Category: Karnataka Jobs

Karnataka State Govt Jobs, KPSC Notifications, Bangalore Metro Jobs, KSRTC Recruitment, SSC Jobs in Karnataka, RRB Bangalore Recruitment, Railway Jobs, Bank Jobs in Karnataka, PDO Jobs in Karnataka, Data Entry Jobs, District court jobs, Karnataka court jobs, VA Recruitment etc all Karnataka govt job updates sarakarijobs.com

  • KEA Recruitment Notification 2024: ಎಫ್‌ಡಿಎ, ಎಸ್‌ಡಿಎ ಹುದ್ದೆಗಳ ಭರ್ತಿಗೆ ಕೆಇಎ ಅಧಿಸೂಚನೆ ಬಿಡುಗಡೆ

    KEA Recruitment Notification 2024: ಎಫ್‌ಡಿಎ, ಎಸ್‌ಡಿಎ ಹುದ್ದೆಗಳ ಭರ್ತಿಗೆ ಕೆಇಎ ಅಧಿಸೂಚನೆ ಬಿಡುಗಡೆ

    KEA Recruitment 2024: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಮಾರ್ಚ್ 2024 ರ KEA ಅಧಿಕೃತ ಅಧಿಸೂಚನೆಯ ಮೂಲಕ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಇಲ್ಲಿ ಖಾಲಿ ಇರುವ ಒಟ್ಟು 101 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

    FDA, SDA ಪೋಸ್ಟ್‌ಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕ ಸರ್ಕಾರದಲ್ಲಿ ವೃತ್ತಿ ಮಾಡಲು ಇಚ್ಛಿಸುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಿ ತಮ್ಮದಾಗಿಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 23-Apr-2024 ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

    ಪ್ರಮುಖ ದಿನಾಂಕಗಳು
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ; 24-03-2024
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 23-04-2024
    ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 25-04-2024

    ಹುದ್ದೆಗಳ ವಿವರ ಇಲ್ಲಿ ನೀಡಲಾಗಿದೆ;
    ಎಫ್‌ಡಿಎ, ಎಸ್‌ಡಿಎ (ಬಿಡಿಎ)(ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ – 25 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
    Vacant(GTTC) (ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ)- 76 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ವಿದ್ಯಾರ್ಹತೆ: ಕೆಇಎ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಪದವಿ ತೇರ್ಗಡೆ ಹೊಂದಿರಬೇಕು.

    ವಯೋಮಿತಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಕನಿಷ್ಠ ವಯಸ್ಸು 18 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳನ್ನು ಮೀರಿರಬಾರದು. SC/ST ಅಭ್ಯರ್ಥಿಗಳಿಗೆ 05 ವರ್ಷ, CAT-2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ 03 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ಆಯ್ಕೆ ವಿಧಾನ: ಸ್ಪರ್ಧಾತ್ಮಕ ಪರೀಕ್ಷೆ, ಲಿಖಿತ ಪರೀಕ್ಷೆಯನ್ನು ಪ್ರಾಧಿಕಾರವು ನಡೆಸುತ್ತದೆ. ಈ ಮೂಲಕ ಅಭ್ಯರ್ಥಿಗಳುನ್ನು ಮೇಲ್ಕಂಡ ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.

    ಅರ್ಜಿ ಶುಲ್ಕ: ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿ ಮಾಡುವಂತಿಲ್ಲ.

    ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿದ ಲಿಂಕ್‌ ಕ್ಲಿಕ್‌ ಮಾಡಿ
    Short Notification -BDA
    Short Notification – GTTC
    Online ಮೂಲಕ ಆಪ್ಲೈ ಮಾಡಲು ಈ ಲಿಂಕ್‌ ಕ್ಲಿಕ್‌ ಮಾಡಿ( ಮಾ.24 ರಿಂದ)

  • KLA Recruitment 2024: ಕರ್ನಾಟಕ ವಿಧಾನಸಭೆಯಲ್ಲಿ ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ಹುದ್ದೆ; ಕೂಡಲೇ ಅರ್ಜಿ ಸಲ್ಲಿಸಿ

    KLA Recruitment 2024: ಕರ್ನಾಟಕ ವಿಧಾನಸಭೆಯಲ್ಲಿ ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ಹುದ್ದೆ; ಕೂಡಲೇ ಅರ್ಜಿ ಸಲ್ಲಿಸಿ

    KLA Recruitment 2024: ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದಲ್ಲಿ ಉಳಿಕೆ ಮೂಲ ವೃಂದ ಮತ್ತು ಸ್ಥಳೀಯ ವೃಂದದಲ್ಲಿನ (ಕಲ್ಯಾಣ-ಕರ್ನಾಟಕ) ವಾಹನ ಚಾಲಕ ಮತ್ತು ʼಡಿʼ ಗುಂಪು ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುವ ಕುರಿತು ಅಧಿಸೂಚನೆ ಬಿಡುಗಡೆಗೊಂಡಿದೆ. ಒಟ್ಟು 32 ಹುದ್ದೆಗಳು ಖಾಲಿ ಇದ್ದು, ಆಸಕ್ತ ಅಭ್ಯರ್ಥಿಗಳು ಈ ಕೆಳಗೆ ಹುದ್ದೆಯ ವಿವರಗಳನ್ನು ನೀಡಲಾಗಿದ್ದು, ಓದಿ ಅರ್ಜಿ ಸಲ್ಲಿಸಬಹುದು.

    ಪ್ರಮುಖ ದಿನಾಂಕಗಳು: ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 06-03-2024
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05-04-2024
    ಅರ್ಜಿ ಶುಲ್ಕ ಪಾವತಿ ಮಾಡಲು ಕೊನೆಯ ದಿನಾಂಕ: 05-04-2024

    ಹುದ್ದೆಯ ಹೆಸರು:
    1: ವಾಹನ ಚಾಲಕರು ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 03 ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. (ಉಳಿಕೆ ಮೂಲ ವೃಂದ 03 ಹುದ್ದೆಗಳು) ವೇತನ ಶ್ರೇಣಿ: ರೂ.21400/-ರೂ.42000/-
    2: ಗ್ರೂಪ್‌ ಡಿ ಹುದ್ದೆಗಳು -ಒಟ್ಟ 29 ಹುದ್ದೆಗಳು ಖಾಲಿ ಇದೆ. ದಲಾತ್‌/ಕಾವಲುಗಾರರು/ಸ್ವೀಪರ್-ಕಮ್‌-ಸ್ಕ್ಯಾವೆಂಜರ್‌/ಸೆಕ್ಯೂರಿಗಾರ್ಡ್‌ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
    ಹುದ್ದೆಗಳ ಸಂಖ್ಯೆ: ಉಳಿಕೆ ಮೂಲ ವೃಂದ-26 ಹುದ್ದೆಗಳು ಹಾಗೂ ಕಲ್ಯಾಣ ಕರ್ನಾಟಕ -03 ಹುದ್ದೆಗಳು.
    ವೇತನ ಶ್ರೇಣಿ: ರೂ.17000-ರೂ.28950/-

    ಅರ್ಜಿ ಶುಲ್ಕ: ಸಾಮಾನ್ಯ ಅಭ್ಯರ್ಥಿಗಳಿಗೆ ರೂ.600, ಪ್ರವರ್ಗ 2(ಎ),2(ಬಿ),3(ಎ),3(ಬಿ) ಅಭ್ಯರ್ಥಿಗಳಿಗೆ ರೂ.300, ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.50, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.

    ವಿದ್ಯಾರ್ಹತೆ: ವಾಹನ ಚಾಲಕರು ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ, ಮೋಟಾರು ಕಾರು/ಭಾರೀ ವಾಹನಗಳ ಚಾಲನೆಯ ಅಧಿಕೃತ ಪರವಾನಗಿಯನ್ನು ಹೊಂದಿರಬೇಕು. ಪ್ರಥಮ ಚಿಕಿತ್ಸೆಯ ಪ್ರಮಾಣ ಪತ್ರವನ್ನು ಹೊಂದಿರಬೇಕು.ಮೋಟಾರು ಕಾರುಗಳ ಚಾಲನೆಯಲ್ಲಿ ಮೂರು ವರ್ಷಗಳಿಗೆ ಕಡಿಮೆಯಿಲ್ಲದಂತೆ ಪ್ರಾಯೋಗಿಕ ಅನುಭವವನ್ನು ಹೊಂದಿರಬೇಕು.
    ಗ್ರೂಪ್‌ ʼಡಿ” ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯನ್ನು ಹೊಂದಿರಬೇಕು.

    ವಯೋಮಿತಿ: ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಕನಿಷ್ಠ 18 ವರ್ಷ ವಯಸ್ಸನ್ನು ಪೂರೈಸಿರಬೇಕು. ಗರಿಷ್ಠ ವಯೋಮಿತಿ, ಸಾಮಾನ್ಯ ವರ್ಗ 35ವರ್ಷ, ಪ್ರವರ್ಗ IIಎ,IIಬಿ,IIIಎ, ಮತ್ತು IIIಬಿ ಅಭ್ಯರ್ಥಿಗಳಿಗೆ 38 ವರ್ಷ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-I 40 ವರ್ಷ ನಿಗದಿಪಡಿಸಲಾಗಿದೆ.

    ಆಯ್ಕೆ ವಿಧಾನ: ವಾಹನ ಚಾಲಕರ ಹುದ್ದೆಗಳಿಗೆ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ) ಅವರಿಂದ ವಾಹನ ಚಾಲನಾ ಪರೀಕ್ಷೆಯನ್ನು ನಡೆಸಿ, ಅದರಲ್ಲಿ ಉತ್ತೀರ್ಣರಾದವರಿಗೆ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುವುದ. ʼಡಿʼ ಗುಂಪು ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳಿಗೆ ಸಂದರ್ಶನ ನಡೆಸಿ ಆಯ್ಕೆ ಮಡಲಾಗುವುದು.

    ಅರ್ಜಿ ಸಲ್ಲಿಸಬೇಕಾದ ವಿಳಾಸ: ಅರ್ಜಿಗಳನ್ನು ಕೊನೆಯ ದಿನಾಂಕ 05-04-2024 ರಂದು ಸಂಜೆ 5ಗಂಟೆಯ ಒಳಗೆ ಅಂಚೆಯ ಮೂಲಕ ಕಾರ್ಯದರ್ಶಿ, ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯ, ಅಂಚೆ ಪೆಟ್ಟಿಗೆ ಸಂಖ್ಯೆ:5079, ಮೊದಲನೇ ಮಹಡಿ, ವಿಧಾನಸೌಧ, ಬೆಂಗಳೂರು – 560001 ವಿಳಾಸಕ್ಕೆ ಖುದ್ದಾಗಿ ಅಥವಾ ವಿಧಾನ ಸೌಧದ 2 ನೇ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ 216, ಪತ್ರ ಸ್ವೀಕಾರ ಮತ್ತು ರವಾನೆ ಶಾಖೆಗೆ ತಲುಪಿಸತಕ್ಕದ್ದು.

    ಅರ್ಜಿದಾರರು ಮೇಲ್ಕಂಡ ಹುದ್ದೆಗಳ ಅಭ್ಯರ್ಥಿಗಳ ವಾಹನ ಚಾಲನಾ ಪರೀಕ್ಷೆ ಮತ್ತು ಸಂದರ್ಶನ ದಿನಾಂಕ ಮತ್ತು ಸಮಯವನ್ನು ಕರ್ನಾಟಕ ವಿಧಾನ ಪರಿಷತ್ತಿನ ವೆಬ್‌ಸೈಟ್‌ ವಿಳಾಸ: https://www.kla.kar.nic.in/council/career.htm ನಲ್ಲಿ ಪ್ರಕಟ ಮಾಡಲಾಗುವುದು. ಈ ಕುರಿತು ಯಾವುದೇ ಪತ್ರ ಕಳುಹಿಸಲಾಗುವುದಿಲ್ಲ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ 080-22258569 ನ್ನು ಸಂಪರ್ಕಿಸಬಹುದು.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

  • BBMP Recruitment 2024: ಬಿಬಿಎಂಪಿಯಲ್ಲಿ ಹೆಚ್‌ಆರ್‌ ನೇಮಕಾತಿ; ಆಕರ್ಷಕ ಸಂಬಳ, ಅರ್ಜಿ ಸಲ್ಲಿಸಲು 11.03.2024 ಕೊನೆಯ ದಿನಾಂಕ

    BBMP Recruitment 2024: ಬಿಬಿಎಂಪಿಯಲ್ಲಿ ಹೆಚ್‌ಆರ್‌ ನೇಮಕಾತಿ; ಆಕರ್ಷಕ ಸಂಬಳ, ಅರ್ಜಿ ಸಲ್ಲಿಸಲು 11.03.2024 ಕೊನೆಯ ದಿನಾಂಕ

    BBMP Recruitment 2024: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಕೆಳಕಂಡ ಕಾಮಗಾರಿಗಳಿಗೆ ಒಂದು ವರ್ಷಗಳ ಅವಧಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಹೆಚ್‌ ಆರ್‌ ನೇಮಕಾತಿ ಕುರಿತ ವಿವರಗಳನ್ನು ಈ ಕೆಳಗೆ ನೀಡಲಾಗಿದೆ.

    ಪ್ರಮುಖ ದಿನಾಂಕಗಳು;
    ಅಧಿಸೂಚನೆ ಪ್ರಕಟಗೊಂಡ ದಿನಾಂಕ: 05-03-2024
    ಕಚೇರಿಗೆ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ: 11-03-2024
    ಸಂದರ್ಶನ ಮತ್ತು ದಾಖಲೆಗಳ ಪರಿಶೀಲನೆ ಮಾಡುವ ದಿನಾಂಕ: 12-03-2024, ಬೆಳಗ್ಗೆ 11.00 ಗಂಟೆಗೆ

    ಹುದ್ದೆಗಳ ವಿವರ:
    ಎನ್‌ಸಿಡಿ ಯೋಜನೆಗಳಿಗೆ ವಿವಿಧ ವರ್ಗಗಳ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳು
    ಹುದ್ದೆ: ಮನೋವೈದ್ಯಕೀಯ ಸಾಮಾಜಿಕ ಕಾರ್ಯಕರ್ತ, ಮನೋವೈದ್ಯ, ಕಾರ್ಯಕ್ರಮ ಸಹಾಯಕ/ಡಿಇಓ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಇತರೆ ವಿವರಗಳು: ಮನೋವೈದ್ಯ, ವಿವರ: ವಯೋಮಿತಿ: 35 ವರ್ಷಗಳು
    ವಿದ್ಯಾರ್ಹತೆ: 1. ಮಾನ್ಯತೆ ಪಡೆದ ವೈದ್ಯಕೀಯ ಸಂಸ್ಥೆಯಲ್ಲಿ ಮನೋವೈದ್ಯದಲ್ಲಿ ಎಂಬಿಬಿಎಸ್, ಎಂಡಿ ಅಥವಾ ಡಿಎನ್‌ಬಿ ಅನುಭಮ ಗಣಕೀಕರಣ ಶಿಕ್ಷಣದ ಜೊತೆಗೆ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಲ್ಲಿ ಎರಡು ವರ್ಷಗಳ ಅನುಭವ. ಮಾಸಿಕ 1,20,000 ವೇತನ.
    ಮನೋವೈದ್ಯಕೀಯ ಸಾಮಾಜಿಕ ಕಾರ್ಯಕರ್ತ, ವಿವರ: ವಯೋಮಿತಿ: <35 ವರ್ಷಗಳು. ಮನೋವೈದ್ಯಕೀಯ ಸಾಮಾಜಿಕ ಸೇವೆಯಲ್ಲಿ ಎಂಎಸ್‌ಡಬ್ಲ್ಯೂ ಅಥವಾ ಎಂ.ಫಿಲ್. 2. ಮನೋವೈದ್ಯಕೀಯ ಸಾಮಾಜಿಕ ಸೇವೆಯಲ್ಲಿ ಪಿಹೆಚ್‌ಡಿ.
    ಅನುಭವ: ಗಣಕೀಕರಣ ಶಿಕ್ಷಣದ ಜೊತೆಗೆ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಲ್ಲಿ ಎರಡು ವರ್ಷಗಳ ಅನುಭವ. ಯೂನಿಟ್ ಶುಲ್ಕ (ರೂ.ಗಳಲ್ಲಿ): ರೂ.27500/- ಮಾಸಿಕ, ಒಂದು ವರ್ಷಮಾತ್ರ: 12 ತಿಂಗಳು
    ಕಾರ್ಯಕ್ರಮ ಸಹಾಯಕ/ಡಿಇಓ, ವಿವರ: ವಯೋಮಿತಿ: <35 ವರ್ಷಗಳು
    ವಿದ್ಯಾರ್ಹತೆ: ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಲ್ಲಿ ಬಿಎಸ್‌ಸಿ/ಬಿಎ ಉತ್ತೀರ್ಣ ಮತ್ತು ಸಿ, ಸಿ++, ಜಾವ, ಲಿನಕ್ಸ್, ಎಕ್ಸೆಲ್ ಜ್ಞಾನ ಹೊಂದಿರಬೇಕು. ಕನ್ನಡ ಮತ್ತು ಇಂಗ್ಲೀಷ್‌ ನಲ್ಲಿ ಟೈಪಿಂಗ್ ಅನುಭವ ಹೊಂದಿರಬೇಕು. ಟೈಪಿಂಗ್ ಸ್ಪೀಡ್ ನಿಮಿಷಕ್ಕೆ 40 ಪದಗಳನ್ನು ಟೈಪ್ ಮಾಡುವಷ್ಟಿರಬೇಕು (40ಡಬ್ಲ್ಯೂಪಿಎಂ)
    ಅನುಭವ: ಗಣಕೀಕರಣ ಶಿಕ್ಷಣದ ಜೊತೆಗೆ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಲ್ಲಿ ಎರಡು ವರ್ಷಗಳ ಅನುಭವ. ಯೂನಿಟ್ ಶುಲ್ಕ (ರೂ.ಗಳಲ್ಲಿ): ರೂ.25000/- ಮಾಸಿಕ, ಒಂದು ವರ್ಷಮಾತ್ರ:

    ವಿಶೇಷ ಸೂಚನೆ:
    ಸಂದರ್ಶನ ಮತ್ತು ದಾಖಲೆಗಳ ಪರಿಶೀಲನೆ ಮಾಡುವ ದಿನಾಂಕ 12.03.2024, ಬೆಳಿಗ್ಗೆ 11.00 ಗಂಟೆಗೆ. ಅರ್ಜಿಗಳನ್ನು ಯೋಜನಾ ಕಚೇರಿ ಜಿ01, ಅನೆಕ್ಸ್ 3 ಕಟ್ಟಡ, ಬಿಬಿಎಂಪಿ ಪ್ರಧಾನ ಕಛೇರಿಯಿಂದ ಪಡೆಯಬಹುದು ಮತ್ತು ಇತರೆ ವಿವರಗಳನ್ನು ಪ್ರಕಟಣಾ ನೋಟಿಸ್‌ನಲ್ಲಿ ಪರಿಶೀಲಿಸಬಹುದು.

  • KPSC Job: ಕೆಪಿಎಸ್‌ಸಿ ಇಂದ 364 ಭೂಮಾಪಕರ ಹುದ್ದೆಗೆ ಅರ್ಜಿ ಆಹ್ವಾನ

    KPSC Job: ಕೆಪಿಎಸ್‌ಸಿ ಇಂದ 364 ಭೂಮಾಪಕರ ಹುದ್ದೆಗೆ ಅರ್ಜಿ ಆಹ್ವಾನ

    Karnataka SSLR Recruitment 2024: ಕರ್ನಾಟಕ ಲೋಕಸೇವಾ ಆಯೋಗವು ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಒಟ್ಟು 364 ಲ್ಯಾಂಡ್‌ ಸರ್ವೇಯರ್‌ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತರು ಈ ಕೆಳಗೆ ನೀಡಲಾದ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಕರ್ನಾಟಕ ಸರ್ಕಾರದಲ್ಲಿ ವೃತ್ತಿಯನ್ನು ಮಾಡಲು ಇಚ್ಛಿಸುವವರು ಈ ಉದ್ಯೋಗವನ್ನು ತಮ್ಮದಾಗಿಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 10-Apr-2024 ರಂದು ಅಥವಾ ಮೊದಲು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅಧಿಸೂಚನೆಯಲ್ಲಿ ಸೂಚಿಸಲಾಗಿದೆ.

    ಪ್ರಮುಖ ದಿನಾಂಕಗಳು
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 11-03-2024
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10-04-2024
    ಭೂಮಾಪಕರ (HK) ಹುದ್ದೆಗಳಿಗೆ ಕನ್ನಡ ಭಾಷಾ ಪರೀಕ್ಷೆಯ ತಾತ್ಕಾಲಿಕ ದಿನಾಂಕ: 06-Jul-2024
    ಭೂಮಾಪಕರ (HK) ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ತಾತ್ಕಾಲಿಕ ದಿನಾಂಕ: 07-Jul-2024
    ಭೂಮಾಪಕರ (RPC) ಹುದ್ದೆಗಳಿಗೆ ಕನ್ನಡ ಭಾಷಾ ಪರೀಕ್ಷೆಯ ತಾತ್ಕಾಲಿಕ ದಿನಾಂಕ: 20-ಜುಲೈ-2024
    ಭೂಮಾಪಕರ (RPC) ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ತಾತ್ಕಾಲಿಕ ದಿನಾಂಕ: 21-ಜುಲೈ-2024

    ಹುದ್ದೆಯ ಈ ಕೆಳಗೆ ನೀಡಲಾಗಿದೆ.
    ಭೂಮಾಪಕರ ಹುದ್ದೆ:
    ಹೈದರಾಬಾದ್‌ -ಕರ್ನಾಟಕ ವೃಂದ (HK)-100
    ಉಳಿಕೆ ಮೂಲ ವೃಂದ (RPC)-264

    ಶೈಕ್ಷಣಿಕ ಅರ್ಹತೆ:
    ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯಗಳಿಂದ ITI, 12th, ಡಿಪ್ಲೊಮಾ, B.E ಅಥವಾ B.Tech ಸಿವಿಲ್ ಇಂಜಿನಿಯರಿಂಗ್ ತೇರ್ಗಡೆ ಹೊಂದಿರಬೇಕು.

    ವಯೋಮಿತಿ: ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ, ಹಾಗೂ ಗರಿಷ್ಠ 35 ವರ್ಷ ಮೀರಿರಬಾರದು.
    CAT-2ಎ/2ಬಿ/3ಎ/3ಬಿ- 03 ವರ್ಷ, SC/ST/Cat-1- 05 ವರ್ಷ, PWD/ವಿಧವೆ- 10 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ಅರ್ಜಿ ಶುಲ್ಕ: SC/ST/Cat-I/PWD ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿ ಮಾಡುವಂತಿಲ್ಲ. ಮಾಜಿ ಸೈನಿಕ ಅಭ್ಯರ್ಥಿಗಳು: ರೂ.50/-, CAT-2ಎ/2ಬಿ/3ಎ/3ಬಿ ಅಭ್ಯರ್ಥಿಗಳು: ರೂ.300, ಸಾಮಾನ್ಯ ಅಭ್ಯರ್ಥಿಗಳು: ರೂ.600/- ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು. ಆನ್‌ಲೈನ್‌ ಮೂಲಕ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿ ಮಾಡಲು ಸೂಚಿಸಲಾಗಿದೆ.

    ವೇತನ: ಅಭ್ಯರ್ಥಿಗಳಿಗೆ ಮಾಸಿಕ ರೂ.23,500-ರೂ.47,650 ಶ್ರೇಣಿಯಲ್ಲಿ ವೇತನ ನೀಡಲಾಗುವುದು.

    ಆಯ್ಕೆ ವಿಧಾನ: ಅಭ್ಯರ್ಥಿಗಳನ್ನು ಕನ್ನಡ ಭಾಷಾ ಪರೀಕ್ಷೆ, ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುವುದು.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಕೆಳಗೆ ನೀಡಲಾದ ಲಿಂಕ್‌ಗೆ ಕ್ಲಿಕ್‌ ಮಾಡಿ
    ಭೂ ಮಾಪಕ (HK), ಭೂ ಮಾಪಕ (RPC) ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ

  • KSRTC Recruitment: 2020ನೇ ಸಾಲಿನ 3745 ಕೆಎಸ್‌ಆರ್‌ಟಿಸಿ ನೇಮಕಾತಿ ಕುರಿತು ಗುಡ್‌ನ್ಯೂಸ್‌; ಆಯ್ಕೆ ಪ್ರಕ್ರಿಯೆ ದಿನಾಂಕ ಪ್ರಕಟ

    KSRTC Recruitment: 2020ನೇ ಸಾಲಿನ 3745 ಕೆಎಸ್‌ಆರ್‌ಟಿಸಿ ನೇಮಕಾತಿ ಕುರಿತು ಗುಡ್‌ನ್ಯೂಸ್‌; ಆಯ್ಕೆ ಪ್ರಕ್ರಿಯೆ ದಿನಾಂಕ ಪ್ರಕಟ

    ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ನೆನೆಗುದ್ದಿಗೆ ಬಿದ್ದಿದ್ದ 2020ನೇ ಸಾಲಿನ ಚಾಲಕ ಕಂ ನಿರ್ವಾಹಕ ಹುದ್ದೆಗಳ ಭರ್ತಿಗೆ ಸಂಬಂಧಪಟ್ಟಂತೆ ಇದೀಗ ಗುಡ್‌ನ್ಯೂಸ್‌ವೊಂದು ಬಂದಿದೆ. ಹೌದು, 2020ನೇ ಸಾಲಿನ ಚಾಲಕ ಕಂ ನಿರ್ವಾಹಕ ಹುದ್ದೆಗೆ ಸಂಬಂಧ ಪಟ್ಟಂತೆ ಸರಕಾರ ನೀಡಿರುವ ಆದೇಶದ ಪ್ರಕಾರ 2000 ಹುದ್ದೆಗಳಿಗೆ ಸೀಮಿತಗೊಳಿಸಿ ಭರ್ತಿ ಮಾಡಲು ಕ್ರಮ ವಹಿಸಲಾಗುತ್ತಿದೆ. ಮೀಸಲಾತಿ ನಿಯಮಗಳ ಅನ್ವಯ ವರ್ಗವಾರು ಹುದ್ದೆಗಳ ಸಂಖ್ಯೆಯನ್ನು ಪರಿಷ್ಕರಿಸಿ ನಿಗಮದ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟ ಮಾಡಲಾಗಿದೆ.

    ದಿನಾಂಕ 03-03-2024 ರಿಂದ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ ksrtc.karnataka.gov.in ನಲ್ಲಿ ಕರೆಪತ್ರವನ್ನು ಡೌನ್‌ಲೋಡ್‌ ಮಾಡಿ, ನಿಗಿದಿತ ದಿನಾಂಕದಂದು ಮೂಲ ದಾಖಲಾತಿ ಜೊತೆಗೆ ಸಮಯಕ್ಕೆ ಹಾಜರಾಗಲು ಸೂಚಿಸಲಾಗಿದೆ.

    2020ರ ಫೆಬ್ರವರಿಯಲ್ಲಿ ಕೆಎಸ್‌ಆರ್‌ಟಿಸಿ ಒಟ್ಟು 3745 ಹುದ್ದೆಗಳಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಿತ್ತು. ಚಾಲಕ ಹುದ್ದೆಗಳಿಗೆ 1200, ಚಾಲಕ ಕಂ ನಿರ್ವಾಹಕ 2545 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು.

    ಪ್ರಸ್ತುತ 2000 ಹುದ್ದೆಗಳಿಗೆ ಮಾತ್ರ ಆಯ್ಕೆ ಪ್ರಕ್ರಿಯೆ ಮುಂದುವರೆಸಿಲು ನಿರ್ಧಾರ ಕೈಗೊಳ್ಳಲಾಗಿದೆ.

    ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳು ಈ ಕೆಳಗೆ ವಿಶೇಷ ಸೂಚನೆಗಳನ್ನು ನೀಡಲಾಗಿದೆ.
    ಪ್ರಸ್ತುತ ಅಭ್ಯರ್ಥಿಗಳ ಮೂಲ ದಾಖಲಾತಿ/ದೇಹದಾರ್ಢ್ಯತೆ ಪರಿಶೀಲನೆ ನಡೆಸಲಾಗುವುದು. ಅರ್ಹ ಅಭ್ಯರ್ಥಿಗಳಿಗೆ ಚಾಲನಾ ವೃತ್ತಿ ಪರೀಕ್ಷೆಯನ್ನು ನಡೆಸಲಾಗುವುದು. ಇದಕ್ಕಾಗಿ ಪ್ರತ್ಯೇಕ ದಿನಾಂಕ/ಸ್ಥಳವನ್ನು ಕೂಡಾ ಹೇಳಲಾಗುವುದು. ಈ ಹುದ್ದೆಗೆ ಆಯ್ಕೆಯು ಅಭ್ಯರ್ಥಿಗಳು ತಾವು ಚಾಲನಾ ವೃತ್ತಿ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಮೆರಿಟ್‌, ಮೀಸಲಾತಿ ನಿಯಮಗಳಿಗೆ ಅನುಗುಣವಾಗಿ ನಡೆಯುತ್ತದೆ. ಆಯ್ಕೆಯ ಪ್ರಕ್ರಿಯೆಯಲ್ಲಿ ಯಾರ ಹಸ್ತಕ್ಷೇಪ ನಡೆಯುವುದಿಲ್ಲ, ಹಾಗಾಗಿ ಅಭ್ಯರ್ಥಿಗಳು ಶಿಫಾರಸ್ಸು, ಮಧ್ಯವರ್ತಿಗಳ ಮೋಸಕ್ಕೆ ಒಳಗಾಗಬಾರದೆಂದು ಅಧಿಸೂಚನೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.

    ಚಾಲಕ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಇರಬೇಕಾದ ಅರ್ಹತೆ: ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ವಿದ್ಯಾರ್ಹತೆಯಲ್ಲಿ ಮೇಲೆ ತಿಳಿಸಿದ ಹುದ್ದೆಗಳಿಗೆ ಅಭ್ಯರ್ಥಿಗಳು ತೇರ್ಗಡೆ ಹೊಂದಿರಬೇಕು. ಎಸ್‌ಎಸ್‌ಸಿ 500 ಅಂಕಗಳ ಅಂಕಪಟ್ಟಿಯನ್ನು (ಮುಕ್ತ ವಿವಿಯಿಂದ ಪಡೆದಿರುವುದು) ಪರಿಗಣಿಸಲಾಗುವುದಿಲ್ಲ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. HTV ಚಾಲನಾ ಪರವಾನಿಗೆ ಹೊಂದಿ ಕನಿಷ್ಠ ಎರಡು ವರ್ಷದ್ದಾಗಿರಬೇಕು. ಭಾರೀ ವಾಹನ ಚಾಲನಾ ಪರವಾನಿಗೆ ಹಾಗೂ ಕರ್ನಾಟಕ ಪಿಎಸ್‌ವಿ ಬ್ಯಾಡ್ಜ್‌ ಹೊಂದಿರುವುದು ಅಗತ್ಯ.

    ಚಾಲಕ ಕಂ ಕಂಡಕ್ಟರ್‌ ಹುದ್ದೆಗೆ ಇರಬೇಕಾದ ಅರ್ಹತೆಗಳು:
    ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಅಭ್ಯರ್ಥಿಗಳು ಹೊಂದಿರಬೇಕು. HTV ಚಾಲನಾ ಪರವಾನಿಗೆ ಹೊಂದಿ ಕನಿಷ್ಠ ಎರಡು ವರ್ಷಗಳಾಗಿರಬೇಕು. ಚಾಲ್ತಿಯಲ್ಲಿರುವ ನಿರ್ವಾಹಕ ಪರವಾನಗಿ ಮತ್ತು ಕರ್ನಾಟಕ ಬ್ಯಾಡ್ಜ್‌ ಹೊಂದಿರುವುದು ಅವಶ್ಯಕ.

    ವೇತನ;
    ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಎರಡು ವರ್ಷಗಳ ಕಾಲ ಕೆಲಸದ ಮೇಲೆ ತರಬೇತಿ ನೀಡಲಾಗುವುದು. ಈ ಸಮಯದಲ್ಲಿ ಚಾಲಕ ಹುದ್ದೆಗೆ ಮಾಸಿಕ ರೂ.10000, ಚಾಲಕ ಕಂ ನಿರ್ವಾಹಕ ಹುದ್ದೆಗೆ ರೂ.9100 ರೂ ನೀಡಲಾಗುವುದು.
    ಎರಡು ವರ್ಷಗಳ ನಂತರ ನಿರ್ದಿಷ್ಟ ಘಟಕಗಳಿಗೆ ಅಭ್ಯರ್ಥಿಗಳನ್ನು ನೇಮಿಸಲಾಗುವುದು. ಹಾಗೂ ಅಭ್ಯರ್ಥಿಗಳ ವೇತನ 12400-170-12740-14240-320-15840-420-16680-530-18270-640-19550 ರಷ್ಟು ಇರುತ್ತದೆ.

    ಆಯ್ಕೆ ವಿಧಾನ: ಅಭ್ಯರ್ಥಿಗಳನ್ನು ಮೂಲ ದಾಖಲಾತಿಗಳ ಪರಿಶೀಲನೆ/ದೈಹಿಕ ಅರ್ಹತೆಯ ಪರಿಶೀಲನೆ/ಚಾಲನಾ ವೃತ್ತಿ ಪರೀಕ್ಷೆಗೆ ಹಾಜರಾಗಲು ಅಡ್ಮಿಟ್‌ ಕಾರ್ಡ್‌ ನೀಡಲಾಗುವುದು. ಇಲ್ಲಿ ದಿನಾಂಕ, ಸ್ಥಳ, ದಾಖಲೆಗಳ ಕುರಿತು ಮಾಹಿತಿ ಬರುತ್ತದೆ. ಈ ಪರೀಕ್ಷೆಯಲ್ಲಿ ಅರ್ಹತೆಯನ್ನು ಪಡೆದವರಿಗೆ ಒಟ್ಟು 50 ಅಂಕ, ತಲಾ 25 ಅಂಕಗಳಂತೆ ಎರಡು ಬಾರಿ ಚಾಲನಾ ಸಾಮರ್ಥ್ಯ ವೃತ್ತಿ ಪರೀಕ್ಷೆಯನ್ನು ಗಣಕೀಕೃತ ಟ್ರ್ಯಾಕ್‌ನಲ್ಲಿ ಮಾಡಲಾಗುತ್ತದೆ. ಈ ಪರೀಕ್ಷೆಯಲ್ಲಿ 25 ಅಂಕಗಳನ್ನು ಪಡೆದ ಅಭ್ಯರ್ಥಿಗಳಿಗೆ ಮಾತ್ರ ಆಯ್ಕೆಗೆ ಅವಕಾಶ ನೀಡಲಾಗುವುದು. ಚಾಲನಾ ವೃತ್ತಿ ಪರೀಕ್ಷೆಯ ಐದು ವಿವಿಧ ಪರೀಕ್ಷೆಗಳ ಪೈಕಿ ಕನಿಷ್ಠ ಅಂಕಗಳನ್ನು ಗಳಿಸಿದವರು ಮಾತ್ರ ಮುಂದಿನ ಪರೀಕ್ಷೆಗೆ ಹಾಜರಾಗಲು ಅರ್ಹರಾಗುತ್ತಾರೆ.

  • KAS Jobs 2024: ಕೆಪಿಎಸ್‌ಸಿ ಇಂದ ಕೆಎಎಸ್‌ ಹುದ್ದೆಗಳ ನೇಮಕ; 384 ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನ

    KAS Jobs 2024: ಕೆಪಿಎಸ್‌ಸಿ ಇಂದ ಕೆಎಎಸ್‌ ಹುದ್ದೆಗಳ ನೇಮಕ; 384 ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನ

    Karnataka KAS Jobs 2024: ಕರ್ನಾಟಕ ಗೆಜೆಟೆಡ್‌ ಪ್ರೊಬೆಷನರ್‌ ನಿಯಮಗಳಡಿಯಲ್ಲಿ ಗೆಜೆಟೆಡ್‌ ಪ್ರೊಬೆಷನರ್‌ 2023-24 ನೇ ಸಾಲಿನ ಹುದ್ದೆಗಳನ್ನು ಭರ್ತಿ ಮಾಡಲು ಆಯೋಗವು ನಡೆಸುವ ಪೂರ್ವಭಾವಿ ಪರೀಕ್ಷೆಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಹುದ್ದೆಯ ಕುರಿತ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ಒಟ್ಟು 384 ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.

    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಆರಂಭಿಕ ದಿನಾಂಕ; 04-03-2024
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03-04-2024
    ಪೂರ್ವಭಾವಿ ಪರೀಕ್ಷಾ ದಿನಾಂಕ (ತಾತ್ಕಾಲಿಕ) : 05-05-2024

    ಹುದ್ದೆಗಳ ವಿವರ;
    ಹುದ್ದೆ ಹೆಸರು: ಗೆಜೆಟೆಡ್‌ ಪ್ರೊಬೆಷನರ್‌ (ಕೆಎಎಸ್‌ ಹುದ್ದೆಗಳು) ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಹುದ್ದೆ ಸಂಖ್ಯೆ:
    ಗ್ರೂಪ್‌ ಎ ಹುದ್ದೆಗಳು: 159
    ಗ್ರೂಪ್‌ ಬಿ ಹುದ್ದೆಗಳು: 225

    ವಿದ್ಯಾರ್ಹತೆ: ಪದವಿ ಅಥವಾ ಸ್ನಾತಕೋತ್ತರ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಅಭ್ಯರ್ಥಿಗಳು ಹೊಂದಿರಬೇಕು.

    ವಯೋಮಿತಿ: ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗಳು ಕನಿಷ್ಠ ವಯೋಮಿತಿಯನ್ನು ಹೊಂದಿರಬೇಕು ಹಾಗೂ ಗರಿಷ್ಠ ವಯೋಮಿತಿಯನ್ನು ಮೀರಿರಬಾರದು.
    ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ 38 ವರ್ಷಗಳು, ಪ್ರವರ್ಗ 2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ 41 ವರ್ಷಗಳು, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-1 ಅಭ್ಯರ್ಥಿಗಳಿಗೆ 43 ವರ್ಷಗಳು

    ಅರ್ಜಿ ಶುಲ್ಕ: ಸಾಮಾನ್ಯ ಅರ್ಹತೆ ಅಭ್ಯರ್ಥಿಗಳಿಗೆ ರೂ.600, ಪ್ರವರ್ಗ 2(ಎ),2(ಬಿ),3(ಎ),3(ಬಿ) ಗೆ ಸೇರಿದ ಅಭ್ಯರ್ಥಿಗಳಿಗೆ ರೂ.300, ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.50, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ. ನೆಟ್‌ಬ್ಯಾಂಕಿಂಗ್‌, ಡೆಬಿಟ್‌ ಕಾರ್ಡ್‌, ಕ್ರೆಡಿಟ್‌ ಕಾರ್ಡ್‌,ಯುಪಿಐ ಮೂಲಕ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು.

    ಅರ್ಜಿ ಸಲ್ಲಿಸುವುದು ಹೇಗೆ?
    ಅಭ್ಯರ್ಥಿಗಳು ಕೆಪಿಎಸ್‌ಸಿ ವೆಬ್‌ಸೈಟ್‌ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.
    ಹೊಸದಾಗಿ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ಅರ್ಜಿದಾರರು ಕೆಪಿಎಸ್‌ಸಿ ವೆಬ್‌ಸೈಟ್‌ನಲ್ಲಿ https://kpsconline.karnataka.gov.in ಗೆ ಭೇಟಿ ನೀಡಬೇಕು ಮತ್ತು ತಮ್ಮನ್ನು ನೋಂದಾಯಿಸಿಕೊಳ್ಳಲು New Registration ಲಿಂಕ್‌ಅನ್ನು ಕ್ಲಿಕ್ ಮಾಡಬೇಕು.
    ನೋಂದಣಿ ಮತ್ತು ಲಾಗಿನ್‌ ರುಜುವಾತುಗಳನ್ನು ಮಾಡಲು ಇಮೇಲ್‌ ಐಡಿ ಮತ್ತು ಮೊಬೈಲ್‌ ಸಂಖ್ಯೆಯನ್ನು ಇಟ್ಟುಕೊಳ್ಳಬೇಕು.
    ಒಮ್ಮೆ ನೋಂದಾಯಿಸಿದ ಮತ್ತು ಲಾಗಿನ್‌ ಆದ ನಂತರ ಅರ್ಜಿದಾರರ ವಿವರಗಳ ನೋಂದಣಿ ಕ್ಲಿಕ್‌ ಮಾಡಿ ಅಲ್ಲಿ ಕೇಳಲಾದ ಸಂಪೂರ್ಣ ಮಾಹಿತಿಯನ್ನು ಭರ್ತಿ ಮಾಡಬೇಕು.
    ಅಭ್ಯರ್ಥಿಗಳು ಒಮ್ಮೆ ಮಾತ್ರ ಅರ್ಜಿ ಭರ್ತಿ ಮಾಡಬೇಕಾಗುತ್ತದೆ. ಹಾಗಾಗಿ ನಿಮ್ಮ user id ಮತ್ತು passoword ಗಳನ್ನು ಜೋಪಾನವಾಗಿ ಇಟ್ಟುಕೊಳ್ಳಬೇಕು.
    ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಎಲ್ಲಾ ವಿವರಗಳು ಸರಿಯಾಗಿದೆಯೇ ಎಂದು ಪರಿಶೀಲಿಸಬೇಕು. ಅನಂತರ ಸಲ್ಲಿಸು ಬಟನ್‌ ಕ್ಲಿಕ್‌ ಮಾಡಬೇಕು. ಸಲ್ಲಿಸಿದ ನಂತರ ವಿವರಗಳನ್ನು ತಪ್ಪಾಗಿ ಸಲ್ಲಿಸಿದ್ದಲ್ಲಿ ಸರಿಪಡಿಸಿಕೊಳ್ಳಲು ಆಯೋಗಕ್ಕೆ ಪತ್ರ ವ್ಯವಹಾರ ಅಥವಾ ಇ-ಮೇಲ್‌ ಮೂಲಕ ಕಳುಹಿಸುವ ಕೋರಿಕೆಯನ್ನು ಪರಿಗಣಿಸಲಾಗುವುದಿಲ್ಲ.

    ಅರ್ಜಿಗಳನ್ನು ಆನ್‌ಲೈನ್‌ ಮೂಲಕ ಭರ್ತಿ ಮಾಡಿ, ಭಾವಚಿತ್ರ./ಸಹಿ/ವಯೋಮಿತಿ/ವಿದ್ಯಾರ್ಹತೆ ಹಾಗೂ ಕೋರಿದ ಮೀಸಲಾತಿಗೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳನ್ನು ಅಪ್ಲೋಡ್‌ ಮಾಡಿದ ನಂತರ ಶುಲ್ಕವನ್ನು ನೆಟ್‌ಬ್ಯಾಂಕಿಂಗ್‌/ಡೆಬಿಟ್‌ ಕಾರ್ಡ್‌/ಕ್ರೆಡಿಟ್‌ ಕಾರ್ಡ್‌/ಯುಪಿಐ ಮೂಲಕ ಸಂದಾಯ ಮಾಡಬಹುದು.

    ಶುಲ್ಕವನ್ನು ಪಾವತಿಸದ ಹಾಗೂ ದಾಖಲೆಗಳನ್ನು/ಭಾವಚಿತ್ರ/ಸಹಿಯನ್ನು ಅಪ್ಲೋಡ್‌ ಮಾಡದೇ ಇರುವ ಅಸ್ಪಷ್ಟ ದಾಖಲೆಗಳನ್ನು ಅಪ್ಲೋಡ್‌ ಮಾಡಿರುವ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ತೊಂದರೆ ಉಂಟಾದಲ್ಲಿ ಈ ಕೆಳಕಂಡ ಹೆಲ್ಪ್‌ಲೈನ್‌ ನಂಬರ್‌ ಅನ್ನು ಸಂಪರ್ಕಿಸಲು ಸೂಚಿಸಲಾಗಿದೆ. 080-30574957/30574901

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ