Category: Karnataka Jobs

Karnataka State Govt Jobs, KPSC Notifications, Bangalore Metro Jobs, KSRTC Recruitment, SSC Jobs in Karnataka, RRB Bangalore Recruitment, Railway Jobs, Bank Jobs in Karnataka, PDO Jobs in Karnataka, Data Entry Jobs, District court jobs, Karnataka court jobs, VA Recruitment etc all Karnataka govt job updates sarakarijobs.com

  • Typist Jobs 2024: ನ್ಯಾಯಾಲಯದಲ್ಲಿ ಉದ್ಯೋಗಾವಕಾಶ; ಟೈಪಿಸ್ಟ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ, ಪಿಯುಸಿ ವಿದ್ಯಾರ್ಹತೆ

    Typist Jobs 2024: ನ್ಯಾಯಾಲಯದಲ್ಲಿ ಉದ್ಯೋಗಾವಕಾಶ; ಟೈಪಿಸ್ಟ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ, ಪಿಯುಸಿ ವಿದ್ಯಾರ್ಹತೆ

    Ballari District Court Jobs 2024: ಬಳ್ಳಾರಿ ಜಿಲ್ಲಾ ನ್ಯಾಯಾಂಗ ಘಟಕದ ವಿವಿಧ ನ್ಯಾಯಾಲಯದಲ್ಲಿ ಖಾಲಿ ಇರುವ ವಿವಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಒಟ್ಟು 21 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಆಸಕ್ತರು ಈ ಕೆಳಗೆ ನೀಡಲಾದ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಬೆರಳಚ್ಚುಗಾರ ಮತ್ತು ಬೆರಳಚ್ಚು ನಕಲುಗಾರ ಹುದ್ದೆಗೆ, ಹೈದರಾಬಾದ್‌ ಕರ್ನಾಟಕ ಸ್ಥಳೀಯ ವೃಂದದಲ್ಲಿ ಖಾಲಿ ಇರುವ ಬೆರಳಚ್ಚುಗಾರರು, ಹಾಗೂ ಬೆರಳಚ್ಚು ನಕಲುಗಾರರು ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು 06-05-2024 ಕೊನೆಯ ದಿನಾಂಕವಾಗಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.

    ಪ್ರಮುಖ ದಿನಾಂಕಗಳು
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ; 06-04-2024
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 06-05-2024 (11.59 ರಾತ್ರಿವರೆಗೆ)
    ಆನ್‌ಲೈನ್‌ ಮೂಲಕ ಶುಲ್ಕ ಪಾವತಿಗೆ ಕೊನೆಯ ದಿನಾಂಕ: 08-05-2024 (11.59 ರಾತ್ರಿವರೆಗೆ)

    ಹುದ್ದೆಗಳ ವಿವರ ಇಲ್ಲಿದೆ;
    ಹುದ್ದೆ ಸಂಖ್ಯೆ:
    ಉಳಿಕೆ ವೃಂದದಲ್ಲಿ 1 ಬೆರಳಚ್ಚುಗಾರ, 01 ಬೆರಳಚ್ಚು ನಕಲುಗಾರ
    ಹೈದರಾಬಾದ್‌ ಕರ್ನಾಟಕ ಸ್ಥಳೀಯ ವೃಂದದಲ್ಲಿ 12 ಬೆರಳಚ್ಚುಗಾರರು, 7 ಬೆರಳಚ್ಚು ನಕಲುಗಾರರು ಹುದ್ದೆಗಳು ಖಾಲಿ ಇದೆ.
    ವಿದ್ಯಾರ್ಹತೆ: ದ್ವಿತೀಯ ಪಿಯುಸಿ ಉತ್ತೀರ್ಣರಾಗಿರಬೇಕು. ಅಥವಾ ಡಿಪ್ಲೋಮಾ ಕಮರ್ಷಿಯಲ್‌ ಪ್ರಾಕ್ಟೀಸ್‌ ಪರೀಕ್ಷೆಯಲ್ಲಿ ತೇರ್ಗಡೆ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
    ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸುವ ಕನ್ನಡ ಮತ್ತು ಇಂಗ್ಲೀಷ್‌ ಬೆರಳಚ್ಚು ಮತ್ತು ಶೀಘ್ರಲಿಪಿಯಲ್ಲಿ ಹಿರಿಯ ದರ್ಜೆ ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ ಡಿಪ್ಲೋಮಾ ಕರ್ಮಷಿಯಲ್‌ ಪ್ರ್ಯಾಕ್ಟೀಸ್‌ ಪರೀಕ್ಷೆಯಲ್ಲಿ ಅಥವಾ ತತ್ಸಮಾನ ವಿದ್ಯಾರ್ಹತೆಯಲ್ಲಿ ಪಾಸ್‌ ಆಗಿರಬೇಕು.

    ವಯೋಮಿತಿ: ಕನಿಷ್ಠ 18 ವರ್ಷ ವಯೋಮಿತಿ ಆಗಿರಬೇಕು. ಗರಿಷ್ಠ ವಯೋಮಿತಿ ಅರ್ಹತೆ ಈ ಕೆಳಗೆ ನೀಡಲಾಗಿದೆ.
    ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ರ ಅಭ್ಯರ್ಥಿಗಳಿಗೆ 40 ವರ್ಷ, ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 38 ವರ್ಷ, ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷ ಗರಿಷ್ಠ ವಯೋಮಿತಿಯನ್ನು ನಿಗದಿ ಮಾಡಲಾಗಿದೆ.

    ವೇತನ ;
    ಬೆರಳಚ್ಚುಗಾರರು- ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.21400-ರೂ.42000 ವರೆಗೆ ವೇತನ ನೀಡಲಾಗುವುದು
    ಬೆರಳಚ್ಚು ನಕಲುಗಾರರು- ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.21400-ರೂ.42000 ವರೆಗೆ ವೇತನ ಸಿಗಲಿದೆ.

    ಅರ್ಜಿ ಶುಲ್ಕ:
    ಸಾಮಾನ್ಯ ವರ್ಗ, ಪ್ರವರ್ಗ-2ಎ, 2ಬಿ,3ಎ ಮತ್ತು 3ಬಿ ಗೆ ಸೇರಿದ ಅಭ್ಯರ್ಥಿಗಳು ರೂ.250, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ರೂ.100 ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು.

    ಅರ್ಜಿಗಳನ್ನು ಕಡ್ಡಾಯವಾಗಿ ಬಳ್ಳಾರಿ ಜಿಲ್ಲಾ ನ್ಯಾಯಾಲಯದ ವೆಬ್‌ಸೈಟ್‌ https://ballari.dcourts.gov.in/online-recruitment ನಲ್ಲಿ ನೀಡಲಾದ ಲಿಂಕ್‌ ಮೂಲಕ ದಿನಾಂಕ 06-04-2024 ರಿಂದ ದಿನಾಂಕ 06-05-2024 ರ ರಾತ್ರಿ 11.59 ರವರೆಗೆ ಮಾತ್ರ ಅರ್ಜಿ ಸಲ್ಲಿಸತಕ್ಕದ್ದು.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್‌ ಕ್ಲಿಕ್‌ ಮಾಡಿ

  • BCWD Jobs: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ 40 ಹುದ್ದೆ ಖಾಲಿ; ಶೀಘ್ರದಲ್ಲೇ ಅಧಿಸೂಚನೆ ಪ್ರಕಟ

    BCWD Jobs: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ 40 ಹುದ್ದೆ ಖಾಲಿ; ಶೀಘ್ರದಲ್ಲೇ ಅಧಿಸೂಚನೆ ಪ್ರಕಟ

    BCWD Karnataka Recruitment 2024: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ (BCWD)ಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಒಟ್ಟು 40 ಹುದ್ದೆಗಳು ಖಾಲಿ ಇದ್ದು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. 40 ಗೆಜೆಟೆಡ್ ಮ್ಯಾನೇಜರ್/ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಹುದ್ದೆಗಳ ನೇಮಕಾತಿ ನಡೆಯಲಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಧಿಸೂಚನೆಯನ್ನು ಮುಂಬರುವ ದಿನಗಳಲ್ಲಿ ಪ್ರಕಟಿಸಲಿದೆ. ಕರ್ನಾಟಕ ಸರ್ಕಾರದಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದು. ಉದ್ಯೋಗದ ಕುರಿತು ಹೆಚ್ಚಿನ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

    ಪ್ರಮುಖ ದಿನಾಂಕಗಳು;
    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ; ಶೀಘ್ರದಲ್ಲೇ ಪ್ರಕಟಗೊಳ್ಳುವುದು
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಅತಿ ಶೀಘ್ರದಲ್ಲೇ

    ಹುದ್ದೆಯ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ
    ಹುದ್ದೆಯ ಹೆಸರು ಮತ್ತು ಸಂಸ್ಥೆ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕರ್ನಾಟಕ (BCWD) ಇಲ್ಲಿ ಒಟ್ಟು 40 ಹುದ್ದೆಗಳು ಖಾಲಿ ಇದ್ದು, ಕರ್ನಾಟಕದಲ್ಲಿ ಕೆಲಸ ಮಾಡಲು ಇಚ್ಛಿಸುವ ಅಭ್ಯರ್ಥಿಗಳು ಗೆಜೆಟೆಡ್ ಮ್ಯಾನೇಜರ್/ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಬಹುದು.

    ಹುದ್ದೆ ವಿವರ:
    HK 19 ಹುದ್ದೆಗಳು
    RPC 21 ಹುದ್ದೆಗಳು

    ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ, ವೇತನ: BCWD ಕರ್ನಾಟಕ ನಿಯಮಗಳ ಪ್ರಕಾರ ಅಭ್ಯರ್ಥಿಗಳು ಹೊಂದಿರಬೇಕು.

    ವಯೋಮಿತಿ ಸಡಿಲಿಕೆ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕರ್ನಾಟಕ ನಿಯಮಾವಳಿ ಪ್ರಕಾರ ನೀಡಲಾಗುವುದು.

    ಅರ್ಜಿ ಶುಲ್ಕ: ಅಭ್ಯರ್ಥಿಗಳು ಮೇಲ್ಕಂಡ ಯಾವುದೇ ಹುದ್ದೆಗೆ ಅರ್ಜಿ ಶುಲ್ಕ ಪಾವತಿ ಮಾಡುವಂತಿಲ್ಲ.

    ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

  • 1000 VA Jobs:ಉದ್ಯೋಗಾಕಾಂಕ್ಷಿಗಳ ಗಮನಕ್ಕೆ; ಕೆಇಎ ಇಂದ 1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಕೆ ಲಿಂಕ್‌ ಬಿಡುಗಡೆ

    1000 VA Jobs:ಉದ್ಯೋಗಾಕಾಂಕ್ಷಿಗಳ ಗಮನಕ್ಕೆ; ಕೆಇಎ ಇಂದ 1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಕೆ ಲಿಂಕ್‌ ಬಿಡುಗಡೆ

    Karnataka Revenue Department Recruitment: ಕರ್ನಾಟಕ ಸರಕಾರದ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಉಳಿಕೆ ಮೂಲ ವೃಂದ ಹಾಗೂ ಕಲ್ಯಾಣ ಕರ್ನಾಟಕ (ಸ್ಥಳೀಯ) ವೃಂದದಲ್ಲಿರುವ ಹುದ್ದೆಗಳಿಗೆ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಕೆಳಗಿನ ವಿವರಗಳನ್ನು ಓದಿ ಅರ್ಜಿ ಹುದ್ದೆಗೆ ಸಂಬಂಧಿಸಿದ ತಯಾರಿ ಮಾಡಿಕೊಳ್ಳಬಹುದು. ಒಟ್ಟು 1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗೆ ಕರ್ನಾಟಕದಲ್ಲಿ ಪೋಸ್ಟಿಂಗ್‌ ನಡೆಯಲಿದೆ. ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.

    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: ಎಪ್ರಿಲ್‌ 5, 2024
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮೇ 04, 2024
    ಶುಲ್ಕ ಪಾವತಿ ಮಾಡಲು ಕೊನೆಯ ದಿನಾಂಕ: ಮೇ, 07, 2024

    ಹುದ್ದೆಯ ವಿವರ ಇಲ್ಲಿದೆ; ಉಳಿಕೆ ಮೂಲ ವೃಂದ- 869 ಹುದ್ದೆಗಳು ಮತ್ತು ಕಲ್ಯಾಣ ಕರ್ನಾಟಕ ಸ್ಥಳೀಯ ವೃಂದ- 131 ಹುದ್ದೆಗಳು

    ವೇತನ: ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಆಯ್ಕೆಯಾಗುವವರಿಗೆ ಮಾಸಿಕ ರೂ.21,400-42000ರೂ. ವೇತನ ದೊರಕಲಿದೆ.

    ಅರ್ಜಿ ಶುಲ್ಕ: ಸಾಮಾನ್ಯ ಅರ್ಹತೆ ಮತ್ತು ಇತರೆ ಪ್ರವರ್ಗಗಳು (ಪ್ರವರ್ಗ-2ಎ/2ಬಿ/3ಎ/3ಬಿ) ಹುದ್ದೆಗೆ ಅಭ್ಯರ್ಥಿಗಳು ರೂ.750 ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು.
    ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಮಾಜಿ ಸೈನಿಕ ಮತ್ತು ವಿಕಲ ಚೇತನ ಅಭ್ಯರ್ಥಿಗಳು ರೂ.500 ಅರ್ಜಿ ಶುಲ್ಕವನ್ನು ಪಾವತಿ ಮಾಡಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
    (ಓಮ್ಮೆ ಪಾವತಿ ಮಾಡಿದ ಶುಲ್ಕವನ್ನು ಹಿಂದಿರುಗಿಸಲಾಗುವುದಿಲ್ಲ)

    ವಿದ್ಯಾರ್ಹತೆ: ವಿದ್ಯಾರ್ಹತೆಯ ಕುರಿತ ಹೆಚ್ಚಿನ ಸಂಪೂರ್ಣ ಮಾಹಿತಿಗಾಗಿ ಅಭ್ಯರ್ಥಿಗಳು ಸಂಸ್ಥೆಯ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

    ವಯೋಮಿತಿ: ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯು ಈ ಕೆಳಕಂಡಂತೆ ನಿಗದಿಪಡಿಸಲಾಗಿದೆ.
    ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ 35 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ.
    ಪ್ರವರ್ಗ 2ಎ,2ಬಿ,3ಎ,3ಬಿ ಅಭ್ಯರ್ಥಿಗಳಿಗೆ 38 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ.
    ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ.

    ಆಯ್ಕೆ ವಿಧಾನ: ಮೇಲ್ಕಂಡ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ಆಫ್‌ಲೈನ್‌ -ಒಎಂಆರ್‌ ಮಾದರಿ ಮೂಲಕ ಪರೀಕ್ಷೆ ನಡೆಸಲಾಗುವುದು.

    ಆನ್ಲೈನ್‌ ಅರ್ಜಿ ಸಲ್ಲಿಕೆ ವೇಳಾಪಟ್ಟಿಯ ನೋಟಿಫಿಕೇಶನ್‌

    ಅರ್ಜಿ ಸಲ್ಲಿಕೆಯ ನೇರ ಲಿಂಕ್‌

    ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆಯ ಈ ಲಿಂಕ್‌ ಕ್ಲಿಕ್‌ ಮಾಡಿ

  • Karnataka Govt Jobs 2024: ಜಿಟಿಟಿಸಿ ಇಂದ ಉದ್ಯೋಗ ಅಧಿಸೂಚನೆ; ಡಿಪ್ಲೋಮಾ, ಐಟಿಐ, ಡಿಗ್ರಿ ಪಾಸಾದವರು ಅರ್ಜಿ ಸಲ್ಲಿಸಿ

    Karnataka Govt Jobs 2024: ಜಿಟಿಟಿಸಿ ಇಂದ ಉದ್ಯೋಗ ಅಧಿಸೂಚನೆ; ಡಿಪ್ಲೋಮಾ, ಐಟಿಐ, ಡಿಗ್ರಿ ಪಾಸಾದವರು ಅರ್ಜಿ ಸಲ್ಲಿಸಿ

    GTTC Recruitment 2024: ಕೆಇಎ ಪಂಚಾಯತ್‌ ರಾಜ್‌ ಇಲಾಖೆ ಬಿಎಂಟಿಸಿ ಹುದ್ದೆಗಳಿಗೆ ಅಧಿಸೂಚನೆಯನ್ನು ನಿನ್ನೆ ಬಿಡುಗಡೆ ಮಾಡಿತ್ತು. ಇದೀಗ ಮತ್ತೊಂದು ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.

    ಸರ್ಕಾರಿ ಉಪಕರಣಗಾರ ಕೊಠಡಿ ಮತ್ತು ತರಬೇತಿ ಕೇಂದ್ರವು (GTTC) ಅಧಿಕೃತ ಅಧಿಸೂಚನೆಯ ಮೂಲಕ 76 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಬೋಧಕ, ತಂತ್ರಜ್ಞರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. 18-ಮೇ-2024 ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. .

    ಪ್ರಮುಖ ದಿನಾಂಕಗಳು;
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ; 19-04-2024
    ಆನ್‌ಲೈನ್‌ ಮೂಲಕಾ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 18-05-2024 (11.59 ರಾತ್ರಿ)
    ಅರ್ಜಿ ಶುಲ್ಕ ಪಾವತಿಗೆ ಕೊನೆಯ ದಿನಾಂಕ: 19-05-2024

    ಹುದ್ದೆಯ ವಿವರ ಇಲ್ಲಿದೆ;
    RPC 74 ಮತ್ತು KK 02 ಹುದ್ದೆಗಳು ಖಾಲಿ ಇದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಆರ್‌ಪಿಸಿ ಮತ್ತು ಕಲ್ಯಾಣ ಕರ್ನಾಟಕ ಕೇಡರ್‌ನಲ್ಲಿ ಹುದ್ದೆಗಳ ಭರ್ತಿ ನಡೆಸಲಿದೆ. ಒಟ್ಟು 76 ಹುದ್ದೆಗಳ ಖಾಲಿ ಇದ್ದು, ಬೋಧಕ, ತಂತ್ರಜ್ಞರ ಹುದ್ದೆಗಳ ನೇರ ನೇಮಕಾತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಾಗಿ ಅರ್ಜಿಯನ್ನು ಆಹ್ವಾನಿಸಿದೆ.

    ಹುದ್ದೆ ಹೆಸರು ಮತ್ತು ಸಂಖ್ಯೆ: ಉಪನ್ಯಾಸಕರು (ಎಂಜಿನಿಯರಿಂಗ್) 18 ಹುದ್ದೆಗಳು
    ಇಂಜಿನಿಯರ್ 2 ಹುದ್ದೆಗಳು
    ಅಧಿಕಾರಿ ಗ್ರೇಡ್-II 2 ಹುದ್ದೆಗಳು
    ಫೋರ್‌ಮನ್ ಗ್ರೇಡ್-II 4 ಹುದ್ದೆಗಳು
    ಬೋಧಕ ಗ್ರೇಡ್-I 7 ಹುದ್ದೆಗಳು
    ತಂತ್ರಜ್ಞ ಗ್ರೇಡ್-II 7 ಹುದ್ದೆಗಳು
    ಬೋಧಕ ಗ್ರೇಡ್-II 5 ಹುದ್ದೆಗಳು
    ತಂತ್ರಜ್ಞ ಗ್ರೇಡ್-III 20 ಹುದ್ದೆಗಳು
    ತಂತ್ರಜ್ಞ ಗ್ರೇಡ್-IV 4 ಹುದ್ದೆಗಳು
    ಸಹಾಯಕ ಗ್ರೇಡ್-II 5 ಹುದ್ದೆಗಳು

    ವಿದ್ಯಾರ್ಹತೆ: ಉಪನ್ಯಾಸಕರು (ಎಂಜಿನಿಯರಿಂಗ್): ಮೆಕಾಟ್ರಾನಿಕ್ಸ್ ಇಂಜಿನಿಯರಿಂಗ್/ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್/ಟೆಕ್ನಾಲಜಿ, ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್/ಟೆಕ್ನಾಲಜಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು
    ಇಂಜಿನಿಯರ್: ಮೆಕ್ಯಾನಿಕಲ್ ಇಂಜಿನಿಯರಿಂಗ್/ಪ್ರೊಡಕ್ಷನ್ ಇಂಜಿನಿಯರಿಂಗ್ ನಲ್ಲಿ ಪದವಿ ಮಾಡಿರಬೇಕು.
    ಅಧಿಕಾರಿ ಗ್ರೇಡ್-II: ಕಲೆ/ವಿಜ್ಞಾನ/ವ್ಯಾಪಾರ ನಿರ್ವಹಣೆಯಲ್ಲಿ ಪದವಿ ಮಾಡಿದವರು ಅರ್ಜಿ ಸಲ್ಲಿಸಬಹುದು.
    ಫೋರ್‌ಮನ್ ಗ್ರೇಡ್-II: ಮೆಕ್ಯಾನಿಕಲ್ ಇಂಜಿನಿಯರಿಂಗ್/ಟೂಲ್ ಮತ್ತು ಡೈ ಮೇಕಿಂಗ್‌ನಲ್ಲಿ ಡಿಪ್ಲೊಮಾ ಮಾಡಿದವರು ಅರ್ಜಿ ಸಲ್ಲಿಸಲು ಅರ್ಹರು.
    ಬೋಧಕ ಗ್ರೇಡ್-I, ತಂತ್ರಜ್ಞ ಗ್ರೇಡ್-II: ಡಿಪ್ಲೊಮಾ ಇನ್ ಟೂಲ್ & ಡೈ ಮೇಕಿಂಗ್ ಮಾಡಿದವರು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರು.
    ಬೋಧಕ ಗ್ರೇಡ್-II: ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಮಾಡಿದವರು ಅರ್ಜಿ ಸಲ್ಲಿಸಿ.
    ತಂತ್ರಜ್ಞ ಗ್ರೇಡ್-III: ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಎಂಜಿನಿಯರಿಂಗ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ಎಂಜಿನಿಯರಿಂಗ್, ಮೆಕಾಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್‌ನಲ್ಲಿ ಡಿಪ್ಲೊಮಾ ಮಾಡಿದವರು ಅರ್ಜಿ ಸಲ್ಲಿಸಲು ಅರ್ಹರು.
    ತಂತ್ರಜ್ಞ ಗ್ರೇಡ್-IV: ಎಲೆಕ್ಟ್ರಿಕಲ್, ಮೆಕ್ಯಾನಿಕ್ ಮೆಷಿನ್ ಟೂಲ್ ನಿರ್ವಹಣೆಯಲ್ಲಿ ITI ಮಾಡಿದವರು ಅರ್ಜಿ ಸಲ್ಲಿಸಬೇಕು.
    ಅಸಿಸ್ಟೆಂಟ್ ಗ್ರೇಡ್-II: ಕಲೆ/ವಾಣಿಜ್ಯ/ವಿಜ್ಞಾನದಲ್ಲಿ ಪದವಿ, ಸೆಕ್ರೆಟರಿ ಪ್ರಾಕ್ಟೀಸ್/ಮಾಡರ್ನ್ ಆಫೀಸ್ ಪ್ರಾಕ್ಟೀಸ್/ವಾಣಿಜ್ಯ ಅಭ್ಯಾಸ/ಬಿಸಿನೆಸ್ ಮ್ಯಾನೇಜ್‌ಮೆಂಟ್‌ನಲ್ಲಿ ಡಿಪ್ಲೊಮಾ ಮಾಡಿದವರು ಅರ್ಜಿ ಸಲ್ಲಿಸಬೇಕು.

    ವಯೋಮಿತಿ:
    ಉಪನ್ಯಾಸಕ (ಎಂಜಿನಿಯರಿಂಗ್) 18-27 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು.
    ಇಂಜಿನಿಯರ್, ಅಧಿಕಾರಿ ಗ್ರೇಡ್-II, ಫೋರ್‌ಮನ್ ಗ್ರೇಡ್-II ಹುದ್ದೆಗೆ 21-27 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು.
    ಬೋಧಕ ದರ್ಜೆ-I, ತಂತ್ರಜ್ಞ ಗ್ರೇಡ್-II, ಬೋಧಕ ಗ್ರೇಡ್-II ಹುದ್ದೆಗೆ 18-27 ವರ್ಷದೊಳಗಿನವರು ಅರ್ಜಿ ಸಲ್ಲಿಸಲು ಅರ್ಹರು.
    ತಂತ್ರಜ್ಞ ಗ್ರೇಡ್-III 21-27 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು.
    ತಂತ್ರಜ್ಞ ಗ್ರೇಡ್-IV, ಸಹಾಯಕ ಗ್ರೇಡ್-II ಹುದ್ದೆಗೆ 18-27 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು.

    CAT-2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ 03 ವರ್ಷ, SC/ST/Cat-I/Ex-Servicemen ಅಭ್ಯರ್ಥಿಗಳಿಗೆ 05 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ಅರ್ಜಿ ಶುಲ್ಕ:
    PWD ಅಭ್ಯರ್ಥಿಗಳಿಗೆ ರೂ.250/-, SC/ST/Cat-I/Ex-Servicemen ಅಭ್ಯರ್ಥಿಗಳಿಗೆ ರೂ.500/-, ಸಾಮಾನ್ಯ/OBC ಅಭ್ಯರ್ಥಿಗಳಿಗೆ ರೂ.750/- ಅರ್ಜಿ ಶುಲ್ಕ ವಿಧಿಸಲಾಗಿದೆ. ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಪಾವತಿ ಮಾಡಬೇಕು.

    ಆಯ್ಕೆ ಪ್ರಕ್ರಿಯೆ: ಮೇಲ್ಕಂಡ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

    ವೇತನ:
    ಉಪನ್ಯಾಸಕರು (ಎಂಜಿನಿಯರಿಂಗ್), ಇಂಜಿನಿಯರ್ ಹುದ್ದೆಗೆ ಮಾಸಿಕ ರೂ.45300-88300/- ವೇತನವಿರಲಿದೆ
    ಅಧಿಕಾರಿ ದರ್ಜೆ-II ಹುದ್ದೆಗೆ ಮಾಸಿಕ ರೂ.40900-78200/- ವೇತನ ಲಭ್ಯ.
    ಫೋರ್‌ಮನ್ ಗ್ರೇಡ್-II ಹುದ್ದೆಗೆ ರೂ.37900-70850/- ಮಾಸಿಕ ವೇತನ ಲಭ್ಯ.
    ಬೋಧಕ ದರ್ಜೆ-I , ತಂತ್ರಜ್ಞ ಗ್ರೇಡ್-II ಹುದ್ದೆಗೆ ಮಾಸಿಕ ರೂ.30350-58250/- ವೇತನ ಲಭ್ಯ.
    ಬೋಧಕ ದರ್ಜೆ-II, ತಂತ್ರಜ್ಞ ಗ್ರೇಡ್-II ಹುದ್ದೆಗೆ ಮಾಸಿಕ ರೂ.27650-52650/- ವೇತನವಿರಲಿದೆ.
    ತಂತ್ರಜ್ಞ ಗ್ರೇಡ್-IV ಹುದ್ದೆಗೆ ಮಾಸಿಕ ರೂ.23500-47650/- ವೇತನವಿರಲಿದೆ.
    ಸಹಾಯಕ ದರ್ಜೆ-II ಹುದ್ದೆಗೆ ರೂ.27650-52650/- ಮಾಸಿಕ ವೇತನವಿರಲಿದೆ.

    ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು https://cetonline.karnataka.gov.in/kea/ ಈ ಲಿಂಕ್‌ಗೆ ಭೇಟಿ ನೀಡಿ

  • Government Job: ಗ್ರಾಮ ಆಡಳಿತ ಅಧಿಕಾರಿ ಹುದ್ದೆಯ ಶೈಕ್ಷಣಿಕ ವಿದ್ಯಾರ್ಹತೆ ತಿದ್ದುಪಡಿ; ಇಲ್ಲಿದೆ ಅಧಿಸೂಚನೆ

    Government Job: ಗ್ರಾಮ ಆಡಳಿತ ಅಧಿಕಾರಿ ಹುದ್ದೆಯ ಶೈಕ್ಷಣಿಕ ವಿದ್ಯಾರ್ಹತೆ ತಿದ್ದುಪಡಿ; ಇಲ್ಲಿದೆ ಅಧಿಸೂಚನೆ

    Government Job: ಕಂದಾಯ ಇಲಾಖೆಯು ಇತ್ತೀಚೆಗೆ ಉಳಿಕೆ ಮೂಲ ವೃಂದ ಮತ್ತು ಕಲ್ಯಾಣ ಕರ್ನಾಟಕ (ಸ್ಥಳೀಯ) ವೃಂದದಲ್ಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿತ್ತು. ಒಟ್ಟು 1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿತ್ತು. ಆನ್‌ಲೈನ್‌ ಮೂಲಕ ಅಭ್ಯರ್ಥಿಗಳಿಗೆ ಅರ್ಜಿಯನ್ನು ಆಹ್ವಾನಿಸಲು ಸೂಚಿಸಲಾಗಿತ್ತು. ಈ ಅಧಿಸೂಚನೆ ಫೆ.20 ರಂದು ಹೊರಡಿಸಿತ್ತು. ಇದೀಗ ಈ ಹುದ್ದೆಗಳಿಗೆ ಅವಶ್ಯಕವಾಗಿ ಬೇಕಾದ ಶೈಕ್ಷಣಿಕ ವಿದ್ಯಾರ್ಹತೆಯಲ್ಲಿ ಕೆಲವೊಂದು ತಿದ್ದುಪಡಿಯನ್ನು ಮಾಡಿ ಪ್ರಕಟಣೆ ಹೊರಡಿಸಲಾಗಿದೆ. ತಿದ್ದುಪಡಿಯಲ್ಲೇನಿದೆ? ಇಲ್ಲಿದೆ ವಿವರ

    1. ಶೈಕ್ಷಣಿಕ ವಿದ್ಯಾರ್ಹತೆ (ತಿದ್ದುಪಡಿ ಮಾಡಲಾದ ಶೈಕ್ಷಣಿಕ ವಿವರ)
      ಗ್ರಾಮ ಆಡಳಿತ ಅಧಿಕಾರಿ : ದ್ವಿತೀಯ ಪಿಯುಸಿ ಅಥವಾ ತತ್ಸಮಾನ
      (ಆದೇಶ ಸಂಖ್ಯೆ: ಇಡಿ 09 ಟಿವಿಇ 2019, ದಿನಾಂಕ 06.08.2021 ಮತ್ತು ಆದೇಶ ಸಂಖ್ಯೆ ಇಪಿ 33 ಟಿವಿಇ 2021 ದಿನಾಂಕ 30.09.2021 ಗಳನ್ನು ಮತ್ತು ಉಳಿದಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸುತ್ತೋಲೆ ಸಂಖ್ಯೆ ಸಿಆಸುಇ 81 ಸೇವನೆ 2017 ದಿನಾಂಕ 27.02.2018 ರನ್ವಯ ಈ ಕೆಳಕಂಡ ವಿದ್ಯಾರ್ಹತೆಗಳನ್ನು ತತ್ಸಮಾನವೆಂದು ಆದೇಶಿದೆ.)
    • ಈ ಸಿಬಿಎಸ್‌ಸಿ ಮತ್ತು ಐಸಿಎಸ್‌ಸಿ ಮಂಡಳಿಯು ನಡೆಸುವ ಕ್ಲಾಸ್ 12 ಪರೀಕ್ಷೆ.
    • ಇತರೆ ರಾಜ್ಯ ಸರ್ಕಾರದ ಪರೀಕ್ಷಾ ಮಂಡಳಿಗಳಿಂದ ನಡೆಸುವ ಕ್ಲಾಸ್ 12 ಪರೀಕ್ಷೆ.
    • ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಓಷನ್ ಸ್ಕೂಲಿಂಗ್ (ಎನ್.ಐ.ಓ.ಎಸ್) ವತಿಯಿಂದ ನಡೆಸುವ ಉನ್ನತ ಪ್ರೌಢ ಶಿಕ್ಷಣ ಕೋರ್ಸ್/ಹೆಚ್ ಎಸ್ ಸಿ
    • ಮೂರು ವರ್ಷಗಳ ಡಿಪ್ಲೋಮಾ ಅಥವಾ ಎರಡು ವರ್ಷಗಳ ಐಟಿಐ ಕೋರ್ಸ್ ಅಥವಾ ಎರಡು ವರ್ಷಗಳ ವೃತ್ತಿ ಶಿಕ್ಷಣ ಡಿಪ್ಲೋಮಾ (ಜೆ.ಓ.ಸಿ/ಜೆ.ಓ.ಡಿ.ಸಿ/ಜೆ.ಎಲ್.ಡಿ.ಸಿ)
    • (ಐಟಿಐ ಕೋರ್ಸ್ ಉತ್ತೀರ್ಣರಾದ ಅಭ್ಯರ್ಥಿಗಳು ಮಾತ್ರ ಎನ್‌ಐಓಎಸ್ ವತಿಯಿಂದ ನಡೆಸುವ ಒಂದು ಭಾಷಾ ಕೋರ್ಸ್ ಮತ್ತು ಒಂದು ಶೈಕ್ಷಣಿಕ ವಿಷಯದಲ್ಲಿ (ದೂರಕಲಿಕೆ ಮಾದರಿಯಲ್ಲಿ) ಆಥವಾ ಪದವಿ ಪೂರ್ವ ಮಂಡಳಿಯು ನಡೆಸುವ ಪರೀಕ್ಷೆಯಲ್ಲಿ ಒಂದು ಭಾಷೆ ಮತ್ತು ಒಂದು ವಿಷಯದಲ್ಲಿ ಉತ್ತೀರ್ಣರಾದಲ್ಲಿ ಮಾತ್ರ ಪಿಯುಸಿ ಗೆ ತತ್ಸಮಾನವೆಂದು ಪರಿಗಣಿಸಬಹುದು.)

    ಸೂಚನೆ: ಸರ್ಕಾರದ ಪತ್ರ ದಿನಾಂಕ: 19.02.2024. ರಂತೆ ಒಬ್ಬ ಅಭ್ಯರ್ಥಿಯು ಒಂದು ಜಿಲ್ಲೆಗೆ ಮಾತ್ರ ಅರ್ಜಿಯನ್ನು ಸಲ್ಲಿಸಬೇಕಿರುವುದರಿಂದ, ಅಭ್ಯರ್ಥಿಗಳು ಒಂದೇ ಅರ್ಜಿಯಲ್ಲಿ ಕಲ್ಯಾಣ ಕರ್ನಾಟಕ ಮತ್ತು ಉಳಿಕೆ ಮೂಲ ವೃಂದಕ್ಕೆ ಅರ್ಜಿ ಸಲ್ಲಿಸಿ ಆದ್ಯತೆಯನ್ನು ಸಹ ನಮೂದಿಸಬಹುದಾಗಿರುತ್ತದೆ. ಅದರಂತೆ ಕಲ್ಯಾಣ-ಕರ್ನಾಟಕ ಮತ್ತು ಉಳಿಕೆ ಮೂಲ ವೃಂದಕ್ಕೆ ಅಭ್ಯರ್ಥಿಗಳ ಅರ್ಜಿಗಳನ್ನು ಪ್ರತ್ಯೇಕವಾಗಿ ಪರಿಗಣಿಸಲಾಗುವುದು,

    ದಿನಾಂಕ 20.02.2024 ರಂದು ವಿವರವಾದ ಅಧಿಸೂಚನೆಯನ್ನು ಪ್ರಕಟಿಸಲಾಗಿರುತ್ತದೆ. ಪ್ರಾಧಿಕಾರದ ಅಧಿಸೂಚನೆಯ ಕ್ರಮ ಸಂಖ್ಯೆ: 01 ರ ಶೈಕ್ಷಣಿಕ ವಿದ್ಯಾರ್ಹತೆ ರಲ್ಲಿ ಈ ಕೆಳಗಿನಂತೆ ಪ್ರಕಟಿಸಲಾಗಿತ್ತು.

    1. ಶೈಕ್ಷಣಿಕ ವಿದ್ಯಾರ್ಹತೆ (ಹಿಂದೆ ನೀಡಲಾದ ಶೈಕ್ಷಣಿಕ ವಿವರ)
      ಗ್ರಾಮ ಆಡಳಿತ ಅಧಿಕಾರಿ : ದ್ವಿತೀಯ ಪಿಯುಸಿ ಅಥವಾ ತತ್ಸಮಾನ
      (ಸರ್ಕಾರದ ಸುತ್ತೋಲೆ ಸಂಖ್ಯೆ: ಸಿಆಸುಇ 81 ಸೇವನೆ 2017, ದಿ: 27.02.2018 ರನ್ವಯ ಈ ಕೆಳಕಂಡ ವಿದ್ಯಾರ್ಹತೆಗಳನ್ನು ತತ್ಸಮಾನವೆಂದು ಆದೇಶಿದೆ.)
    • ಸಿಬಿಎಸ್‌ಸಿ ಮತ್ತು ಐಸಿಎಸ್‌ಸಿ ಮಂಡಳಿಯು ನಡೆಸುವ ಕ್ಲಾಸ್ 12 ಪರೀಕ್ಷೆ.
    • ಇತರೆ ರಾಜ್ಯ ಸರ್ಕಾರದ ಪರೀಕ್ಷಾ ಮಂಡಳಿಗಳಿಂದ ನಡೆಸುವ ಕ್ಲಾಸ್ 12 ಪರೀಕ್ಷೆ.
    • ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ (ಎನ್.ಐ.ಓ.ಎಸ್) ವತಿಯಿಂದ ನಡೆಸುವ ಉನ್ನತ ಪ್ರೌಢ ಶಿಕ್ಷಣ ಕೋರ್ಸ್/ ಹೆಚ್.ಎಸ್.ಸಿ.
    • ಮೂರು ವರ್ಷಗಳ ಡಿಪ್ಲೋಮಾ ಅಥವಾ ಎರಡು ವರ್ಷಗಳ ಐಟಿಐ ಕೋರ್ಸ್ ಅಥವಾ ಎರಡು ವರ್ಷಗಳ ವೃತ್ತಿ ಶಿಕ್ಷಣ ಡಿಪ್ಲೋಮಾ (ಜೆ.ಓ.ಸಿ/ಜೆ.ಓ.ಡಿ.ಸಿ/ಜೆ.ಎಲ್.ಡಿ.ಸಿ)
      (ಅಭ್ಯರ್ಥಿಗಳು ಎನ್‌ಐಓಎಸ್ ವತಿಯಿಂದ ನಡೆಸುವ ಒಂದು ಭಾಷಾ ಕೋರ್ಸ್ ಮತ್ತು ಒಂದು ಶೈಕ್ಷಣಿಕ ವಿಷಯದಲ್ಲಿ (ದೂರಕಲಿಕೆ ಮಾದರಿಯಲ್ಲಿ) ಅಥವಾ ಪದವಿ ಪೂರ್ವ ಮಂಡಳಿಯು ನಡೆಸುವ ಪರೀಕ್ಷೆಯಲ್ಲಿ ಒಂದು ಭಾಷೆ ಮತ್ತು ಒಂದು ವಿಷಯದಲ್ಲಿ ಉತ್ತೀರ್ಣರಾದಲ್ಲಿ ಮಾತ್ರ ಪಿಯುಸಿ ಗೆ ತತ್ಸಮಾನವೆಂದು ಪರಿಗಣಿಸಬಹುದು.)

    ನೋಟಿಫಿಕೇಶನ್‌

  • KEA BMTC Conductor Jobs: 2500 ಸಾವಿರ ಬಿಎಂಟಿಸಿ ಕಂಡಕ್ಟರ್‌ ಹುದ್ದೆಗೆ ಅಧಿಸೂಚನೆ ಬಿಡುಗಡೆ; ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೇ.18, ಹುದ್ದೆಯ ಸಂಪೂರ್ಣ ವಿವರ ಇಲ್ಲಿದೆ

    KEA BMTC Conductor Jobs: 2500 ಸಾವಿರ ಬಿಎಂಟಿಸಿ ಕಂಡಕ್ಟರ್‌ ಹುದ್ದೆಗೆ ಅಧಿಸೂಚನೆ ಬಿಡುಗಡೆ; ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೇ.18, ಹುದ್ದೆಯ ಸಂಪೂರ್ಣ ವಿವರ ಇಲ್ಲಿದೆ

    KEA BMTC Conductor Recruitment 2024: 2500 ಗ್ರೇಡ್ III ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ. ಬೆಂಗಳೂರು ಮೆಟ್ರೋಪಾಲಿಟನ್ ಸಾರಿಗೆ ನಿಗಮವು ಖಾಲಿ ಇರುವ ನಿರ್ವಾಹಕ (ಕಂಡಕ್ಟರ್) ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಿದ್ದು, ಇದೀಗ ನೋಟಿಫಿಕೇಶನ್‌ ಜಾರಿ ಮಾಡಿದೆ. ಒಟ್ಟು 2500 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಬೆಂಗಳೂರು – ಕರ್ನಾಟಕ ಸರ್ಕಾರದಲ್ಲಿ ವೃತ್ತಿಯನ್ನು ಮಾಡಲು ಇಚ್ಛಿಸುವವರು ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹದು. ಆಸಕ್ತ ಅಭ್ಯರ್ಥಿಗಳು 18-ಮೇ-2024 ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ; ಎಪ್ರಿಲ್‌ 19, 2024
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ; ಮೇ. 18, 2024
    ಶುಲ್ಕ ಪಾವತಿ ಮಾಡಲು ಕೊನೆಯ ದಿನಾಂಕ: ಮೇ. 19, 2024

    ಹುದ್ದೆಯ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ
    ಸಂಸ್ಥೆಯ ಹೆಸರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC)ಯು ಗ್ರೇಡ್‌ III (ಕಂಡಕ್ಟರ್)‌ ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಿದೆ. ಒಟ್ಟು 2500 ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.18660-25300/- ವೇತನವಿರಲಿದೆ.

    ಹುದ್ದೆ ಸಂಖ್ಯೆ:
    ಮಿಕ್ಕುಳಿದ ವೃಂದ-2286 ಹುದ್ದೆಗಳು
    ಸ್ಥಳೀಯ ವೃಂದ-214 ಹುದ್ದೆಗಳು
    ಒಟ್ಟು 2500 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

    ವಿದ್ಯಾರ್ಹತೆ: ಪಿಯುಸಿ (ಆರ್ಟ್ಸ್‌/ಕಾಮರ್ಸ್‌/ ಸೈನ್ಸ್‌) ನಲ್ಲಿ ತೇರ್ಗಡೆ ಅಥವಾ 10+2 ಐ.ಸಿ.ಎಸ್‌.ಇ/ಸಿ.ಬಿ.ಎಸ್‌.ಇ ಉತ್ತೀರ್ಣರಾಗಿರತಕ್ಕದ್ದು. ಅಥವಾ ತತ್ಸಮಾನ ವಿದ್ಯಾರ್ಹತೆ ಅಂದರೆ, ತಾಂತ್ರಿಕ ಶಿಕ್ಷಣ ಇಲಾಖೆಯಿಂದ 03 ವರ್ಷಗಳ ಡಿಪ್ಲೋಮಾದಲ್ಲಿ ಉತ್ತೀರ್ಣರಾಗಿರತಕ್ಕದ್ದು.

    ವಯೋಮಿತಿ: ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಕನಿಷ್ಠ ವಯೋಮಿತಿ ಹೊಂದಿರಬೇಕು ಮತ್ತು ಗರಿಷ್ಠ ವಯೋಮಿತಿಯನ್ನು ಮೀರಿರಬಾರದು.
    ಸಾಮಾನ್ಯ ವರ್ಗ ಕನಿಷ್ಠ 18 ವರ್ಷಗಳು, 35 ವರ್ಷ ಗರಿಷ್ಠ, 2ಎ/2ಬಿ/3ಎ/3ಬಿ 18 ವರ್ಷ ಕನಿಷ್ಠ ವಯೋಮಿತಿಯನ್ನು ಹೊಂದಿರಬೇಕು, ಹಾಗೂ 38 ವರ್ಷ ಗರಿಷ್ಠ ವಯೋಮಿತಿಯನ್ನು ನೀಡಲಾಗಿದೆ. ಪ.ಜಾ/ಪ.ಪಂ/ಪ್ರವರ್ಗ-1 ಇವರಿಗೆ 18 ವರ್ಷ ಕನಿಷ್ಠ ವಯೋಮಿತಿ, 40 ವರ್ಷ ಗರಿಷ್ಠ ವಯೋಮಿತಿಯನ್ನು ಮೀರಬಾರದು. ಮಾಜಿ ಸೈನಿಕ/ಇಲಾಖಾ ಅಭ್ಯರ್ಥಿ ಗರಿಷ್ಠ ವಯೋಮಿತಿ 45 ವರ್ಷ ಮೀರಿರಬಾರದು.

    ತರಬೇತಿ ಅವಧಿ ಭತ್ಯೆ ಮತ್ತು ವೇತನ ಶ್ರೇಣಿ: ನಿರ್ವಾಹಕ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳನ್ನು ಒಂದು ವರ್ಷ ಕಾಲ ವೃತ್ತಿ ತರಬೇತಿಯಾಗಿ ನಿಯೋಜನೆ ಮಾಡಲಾಗುವುದು. ಈ ತರಬೇತಿ ಅವಧಿಯಲ್ಲಿ ಮಾಸಿಕ ಸಮಗ್ರ ತರಬೇತಿ ಭತ್ಯೆಯಾಗಿ 9,100ರೂ.ನ್ನು ನೀಡಲಾಗುವುದು. ಆಯ್ಕೆಗೊಂಡ ಅಭ್ಯರ್ಥಿಗಳು ಒಂದು ವರ್ಷದ ವೃತ್ತಿ ತರಬೇತಿ ಪೂರೈಸಿದ ನಂತರ ಎರಡು ವರ್ಷಗಳ ಅವಧಿಗೆ ನಿಯಮಾನುಸಾರ ಖಾಯಂ ಪೂರ್ವ ಪರೀಕ್ಷಾರ್ಥ ಸೇವೆಯನ್ನು ನೇಮಕ ಮಾಡಲಾಗುವುದು. ವೇತನ ಶ್ರೇಣಿ ಈ ರೀತಿ ಇರಲಿದೆ.
    18660-230-19120-280-20240-410-22700-520-25300

    ಅರ್ಜಿ ಶುಲ್ಕ: ಸಾಮಾನ್ಯ ಅರ್ಹತೆ ಮತ್ತು ಇತರೆ ಪ್ರವರ್ಗಗಳು (ಪ್ರವರ್ಗ-2ಎ/2ಬಿ/3ಎ/3ಬಿ) ಅಭ್ಯರ್ಥಿಗಳು ರೂ.750 ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು.
    ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಮಜಿ ಸೈನಿಕ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ರೂ.500 ಅರ್ಜಿ ಶುಲ್ಕ ವಿಧಿಸಲಾಗಿದೆ.

    ಪರೀಕ್ಷಾ ಕೇಂದ್ರಗಳು: ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯನ್ನು ಬೆಂಗಳೂರು, ಮೈಸೂರು, ತುಮಕೂರು, ದಾವಣಗೆರೆ, ದಕ್ಷಿಣ ಕನ್ನಡ, ಶಿವಮೊಗ್ಗ, ಬೆಳಗಾವಿ, ಧಾರವಾಡ, ಬಳ್ಳಾರಿ, ಬೀದರ್‌, ಕೊಪ್ಪಳ, ರಾಯಚೂರು ಮತ್ತು ಕಲಬುರ್ಗಿಯಲ್ಲಿ ನಡೆಸಲಾಗುವುದು.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಕೆಳಗಿನ ನೋಟಿಫಿಕೇಶನ್‌ ಕ್ಲಿಕ್‌ ಮಾಡಿ.
    New Notification RPC, New Notification HK, Apply Online