Category: Karnataka Jobs

Karnataka State Govt Jobs, KPSC Notifications, Bangalore Metro Jobs, KSRTC Recruitment, SSC Jobs in Karnataka, RRB Bangalore Recruitment, Railway Jobs, Bank Jobs in Karnataka, PDO Jobs in Karnataka, Data Entry Jobs, District court jobs, Karnataka court jobs, VA Recruitment etc all Karnataka govt job updates sarakarijobs.com

  • ಎಸ್.ಎಸ್.ವಿ.ಡಿಪ್ಲೋಮಾ ನಾಟಕ ಸಾಹಿತ್ಯ ಮತ್ತು ರಂಗಭೂಮಿ‌ ಕಾಲೇಜು ಕಲಬುರಗಿ : ವಿವಿಧ ಹುದ್ದೆ

    ಎಸ್.ಎಸ್.ವಿ.ಡಿಪ್ಲೋಮಾ ನಾಟಕ ಸಾಹಿತ್ಯ ಮತ್ತು ರಂಗಭೂಮಿ‌ ಕಾಲೇಜು ಕಲಬುರಗಿ : ವಿವಿಧ ಹುದ್ದೆ

    ಎಸ್.ಎಸ್.ವಿ.ಡಿಪ್ಲೋಮಾ ನಾಟಕ ಸಾಹಿತ್ಯ ಮತ್ತು ರಂಗಭೂಮಿ‌ ಕಾಲೇಜು ಕಲಬುರಗಿ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ‌. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು. ವಿವರಗಳು ಈ ಕೆಳಗಿನಂತಿವೆ:

    ಹುದ್ದೆ : ಅಸಿಸ್ಟೆಂಟ್ ಪ್ರೊಫೆಸರ್ ಕಮ್ ಎಚ್ ಒಡಿ ಇನ್ ಥಿಯೇಟರ್ -01
    ಅಸಿಸ್ಟೆಂಟ್ ಪ್ರೊಫೆಸರ್ -03
    ಟೆಕ್ನಿಕಲ್ ಅಸಿಸ್ಟೆಂಟ್ – 01
    ಫಸ್ಟ್‌ ಡಿವಿಜಿನಲ್ ಅಸಿಸ್ಟೆಂಟ್ – 01
    ಸೆಕೆಂಡ್ ಡಿವಿಜಿನಲ್ ಅಸಿಸ್ಟೆಂಟ್-ಕಮ್ ಕಂಪ್ಯೂಟರ್ ಅಪರೇಟರ್- 01
    ಅಟೆಂಡರ್ – 01
    ಪಿಯೋನ್ – 01

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 26-04-2021

    ಅರ್ಜಿ ಶುಲ್ಕ : ರೂ.100/- ಡಿ.ಡಿ.ಯನ್ನು ನಿರ್ದೇಶಕರು, ವಿ.ವಿ.ಎಸ್ ಮೀಡಿಯಾ ಪ್ರೈ.ಲಿ‌ ಕಲಬುರಗಿ ಇವರ ಹೆಸರಿಗೆ ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಲು ಸೂಚಿಸಲಾಗಿದೆ.

    ಎಸ್. ಎಸ್.ವಿ.ಪಿ.ಜಿ.ಡಿಪ್ಲೋಮಾ ನಾಟಕ ಸಾಹಿತ್ಯ ಮತ್ತು ರಂಗಭೂಮಿ ಕಾಲೇಜು, ಫ್ಲಾಟ್ ನಂ.85, ಪ್ರೆಸ್ ಕ್ಲಬ್ ಆಫ್ ಗುಲಬರಗಾ ಬಿಲ್ಡಿಂಗ್, ಎಸ್.ಎಸ್.ವಿ.ಕೋಡ್ಲಾ ಕಾಲನಿ, ಕುಸನೂರು ರಸ್ತೆ, ಕಲಬುರಗಿ.

    ವೇತನ ಶ್ರೇಣಿ UGC, ಸ್ಕೇಲ್ ಇರುತ್ತದೆ. ಪರವಾನಗಿ ಅನುಮೋದನೆ ಶಿಕ್ಷಣ ಇಲಾಖೆಗೆ ಒಳಪಟ್ಟಿರುತ್ತದೆ.

  • ಸರಕಾರಿ ಕಚೇರಿಗಳ ಸಮಯ ಬದಲಾವಣೆ

    ಸರಕಾರಿ ಕಚೇರಿಗಳ ಸಮಯ ಬದಲಾವಣೆ

    ಬಿಸಿಲಿನ ತಾಪಮಾನ ಗರಿಷ್ಠಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸರಕಾರಿ ಕಚೇರಿಗಳಲ್ಲಿ ಸಮಯದ ಬದಲಾವಣೆ ಮಾಡಲು ಸರಕಾರದ ಅಧೀನ ಕಾರ್ಯದರ್ಶಿ ಬಿ ಎಸ್ ರವಿಕುಮಾರ್‌ ಆದೇಶವನ್ನು ಹೊರಡಿಸಿದ್ದಾರೆ.

    ಕಲಬುರಗಿ, ಬೀದರ್, ಯಾದಗಿರಿ, ಬಳ್ಳಾರಿ, ರಾಯಚೂರು, ವಿಜಯನಗರ, ಕೊಪ್ಪಳ ಮತ್ತು ಬೆಳಗಾವಿ ವಿಭಾಗದ ವಿಜಯಪುರ ಮತ್ತು ಬಾಗಲಕೋಟ ಜಿಲ್ಲಗಳಲ್ಲಿ ಸರಕಾರಿ ಕಚೇರಿಗಳ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.

    ಈ ಮೇಲಿನ ಸರಕಾರಿ ಕಚೇರಿಗಳು ಏ.12 ರಿಂದ ಮೇ. 31 ರವರೆಗೆ ಬದಲಾದ ವೇಳಾಪಟ್ಟಿ ಪ್ರಕಾರದಲ್ಲಿ ಕೆಲಸ ನಿರ್ವಹಿಸಲಿದೆ. ಸರಕಾರಿ ಕಚೇರಿಗಳ ಕೆಲಸದ ಸಮಯವು ಬೆಳಗ್ಗೆ 8 ರಿಂದ ಮಧ್ಯಾಹ್ನ 1.30 ರವರೆಗೆ ಮಾತ್ರ ಇರಲಿದೆ.

    ಕೊರೊನಾ ತುರ್ತು ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ನಿರ್ದೇಶನದಂತೆ ಕೆಲಸವನ್ನು ನಿರ್ವಹಿಸಲು ತಯಾರಿರಬೇಕು ಎಂದು ಸರಕಾರದ ಅಧೀನ ಕಾರ್ಯದರ್ಶಿ ತಿಳಿಸಿದ್ದಾರೆ.

  • KSET ಅರ್ಹತಾ ಪರೀಕ್ಷೆ ಮುಂದೂಡಿಕೆ

    KSET ಅರ್ಹತಾ ಪರೀಕ್ಷೆ ಮುಂದೂಡಿಕೆ

    ಮೈಸೂರು ವಿಶ್ವವಿದ್ಯಾಲಯವು ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯು ದಿನಾಂಕ 11.04.2021 ರಂದು ನಡೆಯಬೇಕಾಗಿದ್ದು, ಮುಂದೂಡಿಕೆಯಾಗಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಶನಿವಾರ ಹೊರಬಿದ್ದಿದೆ. ಮುಂದಿನ ಕೆಸೆಟ್ ಪರೀಕ್ಷಾ ದಿನಾಂಕವನ್ನು ಶೀಘ್ರದಲ್ಲೇ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು.

    ಎಪ್ರಿಲ್ 11, 2021ರಂದು ವಿಶ್ವವಿದ್ಯಾಲಯವು ಕೆಸೆಟ್ ಪರೀಕ್ಷೆಯನ್ನು ನಡೆಸಲು ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆ ಕಾರಣಾಂತರಗಳಿಂದ ಕೆಸೆಟ್ ಪರೀಕ್ಷೆಯನ್ನು ಮುಂದೂಡಲು ನಿರ್ಧರಿಸಲಾಗಿದೆ. ಮುಂದಿನ ಕೆಸೆಟ್ ಪರೀಕ್ಷಾ ದಿನಾಂಕವನ್ನು ಶೀಘ್ರದಲ್ಲೇ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

  • ಪ್ರಾದೇಶಿಕ ಆಯುಕ್ತರ ಕಾರ್ಯಾಲಯ : ಹುದ್ದೆಗಳಿಗೆ ನೇಮಕ

    ಪ್ರಾದೇಶಿಕ ಆಯುಕ್ತರ ಕಾರ್ಯಾಲಯ : ಹುದ್ದೆಗಳಿಗೆ ನೇಮಕ

    ಪ್ರಾದೇಶಿಕ ಆಯುಕ್ತರ ಕಾರ್ಯಾಲಯ ಬೆಳಗಾವಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ‌. ವಿವರಗಳು ಈ ಕೆಳಗಿನಂತಿವೆ:

    ಹುದ್ದೆ: ಅಸಿಸ್ಟೆಂಟ್ ಪ್ರೊಗ್ರಾಮರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಿದೆ.

    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 05-04-2021
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03-05-2021(5pm)

    ವಿದ್ಯಾರ್ಹತೆ : ಬಿಇ( ಸಿಎಸ್) ಅಥವಾ ಎಂಸಿಎ ವಿದ್ಯಾರ್ಹತೆಯನ್ನು ಹೊಂದಿರಬೇಕು.

    ವಯೋಮಿತಿ: ಅಭ್ಯರ್ಥಿಗಳು ನೇಮಕಾತಿ ನಿಯಮಾನುಸಾರ ವಯೋಮಿತಿ ಹೊಂದಿರಬೇಕು.

    ಅರ್ಜಿ ಶುಲ್ಕ: ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.

    ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ಡೌನ್‌ಲೋಡ್ ಮಾಡಿಕೊಂಡು, ಭರ್ತಿ ಮಾಡಿ ಈ ಕೆಳಗಿನ ವಿಳಾಸಕ್ಕೆ ದಿನಾಂಕ 03-05-2021 ರೊಳಗಾಗಿ ಸ್ಪೀಡ್ ಪೋಸ್ಟ್ ಅಥವಾ ರಿಜಿಸ್ಟರ್ ಪೋಸ್ಟ್ ಮೂಲಕ ಸಲ್ಲಿಸಬೇಕು.

    ವಿಳಾಸ :
    Office of the Regional Commissioner, Belagavi – 590002, Karnataka

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • ಅನುಕಂಪದ ನೌಕರಿ : ಬದಲಾವಣೆ ತಂದ ಸರಕಾರ

    ಅನುಕಂಪದ ನೌಕರಿ : ಬದಲಾವಣೆ ತಂದ ಸರಕಾರ

    ಸರಕಾರಿ ನೌಕರರು ಅಕಾಲಿಕ ಮರಣಕ್ಕೀಡಾದ ಸಂದರ್ಭದಲ್ಲಿ ಅನುಕಂಪ ಆಧಾರಿತ ಹುದ್ದೆಗಳನ್ನು ಮೃತರ ಮಗಳಿಗೂ ನೀಡಬಹುದು ಎಂಬ ಆದೇಶವನ್ನು ರಾಜ್ಯ ಸರಕಾರ ಹೊರಡಿಸಿದೆ.

    ಕರ್ನಾಟಕ ಸಿವಿಲ್ ಸೇವಾ(ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು 1966 ಕ್ಕೆ ತಿದ್ದುಪಡಿ ತಂದಿದ್ದು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಶುಕ್ರವಾರ ತಿಳಿಸಿದೆ.

    ಮೃತ ಸರಕಾರಿ ನೌಕರರ ಪತಿ ಅಥವಾ ಪತ್ನಿ ಸೂಚಿಸುವ ಅವಿವಾಹಿತ, ವಿವಾಹಿತ ಅಥವಾ ವಿಚ್ಛೇಧಿತ ಮಗಳಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗವನ್ನು ನೀಡಬಹುದು ಎಂಬುದಾಗಿದೆ.

    ಮೃತ ನೌಕರರು ಅವಿವಾಹಿತರಾಗಿದ್ದರೆ ಅವರ ತಂದೆ ಅಥವಾ ತಾಯಿ ಸೂಚಿಸಿದ ಸಹೋದರ ಅಥವಾ ಸಹೋದರಿಯನ್ನು ನೇಮಕಾತಿ ಮಾಡಲು ಅವಕಾಶವಿದೆ. ಒಂದು ವೇಳೆ ತಂದೆ ತಾಯಿಯೂ ಮೃತಪಟ್ಟಿದ್ದರೆ ವಯಸ್ಸಿನ ಆಧಾರದ ಮೇಲೆ ಹಿರಿಯ ಸಹೋದರ ಅಥವಾ ಸಹೋದರಿಗೆ ಅನುಕಂಪದ ಆಧಾರದ ಮೇಲೆ ಕೆಲಸ ನೀಡಲು ಅವಕಾಶವನ್ನು ಕಲ್ಪಿಸಲಾಗಿದೆ.

    ಮೃತ ಪುರುಷ ವಿವಾಹಿತನಾಗಿದ್ದರೆ ಆತನ ಮೇಲೆ ಅವಲಂಬಿತರಾಗಿದ್ದ ಆತನ ಪತ್ನಿ, ಮಗ ಮತ್ತು ಮಗಳು ಅರ್ಹರಾಗಿರುತ್ತಾರೆ. ಮೃತನ ಪತ್ನಿಯು ಅರ್ಹರಾಗಿಲ್ಲದಿದ್ದರೆ ಅವರು ಸೂಚಿಸಿದ ಮಗ ಅಥವಾ ಮಗಳನ್ನು ನೇಮಕಾತಿ ಮಾಡಿಕೊಳ್ಳಲು ಅವಕಾಶವಿದೆ.

    ವಿವಾಹಿತ ಸರಕಾರಿ ಮಹಿಳಾ ಉದ್ಯೋಗಿ ಮೃತಪಟ್ಟರೆ ಆಕೆಯ ಮೇಲೆ ಅವಲಂಬಿತರಾಗಿರುವ ಮಗ, ಮಗಳು ಅಥವಾ ಪತಿಯು ಅರ್ಹರಾಗಿರುತ್ತಾರೆ. ಅವಿವಾಹಿತೆಯಾಗಿದ್ದರೆ ಆಕೆಯೊಂದಿಗೆ ವಾಸವಿದ್ದ ಸಹೋದರ ಅಥವಾ ಸಹೋದರಿ ಅರ್ಹರಾಗಿರುತ್ತಾರೆ.

    ಮೃತ ನೌಕರರ ಪತಿ ಅಥವಾ ಪತ್ನಿ ಈಗಾಗಲೇ ನಿಧನರಾಗಿದ್ದರೆ ಮಕ್ಕಳು ಅಪ್ರಾಪ್ತರಾಗಿದ್ದರೆ 2 ವರ್ಷದೊಳಗೆ 18 ವರ್ಷ ಪೂರೈಸುವವರಿಗೆ ಅವಕಾಶ ನೀಡಬಹುದು. 18 ವರ್ಷ ತುಂಬಿದ ಬಳಿಕ ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರಿಗೆ ಅರ್ಜಿ ಸಲ್ಲಿಸಲು ಎರಡು ವರ್ಷ ಕಾಲಾವಕಾಶ ನೀಡಬೇಕು.

    ಅಪ್ರಾಪ್ತ ಮಕ್ಕಳ ವಯಸ್ಸು ಸೂಕ್ತವಾಗಿಲ್ಲದಿದ್ದರೆ ಅವರೊಂದಿಗೆ ವಾಸಿಸುವ ಹಾಗೂ ಅವರನ್ನು ಪೋಷಿಸುವ ಕಾನೂನಿನ ಪ್ರಕಾರ ಪ್ರಮಾಣೀಕೃತ ಪೋಷಕರು ಅರ್ಹರಾಗುತ್ತಾರೆ ಎಂದು ತಿಳಿಸಲಾಗಿದೆ.

  • ECIL: ಮೈಸೂರಿನಲ್ಲಿ 111 ವಿವಿಧ ಹುದ್ದೆಗಳಿಗೆ ನೇಮಕ

    ECIL: ಮೈಸೂರಿನಲ್ಲಿ 111 ವಿವಿಧ ಹುದ್ದೆಗಳಿಗೆ ನೇಮಕ

    ಎಲೆಕ್ಟ್ರಾನಿಕ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ ( ಇಸಿಐಎಲ್) ನಲ್ಲಿ ವಿವಿಧ ಹುದ್ದೆಗಳಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, 17 ಹಾಗೂ 18 ಎಪ್ರಿಲ್ ದಿನಾಂಕದಂದು ನಡೆಯಿವ ಸಂದರ್ಶನದಲ್ಲಿ ಭಾಗವಹಿಸಬಹುದು. ಒಟ್ಟು ಹುದ್ದೆಗಳ ವಿವರ, ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ವಿಧಾನ ಅರ್ಜಿ ಶುಲ್ಕ ಇತ್ಯಾದಿ ವಿವರಗಳನ್ನು ಮುಂದೆ ನೀಡಲಾಗಿದೆ.

    ಹುದ್ದೆ: ಜ್ಯೂನಿಯರ್ ಆರ್ಟಿಸನ್, ಆಫೀಸ್ ಅಸಿಸ್ಟೆಂಟ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ‌.

    ಹುದ್ದೆಗಳ ವಿವರ : ಸೈಂಟಿಫಿಕ್ ಅಸಿಸ್ಟೆಂಟ್ – 24
    ಜ್ಯೂನಿಯರ್ ಅರ್ಟಿಸನ್ – 86
    ಆಫೀಸ್ ಅಸಿಸ್ಟೆಂಟ್ -1

    ಹುದ್ದೆ ಸ್ಥಳ : ಮೈಸೂರು – ಕರ್ನಾಟಕ

    ನೋಟಿಫಿಕೇಶನ್ ರಿಲೀಸ್ ಆದ ದಿನಾಂಕ : 16-04-2021

    ಸಂದರ್ಶನ ದಿನಾಂಕ:
    ಸೈಂಟಿಫಿಕ್ ಅಸಿಸ್ಟೆಂಟ್ – 18-04-2021
    ಜ್ಯೂನಿಯರ್ ಅರ್ಟಿಸನ್ – 17-04-2021
    ಆಫೀಸ್ ಅಸಿಸ್ಟೆಂಟ್ -18-04-2021

    ವಿದ್ಯಾರ್ಹತೆ: ಸೈಂಟಿಫಿಕ್ ಅಸಿಸ್ಟೆಂಟ್ ಹುದ್ದೆಗೆ 12th, ಡಿಪ್ಲೋಮಾ, ಬಿಎಸ್ಸಿ ವಿದ್ಯಾರ್ಹತೆ ಹೊಂದಿರಬೇಕು.
    ಜ್ಯೂನಿಯರ್ ಅರ್ಟಿಸನ್ ಹುದ್ದೆಗೆ 10th, 12th, ಐಟಿಐ ತೇರ್ಗಡೆ ಹೊಂದಿರಬೇಕು.
    ಆಫೀಸ್ ಅಸಿಸ್ಟೆಂಟ್ ಹುದ್ದೆಗೆ ಬಿಎಸ್ಸಿ, ಬಿಎ,ಬಿಕಾಂ ವಿದ್ಯಾರ್ಹತೆಯನ್ನು ಹೊಂದಿರಬೇಕು.

    ವೇತನ : ಸೈಂಟಿಫಿಕ್ ಅಸಿಸ್ಟೆಂಟ್ ಹುದ್ದೆಗೆ ರೂ.20,802/-, ಜ್ಯೂನಿಯರ್ ಅರ್ಟಿಸನ್ ರೂ.18,882/- ,
    ಆಫೀಸ್ ಅಸಿಸ್ಟೆಂಟ್ ಹುದ್ದೆಗೆ 20,802/- ಮಾಸಿಕ ವೇತನವಿರುತ್ತದೆ.

    ಅರ್ಜಿ ಶುಲ್ಕ :ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.

    ವಯೋಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ 25 ವರ್ಷ ಮೀರಿರಬಾರದು.

    ಒಬಿಸಿ – 3 ವರ್ಷ, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ -5 ವರ್ಷ, ಪಿಡ್ಬ್ಯುಡಿ -10 ವರ್ಷ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ಸಂದರ್ಶನ ವಿಳಾಸ: Atomic Energy Central School, RMP Yelwal Colony, Hunsur Road, Yelwal Post, Mysore – 571130 on 17th & 18th April 2021.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ