Category: Karnataka Jobs

Karnataka State Govt Jobs, KPSC Notifications, Bangalore Metro Jobs, KSRTC Recruitment, SSC Jobs in Karnataka, RRB Bangalore Recruitment, Railway Jobs, Bank Jobs in Karnataka, PDO Jobs in Karnataka, Data Entry Jobs, District court jobs, Karnataka court jobs, VA Recruitment etc all Karnataka govt job updates sarakarijobs.com

  • ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಮಂಡ್ಯ : ಹುದ್ದೆಗಳ ನೇಮಕ

    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಮಂಡ್ಯ : ಹುದ್ದೆಗಳ ನೇಮಕ

    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಮಂಡ್ಯ ಇಲ್ಲಿನ ಅಧೀನ ‌ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಕೋವಿಡ್ 19 ಸಾಂಕ್ರಾಮಿಕ ರೋಗದ ನಿರ್ವಹಣೆ ಸಮಯದಲ್ಲಿ ರಚಿಸಲಾದ 06 ಐಸಿಯು ಬೆಡ್ ಗಳನ್ನು ಕಾರ್ಯಗತಗೊಳಿಸಿ ನಿರ್ವಹಿಸಲು ಹೆಚ್ಚುವರಿ ಮಾನವ ಸಂಪನ್ಮೂಲವನ್ನು ‌ದಿನಾಂಕ‌ 30-09-2021 ರವರೆಗೆ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ವೈದ್ಯಕೀಯ / ಅರೆ ವೈದ್ಯಕೀಯ ಸಿಬ್ಬಂದಿಗಳನ್ನು ಆಯ್ಕೆ ಮಾಡಲು ನೇರ ಸಂದರ್ಶನವನ್ನು ಹಮ್ಮಿಕೊಂಡಿದ್ದು, ಆಸಕ್ತರು ದಿನಾಂಕ 22-05-2021 ರಂದು ಬೆಳಿಗ್ಗೆ 11-00 ಗಂಟೆಯಿಂದ ಮಧ್ಯಾಹ್ನ 2-00 ಗಂಟೆಯ ಒಳಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕೊಠಡಿಯಲ್ಲಿ ನಡೆಯುವ ನೇರ ಸಂದರ್ಶನಕ್ಕೆ ಹಾಜರಾಗುವುದು.

    ಹುದ್ದೆ : ವೈದ್ಯಾಧಿಕಾರಿಗಳು

    ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ಮೂಲ ಅಂಕ ಪಟ್ಟಿಗಳು, ಎಲ್ಲಾ ಪ್ರಮಾಣ ಪತ್ರಗಳು, ವಿಳಾಸ ಪುರಾವೆ ಮತ್ತು ಗುರುತಿನ ಪುರಾವೆಗಳೊಂದಿಗೆ ಹಾಗೂ ಸದರಿ ದಾಖಲೆಗಳ 02 ಸೆಟ್ ಜೆರಾಕ್ಸ್ ಪ್ರತಿಗಳೊಂದಿಗೆ ಮೇಲೆ ತಿಳಿಸಿರುವ ದಿನಾಂಕದಂದು ನಿಗದಿತ ಸಮಯದೊಳಗೆ ಸಂದರ್ಶನಕ್ಕೆ ಹಾಜರಾಗುವುದು.

    ಹೆಚ್ಚಿನ ಮಾಹಿತಿಗಾಗಿ 08232-224027 ಇಲ್ಲಿ ಸಂಪರ್ಕಿಸಬಹುದು.

  • ಶಿಕ್ಷಣ ಇಲಾಖೆ ನಾನ್‌ ಟೀಚಿಂಗ್ ಪೋಸ್ಟ್‌ ನೇಮಕ ಶೀಘ್ರದಲ್ಲೇ

    ಶಿಕ್ಷಣ ಇಲಾಖೆ ನಾನ್‌ ಟೀಚಿಂಗ್ ಪೋಸ್ಟ್‌ ನೇಮಕ ಶೀಘ್ರದಲ್ಲೇ

    ಸಾರ್ವಜನಿಕ ಶಿಕ್ಷಣ ಇಲಾಖೆಯಡಿಯ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಶೀಘ್ರದಲ್ಲೇ ಎಸ್‌ಡಿಎ, ಎಫ್‌ಡಿಎ, ಗ್ರೂಪ್ ಡಿ ನೌಕರರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸುವ ಸಾಧ್ಯತೆ ಇದೆ.

    ಎಲ್ಲಾ ಶಾಲೆಗಳು ಕಾಲೇಜುಗಳು, ಕಛೇರಿಗಳಲ್ಲಿನ ಬೋಧಕೇತರ ನೌಕರರ ವೃಂದವಾರು ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು ಮತ್ತು ಗ್ರೂಪ್ ಡಿ ನೌಕರರ ವೃಂದದ ನಿಖರವಾದ ಖಾಲಿ ಹುದ್ದೆಗಳ ಮಾಹಿತಿಯನ್ನು ಸಾರ್ವಜನಿಕ ಇಲಾಖೆಯು ಕೇಳಿರಿವುದರಿಂದ ನಂತರದಲ್ಲಿ ಶಿಕ್ಷಣ ಇಲಾಖೆಯಡಿ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡುವ ಕಾರ್ಯವು ನಡೆಯಲಿದೆ.

    ಇದರ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ದಿನಾಂಕ 20-೦5-2021 ರೊಳಗೆ ದೃಢೀಕರಣದೊಂದಿಗೆ ಇ-ಮೇಲ್ [email protected] ಮೂಲಕ ಸಲ್ಲಿಸಲು ಸೂಚಿಸಲಾಗಿದೆ.

    ನಿಗದಿತ ನಮೂನೆಯಲ್ಲಿ ಖಾಲಿ ಹುದ್ದೆಗಳ ವಿವರಗಳನ್ನು ಸಲ್ಲಿಸಲು ಶಿಕ್ಷಣ ಇಲಾಖೆಯು ಸೂಚಿಸಿದೆ.

  • KSDA : 9264 ಹುದ್ದೆಗಳಿಗೆ ಅಧಿಸೂಚನೆ ಪ್ರಕಟ

    KSDA : 9264 ಹುದ್ದೆಗಳಿಗೆ ಅಧಿಸೂಚನೆ ಪ್ರಕಟ

    ಕರ್ನಾಟಕ ಕೃಷಿ ಸೇವೆಗಳು (ವೃಂದ ಮತ್ತು ನೇಮಕಾತಿ ) ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅಧಿಸೂಚನೆಯನ್ನು ಹೊರಡಿಸಿದೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು.

    ಹುದ್ದೆ : ಆಫೀಸರ್ಸ್, ಡೈರೆಕ್ಟರ್ಸ್, ಗ್ರೂಪ್‌ ಡಿ

    ಕೃಷಿ ಇಲಾಖೆಯ ಈ ಕೆಳಗಿನ ವಿವಿಧ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ ಅಧಿಸೂಚನೆ ಹೊರಬೀಳಲಿದ್ದು, ಈ ಇಲಾಖಾ ಹುದ್ದೆಗಳ ಆಸಕ್ತರು ಅಗತ್ಯ ತಯಾರಿಯನ್ನು ಆರಂಭಿಸ ಬಹುದು.

    ಕೃಷಿ ಆಯುಕ್ತರು – 1
    ಅಪರ ನಿರ್ದೇಶಕರು / ಜಂಟಿ ನಿರ್ದೇಶಕರು ( ಆಡಳಿತ ) -1

    ಮುಖ್ಯ ಲೆಕ್ಕಾಧಿಕಾರಿ ಮತ್ತು ಅರ್ಥಿಕ ಸಲಹೆಗಾರರು – 1
    ಕಾನೂನು ಅಧಿಕಾರಿ -1
    ಕಾರ್ಯ ನಿರ್ವಾಹಕ ಅಭಿಯಂತರರು (ಸಿವಿಲ್‌)-1
    ಉಪ ನಿರ್ದೇಶಕರು (ಸಾಂಖ್ಯಿಕ) -1
    ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು – 2
    ಸೀನಿಯರ್ ಪ್ರೊಗ್ರಾಮರ್ – 1
    ಸಹಾಯಕ ನಿರ್ದೇಶಕರು (ಸಾಂಖ್ಯಿಕ ) – 1
    ಸಹಾಯಕ ಅಭಿಯಂತರರು (ಸಿವಿಲ್ )- 2
    ಸಹಾಯಕ ಸಾಂಖ್ಯಿಕ ಅಧಿಕಾರಿ – 14
    ಸಾಂಖ್ಯಿಕ ನಿರೀಕ್ಷಕರು – 2

    ಒಟ್ಟು ಹುದ್ದೆ – 28

    ತಾಂತ್ರಿಕ ವೃಂದದ ಹುದ್ದೆಗಳು
    ಕೃಷಿ ನಿರ್ದೇಶಕರು -1
    ಅಪರ ಕೃಷಿ ನಿರ್ದೇಶಕರು – 8
    ಜಂಟಿ ಕೃಷಿ ನಿರ್ದೇಶಕರು -52
    ಉಪ ಕೃಷಿ ನಿರ್ದೇಶಕರು -86
    ಸಹಾಯಕ ಕೃಷಿ ನಿರ್ದೇಶಕರು – 416
    ಸಹಾಯಕ ಕೃಷಿ ನಿರ್ದೇಶಕರು ( ರೈತ ಮಹಿಳೆ) -51
    ಕೃಷಿ ಅಧಿಕಾರಿ – 1801
    ಕೃಷಿ ಅಧಿಕಾರಿ ( ರೈತ ಮಹಿಳೆ ) – 141
    ಸಹಾಯಕ ಕೃಷಿ ಅಧಿಕಾರಿ – 2099, ಕೃಷಿ ಸಹಾಯಕರು -49
    ಒಟ್ಟು ಹುದ್ದೆಗಳ ಸಂಖ್ಯೆ – 4707

    ಲಿಪಿಕ ಹುದ್ದೆಗಳ ವಿವರಗಳು ಈ ಕೆಳಗಿನಂತಿವೆ :
    ಆಡಳಿತಾಧಿಕಾರಿ -32
    ಸಹಾಯಕ ಆಡಳಿತ ಅಧಿಕಾರಿ – 44
    ಅಧೀಕ್ಷಕರು -362
    ಪ್ರಥಮ ದರ್ಜೆ ಸಹಾಯಕರು – 565
    ದ್ವಿತೀಯ ದರ್ಜೆ ಸಹಾಯಕರು – 630
    ಒಟ್ಟು ಹುದ್ದೆಗಳು – 1633

    ಪೋಷಕ ಸಿಬ್ಬಂದಿ ವೃಂದದ ಹುದ್ದೆಗಳು :
    ಮುಖ್ಯ ಕಲಾವಿದ ಮತ್ತು ಶ್ರವಣ – ದೃಶ್ಯ ತಜ್ಞ- 01
    ಗ್ರಂಥಪಾಲಕ – 1
    ನಕ್ಷೆಗಾರರು – 39
    ಮೆಕ್ಯಾನಿಕಲ್ ಪೋರ್ಮನ್ – 3
    ಹಿರಿಯ ಕಲಾವಿದ ಮತ್ತು ಛಾಯಾಗ್ರಾಹಕ – 01
    ಗ್ರಂಥಾಲಯ ಸಹಾಯಕ – 01
    ಶೀಘ್ರಲಿಪಿಗಾರರು – 80
    ಹಿರಿಯ ಬೆರಚ್ಚುಗಾರರು – 29
    ಹಿರಿಯ ವಾಹನ ಚಾಲಕ – 40
    ಸೀನಿಯರ್ ಕಂಪ್ಯೂಟರಿಸ್ಟ್ – 6
    ರೇಖಾಗಾರರು – 161
    ಪ್ರಾಜೆಕ್ಟ್ ಅಪರೇಟರ್- 1
    ಕೃಷಿ ಅನುಷ್ಠಾನ ಮೇಲ್ವಿಚಾರಕರು – 47
    ಬೆರಳಚ್ಚುಗಾರರು – 344
    ಪ್ರಯೋಗಶಾಲಾ ಸಹಾಯಕರು – 96
    ವಾಹನ ಚಾಲಕ – 277
    ಟೆಲಿಫೋನ್ ಅಪರೇಟರ್ -1
    ಕಂಪೋಸಿಟರ್ – 1
    ಪ್ರಿಂಟರ್ – 1
    ಬೈಂಡರ್ -1
    ಅಟೆಂಡರ್ – 141
    ಕಾರ್ಪೆಂಟ್ ಕಮ್ ಸ್ಮಿತ್ – 1
    ಬಾಣಸಿಗ- 65
    ಗ್ರೂಪ್ ಇ – 1306
    ಒಟ್ಟು ಹುದ್ದೆಗಳು -2644

    ಜಲಾನಯನ ಅಭಿವೃದ್ಧಿ ಇಲಾಖೆ ಹುದ್ದೆಗಳು ಈ ಕೆಳಗಿನಂತಿವೆ :
    ಜಲಾನಯನ ಅಭಿವೃದ್ಧಿ ಆಯುಕ್ತರು -1
    ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ – 1
    ಜಲಾನಯನ ಅಭಿವೃದ್ಧಿ ನಿರ್ದೇಶಕರು – 1
    ವ್ಯವಸ್ಥಾಪಕ ನಿರ್ದೇಶಕರು ( ಅಂತರಗಂಗಾ ಸೂಕ್ಷ್ಮ ನೀರಾವರಿ ನಿಗಮ ) -1
    ಜಂಟಿ ನಿರ್ದೇಶಕರು ( ಪಶು ವೈದ್ಯಕೀಯ )-1
    ಜಂಟಿ ನಿರ್ದೇಶಕರು ( ತೋಟಗಾರಿಕೆ )-1
    ಮುಖ್ಯ ಲೆಕ್ಕಾಧಿಕಾರಿ ಮತ್ತು ಆರ್ಥಿಕ ಸಲಹೆಗಾರರು – 1
    ಉಪ ನಿರ್ದೇಶಕರು (ಸಾಂಖ್ಯಿಕ ) -1
    ಆಡಳಿತಾಧಿಕಾರಿ ( ಕೆಎಸ್‌- ಕಿರಿಯ ಶ್ರೇಣೀ ) – 1
    ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ – 17
    ಸಹಾಯಕ ನಿರ್ದೇಶಕರು ( ಪಶು ಸಂಗೋಪನೆ ) -1
    ಲೆಕ್ಕಾಧಿಕಾರಿ – 1
    ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು – 17
    ಹೈಡ್ರೋಜಿಯೋಲಜಿಸ್ಟ್ – 1
    ಸಹಾಯಕ ನಿರ್ದೇಶಕರು – 1
    ವಲಯ ಅರಣ್ಯ ಅಧಿಕಾರಿ – 29
    ಸಹಾಯಕ ತೋಟಗಾರಿಕೆ ಅಧಿಕಾರಿ – 30
    ಅಸಿಸ್ಟೆಂಟ್ ಜಿಯೋಲಾಜಿಸ್ಟ್ – 2
    ಪರಿಸರ ತಜ್ಞ – 1
    ಪ್ರಾಜೆಕ್ಟ್ ಸೋಷಿಯಾಲಜಿಸ್ಟ್ -1
    ಸಹಾಯಕ ಸಾಂಖ್ಯಿಕ ಅಧಿಕಾರಿ – 2
    ಪ್ರಥಮ ದರ್ಜೆ ಸಹಾಯಕ – 24
    ತೋಟಗಾರಿಕೆ ಸಹಾಯಕ- 58
    ಉಪ ಅರಣ್ಯ ಅಧಿಕಾರಿ – 58, ಒಟ್ಟು ಹುದ್ದೆ 258

    ಈ ಮೇಲಿನ ಎಲ್ಲಾ ಹುದ್ದೆಗಳ ಪೈಕಿ ಖಾಯಂ ಹುದ್ದೆಗಳು- 738
    ತಾತ್ಕಾಲಿಕ ಹುದ್ದೆಗಳ ಸಂಖ್ಯೆ – 8244
    ನಿಯೋಜನೆ ಆಧಾರಿತ ಹುದ್ದೆಗಳ ಸಂಖ್ಯೆ – 2820
    ಒಟ್ಟು ಹುದ್ದೆಗಳ ಸಂಖ್ಯೆ – 9264

    ಮೇಲಿನ ಹುದ್ದೆಗಳನ್ನು ಅಗತ್ಯಕ್ಕೆ ಅನುಗುಣವಾಗಿ ಮುಂಬಡ್ತಿ, ನಿಯೋಜನೆ ಹಾಗೂ ನೇರ ನೇಮಕಾತಿ ಮೂಲಕ ಭರ್ತಿ ಮಾಡಲಿದೆ.

    ಹುದ್ದೆ ಸಂಖ್ಯೆ : 9264

    ಹುದ್ದೆ ಸ್ಥಳ : ಕರ್ನಾಟಕ

    ವಿದ್ಯಾರ್ಹತೆ : ಅಭ್ಯರ್ಥಿಗಳು ಯಾವುದೇ ಯುನಿವರ್ಸಿಟಿಯಿಂದ ಡಿಗ್ರಿ ಪದವಿಯನ್ನು ಹೊಂದಿರಬೇಕು.

    ವಯೋಮಿತಿ : ಅಭ್ಯರ್ಥಿಗಳಿಗೆ ಕನಿಷ್ಠ 18 ಹಾಗೂ ಗರಿಷ್ಠ 35 ವರ್ಷ ವಯೋಮಿತಿ ಹೊಂದಿರಬೇಕು.

    ಆಯ್ಕೆ ಪ್ರಕ್ರಿಯೆ : ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಹಾಗೂ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

    ನೋಟಿಫಿಕೇಶನ್ ರಿಲೀಸ್ ದಿನಾಂಕ : 15-05-2021

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • ಭಾರತೀಯ ವಿಕಾಸ್ ಟ್ರಸ್ಟ್ ಉಡುಪಿ : ವಿವಿಧ ಹುದ್ದೆ

    ಭಾರತೀಯ ವಿಕಾಸ್ ಟ್ರಸ್ಟ್ ಉಡುಪಿ : ವಿವಿಧ ಹುದ್ದೆ

    ಭಾರತೀಯ ವಿಕಾಸ್ ಟ್ರಸ್ಟ್ ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದ್ದು ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು. ವಿವರಗಳು ಈ ಕೆಳಗಿನಂತಿವೆ :

    ಹುದ್ದೆ : ಪ್ರೊಗ್ರಾಮ್ ಹೆಡ್ , ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಸಿಎಸ್ ಆರ್ ಮತ್ತು ಅಡ್ಮಿನ್

    ಪ್ರೋಗ್ರಾಮ್ ಹೆಡ್ ಹುದ್ದೆಗೆ ಯಾವುದೇ ಪದವಿ/ ಮಾಸ್ಟರ್ಸ್/ಎಂಬಿಎ/ಬಿಇ ಅಥವಾ ಸರಿಸಮಾನ ವಿದ್ಯಾರ್ಹತೆ ಹೊಂದಿರಬೇಕು.

    ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಹುದ್ದೆಗೆ ಯಾವುದೇ ಡಿಗ್ರಿ /ಅಥವಾ ಮಾಸ್ಟರ್ಸ್ ಡೆವಲಪ್ಮೆಂಟ್ ಮಾಡಿರಬೇಕು.

    ಹುದ್ದೆ ಸ್ಥಳ : ಮಣಿಪಾಲ

  • ಜಿಲ್ಲಾ ಆಡಳಿತ ಬಳ್ಳಾರಿ : 65 ಹುದ್ದೆಗಳ ನೇಮಕ

    ಜಿಲ್ಲಾ ಆಡಳಿತ ಬಳ್ಳಾರಿ : 65 ಹುದ್ದೆಗಳ ನೇಮಕ

    ಜಿಲ್ಲಾ ಆಡಳಿತ, ಬಳ್ಳಾರಿಯಿಂದ ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ‌ಹಾಗೂ‌ ಕೋವಿಡ್ ರೋಗಿಗಳಿಗೆ ಉತ್ತಮ ಮತ್ತು ಪರಿಣಾಮಕಾರಿ ಚಿಕಿತ್ಸೆಯನ್ನು ನೀಡುವ ಹಿನ್ನೆಲೆಯಲ್ಲಿ ‌ಸಂಡೂರು ತಾಲೂಕಿನ ತೋರಣಗಲ್ಲು ಇಲ್ಲಿ 1000 ಹಾಸಿಗೆ ಕೋವಿಡ್ ಆಸ್ಪತ್ರೆ ಆರಂಭಿಸಲಾಗಿದ್ದು, ಸದರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಲು ವೈದ್ಯರು/ ತಜ್ಞ ವೈದ್ಯರು ಅಗತ್ಯವಿದ್ದು ಈ ಹಿನ್ನೆಲೆಯಲ್ಲಿ1000 ಹಾಸಿಗೆ ಕೋವಿಡ್ ‌ಆಸ್ಪತ್ರೆ ತೋರಣಗಲ್ಲು ಇಲ್ಲಿ ಈ ಹುದ್ದೆಗಳನ್ನು ತಾತ್ಕಾಲಿಕವಾಗಿ ‌ಗುತ್ತಿಗೆ ಆಧಾರದ ಮೇಲೆ‌11-05-2021 ರಿಂದ 20-05-2021 ರವರೆಗೆ ಜಿಲ್ಲಾ ಆರೋಗ್ಯ ಮತ್ತು ಕು.ಕ‌.ಅಧಿಕಾರಿಗಳ ಕಛೇರಿ ಬಳ್ಳಾರಿ ಇವರ ಕಚೇರಿ ವೇಳೆಯಲ್ಲಿ ಮುದ್ದಾಂ ಸಲ್ಲಿಸಲು ಹಾಗೂ ಮೂಲ ದಾಖಲಾತಿಗಳನ್ನು ಪರಿಶೀಲನೆಗೆ ಹಾಜರುಪಡಿಸಲು ಸೂಚಿಸುತ್ತಾ ಹೆಚ್ಚಿನ ಮಾಹಿತಿಗಾಗಿ ‌ದೂರವಾಣಿ ಸಂಖ್ಯೆ 08392-276250ಅಥವಾ ಕಚೇರಿಯ ಸಹಾಯಕ ಆಡಳಿತಾಧಿಕಾರಿಗಳು ಇವರ ದೂರವಾಣಿ ಸಂಖ್ಯೆ 8951656265 ಸಂಪರ್ಕಿಸಬಹುದು. ಮತ್ತು ನೇಮಕಾತಿ ಹೊಂದಿ ಕರ್ತವ್ಯ ನಿರ್ವಹಿಸುವವರಿಗೆ ವಸಯಿ ಮತ್ತು ಊಟದ ವ್ಯವಸ್ಥೆ ಯನ್ನು ಕಲ್ಪಿಸಲಾಗುತ್ತದೆ.

    ಹುದ್ದೆ : ಫಿಸಿಶಿಯನ್/ ಶ್ವಾಸಕೋಶ ತಜ್ಞರು- 20
    ಅರವಳಿಕೆ ತಜ್ಞರು -15
    ವೈದ್ಯರು – 30

    ಈ ನೇಮಕಾತಿಯು ಗುತ್ತಿಗೆ ಆಧಾರದ ಮೇಲೆ ಮಾತ್ರ ನೇಮಕಾತಿ ಆಗಿದ್ದು ಯಾವುದೇ ಕಾರಣಕ್ಕೂ ಖಾಯಂಗೊಳಿಸಲಾಗುವುದಿಲ್ಲ.
    ಗುತ್ತಿಗೆ ಅವಧಿಯು 11 ತಿಂಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಅಥವಾ ಜಿಲ್ಲಾ ಆಡಳಿತ ಒಪ್ಪಿದ್ದಲ್ಲಿ ಮುಂದುವರಿಸಲಾಗುವುದು. ರಾಜ್ಯದ ಯಾವುದೇ ಜಿಲ್ಲೆಯ ಸರಕಾರಿ ಆಸ್ಪತ್ರೆಗಳಲ್ಲಿ/ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಯಂ / ಗುತ್ತಿಗೆ ವೈದ್ಯರ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
    ನೇಮಕಾತಿ ಹೊಂದಿದ ವೈದ್ಯರುಗಳಿಗೆ ವಸತಿ ಮತ್ತು ಊಟದ ವ್ಯವಸ್ಥೆ ಇರುತ್ತದೆ.

  • ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ : 38 ವಿವಿಧ ಹುದ್ದೆ

    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ : 38 ವಿವಿಧ ಹುದ್ದೆ

    ಕೋವಿಡ್-19 ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು.

    ಹುದ್ದೆ :ಶ್ರುಶ್ರೂಷಕರು – 26
    ಪ್ರಯೋಗ ಶಾಲಾ ತಂತ್ರಜ್ಞರು- 6
    ಫಾರ್ಮಸಿಸ್ಟ್-6

    ಸದರಿ ಹುದ್ದೆಗಳ ನೇಮಕಾತಿಯು walk in interview ಆಧಾರದ ಮೇಲೆ ತಾತ್ಕಾಲಿಕವಾಗಿ ಕೊರೊನಾ‌ ಪ್ರಯುಕ್ತ ದಿನಾಂಕ 30-09-2021 ರವರೆಗೆ ಮಾತ್ರ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗುವುದು.

    ದಿನಾಂಕ 30-09-2021ರ ಅವಧಿಯವರೆಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿದೆ. (www.chikkaballapur.nic.in) ರಲ್ಲಿ ದಿನಾಂಕ 18-05-2021 ರಂದು ಸಂಜೆ 05-00 ಗಂಟೆ ಒಳಗೆ ಅರ್ಜಿಗಳನ್ನು ಸಲ್ಲಿಸುವಂತೆ ಸೂಚಿಸಿದೆ. ಹಾಗೂ ದಿನಾಂಕ 19-05-2021 ರಂದು ಬೆಳಿಗ್ಗೆ 11.00 ಗಂಟೆಗೆ ಎಲ್ಲಾ ಅರ್ಜಿದಾರರು ಮೂಲ ದಾಖಲೆಗಳೊಂದಿಗೆ ಪರಿಶೀಲನೆ ಗಾಗಿ ಕಚೇರಿಗೆ ಬರತಕ್ಕದ್ದು.