Category: Mysore jobs

  • KSOU ನಲ್ಲಿ ಉದ್ಯೋಗವಕಾಶ, 23 ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳಿಗೆ ನೇರ ಸಂದರ್ಶನ

    ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ.

    ಹುದ್ದೆಯ ಹೆಸರು : ಸಹಾಯಕ ಪ್ರಧ್ಯಾಪಕರು
    ಹುದ್ದೆ ಸಂಖ್ಯೆ : 23
    ಹುದ್ದೆಗಳ ವಿಧ : ತಾತ್ಕಾಲಿಕ ಗುತ್ತಿಗೆ ಆಧಾರಿತ ಹುದ್ದೆಯಾಗಿದೆ.

    ಈ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಿದೆ. ಆಸಕ್ತ ಹಾಗು ಅರ್ಹ ಅಭ್ಯರ್ಥಿಗಳನ್ನು ನೇರ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ.

    ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ವಿವರ : ಇಂಗ್ಲೀಷ್, ಹಿಂದಿ, ಸಂಸ್ಕೃತ, ತೆಲುಗು, ಉರ್ದು, ಇತಿಹಾಸ, ಪ್ರಾಚೀನ ಇತಿಹಾಸ ಪುರಾತತ್ತ್ವ ಸಾರ್ವಜನಿಕ ಆಡಳಿತ, ಸಮಾಜ ಶಾಸ್ತ್ರ, ಮಾನವ ಶಾಸ್ತ್ರ, ನಿರ್ವಹಣಾ ಶಾಸ್ತ್ರ, ಭೌತಶಾಸ್ತ್ರ, ಶಿಕ್ಷಣ ಶಾಸ್ತ್ರ, ಸೂಕ್ಷ್ಮ ಜೀವಾಣು ಶಾಸ್ತ್ರ,ಬಯೋಟೆಕ್ನಾಲಜಿ ಮತ್ತು ಪ್ರಾಣಿ ಶಾಸ್ತ್ರ,ರಸಾಯನ ಶಾಸ್ತ್ರ,ಬಯೋಕೆಮಿಸ್ಟ್ರಿ,ಮನೋವಿಜ್ಞಾನ, ಪರಿಸರ ವಿಜ್ಞಾನ, ಆಹಾರ ವಿಜ್ಞಾನ, ಭೂಗೋಳ ಶಾಸ್ತ್ರ,ಗಣಕಯಂತ್ರ ವಿಜ್ಞಾನ, ಮಾಹಿತಿ ತಂತ್ರಜ್ಞಾನ,ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ, ಗಣಿತ ಶಾಸ್ತ್ರ ಸಸ್ಯ ಶಾಸ್ತ್ರ

    ಅಭ್ಯರ್ಥಿಗಳು ನಿಗದಿತ ನಮೂನೆಯ ಐದು ಪ್ರತಿಗಳೊಂದಿಗೆ ಸಂದರ್ಶನಕ್ಕೆ ಹಾಜರಾಗತಕ್ಕದ್ದು.
    ಸಂದರ್ಶನದ ದಿನಾಂಕ : 10-08-2021 ರಿಂದ 13-08-2021 ರವರೆಗೆ

    ನಿರ್ದಿಷ್ಟ ಸಮಯ ಹಾಗೂ ಸ್ಥಳವನ್ನು ದಿನಾಂಕ 09-08-2021 ರಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಅಂತರ್ಜಾಲದಲ್ಲಿ ಪ್ರಕಟಿಸಲಾಗುವುದು.

    ವಿದ್ಯಾರ್ಹತೆ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವ ವಿಷಯದಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಸಲ್ಲಿಸುತ್ತಾರೋ ಆ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹೊಂದಿರಬೇಕು. ಜೊತೆಗೆ ಎನ್ ಇಟಿ/ಕೆಎಸ್ ಇಟಿ/ಪಿಹೆಚ್‌ಡಿ ಯಾವುದಾದರೂ ಒಂದು ಅರ್ಹತೆಯನ್ನು ಹೊಂದಿರಬೇಕು.ಹಾಗೂ ಯುಜಿಸಿ 2018ಮಾರ್ಗಸೂಚಿ ಅನುಸಾರ ಇತರೆ ಶೈಕ್ಷಣಿಕ ಅರ್ಹತೆಯನ್ನು ಹೊಂದಿರಬೇಕು.

    ಒಂದಕ್ಕಿಂತ ಹೆಚ್ಚಿನ ವಿಷಯಗಳಿಗೆ ಅರ್ಜಿಯನ್ನು ಸಲ್ಲಿಸಬೇಕಾದ್ದಲ್ಲಿ, ಪ್ರತಿಯೊಂದು ವಿಷಯಕ್ಕೆ ಪ್ರತ್ಯೇಕ ವಾಗಿ ಅರ್ಜಿಯನ್ನು ಸಲ್ಲಿಸಬೇಕು.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಾಡಿ

    ಅಪ್ಲಿಕೇಶನ್ ಫಾರಂಗಾಗಿ ಇಲ್ಲಿ ಕ್ಲಿಕ್ ಮಾಡಿ

  • ಮೈಸೂರು ಜಿಲ್ಲಾ ಪಂಚಾಯತ್ : ನೇರ ಸಂದರ್ಶನಕ್ಕೆ ಅರ್ಜಿ ಆಹ್ವಾನ

    ಕೋವಿಡ್ -19 ಸಂಬಂಧವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಡಿ ಬರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ, ಮೈಸೂರು ಜಿಲ್ಲೆ ಮೈಸೂರು ಇವರ ಅಧೀನ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸಲು ಖಾಲಿ ಇರುವ ಶುಶ್ರೂಷಕರು ಹುದ್ದೆಗಳಿಗೆ ತಾತ್ಕಾಲಿಕವಾಗಿ ದಿನಾಂಕ 30-09-2021 ರವರೆಗೆ ಅಥವಾ ನೇರ ನೇಮಕಾತಿ ಹುದ್ದೆಗಳು ಭರ್ತಿಯಾಗುವವರೆಗೆ ಗುತ್ತಿಗೆ ಆಧಾರದ ಮೇಲೆ ಮೆರಿಟ್ ಕಂ ರೊಸ್ಟರ್ ಆಧಾರದಲ್ಲಿ ನೇರ ಸಂದರ್ಶನದ ಮೂಲಕ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಆಸಕ್ತರು ದಿನಾಂಕ 17-06-2021 ರಂದು ಬೆಳಿಗ್ಗೆ 10.00 ಗಂಟೆಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಎನ್.ಪಿ.ಸಿ. ಆಸ್ಪತ್ರೆ ‌ಆವರಣ, ಮೈಸೂರು ‌ಇಲ್ಲಿಗೆ ನೇರ ಸಂದರ್ಶನಕ್ಕೆ ಹಾಜರಾಗಬಹುದು. ಈ ಹಿಂದೆ ಈ ಉದ್ದೇಶಕ್ಕಾಗಿ ದಿನಾಂಕ ‌04-06-2021 ರಂದು ‌ಸಂದರ್ಶನಕ್ಕೆ ಹಾಜರಾಗಿದ್ದ‌ ಅಭ್ಯರ್ಥಿಗಳನ್ನು ಈ ಹುದ್ದೆಗೆ ಪರಿಗಣಿಸಲಾಗುವುದರಿಂದ ಈ ಸಂದರ್ಶನಕ್ಕೆ ‌ಹಾಜರಾಗುವಂತಿಲ್ಲ.

    ಹುದ್ದೆ : ನರ್ಸಿಂಗ್ ‌ಆಫೀಸರ್
    ವಿದ್ಯಾರ್ಹತೆ : ಬಿ.ಎಸ್ಸಿ/ಜಿಎನ್ ಎಂ/ ಡಿಪ್ಲೋಮಾ ನರ್ಸಿಂಗ್
    ಹುದ್ದೆ ಸಂಖ್ಯೆ : 13
    ವೇತನ : ಅಭ್ಯರ್ಥಿಗಳಿಗೆ ಮಾಸಿಕ‌ ರೂ.25,000/- ವೇತನವಿರುತ್ತದೆ.
    ವಯೋಮಿತಿ : ಜನರಲ್ ಅಭ್ಯರ್ಥಿಗಳಿಗೆ 35 ವರ್ಷ ಮೀರಿರಬಾರದು. ಒಬಿಸಿ ಅಭ್ಯರ್ಥಿಗಳಿಗೆ 38 ವರ್ಷ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ ಪ್ರವರ್ಗ-1 ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ಮೀರಿರಬಾರದು.

    ಈ ಮೇಲ್ಕಂಡ ಹುದ್ದೆಗೆ ಆಸಕ್ತಿಯುಳ್ಳ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ತಮ್ಮ ಮೂಲ ಅಂಕಪಟ್ಟಿಗಳು/ ಎಲ್ಲಾ ಪ್ರಮಾಣ ಪತ್ರಗಳೊಂದಿಗೆ ಐಡಿ ಪ್ರೂಫ್ ಮತ್ತು ಅಡ್ರೆಸ್ ಪ್ರೂಫ್ ನೊಂದಿಗೆ ಹಾಗೂ ಇವುಗಳ ಒಂದು ಜೆರಾಕ್ಸ್ ಪ್ರತಿಯೊಂದಿಗೆ ತಿಳಿಸಿರುವ ದಿನಾಂಕದಂದು ಹಾಗೂ ಸಮಯದೊಳಗೆ ಹಾಜರಿರತಕ್ಕದ್ದು.

  • JSSAHER ಮೈಸೂರು : ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ

    JSSAHER ಮೈಸೂರು : ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ

    ಜೆಎಸ್ ಎಸ್ ಮೆಡಿಕಲ್ ಕಾಲೇಜು, ಮೈಸೂರು ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

    ಹುದ್ದೆಗಳ ವಿವರ : ಫಾರ್ಮಸಿಸ್ಟ್ : 01 ಹುದ್ದೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಫಾರ್ಮ್ ಡಿ/ ಫಾರ್ಮಸಿ‌ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.35,000/- ಮಾಸಿಕ ವೇತನವಿರುತ್ತದೆ.

    ಡಾಟಾ ಎಂಟ್ರಿ ಅಪರೇಟರ್ : 04 ಹುದ್ದೆಗಳು. ಈ ಹುದ್ದೆಗಳಿಗೆ ಡಿಗ್ರಿ ಇನ್ ಎನಿ ಡಿಸಿಪ್ಲಿನ್ ಜೊತೆಗೆ ಕಂಪ್ಯೂಟರ್ ಮತ್ತು ಕೋರ್ಸ್ ಸರ್ಟಿಫಿಕೇಟ್ ಹೊಂದಿರಬೇಕು. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.12,000/- ವೇತನವಿರುತ್ತದೆ.

    ಡಾಟಾ ಮ್ಯಾನೇಜರ್ : 01 ಹುದ್ದೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾಸ್ಟರ್ಸ್ ಡಿಗ್ರಿ/ಬ್ಯಾಚುಲರ್ ಡಿಗ್ರಿ ಇನ್ ಕಂಪ್ಯೂಟರ್ ಸೈನ್ಸ್, ಕಂಪ್ಯೂಟರ್ ಇಂಜಿನಿಯರಿಂಗ್ ಪಡೆದಿರಬೇಕು. ರೂ.20,000/- ವೇತನವಿರುತ್ತದೆ.

    ಐಟಿ ಮ್ಯಾನ್ ಪವರ್ : 01 ಹುದ್ದೆ. ಅಭ್ಯರ್ಥಿಗಳು ಬ್ಯಾಚುಲರ್ ಡಿಗ್ರಿಯನ್ನು ಐಟಿ ಸಬ್ಜೆಕ್ಟ್ ನಲ್ಲಿ ಅಥವಾ ಡಿಗ್ರಿಯನ್ನು ಮ್ಯಾತ್ಸ್ ಅಥವಾ ಇಂಜಿನಿಯರಿಂಗ್ ನಲ್ಲಿ ಪಡೆದಿರಬೇಕು. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.18,000/- ಮಾಸಿಕ ವೇತನವಿರುತ್ತದೆ.

    ಫೀಲ್ಡ್ ವರ್ಕರ್ಸ್ : 06 ಹುದ್ದೆಗಳು. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಡಿಪ್ಲೋಮಾ/ ಎಸ್ ಎಸ್ ಎಲ್ ಸಿ, ಪಿಯುಸಿ ಯನ್ನು ತೇರ್ಗಡೆ ಹೊಂದಿರಬೇಕು. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.12,000/- ವೇತನವಿರುತ್ತದೆ.

    ಲ್ಯಾಬ್ ಟೆಕ್ನಿಶಿಯನ್ : 04 ಹುದ್ದೆಗಳು. ಅಭ್ಯರ್ಥಿಗಳು ಬ್ಯಾಚುಲರ್ ಡಿಗ್ರಿಯನ್ನು ಸೈನ್ಸ್ , ಲ್ಯಾಬ್ ಟೆಕ್ ಡಿಗ್ರಿಯನ್ನು ಹೊಂದಿರಬೇಕು. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.18,000/- ವೇತನವಿರುತ್ತದೆ.

    ಜ್ಯೂನಿಯರ್ ಕೋರ್ಡಿನೇಟರ್ : 02 ಹುದ್ದೆ. ಈ ಹುದ್ದೆಗೆ ಅಭ್ಯರ್ಥಿಗಳು ಎಂ.ಎಸ್ಸಿ‌ಯನ್ನು ಲೈಫ್ ಸೈನ್ಸ್ , ಫಾರ್ಮ್ ಡಿ/ ಫಾರ್ಮಸಿ ಕ್ಯಾಂಡಿಡೇಟ್ಸ್ ಅರ್ಜಿಯನ್ನು ಸಲ್ಲಿಸಬಹುದು. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.16,000/- ಮಾಸಿಕ ವೇತನ ನಿಗದಿಪಡಿಸಲಾಗಿದೆ.

    ಸ್ಟಡಿ ಕೋರ್ಡಿನೇಟರ್: 02 ಹುದ್ದೆ : ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪಿ.ಹೆಚ್ ಡಿ/ ಎಂ.ಎಎಸ್ಸಿ ಇನ್ ಲೈಫ್ ಸೈನ್ಸ್, ಫಾರ್ಮ್ ಡಿ/ ಫಾರ್ಮಸಿ ಕ್ಯಾಂಡಿಡೇಟ್ಸ್ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.30,000/- ವೇತನವಿರುತ್ತದೆ.

    ಪ್ಲೆಬೋಟೊಮಿಸ್ಟ್ : 04 ಹುದ್ದೆ : ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳು ಬ್ಯಾಚುಲರ್ ಡಿಗ್ರಿ ಇನ್ ಸೈನ್ಸ್ ಪಡೆದಿರಬೇಕು. ರೂ.15,000/- ಮಾಸಿಕ ವೇತನವಿರುತ್ತದೆ.

    ಅಡ್ಮಿನಿಸ್ಟ್ರೇಟಿವ್ ಸ್ಟಾಫ್ : 02 ಹುದ್ದೆ. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸ್ಟರ್ಸ್ ಡಿಗ್ರಿ/ ಬ್ಯಾಚುಲರ್ ಡಿಗ್ರಿ ಇನ್ ಕಮರ್ಷಿಯಲ್ ಹಾಸ್ಪಿಟಲ್ ಅಡ್ಮಿನಿಸ್ಟ್ರೇಶನ್ ಪಡೆದಿರಬೇಕು. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.18,000/- ಮಾಸಿಕ ವೇತನವಿರುತ್ತದೆ.

    ಸ್ಟಾಫ್ ನರ್ಸ್ : 02 ಹುದ್ದೆ : ಈ ಹುದ್ದೆಗೆ ಅಭ್ಯರ್ಥಿಗಳು ಡಿಪ್ಲೋಮಾ/ ಬಿಎಸ್ಸಿ ನರ್ಸಿಂಗ್ ಜೊತೆಗೆ ಅನುಭವವನ್ನು ಅಭ್ಯರ್ಥಿಗಳು ಹೊಂದಿರಬೇಕು. ಈ ಹುದ್ದೆಗೆ ರೂ.15,000/- ವೇತನವಿರುತ್ತದೆ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 10-06-2021

    ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಿ ಅರ್ಜಿ ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿ, ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಬೇಕು.

    ವಿಳಾಸ : Principal, JSS Medical College, Srishivarathreeshwara Nagar, Mysore -570015 ಗೆ ಸಲ್ಲಿಸಬೇಕು.

  • ಮೈಸೂರು ಯುನಿವರ್ಸಿಟಿ : ಉದ್ಯೋಗವಕಾಶ‌

    ಮೈಸೂರು ಯುನಿವರ್ಸಿಟಿ : ಉದ್ಯೋಗವಕಾಶ‌

    ಮೈಸೂರು ಯುನಿವರ್ಸಿಟಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದ್ದು, ದಿನಾಂಕ 05, ಮೇ 2021 ರೊಳಗೆ ಅರ್ಜಿಯನ್ನು ಸಲ್ಲಿಸಲು ಅವಕಾಶವಿದೆ.

    ಅಭ್ಯರ್ಥಿಗಳು ಆಫ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸ ಬಹುದು.

    ಹುದ್ದೆ : ಜ್ಯೂನಿಯರ್ ರಿಸರ್ಚ್ ಫೆಲೋ, ರಿಸರ್ಚ್ ಅಸೋಸಿಯೇಟ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಹುದ್ದೆ ಸಂಖ್ಯೆ : 02

    ಜ್ಯೂನಿಯರ್ ರಿಸರ್ಚ್ ಫೆಲೋ ಹುದ್ದೆಗೆ ಅಭ್ಯರ್ಥಿಗಳು ಎಂ.ಎಸ್ಸಿ ವಿದ್ಯಾರ್ಹತೆ ಯನ್ನು ಹೊಂದಿರಬೇಕು. ಮಾಸಿಕ ರೂ.31,000/- ವೇತನವಿರುತ್ತದೆ. ರಿಸರ್ಚ್ ಅಸೋಸಿಯೇಟ್ ಹುದ್ದೆಗೆ ಎಂ.ಟೆಕ್, ಪಿಹೆಚ್‌ಡಿ ವಿದ್ಯಾರ್ಹತೆಯನ್ನು ಹೊಂದಿರಬೇಕು. ಈ ಹುದ್ದೆಗೆ ಮಾಸಿಕ ರೂ. 47,000/- ವೇತನವಿರುತ್ತದೆ.

    ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯನ್ನು ಈ ವಿಳಾಸಕ್ಕೆ ದಿನಾಂಕ 05-05-2021 ರೊಳಗೆ ಸ್ಪೀಡ್ ಪೋಸ್ಟ್/ ರಿಜಿಸ್ಟರ್ ಪೋಸ್ಟ್ ಮೂಲಕ ಸಲ್ಲಿಸಬೇಕು.
    ವಿಳಾಸ ಈ ರೀತಿ ಇದೆ :
    Prof. H. B. Manjunatha, Coordinator, B/RAC Project, Department of Sericulture, University of Mysore, Mysore

  • ಮೈಸೂರು ಯುನಿವರ್ಸಿಟಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ

    ಮೈಸೂರು ಯುನಿವರ್ಸಿಟಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ

    ಯುನಿವರ್ಸಿಟಿ ಆಫ್ ಮೈಸೂರುನಲ್ಲಿ ಹುದ್ದೆಗಳಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, 08 ಮಾರ್ಚ್2021 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಒಟ್ಟು ಹುದ್ದೆಗಳ ವಿವರ, ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಶುಲ್ಕ ಇತ್ಯಾದಿ ವಿವರಗಳನ್ನು ಮುಂದೆ ನೀಡಲಾಗಿದೆ.

    ಅರ್ಜಿ ಸಲ್ಲಿಸುವುದು ಹೇಗೆ?: ಆಫ್ ಲೈನ್ ಮೂಲಕ.
    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 23-02-2021
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 08-03-2021
    ಅರ್ಜಿ ಶುಲ್ಕ: ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.

    ಹುದ್ದೆ ವಿವರ : ಅಭ್ಯರ್ಥಿಗಳನ್ನು ಜೆ.ಆರ್.ಎಫ್, ಪ್ರಾಜೆಕ್ಟ್ ಫೆಲೋ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ವೇತನ : ಎಂ.ಎಸ್ಸಿ ಫಿಸಿಕ್ಸ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.14,000/- ರಿಂದ ರೂ.16,000/- ರವರೆಗೆ ವೇತನವಿರುತ್ತದೆ.
    ಎಂ.ಎಸ್ಸಿ ಫಿಸಿಕ್ಸ್ ವಿತ್ ಎನ್ ಇಟಿ/ ಜಿಎಟಿಇ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.25,000/- ರಿಂದ ರೂ.28,000/- ರವರೆಗೆ ವೇತನ ನಿಗದಿಪಡಿಸಲಾಗಿದೆ.

    ವಯೋಮಿತಿ : ಮೈಸೂರು ಯುನಿವರ್ಸಿಟಿ ಯ ನೇಮಕಾತಿ ನಿಯಮಾನುಸಾರ ವಯೋಮಿತಿ ಹೊಂದಿರಬೇಕು.

    ವಿದ್ಯಾರ್ಹತೆ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಂಗೀಕೃತ ಸಂಸ್ಥೆ/ಬೋರ್ಡ್ ನಿಂದ ಎಂ.ಎಸ್ಸಿ ವಿದ್ಯಾರ್ಹತೆಯನ್ನು ಹೊಂದಿರಬೇಕು.

    ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಿ ಅರ್ಜಿ ಡೌನ್‌ಲೋಡ್ ಮಾಡಿಕೊಂಡು, ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಲಗತ್ತಿಸಿ ಈ ಕೆಳಗಿನ ವಿಳಾಸಕ್ಕೆ ದಿನಾಂಕ 08-03-2021 ರೊಳಗೆ  ಸ್ಪೀಡ್ ಪೋಸ್ಟ್ ಅಥವಾ ರಿಜಿಸ್ಟರ್ ಪೋಸ್ಟ್ ಮೂಲಕ  ಸಲ್ಲಿಸಬೇಕು.

    ಕಚೇರಿ ವಿಳಾಸ ಈ ಕೆಳಗಿನಂತಿವೆ :
    Prof.A.P.Gnana Prakash,
    Department of studies in Physics,University of Mysore,Manasagangotri, Mysore-570006

    ಅಥವಾ gnanaprakash@[email protected] ಗೆ ಮೈಲ್ ಮಾಡಬಹುದು.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

    ನೋಟಿಫಿಕೇಶನ್ ಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • ಎಐಐಎಸ್ ಎಚ್ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಎಐಐಎಸ್ ಎಚ್ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ (ಎಐಐಎಸ್ ಎಚ್) ಮೈಸೂರು ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ವಿವರಗಳನ್ನು ಓದಿ ಅರ್ಜಿ ಸಲ್ಲಿಸಬಹುದು. ವಿವರಗಳು ಈ ಕೆಳಗಿನಂತಿವೆ :

    ಹುದ್ದೆ : ರಿಸರ್ಚ್ ಆಫೀಸರ್ ಮತ್ತು ಡಾಟಾ ಎಂಟ್ರಿ ಆಫೀಸರ್

    ಹುದ್ದೆ ಸಂಖ್ಯೆ – 07

    ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 03-03-2021(5.30pm)

    ಅರ್ಜಿ ಶುಲ್ಕ : ಸಾಮಾನ್ಯ , ಒಬಿಸಿ, ಇಡ್ಬ್ಯುಎಸ್ ಅಭ್ಯರ್ಥಿಗಳಿಗೆ ರೂ.100/-,
    ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ರೂ.40/- ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ವಿರುವುದಿಲ್ಲ

    ವಯೋಮಿತಿ : ರಿಸರ್ಚ್ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ 30 ವರ್ಷ ವಯೋಮಿತಿ ಹೊಂದಿರಬೇಕು.

    ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ www.aiishmysore.in ಗೆ ಭೇಟಿ‌ ನೀಡಿ , ಅರ್ಜಿಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಲಗತ್ತಿಸಿ ದಿನಾಂಕ 03-03-2021 ರ ಸಂಜೆ 5.30 ರೊಳಗೆ ಈ ಕೆಳಗಿನ ಕಚೇರಿ ವಿಳಾಸಕ್ಕೆ ಸಲ್ಲಿಸಬೇಕು.

    Office of the chief Administrative Officer,
    All India Institute of speech and hearing,
    Manasagangothri,
    Mysore -570006