ್ಜಿ ಶುಲ್ಕವನ್ನು ಆನ್‌ಲೈನ್‌ ಮೂಲಕ ಪಾವತಿ ಮಾಡಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

    ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳು ಆನ್‌ಲೈನ್‌ ಪರೀಕ್ಷೆ, ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

    ವೇತನ:
    ಪ್ರೈಮರಿ ಟೀಚರ್-‌ ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.43,300 ವೇತನವಿರಲಿದೆ.
    ಲ್ಯಾಬ್‌ ಟೆಕ್ನಿಷಿಯನ್‌ ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.39,500 ವೇತನ ದೊರಕಲಿದೆ
    ಪ್ಯೂನ್‌ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.22,700 ವೇತನ ದೊರಕಲಿದೆ.
    ಕಾರ್ಯಾಲಯ ಸ್ಟಾಫ್‌ ಈ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮಾಸಿಕ ರೂ.33,500 ವೇತನ ಸಿಗಲಿದೆ.
    ಕಂಪ್ಯೂಟರ್‌ ಟೀಚರ್‌ ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.37,700 ವೇತನ ಸಿಗಲಿದೆ.

  • ಶ್ರೀ ಬಲಭೀಮ ಜನತಾ ವಿದ್ಯಾವರ್ಧಕ ಸಂಘ, ಸಾಸನೂರ ; ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ

    ಶ್ರೀ ಬಲಭೀಮ ಜನತಾ ವಿದ್ಯಾವರ್ಧಕ ಸಂಘ, ಸಾಸನೂರ , ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ಈ ಕೆಳಕಾಣಿಸಿಸ ಪ್ರೌಢಶಾಲೆಯಲ್ಲಿ ನಿವೃತ್ತಿಯಿಂದ ಖಾಲಿಯಿರುವ ಒಂದು ಅನುದಾನಿತ ಹುದ್ದೆಯನ್ನು ತುಂಬಿಕೊಳ್ಳಲು ಈ ಕೆಳಗೆ ಕಾಣಿಸಿದ ಪ್ರೌಢಶಾಲೆಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದ್ದು, ವಿವರ ಈ ಕೆಳಗೆ ನೀಡಲಾಗಿದೆ.

    ಹುದ್ದೆ : ಸಹ ಶಿಕ್ಷಕರು ( ಆಂಗ್ಲ)

    ಆಸಕ್ತ ಅಭ್ಯರ್ಥಿಗಳು ಜಾಹೀರಾತು ಪ್ರಕಟಗೊಂಡ 21 ದಿನಗಳ ಒಳಗಾಗಿ ತಮ್ಮ ಶೈಕ್ಷಣಿಕ ಪ್ರಮಾಣ ದೃಢೀಕೃತ ಝರಾಕ್ಸ್ ಪ್ರತಿಗಳೊಂದಿಗೆ ರೂಪಾಯಿ 800/- ರಾಷ್ಟ್ರೀಕೃತ ಬ್ಯಾಂಕ್ ಹುಂಡಿಯೊಂದಿಗೆ ( ಡಿಡಿ) ಅಧ್ಯಕ್ಷರು ಶ್ರೀ ಬಲಭೀಮ ಜನತಾ ವಿದ್ಯಾವರ್ಧಕ ಸಂಘ ಸಾಸನೂರ ಇವರ ಹೆಸರಿನಲ್ಲಿ ಪಡೆದು ಅರ್ಜಿಯ ಜೊತೆ ಬ್ಯಾಂಕ್ ಹುಂಡಿಯನ್ನು (ಡಿಡಿ) ಪ್ರತಿ ಎಲ್ಲಾ ಪ್ರಮಾಣ ಪತ್ರಗಳ ಝರಾಕ್ಸ್ ಪ್ರತಿಗಳನ್ನು ಹಚ್ಚಿ ಅಧ್ಯಕ್ಷರು, ಶ್ರೀ ಬಲಭೀಮ ಜನತಾ ವಿದ್ಯಾವರ್ಧಕ ಸಂಘ ವಿಳಾಸಕ್ಕೆ ಸಾಸನೂರ, ತಾಳಿಕೋಟೆ ಜಿಲ್ಲಾ ವಿಜಯಪುರ -586214 ವಿಳಾಸಕ್ಕೆ ಹಾಗೂ ಇನ್ನೊಂದು ಪ್ರತಿಯನ್ನು ಮಾನ್ಯ ಉಪನಿರ್ದೇಶಕರು, ಸಾ.ಶಿ.ಇಲಾಖೆ, ವಿಜಯಪುರ ಇವರಿಗೆ ಸಲ್ಲಿಸಬೇಕು. ಈಗಾಗಲೇ ನಿಗದಿತ ದಿನಾಂಕದಂದು ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಪುನಃ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಇಲಾಖಾ‌ ನಿಯಮಾನುಸಾರವಾಗಿ ಪ್ರತ್ಯೇಕವಾಗಿ ಸಂದರ್ಶನ ಸ್ಥಳ, ದಿನಾಂಕ ಮತ್ತು ವೇಳೆಯನ್ನು ತಿಳಿಸಲಾಗುವುದು.

  • ಬೆಂಗಳೂರು ಸಿಟಿ ಯುನಿವರ್ಸಿಟಿ ; ವಿವಿಧ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ

    ಬೆಂಗಳೂರು ನಗರ ವಿಶ್ವವಿದ್ಯಾಲಯದ ಅಧೀನಕ್ಕೊಳಪಡುವ ಈ ಕೆಳಕಂಡ ವಿವಿಧ ಸ್ನಾತಕೋತ್ತರ ಅಧ್ಯಯನ ವಿಭಾಗಗಳಲ್ಲಿ ಮತ್ತು ಬಹುಶಿಸ್ತೀಯ ಘಟಕ ಮಹಿಳಾ ಕಾಲೇಜಿನಲ್ಲಿ 2021-22 ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಸ್ನಾತಕೋತ್ತರ ಬೋಧನಾ ಕಾರ್ಯಭಾರದ ನಿರ್ವಹಣೆಗಾಗಿ ಪೂರ್ಣಕಾಲಿಕ / ಅರೆಕಾಲಿಕ ಅತಿಥಿ ಉಪನ್ಯಾಸಕರ ಸೇವೆಯನ್ನು ಪಡೆಯಲು ಯುಜಿಸಿ/ ಎಐಸಿಟಿಇ ನಿಯಮಾನುಸಾರ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

    ಹುದ್ದೆ ವಿವರ : ವಿಜ್ಞಾನ ವಿಭಾಗ, ಕಲಾ ವಿಭಾಗ, ವಾಣಿಜ್ಯ ವಿಭಾಗ ಮ್ಯಾನೇಜ್ಮೆಂಟ್

    ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ನಮೂನೆಯನ್ನು ವಿಶ್ವವಿದ್ಯಾನಿಲಯದ ವೆಬ್ಸೈಟ್ www.bcu.ac.in ರಿಂದ ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿ ಅರ್ಜಿಗಳನ್ನು ಕುಲಸಚಿವರ ಕಚೇರಿ, ಬೆಂಗಳೂರು, ನಗರ ವಿಶ್ವವಿದ್ಯಾಲಯ, ಸೆಂಟ್ರಲ್ ಕಾಲೇಜ್ ಆವರಣ, ಡಾ.ಅಂಬೇಡ್ಕರ್ ವೀಧಿ, ಬೆಂಗಳೂರು- 560 001 ದಿನಾಂಕ : 09-09-2032 ರ ಸಂಜೆ 5.00 ಗಂಟೆಯೊಳಗೆ ಸಲ್ಲಿಸಬಹುದಾಗಿದೆ.

    ನೋಟಿಫಿಕೇಶನ್

  • UAS ಧಾರವಾಡ : ಪಾರ್ಟ್ ಟೈಂ ಟೀಚರ್ ಹುದ್ದೆ ಗೆ ನೇರ ಸಂದರ್ಶನ

    ಕೃಷಿ ಅರ್ಥಶಾಸ್ತ್ರ ವಿಭಾಗ, ಕೃಷಿ ಮಹಾವಿದ್ಯಾಲಯ, ಧಾರವಾಡದಲ್ಲಿ 2020-21 ನೇ ಸಾಲಿನ 2 ನೇ‌ ಸೆಮಿಸ್ಟರ್ ನ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅಗ್ರಿಕಲ್ಚರ್ ಪ್ರೊಡಕ್ಷನ್ ಎಕಾನಮಿಕ್ಸ್ ವಿಷಯವನ್ನು ಬೋಧಿಸಲು ಈ ಕೆಳ ಕಾಣಿಸಿದ ವಿದ್ಯಾರ್ಹತೆಯನ್ನು ಹೊಂದಿರುವ ” ಅರೆಕಾಲಿಕ ಉಪನ್ಯಾಸಕರು ” ಹುದ್ದೆಗೆ 179 ದಿನಗಳ ಅವಧಿಗೆ ಮೀರದಂತೆ ತಾತ್ಕಾಲಿಕವಾಗಿ ನೇಮಿಸಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

    ಹುದ್ದೆ : ಪಾರ್ಟ್ ಟೈಂ ಟೀಚರ್
    ಹುದ್ದೆ ಸಂಖ್ಯೆ : 01
    ವಿದ್ಯಾರ್ಹತೆ : Ph.D ಇನ್ ಅಗ್ರಿಕಲ್ಚರ್ ಎಕಾನಮಿಕ್ಸ್ ಮತ್ತು ಪಿಜಿ ಟೀಚರ್ ಎಕ್ಸ್ ಪೀರಿಯನ್ಸ್ ಹೊಂದಿರಬೇಕು.

    ನೇಮಕಾತಿ ಪಡೆಯಲು ಬಯಸುವ ಅಭ್ಯರ್ಥಿಗಳು ಅರ್ಜಿ ನಮೂನೆಯ ಎರಡು ಪ್ರತಿಯೊಂದಿಗೆ ದಿನಾಂಕ : 20-07-2021 ರಂದು 11.00 ಗಂಟೆಗೆ.

    ಸಂದರ್ಶನಕ್ಕೆ ಡೀನ್ ( ಕೃಷಿ) ರವರ ಕಚೇರಿ, ಕೃಷಿ ಮಹಾವಿದ್ಯಾಲಯ, ಧಾರವಾಡದಲ್ಲಿ ಹಾಜರಾಗಲು ತಿಳಿಸಲಾಗಿದೆ. ಸಂದರ್ಶನಕ್ಕೆ ಬರುವಾಗ ತಮ್ಮ ವಿದ್ಯಾರ್ಹತೆಗೆ ಸಂಬಂಧಪಟ್ಟ ಎಲ್ಲ ಮೂಲ ದಾಖಲೆಗಳನ್ನು ಹಾಗೂ ಎರಡು ಪ್ರತಿಗಳನ್ನು ಸಂದರ್ಶನದ ಸಮಯದಲ್ಲಿ ತರಲು ತಿಳಿಸಲಾಗಿದೆ. ಯಾವುದೇ ಸಂದರ್ಭದಲ್ಲಿ ಅರ್ಜಿಯನ್ನು ಮುಂಗಡವಾಗಿ ಕಳುಹಿಸಬಾರದು.

  • ಇಂಗ್ಲೀಷ್ ಟೀಚರ್ ಹುದ್ದೆಗೆ ಅರ್ಜಿ ಆಹ್ವಾನ

    ಶ್ರೀ ಜನಾರ್ದನ ಎಜ್ಯುಕೇಶನ್ ಟ್ರಸ್ಟ್ ( ರಿ) ಎಳ್ಳಾರೆ , ಈ ವಿದ್ಯಾಸಂಸ್ಥೆಗೆ ಇಂಗ್ಲೀಷ್ ಶಿಕ್ಷಕಿ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಈ ಕೆಳಗಿನ ವಿವರಗಳನ್ನು ಓದಿ ಅರ್ಜಿಯನ್ನು ಸಲ್ಲಿಸಬಹುದು. ವಿವರಗಳು ಈ ಕೆಳಗಿನಂತಿವೆ :

    ಶ್ರೀ ಜನಾರ್ಧನ ಪ್ರಾಥಮಿಕ ಶಾಲೆ ಎಳ್ಳಾರೆ – ಡಿ.ಎಡ್/ ಬಿ.ಎಡ್ ಇಂಗ್ಲೀಷ್ ಶಿಕ್ಷಕಿ -01 ಹುದ್ದೆ
    ಶ್ರೀ ಜನಾರ್ದನ ಪ್ರಾಥಮಿಕ ಶಾಲೆ ಎಳ್ಳಾರೆ – ಪದವೀಧರರು ‌ಇಂಗ್ಲೀಷ್ ಸ್ಪೋಕನ್ – 01 ಹುದ್ದೆ

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಆಸಕ್ತ ಅಭ್ಯರ್ಥಿಗಳು ದಿನಾಂಕ 30-06-2021ನೇ ಬುಧವಾರದ ಒಳಗೆ ಅರ್ಜಿಯನ್ನು ಸ್ವಯಂ ವಿವರಗಳೊಂದಿಗೆ ( ರೆಸ್ಯೂಮ್) ಸ್ಬಯ ಜಲ ಹಸ್ತಾಕ್ಷರದಲ್ಲಿ ಬರೆದು ದೂರವಾಣಿ ಸಂಖ್ಯೆಯೊಂದಿಗೆ ವಿದ್ಯಾಸಂಸ್ಥೆಗೆ ಸಲ್ಲಿಸುವುದು.

    ಅಭ್ಯರ್ಥಿಗಳು ಇ- ಮೇಲ್ ಮುಖಾಂತರವೂ ಅರ್ಜಿಯನ್ನು ಸಲ್ಲಿಸಬಹುದು.

    ಇ-ಮೇಲ್ ವಿಳಾಸ ಈ ಕೆಳಗೆ ನೀಡಲಾಗಿದೆ : [email protected]

  • ಬೆಂಗಳೂರು ಯುನಿವರ್ಸಿಟಿ ‌: ಪ್ರೊಫೆಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಬೆಂಗಳೂರು ಯುನಿವರ್ಸಿಟಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಹುದ್ದೆಗಳ ವಿವರ : ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್, ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
    ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಯನ್ನು ವೆಬ್‌ಸೈಟ್‌ www.bangaloreunivesity.ac.in ನಲ್ಲಿ ದಿನಾಂಕ 23-06-2021 ರ ನಂತರ ದೊರಕಲಿದೆ.

    ಅಭ್ಯರ್ಥಿಗಳು ರೂ.250/- ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗೆ, ರೂ.500/- ನ್ನು ಅಸೋಸಿಯೇಟ್ ಪ್ರೊಫೆಸರ್ ಮತ್ತು ಪ್ರೊಫೆಸರ್ ಹುದ್ದೆಗೆ ಅರ್ಜಿ ಶುಲ್ಕವಾಗಿ ಪಾವತಿಸಬೇಕಾಗುತ್ತದೆ.

    ಭರ್ತಿ ಮಾಡಿದ ಅರ್ಜಿಯನ್ನು ಅಭ್ಯರ್ಥಿಗಳು ರಿಜಿಸ್ಟ್ರಾರ್, ಬೆಂಗಳೂರು ಯುನಿವರ್ಸಿಟಿ, ಬೆಂಗಳೂರು – 560056 ಗೆ ದಿನಾಂಕ 30-07-2021 (5 ಗಂಟೆಯೊಳಗಾಗಿ) ಸಲ್ಲಿಸಬೇಕು.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30-07-2021( 5 ಗಂಟೆಯೊಳಗಾಗಿ)