Category: Karnataka Jobs

Karnataka State Govt Jobs, KPSC Notifications, Bangalore Metro Jobs, KSRTC Recruitment, SSC Jobs in Karnataka, RRB Bangalore Recruitment, Railway Jobs, Bank Jobs in Karnataka, PDO Jobs in Karnataka, Data Entry Jobs, District court jobs, Karnataka court jobs, VA Recruitment etc all Karnataka govt job updates sarakarijobs.com

  • ಕೆ.ಎಂ‌ಎಫ್ : ಮದರ್ ಡೇರಿ : ಹುದ್ದೆಗೆ ನೇಮಕ

    ಕೆ.ಎಂ‌ಎಫ್ : ಮದರ್ ಡೇರಿ : ಹುದ್ದೆಗೆ ನೇಮಕ

    ಮದರ್ ಡೇರಿ (ಕಹಾಮ ಘಟಕ) ಯಲಹಂಕದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ/ ಸಿಬ್ಬಂದಿ/ಗುತ್ತಿಗೆ ಕಾರ್ಮಿಕರಿಗೆ ಪ್ರತಿದಿನ ಡೇರಿಯಲ್ಲಿರುವ ಔದ್ಯೋಗಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಕೀಯ ಶಿಶೃಷೆ ಸೇವೆಯನ್ನು ನೀಡಲು ಕಾನೂನಿನ ಅನ್ವಯ ಅರ್ಹ ನೊಂದಾಯಿತ ವೈದ್ಯರ ಸೇವೆಯನ್ನು ಸಮಾಲೋಚನಾ ಶುಲ್ಕದ ಆಧಾರದಲ್ಲಿ ಪಡೆಯಲು ಇಚ್ಛಿಸಿದ್ದು ನೇರವಾಗಿ ಆಸಕ್ತಿಯುಳ್ಳ ಅಭ್ಯರ್ಥಿಗಳಿಂದ / ಸೇವೆ ನೀಡಲಿಚ್ಛಿಸುವ ನರ್ಸಿಂಗ್ ಹೊಂಗಳಿಂದ ಸ್ವಯಂ ಅರ್ಜಿಗಳನ್ನು ಆಹ್ವಾನಿಸಲಾಗಿದೆ

    ಹುದ್ದೆ : ವೈದ್ಯಾಧಿಕಾರಿಗಳು : ಎಂಬಿಬಿಎಸ್ ಪದವಿ ಹೊಂದಿರಬೇಕು.

    ಪುರುಷ ಮತ್ತು ಮಹಿಳೆ -01 ಸಂಖ್ಯೆ

    ಆಸಕ್ತಿಯುಳ್ಳ ಅಭ್ಯರ್ಥಿಗಳು/ಸಂಸ್ಥೆಗಳು ಸಂಬಂಧಿಸಿದ ಪೂರಕವಾದ ಎಲ್ಲಾ ದಾಖಲೆಗಳೊಂದಿಗೆ ದಿನಾಂಕ 28-05-2021 ರ ಒಳಗಾಗಿ ನಿರ್ದೇಶಕರು, ಮದರ್ ಡೇರಿ, ಜಿ.ಕೆ.ವಿ.ಕೆ ಅಂಚೆ, ಯಲಹಂಕ, ಬೆಂಗಳೂರು -560065 ಇವರಿಗೆ ಅಂಚೆ ಮೂಲಜ ಅಥವಾ ಇ-ಮೇಲ್ : [email protected] ನಲ್ಲಿ ಸಲ್ಲಿಸಲು ಸೂಚಿಸಿದೆ.

    ಹೆಚ್ಚಿನ ಮಾಹಿತಿಗಾಗಿ 9606012601 ವ್ಯವಸ್ಥಾಪಕರು (ಆಡಳಿತ) ರವರನ್ನು ಸಂಪರ್ಕಿಸಬಹುದಾಗಿದೆ.

  • ಜಿಲ್ಲಾ ಪಂಚಾಯತ್ ಚಾಮರಾಜನಗರ: 149 ಹುದ್ದೆ: ಈ ಕೂಡಲೇ ಅರ್ಜಿ ಸಲ್ಲಿಸಿ

    ಜಿಲ್ಲಾ ಪಂಚಾಯತ್ ಚಾಮರಾಜನಗರ: 149 ಹುದ್ದೆ: ಈ ಕೂಡಲೇ ಅರ್ಜಿ ಸಲ್ಲಿಸಿ

    ಕೋವಿಡ್ -19 ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ, ಚಾಮರಾಜನಗರ ಈ ಕಚೇರಿಯ ಅಧೀನ ಸಂಸ್ಥೆಗಳಲ್ಲಿ ಖಾಲಿ ಇರುವ ಕಿರಿಯ ಮಹಿಳಾ ಆರೋಗ್ಯ ಸಹಾಯಕ -111 ಹುದ್ದೆಗಳು ಹಾಗೂ ಗ್ರೂಪ್ ಡಿ-29 ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನಿಯಮಾನುಸಾರ ಮೆರಿಟ್ ಕಂ ರೋಸ್ಟರ್ ಮೂಲಕ ದಿನಾಂಕ : 30-09-2021 ರವರೆಗೆ ಅಥವಾ ನೇರ ನೇಮಕಾತಿ ಹುದ್ದೆಗಳು ಭರ್ತಿಯಾಗುವವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ನೇಮಕಾತಿ ಮಾಡಲು ಹಾಗೂ ಈ ಕಚೇರಿಯ ಅಧೀನ ತಾಲ್ಲೂಕು ಆಸ್ಪತ್ರೆಯಲ್ಲಿ ಕೋವಿಡ್-19 ಸೋಂಕಿತರಿಗೆ ಚಿಕಿತ್ಸೆ ನೀಡಲು ‌ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಹುದ್ದೆ : ವೈದ್ಯಾಧಿಕಾರಿ – 03 ಹುದ್ದೆಗಳು
    ಶುಶ್ರೂಷಾಧಿಕಾರಿ : 03 ಹುದ್ದೆಗಳು
    ಕಿರಿಯ ಆರೋಗ್ಯ ಸಹಾಯಕರು ( ಮಹಿಳೆ) : 111 ಹುದ್ದೆಗಳು
    ಗ್ರೂಪ್ ಡಿ : 32 (03+29)

    ಸಂದರ್ಶನ ದಿನಾಂಕ : ವೈದ್ಯಾಧಿಕಾರಿ ಹಾಗೂ ಶುಶ್ರೂಷಾಧಿಕಾರಿ ಹುದ್ದೆಗಳಿಗೆ 15-05-2021 ಸಮಯ ಬೆಳಿಗ್ಗೆ 10.00 ಗಂಟೆಯಿಂದ ಮಧ್ಯಾಹ್ನ ‌2.00 ಗಂಟೆಯವರೆಗೆ.

    ಕಿರಿಯ ಆರೋಗ್ಯ ಸಹಾಯಕರು ( ಮಹಿಳೆ) ಹಾಗೂ ಗ್ರೂಪ್ ಡಿ ಹುದ್ದೆಗಳಿಗೆ ದಿನಾಂಕ 17-05-2021 ಸಮಯ ಬೆಳಿಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 2.00 ಗಂಟೆಯವರೆಗೆ

    ನೇರ ಸಂದರ್ಶನವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ, ಕೊಠಡಿ ಸಂಖ್ಯೆ :312, ಮೂರನೇ ಮಹಡಿ, ಜಿಲ್ಲಾಡಳಿತ ಭವನ, ಚಾಮರಾಜನಗರ ಇಲ್ಲಿ ಏರ್ಪಡಿಸಲಾಗಿದೆ.

  • RDPR : 2688 ಹುದ್ದೆ ಭರ್ತಿಗೆ ಕರಡು ಅಧಿಸೂಚನೆ

    RDPR : 2688 ಹುದ್ದೆ ಭರ್ತಿಗೆ ಕರಡು ಅಧಿಸೂಚನೆ

    ಕರ್ನಾಟಕ ಸರಕಾರವು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು.

    ಹುದ್ದೆ : ಮುಖ್ಯ ಇಂಜಿನಿಯರ್ -01
    ಅಧೀಕ್ಷಕ – 05
    ಕಾರ್ಯಪಾಲಕ ಅಭಿಯಂತರರು – 34
    ಸಹಾಯಕ ಕಾರ್ಯಪಾಲಕ ಅಭಿಯಂತರರು 1-147
    ಸಹಾಯಕ ಕಾರ್ಯಪಾಲಕ ಅಭಿಯಂತರರು 11- 37
    ಮುಖ್ಯ ಲೆಕ್ಕಾಧಿಕಾರಿ – 01
    ಸಹಾಯಕ ಇಂಜಿನಿಯರ್ 1 – 205
    ಪತ್ರಾಂಕಿತ ವ್ಯವಸ್ಥಾಪಕರು – 05
    ಅಧೀಕ್ಷಕರು – 40
    ಲೆಕ್ಕಾಧೀಕ್ಷಕರು – 34
    ಸಹಾಯಕ ಸಾಂಖ್ಯಿಕ ಅಧಿಕಾರಿ- – 05
    ಕಿರಿಯ ಇಂಜಿನಿಯರ್ -568
    ಸಾಂಖ್ಯಿಕ ನಿರೀಕ್ಷಕರು -05
    ಪ್ರಥಮ‌ ದರ್ಜೆ ಸಹಾಯಕರು-222
    ಪ್ರಥಮ ದರ್ಜೆ ಲೆಕ್ಕ ಸಹಾಯಕರು-32
    ಶೀಘ್ರಲಿಪಿಗಾರರು-38
    ದ್ವಿತೀಯ ದರ್ಜೆ ಸಹಾಯಕರು-320
    ಬೆರಳಚ್ಚುಗಾರರು-254
    ವಾಹನ ಚಾಲಕರು-216
    ಪಿಯೋನ್ – 466

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 14-05-2021

    ಈ ಮೇಲಿನ ‌ಹುದ್ದೆಗಳಿಗೆ ನೇರ ನೇಮಕಾತಿ, ವರ್ಗಾವಣೆ ಹಾಗೂ ಮುಂಬಡ್ತಿ ಮೂಲಕ ಅಗತ್ಯಕ್ಕೆ ತಕ್ಕ ಹಾಗೆ ನೇಮಕ ಮಾಡಲಾಗುತ್ತದೆ.

    ವಿದ್ಯಾರ್ಹತೆ : ಎಸ್ ಎಸ್ ಎಲ್ ಸಿ/ಪಿಯುಸಿ/ ಪದವಿ/ ಸ್ನಾತಕೋತ್ತರ ಪದವಿ/ ಇಂಜಿನಿಯರಿಂಗ್‌/ಐಟಿಐ ತೇರ್ಗಡೆ ಹೊಂದಿರಬೇಕು.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಕೆಳಗಿನ ವಿಳಾಸವನ್ನು ಸಂಪರ್ಕಿಸಬಹುದು.

    ಸರ್ಕಾರದ ಪ್ರಧಾನ ಕಾರ್ಯದರ್ಶಿ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬಹುಮಹಡಿಗಳ‌ ಕಟ್ಟಡ, ಡಾ.ಅಂಬೇಡ್ಕರ್ ವೀಧಿ, ಬೆಂಗಳೂರು – 560001

  • ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ರಾಮನಗರ : ವಿವಿಧ ಹುದ್ದೆ

    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ರಾಮನಗರ : ವಿವಿಧ ಹುದ್ದೆ

    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ರಾಮನಗರದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ವಿವರಗಳು ಈ ಕೆಳಗಿನಂತಿವೆ :

    ಸಂದರ್ಶನ ದಿನಾಂಕ 13-05-2021

    ಹುದ್ದೆ : ಶುಶ್ರೂಷಕರು, ಮಕ್ಕಳ ತಜ್ಞರು, ವೈದ್ಯಾಧಿಕಾರಿಗಳು, ಆಡಿಯೋ ಮೆಟ್ರಿಕ್ ಅಸಿಸ್ಟೆಂಟ್, ಡಯೆಟ್ ಕೌನ್ಸಿಲರ್ ( ಎನ್ ಆರ್ ಸಿ) , ಕಿ.ಮ.ಹ.ಸ, ಹಿ.ಮ.ಹ.ಸ, ಎಸ್.ಟಿ.ಎಲ್.ಎಸ್, ತಜ್ಞ ವೈದ್ಯರು

    ವಯೋಮಿತಿ : ಹುದ್ದೆಗಳಿಗನುಸಾರವಾಗಿ ಅಭ್ಯರ್ಥಿಗಳಿಗೆ 40 ರಿಂದ ಗರಿಷ್ಟ 70 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ನೇಮಕಾತಿ ನಿಯಮಾನುಸಾರ ಅಭ್ಯರ್ಥಿಗಳಿ ಗೆ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ವೇತನ : ವಿವಿಧ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.10,000/- ರಿಂದ 1,10,000/- ರವರೆಗೆ ವೇತನವಿರುತ್ತದೆ.

  • ಕೃಷಿ ವಿದ್ಯಾಲಯ ಧಾರವಾಡ : ಟೀಚರ್ ಹುದ್ದೆಗೆ ಅರ್ಜಿ ಆಹ್ವಾನ

    ಕೃಷಿ ವಿದ್ಯಾಲಯ ಧಾರವಾಡ : ಟೀಚರ್ ಹುದ್ದೆಗೆ ಅರ್ಜಿ ಆಹ್ವಾನ

    ಧಾರವಾಡ ಮತ್ತು ನಿಪ್ಪಾಣಿ ಡಿಪ್ಲೋಮಾ ( ಕೃಷಿ) ಕಾಲೇಜಿನಲ್ಲಿ ಹಾಗೂ ಎರಡನೇ ವರ್ಷದ ಎರಡನೇ ಸೆಮಿಸ್ಟರ್ ನ ಡಿಪ್ಲೋಮಾ (ಕೃಷಿ) ವಿದ್ಯಾರ್ಥಿಗಳಿಗೆ ಈ ಕೆಳಗೆ ಸೂಚಿಸಿರುವ ಕೋರ್ಸುಗಳನ್ನು ಬೋಧಿಸಲು ಈ ಕೆಳಗಿನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

    ಹುದ್ದೆ: ಪಾರ್ಟ್ ಟೈಂ ಟೀಚರ್

    ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಂಎಸ್ಸಿ/ಎಂ.ವಿ.ಎಸ್ಸಿ/ಪಿಎಚ್ಡಿ ಇನ್ ಅನಿಮಲ್ ಸೈನ್ಸ್ / ವೆಟರ್ನರಿ ಸೈನ್ಸ್ ಸಬ್ಜೆಕ್ಟ್ ಹೊಂದಿರಬೇಕು. ಈ ಹುದ್ದೆಗೆ ಮಾಸಿಕ ರೂ.40,000/- ವೇತನವಿರುತ್ತದೆ.

    ಅರೆಕಾಲಿಕ ಉಪನ್ಯಾಸಕರನ್ನು 2020-21 ರ ಸೆಮಿಸ್ಟರ್ ಅವಧಿ‌179 ದಿವಸಗಳ ಅವಧಿಗೆ ಮೀರದಂತೆ ತಾತ್ಕಾಲಿಕವಾಗಿ ನೇಮಿಸಿಕೊಳ್ಳಲಾಗುವುದು. ಸಂದರ್ಶನವು ದಿನಾಂಕ 19-05-2021 ರಂದು ಬೆಳಿಗ್ಗೆ 11.00 ಗಂಟೆಗೆ ಡೀನ್ ( ಸ್ನಾತಕೋತ್ತರ) ಕಚೇರಿ, ಕೃ.ವಿ.ವಿ. ಧಾರವಾಡದಲ್ಲಿ ಆನ್ಲೈನ್ ( ಒನ್ಲೈನ್) ಮೂಲಕ ನಡೆಯಲಿದೆ. ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯ ಬಯೋಡೇಟಾ, ತಮ್ಮ ಮೂಲ ಅಂಕಪಟ್ಟಿಗಳು ಮತ್ತು ಕೆಲಸದ ಅನುಭವ ಪ್ರಮಾಣಪತ್ರಗಳನ್ನು ಈ ಇ-ಮೇಲ್ [email protected] ವಿಳಾಸಕ್ಕೆ ದಿನಾಂಕ 18-05-2022 ಮುಂಜಾನೆ 10:00 ರ ಒಳಗಾಗಿ ಸ್ಕ್ಯಾನ್ ಪ್ರತಿ ಸಲ್ಲಿಸತಕ್ಕದ್ದು.

    ಸಂದರ್ಶನದ ಆನ್ಲೈನ್ (ONLINE) -zoom link I’d ಮತ್ತು password ನ್ನು ದಿನಾಂಕ 18-05-2021 ರ ಸಾಯಂಕಾಲ 5:00 ರ ಒಳಗಾಗಿ ತಿಳಿಸಲಾಗುವುದು.

  • BSCL : ಹುದ್ದೆ

    BSCL : ಹುದ್ದೆ

    ಬೆಳಗಾವಿ ಸ್ಮಾರ್ಟ್ ಸಿಟಿ ಲಿಮಿಟೆಡ್ (ಬಿಎಸ್ ಸಿಎಲ್) ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಹುದ್ದೆ : ಕಂಪನಿ ಕಾರ್ಯದರ್ಶಿ -01 ಹುದ್ದೆ

    ನೇರ ಸಂದರ್ಶನ ವಿಳಾಸ : ವ್ಯವಸ್ಥಾಪಕ ನಿರ್ದೇಶಕರು, ಬೆಳಗಾವಿ ಸ್ಮಾರ್ಟ್ ಸಿಟಿ ಲಿಮಿಟೆಡ್ ಬೆಳಗಾವಿ ಕಚೇರಿ.

    ದಿನಾಂಕ 18-05-2021 ಬೆಳಿಗ್ಗೆ 10-30 ಕ್ಕೆ (ವಿಡಿಯೋ ಕಾನ್ಫರೆಯ ಮೂಲಕ) ಸಂದರ್ಶನದಲ್ಲಿ ಭಾಗಿಯಾಗಬಹುದು.