Karnataka State Govt Jobs, KPSC Notifications, Bangalore Metro Jobs, KSRTC Recruitment, SSC Jobs in Karnataka, RRB Bangalore Recruitment, Railway Jobs, Bank Jobs in Karnataka, PDO Jobs in Karnataka, Data Entry Jobs, District court jobs, Karnataka court jobs, VA Recruitment etc all Karnataka govt job updates sarakarijobs.com
ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಇಲ್ಲಿ ಖಾಲಿ ಇರುವ ಈ ಕೆಳಕಂಡ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ವಿವರ : ಪ್ರಾಧ್ಯಾಪಕರು – 06 ಸಹ ಪ್ರಾಧ್ಯಾಪಕರು – 16 ಸಹಾಯಕ ಪ್ರಾಧ್ಯಾಪಕರು -28 ಸೀನಿಯರ್ ರೆಸಿಡೆಂಟ್ ( ಗುತ್ತಿಗೆ ಆಧಾರದ ಮೇಲೆ) -15 ಟ್ಯೂಟರ್ ( ಗುತ್ತಿಗೆ ಆಧಾರದ ಮೇಲೆ) -16
ಭರ್ತಿ ಮಾಡಿದ ಅರ್ಜಿಗಳನ್ನು ನಿರ್ದೇಶಕರು, ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನಿಗಳ ಸಂಸ್ಥೆ, ಅರಳುಗುಪ್ಪೆ ಮಲ್ಲೇಗೌಡ ಜಿಲ್ಲಾ ಆಸ್ಪತ್ರೆ, ಆಜಾದ್ ಪಾರ್ಕಯ ಹತ್ತಿರ, ಚಿಕ್ಕಮಗಳೂರು - 577101 ಈ ವಿಳಾಸಕ್ಕೆ ನಿಗದಿತ ದಿನಾಂಕದೊಳಗೆ ಕಳುಹಿಸತಕ್ಕದ್ದು.
ನೇರ ನೇಮಕಾತಿ ಸಂದರ್ಶನ ವಿಳಾಸ : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ( ಕೆ.ಎಸ್.ಒ.ಯು), ಪ್ರಾದೇಶಿಕ ಕೇಂದ್ರ, ಸಾಯಿಮಂದಿರ ರಸ್ತೆ, ಮಧುವನ ಬಡಾವಣೆ, ಚಿಕ್ಕಮಗಳೂರು – 577101.
ಎಲ್ಲಾ ನೇಮಲಾತಿಗಳು ತಾತ್ಕಾಲಿಕವಾಗಿದ್ದು, ರಾಷ್ಟ್ರೀಯ ವೈದ್ಯಕೀಯ ಆಯೋಗದಿಂದ ಅನುಮತಿ ಅನುಮೋದನೆಯ ಷರತ್ತಿಗೆ ಒಳಪಟ್ಟಿರುತ್ತದೆ.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಜಲಜೀವನ ಮಿಷನ್ ( ಗ್ರಾಮೀಣ ) ಯೋಜನೆಯಡಿ ಕೇಂದ್ರ ಕಚೇರಿ ಹಾಗೂ ಜಿಲ್ಲಾ ಪಂಚಾಯತಿಗಳಲ್ಲು ಖಾಲಿ ಇರುವ ತಾತ್ಕಾಲಿಕ ಹುದ್ದೆಗಳಿಗೆ ಗುತ್ತಿಗೆ/ಹೊರಗುತ್ತಿಗೆ ಆಧಾರದ ಮೇಲೆ ಸಮಾಲೋಚಕರನ್ನು ನೇಮಿಸಿಕೊಳ್ಳಲು ಅರ್ಜಿ ಕರೆಯಲಾಗಿದೆ. ಹುದ್ದೆಗಳ ವಿವರಗಳು, ವಿದ್ಯಾರ್ಹತೆ ಹಾಗೂ ಕಾರ್ಯಾನುಭವದ ವಿವರಗಳನ್ನು ಕೆಳಕಂಡಂತೆ ನೀಡಲಾಗಿದೆ.
ಕೇಂದ್ರ ಕಚೇರಿ :
ಕಿರಿಯ ಸಮಾಲೋಚಕರು ಹುದ್ದೆಗೆ ಅರ್ಜಿ ಸಲ್ಲಿಸುವವರು ಗ್ರಾಜ್ಯುಯೇಶನ್ ಇನ್ ಸಿವಿಲ್ ಇಂಜಿನಿಯರಿಂಗ್ ಮಾಡಿರಬೇಕು. ಈ ಹುದ್ದೆಗೆ ಮಾಸಿಕ ರೂ.60,000/- ಮತ್ತು ರೂ. 15,000/- ರವರೆಗೆ ವೇತನವಿರುತ್ತದೆ.
ಪ್ರಾನೌನ್ಸ್ ಮೆಂಟ್ ಕನ್ಸಲ್ಟೆಂಟ್ – ಹುದ್ದೆಗೆ ಅರ್ಜಿ ಸಲ್ಲಿಸುವವರು ಪೋಸ್ಟ್ ಗ್ರಾಜ್ಯುಯೇಶನ್ ಇನ್ ಕಾಮರ್ಸ್ / ಮ್ಯಾನೇಜ್ಮೆಂಟ್ ಅಥವಾ ಗ್ರಾಜ್ಯುಯೇಶನ್ ಇನ್ ಇಂಜಿನಿಯರಿಂಗ್ ಮಾಡಿರಬೇಕು. ಈ ಹುದ್ದೆಗೆ ರೂ.65,000/- ರಿಂದ ರೂ. 1,00,000/- ವರೆಗೆ ವೇತನವಿರುತ್ತದೆ.
ಘನ ಹಾಗೂ ದ್ರವ ತ್ಯಾಜ್ಯ ನಿರ್ವಹಣೆ : ಗ್ರಾಜ್ಯುಯೇಶನ್ ಇನ್ ಎನ್ವೆರ್ಮೆಂಟಲ್ ಇಂಜಿನಿಯರಿಂಗ್ / ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಹತೆಯನ್ನು ಮಾಡಿರಬೇಕು. ಈ ಹುದ್ದೆಗೆ ರೂ.1,00,000/- ರಿಂದ ರೂ. 1,20,000/- ರವರೆಗೆ ವೇತನ ನಿಗದಿಪಡಿಸಲಾಗಿದೆ.
ಜಿಲ್ಲಾ ಮಟ್ಟದಲ್ಲಿ – ಜಲ ಜೀವನ ಮಿಷನ್
ಭೂ ವಿಜ್ಞಾನಿ – ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪೋಸ್ಟ್ ಗ್ರಾಜ್ಯುಯೇಶನ್ ಡಿಗ್ರಿ ಇನ್ ಜಿಯಾಲಜಿಯನ್ನು ಅಂಗೀಕೃತ ಯುನಿವರ್ಸಿಟಿಯಿಂದ ಪಡೆದುಕೊಂಡಿರಬೇಕು. ಈ ಹುದ್ದೆಗೆ ಮಾಸಿಕ ರೂ.30,000/- ರಿಂದ ರೂ.35,000/- ರವರೆಗೆ ವೇತನವಿರುತ್ತದೆ.
ಜಿಲ್ಲಾ ಪಂಚಾಯತಿ ಕಚೇರಿ – ಸ್ವಚ್ಛ ಭಾರತ್ ಮಿಷನ್ ( ಗ್ರಾಮೀಣ) & ಜಲಜೀವನ ಮಿಷನ್
ಮಾಹಿತಿ ಶಿಕ್ಷಣ ಹಾಗೂ ಸಂವಹನ ಸಮಾಲೋಚಕರು : ಈ ಹುದ್ದೆಗೆ ಅರ್ಜಿ ಸಲ್ಲಿಸುವವರು ಅಂಗೀಕೃತ ಯುನಿವರ್ಸಿಟಿಯಿಂದ ಎಂ.ಸಿ.ಎ/ ಸ್ಟಾಟಿಸ್ಟಿಕ್ಸ್. ಎಂ.ಎಸ್ಸಿ ಕಂಪ್ಯೂಟರ್ ಸೈನ್ಸ್/ ಬಿ.ಇ.ಕಂಪ್ಯೂಟರ್ ಸೈನ್ಸ್ ಪಡೆದುಕೊಂಡಿರಬೇಕು. ಈ ಹುದ್ದೆಗೆ ಮಾಸಿಕ ರೂ.22,000/- ರಿಂದ ರೂ.25,000/- ರವರೆಗೆ ವೇತನವಿರುತ್ತದೆ.
ಗುತ್ತಿಗೆಯ ಅಥವಾ ಹೊರಗುತ್ತಿಗೆ ಅವಧಿ : ಮೇಲಿನ ಹುದ್ದೆ ಸಂಪೂರ್ಣವಾಗಿ ತಾತ್ಕಾಲಿಕ ಹುದ್ದೆಯಾಗಿದ್ದು, ಒಂದು ವರ್ಷದ ಅವಧಿಗೆ ಗುತ್ತಿಗೆ ಅಥವಾ ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗುವುದು.
ವಯೋಮಿತಿ : ಪ್ರಕಟಣೆ ಹೊರಡಿಸಿದ ದಿನಾಂಕಕ್ಕೆ 45 ವರ್ಷಗಳು ಮೀರಿರಬಾರದು.
ನಿಗದಿತ ಅರ್ಜಿ ನಮೂನೆಯಲ್ಲಿ ಮಾಹಿತಿಯನ್ನು ತುಂಬಿ, ವಯಸ್ಸಿನ ದೃಢೀಕರಣ, ವಿದ್ಯಾರ್ಹತೆ, ಅನುಭವ, ಸಾಮರ್ಥ್ಯಗಳು, ರೆಸ್ಯೂಮ್ ಹಾಗೂ ಅರ್ಜಿ ಜೊತೆಗೆ “ನಾನು ಈ ಹುದ್ದೆಗೆ ಯಾವ ರೀತಿ ಸೂಕ್ತವಾಗಿದ್ದೇನೆ” ಎಂಬುದರ ಬಗ್ಗೆ ಒಂದು ಪುಟದಲ್ಲಿ ಟಿಪ್ಪಣಿ ಬರೆದು ಅರ್ಜಿಯನ್ನು ಆಯುಕ್ತರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, 2ನೇ ಮಹಡಿ, ಕೆ.ಹೆಚ್.ಬಿ. ಕಟ್ಟಡ, ಕಾವೇರಿ ಭವನ, ಕೆ.ಜಿ.ರಸ್ತೆ ಬೆಂಗಳೂರು – 560009
ಸ್ನಾತಕ/ ಸ್ನಾತಕೋತ್ತರ ಪದವಿಯನ್ನು ದೂರಶಿಕ್ಷಣ ಮುಖಾಂತರ ಪಡೆದಿದ್ದರೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ಹಾಗೂ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
ಕಿರುಪಟ್ಟಿ ಮಾಡಿದ ಅಭ್ಯರ್ಥಿಗಳಿಗೆ ಮಾತ್ರ ದೂರವಾಣಿ ಮುಖಾಂತರ ತಿಳಿಸಲಾಗುವುದು. ಅರ್ಹ ಅಭ್ಯರ್ಥಿಗಳಿಗೆ ಸಂದರ್ಶನವನ್ನು ಕೇಂದ್ರ ಕಚೇರಿ ಹಾಗೂ ಆಯಾ ಜಿಲ್ಲಾ ಪಂಚಾಯತಿ ಕಚೇರಿಯಲ್ಲಿ ವಿಡಿಯೋ ಸಂವಾದದ ಮೂಲಕ ನಡೆಸಲಿದ್ದು, ನಿಗದಿಪಡಿಸಿದ ದಿನಾಂಕ ಮತ್ತು ವೇಳೆಯಲ್ಲಿ ಹಾಜರಾಗುವುದು. ಹಾಗೂ ಈ ಸಂದರ್ಭದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಯನ್ನು ನಡೆಸಲಿದ್ದು, ನಿಗದಿಪಡಿಸಿದ ದಿನಾಂಕ ಮತ್ತು ವೇಳೆಯಲ್ಲಿ ಪರೀಕ್ಷೆಗೆ ಹಾಜರಾಗುವುದು.
ಶ್ರೀ ದೇವರಾಜ ಅರಸ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಆಂಡ್ ರಿಸರ್ಚ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು. ವಿವರಗಳು ಈ ಕೆಳಗಿನಂತಿವೆ:
ಹುದ್ದೆಗಳ ಸಂಖ್ಯೆ – 41 ಹುದ್ದೆ ಸ್ಥಳ – ಕರ್ನಾಟಕ – ಕೋಲಾರ ಹುದ್ದೆ : ಸ್ಟಾಫ್ ನರ್ಸ್, ಟೆಕ್ನಿಶಿಯನ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಹುದ್ದೆಗಳ ವಿವರ : ಸ್ಟಾಫ್ ನರ್ಸ್ – 35 ಲೇಡಿ ಎಕ್ಸ್ ರೇ ಟೆಕ್ನಿಶಿಯನ್ – 01 ಸಿಎಸ್ ಎಸ್ ಡಿ ಟೆಕ್ನಿಶಿಯನ್ – 05
ಸ್ಟಾಫ್ ನರ್ಸ್ : ಎಂ.ಎಸ್ಸಿ/ಪಿಬಿ.ಎಸ್ಸಿ/ಬಿ.ಎಸ್ಸಿ/ಜಿಎನ್ ಎಂ ವಿದ್ಯಾರ್ಹತೆಯನ್ನು ಹೊಂದಿರಬೇಕು.
ಲೇಡಿ ಎಕ್ಸ್ ರೇ ಟೆಕ್ನಿಶಿಯನ್ ಹುದ್ದೆಗೆ ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳು ಬಿ.ಎಸ್ಸಿ/ ಡಿಪ್ಲೋಮಾ ಇನ್ ರಿಲೇಟೆಡ್ ಫೀಲ್ಡ್ ವಿದ್ಯಾರ್ಹತೆಯನ್ನು ಹೊಂದಿರಬೇಕು.
ಸಿಎಸ್ ಎಸ್ ಡಿ ಟೆಕ್ನಿಶಿಯನ್ ಹುದ್ದೆಗೆ ಡಿಪ್ಲೋಮಾ ಇನ್ ರಿಲೇಟೆಡ್ ಫೀಲ್ಡ್ ವಿದ್ಯಾರ್ಹತೆಯನ್ನು ಅಭ್ಯರ್ಥಿಗಳು ಹೊಂದಿರಬೇಕು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15-06-2021
ಅಭ್ಯರ್ಥಿಗಳು ತಮ್ಮ ಎಲ್ಲಾ ದಾಖಲೆಗಳ ಪ್ರತಿಗಳನ್ನು ಇ- ಮೇಲ್ ಮಾಡಬೇಕು. ಇ-ಮೇಲ್: [email protected] ಗೆ ಸಲ್ಲಿಸಬೇಕು.
ಶ್ರೀ ಶರಣ ಬಸವೇಶ್ವರ ವಿದ್ಯಾವರ್ಧಕ ಸಂಘ ( ರಿ) ಬಗಲೂರ ವಿಜಯಪುರ ಇಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ವಿವರಗಳನ್ನು ಓದಿ ಅರ್ಜಿಯನ್ನು ಸಲ್ಲಿಸಬಹುದು.
ಹುದ್ದೆ : ಸಹಶಿಕ್ಷಕ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಹುದ್ದೆಗಳ ಸಂಖ್ಯೆ – 01
ವಿದ್ಯಾರ್ಹತೆ : ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿ.ಎ.ಬಿಎಡ್ ವಿದ್ಯಾರ್ಹತೆಯನ್ನು ಹೊಂದಿರಬೇಕು.
ವೇತನ : ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.33,450/- ರಿಂದ ರೂ.62,600/- ಗಳವರೆಗೆ ವೇತನವಿರುತ್ತದೆ.
ಅರ್ಹ ಅಭ್ಯರ್ಥಿಗಳು ತಮ್ಮ ಸಂಪೂರ್ಣ ವಿವರ ಸ್ವಂತ ಕೈ ಬರಹದ ಅರ್ಜಿಯೊಂದಿಗೆ ತಮ್ಮ ಶೈಕ್ಷಣಿಕ ವಿದ್ಯಾರ್ಹತೆ ಜನ್ಮದಾಖಲೆ ಮತ್ತು ಇತರ ಸಂಬಂಧಿಸಿದ ಪ್ರಮಾಣ ಪತ್ರಗಳ ದೃಢೀಕರಿಸಿದ ನಕಲುಗಳೊಂದಿಗೆ ಅಭ್ಯರ್ಥಿಗಳು ರೂ.500/- ನ್ಯಾಷನಲ್ ಬ್ಯಾಂಕ್ ಡಿಡಿಯನ್ನು ಅಧ್ಯಕ್ಷರು ಶ್ರೀ ಶರಣ ಬಸವೇಶ್ವರ ವಿದ್ಯಾವರ್ಧಕ ಸಂಘ (ರಿ) ಬಗಲೂರ ಇವರ ಹೆಸರಿಗೆ ಪಡೆದು ಅರ್ಜಿಯ ಜೊತೆಗೆ ಲಗತ್ತಿಸಿ ಈ ಪ್ರಕಟಣೆ ಪ್ರಕಟಗೊಂಡ 21 ದಿನದೊಳಗೆ ಅರ್ಜಿಯನ್ನು ಸಲ್ಲಿಸಬೇಕು. ಮತ್ತು ಅರ್ಜಿಯ ಪ್ರತಿಯನ್ನು ಅಗತ್ಯ ದಾಖಲೆಗಳ ಸಹಿತವಾಗಿ ಮಾನ್ಯ ಉಪನಿರ್ದೇಶಕರು ಸಾ.ಶಿ. ಇಲಾಖೆ ವಿಜಯಪುರ ಇವರಿಗೆ ನಿಗದಿತ ಸಮಯದೊಳಗಾಗಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸುವ ವಿಳಾಸ : ಅಧ್ಯಕ್ಷರು, ಶ್ರೀ ಶರಣ ಬಸವೇಶ್ವರ ವಿದ್ಯಾವರ್ಧಕ ಸಂಘ (ರಿ) ಬಗಲೂರ ತಾ.ಸಿಂದಗಿ. ಜಿ: ವಿಜಯಪುರ.
ಜಿಲ್ಲಾಡಳಿತ ಬಳ್ಳಾರಿ ಇವರ ವತಿಯಿಂದ ಸರಕಾರದಿಂದ ಹುದ್ದೆಗಳು ಸೃಜನೆಯಾಗುವವರೆಗೆ ಡಿ.ಎಂ.ಎಫ್ ಯೋಜನೆಯ ನಿಧಿಯಿಂದ ಬಳ್ಳಾರಿಯ ವಿಮ್ಸ್ ಸಂಸ್ಥೆ ಅಧೀನದಲ್ಲಿರುವ ಕೋವಿಡ್-19 ಕೇಂದ್ರಗಳಲ್ಲಿ ರೋಗಿಗಳ ಚಿಕಿತ್ಸೆಗಾಗಿ ಶುಶ್ರೂಷಕ ಸಿಬ್ಬಂದಿಗಳನ್ನು ಸಂಚಿತ ವೇತನ ರೂ. 2೦,೦೦೦/- ರಿಸ್ಕ್ ಅಲವೆನ್ಸ್ ರೂ.5೦೦೦/- ಗಳ ಆಧಾರದ ಮೇಲೆ 11 ತಿಂಗಳ ಅವಧಿಗೆ ತಾತ್ಕಾಲಿಕವಾಗಿ ನೇಮಕಾತಿ ಮಾಡಲು ನೇರ ಸಂದರ್ಶನ ಏರ್ಪಡಿಸಲಾಗಿದ್ದು, ಆಸಕ್ತಿಯುಳ್ಳ ಅಭ್ಯರ್ಥಿಗಳು ಶೈಕ್ಷಣಿಕ ದಾಖಲಾತಿಗಳ ಮೂಲ ಪ್ರತಿ ಹಾಗೂ ಜೆರಾಕ್ಸ್ ಪ್ರತಿಯೊಂದಿಗೆ ನೇರ ಸಂದರ್ಶನದಲ್ಲಿ ಹಾಜರಾಗುವುದು.
ನೇರ ಸಂದರ್ಶನ ದಿನಾಂಕ : 28-05-2021 ರಂದು 11:00 ಗಂಟೆಗೆ ಸಂದರ್ಶನ ನಡೆಯುವ ಸ್ಥಳ : ಜಿಲ್ಲಾಧಿಕಾರಿಗಳ ಆವರಣ, ಬಳ್ಳಾರಿ
ಹುದ್ದೆ : ಶುಶ್ರೂಷಾಧಿಕಾರಿಗಳು – 118 ಹುದ್ದೆಗಳು
ವಯೋಮಿತಿ : ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷಗಳು. ಸಾಮಾನ್ಯ 35 ವರ್ಷ ವಯೋಮಿತಿಯನ್ನು ಹೊಂದಿರಬೇಕು.
ನೇರ ಸಂದರ್ಶನಕ್ಕೆ ಹಾಜರಾಗಲು ಅರ್ಜಿಯನ್ನು ವಿಮ್ಸ್ ಅಂತರ್ಜಾಲದಲ್ಲಿ www.vimsbellay.org.in ಡೌನ್‌ಲೋಡ್ ಮಾಡಿಕೊಂಡು ಶೈಕ್ಷಣಿಕ ದಾಖಲಾತಿಗಳೊಂದಿಗೆ ಅಭ್ಯರ್ಥಿಯು ನೇರ ಸಂದರ್ಶನಕ್ಕೆ ಹಾಜರಾಗುವುದು,