Category: KPSC Final List

  • ಕೆಪಿಎಸ್‌ಸಿ ವಾಣಿಜ್ಯ ತೆರಿಗೆ ಇನ್‌ಸ್ಪೆಕ್ಟರ್‌ ಹುದ್ದೆಗಳ ನೇಮಕ ಪರೀಕ್ಷೆ- ಉತ್ತರ ಕೀ ಪ್ರಕಟ

    ಕೆಪಿಎಸ್‌ಸಿ ವಾಣಿಜ್ಯ ತೆರಿಗೆ ಇನ್‌ಸ್ಪೆಕ್ಟರ್‌ ಹುದ್ದೆಗಳ ನೇಮಕ ಪರೀಕ್ಷೆ- ಉತ್ತರ ಕೀ ಪ್ರಕಟ

    ಕರ್ನಾಟಕ ಲೋಕ ಸೇವಾ ಆಯೋಗವು ವಾಣಿಜ್ಯ ತೆರಿಗೆ ಇನ್‌ಸ್ಪೆಕ್ಟರ್‌ ಹುದ್ದೆಗಳ ನೇಮಕಕ್ಕೆ ಸಂಬಂಧಪಟ್ಟಂತೆ ಉತ್ತರ ಕೀ ಪ್ರಕಟಿಸಿದೆ. ಒಟ್ಟು 245 ಹುದ್ದೆಗಳ ನೇಮಕಕ್ಕೆ ಸಂಬಂಧಪಟ್ಟ ಸ್ಪರ್ಧಾತ್ಮಕ ಪರೀಕ್ಷೆಯ ಉತ್ತರ ಕೀಗಳನ್ನು ಪ್ರಕಟಿಸಿದೆ. ಪರೀಕ್ಷೆ ಬರೆದ ಅಭ್ಯರ್ಥಿಗಳು 29-08-2023 ಸಾಲಿನ ಅಧಿಸೂಚನೆಗೆ ಸಂಬಂಧಪಟ್ಟ ಈ ಉತ್ತರ ಕೀಗಳನ್ನು ಕೆಪಿಎಸ್‌ಸಿ ವೆಬ್‌ಸೈಟ್‌ನಲ್ಲಿ ವೀಕ್ಷಿಸಬಹುದು. ಕೆಪಿಎಸ್‌ಸಿ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಆನ್ಸರ್‌ ಕೀಗಳನ್ನು ನೇರವಾಗಿ ನೋಡಲು ಕೆಪಿಎಸ್‌ಸಿ ವೆಬ್‌ಸೈಟ್‌ಗೆ ಹೋಗಬಹುದು.

    ಉತ್ತರ ಕೀಗಳನ್ನು ನೇರವಾಗಿ ನೋಡಲು ಇಲ್ಲಿ ಕ್ಲಿಕ್‌ ಮಾಡಿ

  • ಕೆಪಿಎಸ್ ಸಿ ಪ್ರಥಮ ದರ್ಜೆ ಸಹಾಯಕ ಆಯ್ಕೆ ಪಟ್ಟಿ ಪ್ರಕಟ

    ಕೆಪಿಎಸ್ ಸಿ ಪ್ರಥಮ ದರ್ಜೆ ಸಹಾಯಕ ಆಯ್ಕೆ ಪಟ್ಟಿ ಪ್ರಕಟ

    ಕರ್ನಾಟಕ ಲೋಕಸೇವಾ ಆಯೋಗವು ಪ್ರಥಮ ದರ್ಜೆ ಸಹಾಯಕರು ಸೇರಿದಂತೆ ವಿವಿಧ ಹುದ್ದೆಗಳಿಗೆ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಇದೀಗ ಪ್ರಕಟಿಸಿದೆ. ವಿವರಗಳು ಈ ಕೆಳಗಿನಂತಿವೆ,

    ತಾತ್ಕಾಲಿಕ ಆಯ್ಕೆ ಪಟ್ಟಿಗಳ ಮಾಹಿತಿ :
    2018 ಮತ್ತು 20-21 ನೇ ಸಾಲಿನ ತಿದ್ದುಪಡಿ ಅಧಿಸೂಚನೆಗೆ ಸಂಬಂಧಿಸಿದ ಹುದ್ದೆ ಇದಾಗಿದ್ದು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿನ 1 ಎಫ್‌ಡಿಎ ಹುದ್ದೆಗೆ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿದೆ.

    ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿನ 5 ಕ್ಷೇತ್ರ ಸಹಾಯಕರು-ಹೆಚ್ ಕೆ ವೃಂದ ಹುದ್ದೆಗಳಿಗೆ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿದೆ. 2018 ಮತ್ತು 20-21 ನೇ ಸಾಲಿನ ತಿದ್ದುಪಡಿ ಅಧಿಸೂಚನೆಗೆ ಸಂಬಂಧಿಸಿದ ಹುದ್ದೆ ಇದಾಗಿದೆ.

    ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಲ್ಪ ಸಂಖ್ಯಾತರ ಮೌಲಾನಾ ಅಜಾದ್ ಮಾದರಿ ಶಾಲೆಗಳಲ್ಲಿನ 79 ವಿಜ್ಙಾನ ಶಿಕ್ಷಕರು-ಉಳಿಕೆ ಮೂಲ ವೃಂದ (ಗ್ರೂಪ್ ಸಿ) ಹುದ್ದೆಗಳಿಗೆ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ.

    ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಅಲ್ಪಸಂಖ್ಯಾತರ ಮೌಲಾನಾ ಅಜಾದ್ ಮಾದರಿ ಶಾಲೆಗಳಲ್ಲಿನ 21 ವಿಜ್ಞಾನ ಶಿಕ್ಷಕರು

    ಹೈ.ಕ ವೃಂದ(ಗ್ರೂಪ್ ಸಿ) ಹುದ್ದೆಗಳಿಗೆ ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ ಮಾಡಲಾಗಿದೆ.

    ಈ ಎಲ್ಲಾ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿಗಳನ್ನು ಕರ್ನಾಟಕ ಲೋಕಸೇವಾ ಆಯೋಗದ ವೆಬ್‌ಸೈಟ್‌ನಲ್ಲಿ ವೀಕ್ಷಿಸಬಹುದು.

    http://www.kpsc.kar.nic.in/

  • 26 ವೈರ್‌ಲೆಸ್ ಪಿಎಸ್ ಐ ನೇಮಕಾತಿ ಆಯ್ಕೆ ಪಟ್ಟಿ ಬಿಡುಗಡೆ : ಇಲ್ಲಿದೆ ವಿವರ

    26 ವೈರ್‌ಲೆಸ್ ಪಿಎಸ್ ಐ ನೇಮಕಾತಿ ಆಯ್ಕೆ ಪಟ್ಟಿ ಬಿಡುಗಡೆ : ಇಲ್ಲಿದೆ ವಿವರ

    2020 ನೇ ಸಾಲಿನ 26 ವೈರ್ ಲೆಸ್ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಳ ನೇಮಕಾತಿಗೆ ಸಂಬಂಧಿಸಿದಂತೆ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಕರ್ನಾಟಕ ಪೊಲೀಸ್ ಇಲಾಖೆಯು ಈಗಾಗಲೇ ಬಿಡುಗಡೆ ಮಾಡಿದೆ.

    ಅಭ್ಯರ್ಥಿಗಳು ಕೆಎಸ್ ಪಿ ವೆಬ್‌ಸೈಟ್‌ ಗೆ ಭೇಟಿ ನೀಡಿ ಚೆಕ್ ಮಾಡಬಹುದು

    ಪ್ರಸ್ತುತ ಪ್ರಕಟಿಸಲಾದ ವೈರಲೆಸ್ ಪಿಎಸ್ ಐ ತಾತ್ಕಾಲಿಕ ಆಯ್ಕೆ ಪ್ರಕ್ರಿಯೆಯಲ್ಲಿ ಹೆಸರು ಪಡೆದ ಅಭ್ಯರ್ಥಿಗಳು ವೈದ್ಯಕೀಯ ಪರೀಕ್ಷೆಯ ಫಲಿತಾಂಶಗಳಿಗೆ ಒಳಪಟ್ಟಿರುತ್ತಾರೆ. ಪಟ್ಟಿಯಲ್ಲಿ ಹೆಸರು ಇದ್ದ ಕಾರಣಕ್ಕೆ ಯಾವುದೇ ಕಾನೂನಾತ್ಮಕ ಹಕ್ಕು ಹುದ್ದೆಯ ನೇಮಕಕ್ಕೆ ಇರುವುದಿಲ್ಲ.

    26 ವೈರ್ ಲೆಸ್ ಪಿಎಸ್ ಐ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ತಾತ್ಕಾಲಿಕ ಆಯ್ಕೆ ಪಟ್ಟಿ ಚೆಕ್ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ:

    http://www.kpsc.kar.nic.in/

  • ಕೆಪಿಎಸ್‌ಸಿ ಎಫ್ ಡಿಎ/ಎಸ್‌ಡಿಎ ಅಂತಿಮ ಆಯ್ಕೆ ಪಟ್ಟಿ ಪ್ರಕಟ- ಇಲ್ಲಿದೆ ಹೆಚ್ಚಿನ ಮಾಹಿತಿ

    ಕೆಪಿಎಸ್‌ಸಿ ಎಫ್ ಡಿಎ/ಎಸ್‌ಡಿಎ ಅಂತಿಮ ಆಯ್ಕೆ ಪಟ್ಟಿ ಪ್ರಕಟ- ಇಲ್ಲಿದೆ ಹೆಚ್ಚಿನ ಮಾಹಿತಿ

    ಕರ್ನಾಟಕ ಲೋಕ ಸೇವಾ ಆಯೋಗವು ೨೦೧೭ನೇ ಸಾಲಿನ ರಾಜ್ಯದ ವಿವಿಧ ಇಲಾಖೆಗಳಲ್ಲಿನ ಪ್ರಥಮ ದರ್ಜೆ ಸಹಾಯಕರ ಮತ್ತು ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆ ಪಟ್ಟಿಯ ಅಧಿಸೂಚನೆಗಳನ್ನು ಕೆಪಿಎಸ್‌ಸಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.
    ಒಟ್ಟು ೯೬೦ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳಿಗೆ ಮತ್ತು ೮೫೧ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳಿಗೆ ಈ ನೇಮಕ ನಡೆಯಲಿದೆ. ಕೊರೊನಾ ಸಮಯದಲ್ಲಿ ಕೆಪಿಎಸ್‌ಸಿ ಪರೀಕ್ಷೆ ಬರೆದ ಹಲವು ಅಭ್ಯರ್ಥಿಗಳಿಗೆ ಈ ಮೂಲಕ ಶುಭ ಶುದ್ದಿಯನ್ನು ಆಯೋಗ ನೀಡಿದೆ.


    ಕೆಪಿಎಸ್‌ಸಿ ವೆಬ್ಸೈಟ್‌ ಲಿಂಕ್‌

    ಅಂತಿಮ ಆಯ್ಕೆ ಪಟ್ಟಿಯ ಲಿಂಕ್‌

     851 (766+85 HK) POSTS OF SECOND DIVISION ASSISTANTS – 2017
     960(810+150 HK) POSTS OF FIRST DIVISION ASSISTANTS – 2017


    ಕೆಪಿಎಸ್‌ಸಿ ಹುದ್ದೆಗಳ ವಿವರ