Category: railway jobs

  • ದಕ್ಷಿಣ ರೈಲ್ವೆ 3378 ಹುದ್ದೆ: ಎಸ್ ಎಸ್ ಎಲ್ ಸಿ, ಐಟಿಐ ಪಾಸಾದವರಿಗೆ ಆದ್ಯತೆ

    ದಕ್ಷಿಣ ರೈಲ್ವೆ 3378 ಹುದ್ದೆ: ಎಸ್ ಎಸ್ ಎಲ್ ಸಿ, ಐಟಿಐ ಪಾಸಾದವರಿಗೆ ಆದ್ಯತೆ

    ದಕ್ಷಿಣ ರೈಲ್ವೆಯ ವಿವಿಧ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದ್ದು ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು. ವಿವರಗಳು ಈ ಕೆಳಗಿನಂತಿವೆ :

    ಹುದ್ದೆ : ಕ್ಯಾರಿಯೇಜ್ ವರ್ಕ್ಸ್ ಪೆರಂಬೂರು – 936
    ಗೋಲ್ಡನ್ ರಾಕ್ ವರ್ಕ್ಸ್ ಶಾಪ್ – 756
    ಸಿಗ್ನಲ್ ಮತ್ತು ಟೆಲಿಕಾಂ ವರ್ಕ್ ಶಾಪ್ , ಪೊಡನೂರು – 1686

    ಒಟ್ಟು ಹುದ್ದೆ : 3378

    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 29-05-2021
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30-06-2021

    ವಯೋಮಿತಿ : ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ/ ಐಟಿಐ/ ಡಿಪ್ಲೋಮಾ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

    ಅರ್ಜಿ ಶುಲ್ಕ : ಅಭ್ಯರ್ಥಿಗಳು ರೂ.100/- ಅರ್ಜಿ ಶುಲ್ಕವನ್ನು ಪಾವತಿಸಬೇಕು. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಬೇಕು.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • ರೈಲು ಗಾಲಿ ಕಾರ್ಖಾನೆ ಬೆಂಗಳೂರು : ಉದ್ಯೋಗವಕಾಶ

    ರೈಲು ಗಾಲಿ ಕಾರ್ಖಾನೆ ಬೆಂಗಳೂರು : ಉದ್ಯೋಗವಕಾಶ

    ರೈಲು ಗಾಲಿ ಕಾರ್ಖಾನೆ, ಬೆಂಗಳೂರು ಇಲ್ಲಿನ ರೈಲ್ವೆ ಆಸ್ಪತ್ರೆಯಲ್ಲಿ ಸಾಂಕ್ರಾಮಿಕ ಕೋವಿಡ್ -19 ರೋಗವನ್ನು ತಡೆಗಟ್ಟಲು ಹಾಗೂ ಕೋವಿಡ್ ತುರ್ತು ತಪಾಸಣೆ ಕೇಂದ್ರಕ್ಕಾಗಿ (ಐಸಿಯು) ಗುತ್ತಿಗೆ ಆಧಾರದ ಮೇಲೆ ಕೆಳಗೆ ತಿಳಿಸಲಾದ ಆಲೋಪಥಿಕ್ ವೈದ್ಯರನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಲು ಇಚ್ಛಿಸಿದೆ.

    ಹುದ್ದೆ : ಐಸಿಯುಗಾಗಿ ವಿಶಿಷ್ಟ ತಜ್ಞರು / ಇಂಟೆನ್ಸಿವಿಸ್ಟ್ಸ್ – 04
    ಗುತ್ತಿಗೆ ಆಧಾರದ ವೈದ್ಯಕೀಯ ವೃತ್ತಿಪರರು -01

    ಸಂದರ್ಶನದ ಸ್ಥಳ ; ತಾಂತ್ರಿಕ ತರಬೇತಿ ಕೇಂದ್ರ, ರೈಲು ಗಾಲಿ ಕಾರ್ಖಾನೆ, ಯಲಹಂಕ, ಬೆಂಗಳೂರು – 560064

    ಸಂದರ್ಶನದ ದಿನಾಂಕ ಹಾಗೂ ಸಮಯ : 28-05-2021 ರಂದು 10 ಗಂಟೆಗೆ

    ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ www.rwf.indianrailways.gov.in ಗೆ ಭೇಟಿ ನೀಡುವುದು.

  • ಪಶ್ಚಿಮ ರೈಲ್ವೆಯಲ್ಲಿ ಭರ್ಜರಿ ಉದ್ಯೋಗವಕಾಶ :    3591 ಹುದ್ದೆ : ಆಸಕ್ತರು ಅರ್ಜಿ ಸಲ್ಲಿಸಿ

    ಪಶ್ಚಿಮ ರೈಲ್ವೆಯಲ್ಲಿ ಭರ್ಜರಿ ಉದ್ಯೋಗವಕಾಶ : 3591 ಹುದ್ದೆ : ಆಸಕ್ತರು ಅರ್ಜಿ ಸಲ್ಲಿಸಿ

    ಮುಂಬೈ ಪಶ್ಚಿಮ ರೈಲ್ವೆಯ ನೇಮಕಾತಿ ಮಂಡಳಿಯ ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದ್ದು, ಆಸಕ್ತರು ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬಹುದು.

    ಹುದ್ದೆ : ಅಪ್ರೆಂಟಿಸ್ ಟ್ರೈನಿ

    ಒಟ್ಟು ಹುದ್ದೆ ಸಂಖ್ಯೆ :3591

    ವಿದ್ಯಾರ್ಹತೆ : ಮೆಟ್ರಿಕ್ಯುಲೇಷನ್ ಜೊತೆಗೆ ಎನ್ ಸಿವಿಟಿ / ಎಸ್ ಸಿವಿಟಿ ಐಟಿಐ ಸಂಬಂಧಿಸಿದ ಟ್ರೇಡ್ ನಲ್ಲಿ ಅರ್ಹತೆ ಹೊಂದಿರಬೇಕು.

    ವಯೋಮಿತಿ : ಕನಿಷ್ಠ 15 ಹಾಗೂ ಗರಿಷ್ಠ 24 ವರ್ಷ ವಯೋಮಿತಿಯನ್ನು ಅಭ್ಯರ್ಥಿಗಳು ಹೊಂದಿರಬೇಕು.

    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 25-05-2021
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 24-06-2021

    ಅರ್ಜಿ ಶುಲ್ಕ : ಸಾಮಾನ್ಯ ಒಬಿಸಿ ಅಭ್ಯರ್ಥಿಗಳಿಗೆ ರೂ.100/-, ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ/ ಮಹಿಳಾ ಅಭ್ಯರ್ಥಿಗಳು / ಪಿಡಬ್ಲ್ಯುಡಿ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.

    ವೇತನ: ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.8000 ರಿಂದ ರೂ. 16,000/- ವೇತನ ನಿಗದಿಪಡಿಸಲಾಗಿದೆ.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • ರೈಲು ಗಾಲಿ ಕಾರ್ಖಾನೆ ಬೆಂಗಳೂರು : ಹಲವು ಹುದ್ದೆ

    ರೈಲು ಗಾಲಿ ಕಾರ್ಖಾನೆ ಬೆಂಗಳೂರು : ಹಲವು ಹುದ್ದೆ

    ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ತೈಲ ಗಾಲಿ ಕಾರ್ಖಾನೆ, ‌ಬೆಂಗಳೂರು ಇವರು ಈ ಕೆಳಗಿನ ಹುದ್ದೆಗಳನ್ನು ನಿರ್ವಹಿಸಲು ಅರೆ ವೈದ್ಯಕೀಯ ವರ್ಗದವರನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ‌ ಮಾಡಲು ಉದ್ದೇಶಿಸಿದ್ದಾರೆ.

    ಹುದ್ದೆ : ರೇಡಿಯೋಗ್ರಾಫರ್/ ಎಕ್ಸ್ ರೇ ಟೆಕ್ನಿಶಿಯನ್ – 01
    ಲ್ಯಾಬ್ ಟೆಕ್ನಿಶಿಯನ್ – 01

    ಅರ್ಜಿ ಸಲ್ಲಿಸಲು ‌ಕೊನೆಯ ದಿನಾಂಕ : 10, ಮೇ 2021 ಬೆಳಿಗ್ಗೆ 10:00 ಗಂಟೆಗೆ ತಾಂತ್ರಿಕ ತರಬೇತಿ ಕೇಂದ್ರ, ರೈಲು ಗಾಲಿ ಕಾರ್ಖಾನೆ, ಯಲಹಂಕ, ಬೆಂಗಳೂರು- 560064 ಇಲ್ಲಿ ನೇರ ಸಂದರ್ಶನಕ್ಕೆ ಹಾಜರಾಗಬಹುದು.

  • ಸೌಥ್ ವೆಸ್ಟರ್ನ್ ರೈಲ್ವೆ : ಅಗತ್ಯ ಸ್ಟಾಫ್ ಗಳ ನೇಮಕ

    ಸೌಥ್ ವೆಸ್ಟರ್ನ್ ರೈಲ್ವೆ : ಅಗತ್ಯ ಸ್ಟಾಫ್ ಗಳ ನೇಮಕ

    ಆಗ್ನೇಯ ರೈಲ್ವೆಯು (ಸೌಥ್ ವೆಸ್ಟರ್ನ್ ರೈಲ್ವೆ ) ಅಗತ್ಯ ಸ್ಟಾಫ್ ಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ನೋಟಿಫಿಕೇಶನ್ ಪ್ರಕಟಿಸಿದೆ.

    ಹುದ್ದೆಗಳ ವಿವರ : ಸ್ಟಾಫ್ ನರ್ಸ್ – 20
    ಡ್ರೆಸ್ಸರ್ – 05
    ಹಾಸ್ಪಿಟಲ್ ಅಟೆಂಡಂಟ್ (ಪುರುಷ ) – 06
    ಹಾಸ್ಪಿಟಲ್ ಅಟೆಂಡಂಟ್ ( ಮಹಿಳೆ )/ ಆಯಾ – 07
    ಹೌಸ್ ಕೀಪಿಂಗ್ ಅಸಿಸ್ಟೆಂಟ್ – 15

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 07-05-2021 ರ ಸಂಜೆ 06 ಗಂಟೆಯೊಳಗೆ

    ಸಂದರ್ಶನ ವಿಧಾನ : ಟೆಲಿಫೋನಿಕ್ ಅಥವಾ ಆನ್‌ಲೈನ್ ಮೂಲಕ ಸಂದರ್ಶನ ನಿಗದಿಪಡಿಸಲಾಗಿದೆ.

    ವಿದ್ಯಾರ್ಹತೆ : ಬಿಎಸ್ಸಿ ನರ್ಸಿಂಗ್/ ಎಸ್‌ಎಸ್‌ಎಲ್‌ಸಿ ಜತೆಗೆ ಡ್ರೆಸ್ಸಿಂಗ್ ಕೋರ್ಸ್ ಪ್ರಮಾಣ ಪತ್ರ/ ಐಟಿಐ ಶೈಕ್ಷಣಿಕ ಅರ್ಹತೆ ಪಾಸ್ ಮಾಡಿರಬೇಕು.

    ವಯೋಮಿತಿ : ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 33 ವರ್ಷ ಮೀರಿರಬಾರದು.

    ಇತರೆ ಹೆಚ್ಚಿನ ಮಾಹಿತಿಗಳಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ

    ನೋಟೆಫಿಕೇಶನ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

  • ನೈರುತ್ಯ ರೈಲ್ವೆ, ಮೈಸೂರು ವಿಭಾಗ : ನೇರ ಸಂದರ್ಶನ

    ನೈರುತ್ಯ ರೈಲ್ವೆ, ಮೈಸೂರು ವಿಭಾಗ : ನೇರ ಸಂದರ್ಶನ

    ನೈರುತ್ಯ ರೈಲ್ವೆ, ಮೈಸೂರು ವಿಭಾಗ ಪೂರ್ಣ ಪ್ರಮಾಣದ ವೈದ್ಯಕೀಯ ತಪಾಸಣೆಗಾರ (ಫುಲ್ ಟೈಮ್ ಮೆಡಿಕಲ್ ಪ್ರಾಕ್ಟಿಷನರ್) ಜಿ.ಡಿ.ಎಂ.ಓ ( ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್) ನ್ನು ಮೂರು ತಿಂಗಳ ಮಟ್ಟಿಗೆ ಅಥವಾ ದಿನಾಂಕ 30-06-2021 ವರೆಗೂ, ಜೊತೆಗೆ ಸ್ಟಾಫ್ ನರ್ಸ್ ಮತ್ತು ಫಾರ್ಮಸಿಸ್ಟಗಳನ್ನು ಮೂರು ತಿಂಗಳ ಮಟ್ಟಿಗೆ ಗುತ್ತಿಗೆ ಆಧಾರದ ಮೇರೆಗೆ ಅಥವಾ 31-07-2021 ವರೆಗೂ, ಅಥವಾ ಯಾವುದು ಮುಂಚಿತವಾಗುತ್ತೋ ಅಲ್ಲಿಯವರೆಗೂ.

    1. ಒಟ್ಟು ಹುದ್ದೆಗಳು : ಸಿ.ಎಂ.ಪಿ ( ತಜ್ಞ): 02 ಪೋಸ್ಟ್ ಗಳು, ಸಿ.ಎಂ.ಪಿ ( ಜೆ.ಡಿ.ಎಂ.ಒ) : 12 ಪೋಸ್ಟ್ ಗಳು, ಸ್ಟಾಫ್ ನರ್ಸ್ : 30 ಪೋಸ್ಟ್ ಗಳು, ಫಾರ್ಮಸಿಸ್ಟ್ :02

    ಕೆಲಸ ಮಾಡುವ ಸ್ಥಳ : ಕೋವಿಡ್ ಐಸೋಲೇಶನ್ ವಾರ್ಡ್, ರೈಲ್ವೆ ಹಾಸ್ಪಿಟಲ್, ಮೈಸೂರು ಮತ್ತು ಕಾವಿಡ್ ಕೋಚಗಳು – ಮೈಸೂರು ವಿಭಾಗ.

    ನೇರ ಸಂದರ್ಶನದ ದಿನಾಂಕ ಮತ್ತು ಸ್ಥಳ : ಹಿರಿಯ ವಿಭಾಗೀಯ ಪರ್ಸನಲ್ ಆಫೀಸರ್ ಅವರ ಕಚೇರಿ, ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಚೇರಿ, ಐರ್ವಿನ್ ರಸ್ತೆ, ಮೈಸೂರು.
    ದಿನಾಂಕ : 04-05-2021(11 ಗಂಟೆಯಿಂದ ಸಾಯಂಕಾಲ 05 ಗಂಟೆಯವರೆಗೆ)

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು www.swr.indianrailways.gov.in ಗೆ ಲಾಗಿನ್ ಆಗಿ