Category: Bangalore Jobs

  • ಕಲಬುರಗಿ ಜಿಲ್ಲಾ ಪಂಚಾಯತ್ ನಲ್ಲಿ ವಿವಿಧ ಹುದ್ದೆ

    ಕಲಬುರಗಿ ಜಿಲ್ಲಾ ಪಂಚಾಯತ್ ನಲ್ಲಿ ವಿವಿಧ ಹುದ್ದೆ

    ಕಲಬುರಗಿ ಜಿಲ್ಲಾ ಪಂಚಾಯತಿ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ‌.

    ಹುದ್ದೆಗಳ ವಿವರ : ಬಿ.ಎಫ್.ಟಿ (bare foot technician) ಹುದ್ದೆಗಳ ನೇಮಕಾತಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಒಟ್ಟು ಹುದ್ದೆ : 30

    ಅರ್ಜಿಗಳನ್ನು ಸಲ್ಲಿಸುವವರು ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಸಕ್ರಿಯ ಕೆಲಸಗಾರನಾಗಿರಬೇಕು. ಅಂದರೆ
    ಅರ್ಜಿ ಸಲ್ಲಿಸುವ ವ್ಯಕ್ತಿಯ ಹಿಂದಿನ 3 ವರ್ಷಗಳಲ್ಲಿ ಕನಿಷ್ಠ ವರ್ಷಗಳಲ್ಲಿ 25 ದಿನಗಳಿಗೆ ಕಡಿಮೆ ಇಲ್ಲದಷ್ಟು ಯೋಜನೆಯಡಿ ಕೂಲಿಕಾರನಾಗಿ ಕೆಲಸವನ್ನು ಮಾಡಿರಬೇಕು.

    ವಿದ್ಯಾರ್ಹತೆ: ಕನಿಷ್ಠ 10 ನೇ ತರಗತಿ ತೇರ್ಗಡೆ ಹೊಂದಿರಬೇಕು.

    ವೇತನ : ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ‌ ರೂ. 12,000/- ನೀಡಲಾಗುತ್ತದೆ.

    ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ ಮಹಿಳಾ ಅಭ್ಯರ್ಥಿಗಳಿಗೆ ಸಾಕಷ್ಟು ಪ್ರಾಧಾನ್ಯತೆ ನೀಡಲಾಗುತ್ತದೆ.

    ವಯೋಮಿತಿ: ಅಭ್ಯರ್ಥಿಗಳಿಗೆ ಗರಿಷ್ಠ 45 ವಯಸ್ಸಾಗಿರಬೇಕು.

    ಬಿಎಫ್ ಟಿ ಗಳನ್ನು ಕುಶಲ ಕಾರ್ಮಿಕರೆಂದು(skilled laboures ) ಪರಿಗಣಿಸಿ ಕರ್ತವ್ಯ ಕ್ಕೆ ನಿಯೋಜಿಸಿಕೊಳ್ಳಲಾಗುತ್ತದೆ. ಖಾಯಂ ಹುದ್ದೆ ಆಗಿರುವುದಿಲ್ಲ.

    ಅರ್ಹ ಅಭ್ಯರ್ಥಿಗಳು ಕಲಬುರಗಿ‌ ಜಿಲ್ಲಾ ಪಂಚಾಯತಿಯ ನರೇಗಾ ಶಾಖೆಯಿಂದ ನಿಗದಿತ ನಮೂನೆಯ ಅರ್ಜಿಯನ್ನು ಪಡೆದು ಭರ್ತಿ ಮಾಡಿ, ಅವಶ್ಯ ದಾಖಲಾತಿಗಳೊಂದಿಗೆ ಮಾರ್ಚ್ 30 ರೊಳಗಾಗಿ( ಪ್ರತಿದಿನ ಬೆಳಗ್ಗೆ 10 ರಿಂದ ಸಂಜೆ 5.30 ಗಂಟೆಯವರೆಗೆ) ಅರ್ಜಿ ಸಲ್ಲಿಸಬೇಕು.

    ಹೆಚ್ಚಿನ ಮಾಹಿತಿಗಾಗಿ 9482046044, 9480866010

  • ಆರ್ ಡಿಪಿಆರ್ 189 ಹುದ್ದೆಗಳಿಗೆ ಆಹ್ವಾನ

    ಆರ್ ಡಿಪಿಆರ್ 189 ಹುದ್ದೆಗಳಿಗೆ ಆಹ್ವಾನ

    ರೂರಲ್ ಡೆವಲಪ್ಮೆಂಟ್ ಆಂಡ್ ಪಂಚಾಯತ್ ರಾಜ್ ಡಿಪಾರ್ಟ್ಮೆಂಟ್ ಕರ್ನಾಟಕ(RDPR) ಇಲಾಖೆಯು ಅಗತ್ಯ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ.

    ಹುದ್ದೆಗಳ ವಿವರ: ಆರ್ ಡಿಪಿಆರ್ ಇಲಾಖೆಯಲ್ಲಿ ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಹುದ್ದೆ ಸಂಖ್ಯೆ : 189

    ಹುದ್ದೆಗಳ ವಿವರ : ಟೆಕ್ನಿಕಲ್ ಅಸಿಸ್ಟೆಂಟ್ಸ್ ( ಅಗ್ರಿಕಲ್ಚರ್)-82
    ಟೆಕ್ನಿಕಲ್ ಅಸಿಸ್ಟೆಂಟ್ (ಹೋರಿಕಲ್ಚರ್)-62
    ಟೆಕ್ನಿಕಲ್ ಅಸಿಸ್ಟೆಂಟ್(ಫಾರೆಸ್ಟ್ರಿ)-45

    ಅರ್ಜಿ ಸಲ್ಲಿಕೆ ಆರಂಭಿಕ ದಿನಾಂಕ : 04-03-2021
    ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 25-03-2021(5.30pm)

    ವಿದ್ಯಾರ್ಹತೆ : ಅಂಗೀಕೃತ ಯುನಿವರ್ಸಿಟಿ/ಬೋರ್ಡ್ ನಿಂದ ಅಭ್ಯರ್ಥಿಗಳು ಬಿ‌ಎಸ್ಸಿ/ ಎಂಎಸ್ಸಿ ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

    ವಯೋಮಿತಿ : ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 21ಹಾಗೂ ಗರಿಷ್ಠ 40 ವಯೋಮಿತಿ ಹೊಂದಿರಬೇಕು.

    ಅರ್ಜಿ ಶುಲ್ಕ : ಅಭ್ಯರ್ಥಿಗಳು ಯಾವುದೇ ಅರ್ಜಿಶುಲ್ಕ ಪಾವತಿಸುವಂತಿಲ್ಲ.

    ಅಭ್ಯರ್ಥಿಗಳನ್ನು ಮೆರಿಟ್ ಲಿಸ್ಟ್, ಎಕ್ಸಿಪೀರಿಯನ್ಸ್, ಅಥವಾ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

    ಈ ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳು ಅಪ್ ಡೇ
    ಟೆಡ್ ರೆಸ್ಯೂಮ್ ಜೊತೆಗೆ, ನಿಗದಿತ ನಮೂನೆಯನ್ನು ವೆಬ್‌ಸೈಟ್‌ ನಲ್ಲಿ ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿದ ಅರ್ಜಿಯನ್ನು ಈ ಕೆಳಗಿನ ದಿನಾಂಕ 25-03-2021ರೊಳಗೆ ಸ್ಪೀಡ್ ಪೋಸ್ಟ್ ಅಥವಾ ರಿಜಿಸ್ಟರ್ ಪೋಸ್ಟ್ ಮೂಲಕ ಈ ವಿಳಾಸಕ್ಕೆ ತಲುಪಿಸಬೇಕು.

    Commissioner, Rural Development & Panchayat Raj Department, 2nd Floor, 3rd Stage, Room No. 219, Bangalore – 560001

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ

    https://karnregs.kar.nic.in/

    ನೋಟಿಫಿಕೇಶನ್ ಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • ಅತಿಥಿ ಶಿಕ್ಷಕರು/ಅತಿಥಿ ಉಪನ್ಯಾಸಕರಾಗಿ ಅರ್ಜಿ ಆಹ್ವಾನ

    ಅತಿಥಿ ಶಿಕ್ಷಕರು/ಅತಿಥಿ ಉಪನ್ಯಾಸಕರಾಗಿ ಅರ್ಜಿ ಆಹ್ವಾನ

    ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿರುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (ಕ್ರೈಸ್) ವ್ಯಾಪ್ತಿಯಲ್ಲಿ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಆಂಗ್ಲ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆ/ಪದವಿ ಪೂರ್ವ ವಿಜ್ಞಾನ ವಸತಿ ಕಾಲೇಜುಗಳಲ್ಲಿ ಖಾಲಿ ಇರುವ ಶಿಕ್ಷಕರ/ಉಪನ್ಯಾಸಕರ ಹುದ್ದೆಗಳಿಗೆ ಅತಿಥಿ ಶಿಕ್ಷಕರು/ಅತಿಥಿ ಉಪನ್ಯಾಸಕರುಗಳನ್ನು 2020-21 ನೇ ಸಾಲಿನಲ್ಲಿ ಗೌರವಧನದ ಆಧಾರದ ಮೇಲೆ ಜಿಲ್ಲಾ ಹಂತದಲ್ಲಿ ನಿಯಮಾವಳಿಗಳಿಗೆ ಒಳಪಟ್ಟು ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಆದ್ದರಿಂದ ಅರ್ಹ ಅಭ್ಯರ್ಥಿಗಳು (ನಿರುದ್ಯೋಗಿ ಅರ್ಹ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ ನಿವೃತ್ತ ಶಿಕ್ಷಕರು/ಉಪನ್ಯಾಸಕರು) ಆಯಾ ಜಿಲ್ಲಾ ಕೇಂದ್ರಗಳಲ್ಲಿರುವ ಸಂಬಂಧಿಸಿದ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ/ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ/ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗಳ ಜಿಲ್ಲಾ ಕಚೇರಿಗಳಲ್ಲಿ, ಜಿಲ್ಲಾ ಮಟ್ಟದ ಅಧಿಕಾರಿಗಳನ್ನ/ವಸತಿ ಶಾಲೆ ಮತ್ತು ಕಾಲೇಜುಗಳ ಪ್ರಾಂಶುಪಾಲರನ್ನು ಸಂಪರ್ಕಿಸಿ ಸಂಬಂಧಿಸಿದ ದಾಖಲಾತಿಗಳೊಂದಿಗೆ‌ ಅರ್ಜಿ ಸಲ್ಲಿಸಬಹುದಾಗಿದೆ. ಒಬ್ಬ ಅಭ್ಯರ್ಥಿಯು ಹಲವು ಜಿಲ್ಲೆಗಳಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು.

    ಹೆಚ್ಚಿನ ಮಾಹಿತಿಗಾಗಿ ಸಂಘದ ಅಧಿಕೃತ ವೆಬ್‌ಸೈಟ್‌ www.kries.kar.nic.in ಗೆ ಭೇಟಿ ನೀಡಬಹುದು.

  • ಎನ್ ಡಿಆರ್ ಐ ವಿವಿಧ ಹುದ್ದೆಗಳಿಗೆ ನೇಮಕ

    ಎನ್ ಡಿಆರ್ ಐ ವಿವಿಧ ಹುದ್ದೆಗಳಿಗೆ ನೇಮಕ

    ನ್ಯಾಷನಲ್ ಡೈರಿ ರಿಸರ್ಚ್ ಇನ್ಸ್ಟಿಟ್ಯೂಟ್ (ಎನ್ ಡಿ ಆರ್ ಐ) ಹುದ್ದೆಗಳಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು 04, ಮಾರ್ಚ್ ಕೊನೆಯ ದಿನಾಂಕವಾಗಿದೆ. ಒಟ್ಟು ಹುದ್ದೆಗಳ ವಿವರ, ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಶುಲ್ಕ ಇತ್ಯಾದಿ ವಿವರಗಳನ್ನು ಮುಂದೆ ನೀಡಲಾಗಿದೆ.

    ಕ್ವಿಕ್ ಲುಕ್
    ಅರ್ಜಿ ಸಲ್ಲಿಸುವುದು ಹೇಗೆ?: ಆನ್ಲೈನ್ ಮೂಲಜ
    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 25-02-2021
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 04-03-2021(5pm)
    ಅರ್ಜಿ ಶುಲ್ಕ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.

    ಎನ್ ಡಿಆರ್ ಐ ನಲ್ಲಿರುವ ಹುದ್ದೆಗಳಿಗೆ ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಆನ್ಲೈನ್ ಹೊರತುಪಡಿಸಿ ಬೇರೆ ಯಾವುದೇ ವಿಧಾನದಲ್ಲಿ ಅರ್ಜಿ ಸಲ್ಲಿಸುವಂತೆ ಇಲ್ಲ.

    ನ್ಯಾಷನಲ್ ಡೈರಿ ರಿಸರ್ಚ್ ಇನ್ಸ್ಟಿಟ್ಯೂಟ್ (ಎನ್ ಡಿ ಆರ್ ಐ) ನಲ್ಲಿ ಎಕ್ಸಿಕ್ಯುಟಿವ್ ಮತ್ತು ಸಿಇಒ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

    ಸಿಇಓ ಹುದ್ದೆಗೆ ಆನ್ಲೈನ್ ಸಂದರ್ಶನ ದಿನಾಂಕ : 05-03-2021

    ಬಿಸಿನೆಸ್ ಎಕ್ಸಿಕ್ಯುಟಿವ್ ಆನ್ಲೈನ್ ಸಂದರ್ಶನ ದಿನಾಂಕ : 06-03-2021

    ಹುದ್ದೆ ಸಂಖ್ಯೆ :3

    ವಿದ್ಯಾರ್ಹತೆ: ಚೀಫ್ ಎಕ್ಸಿಕ್ಯುಟಿವ್ (ಸಿಇಒ) -1 – ಎಂಬಿಎ, ಪೋಸ್ಟ್ ಗ್ರಾಜ್ಯುಯೇಶನ್

    ಬ್ಯುಸಿನೆಸ್ ಡೆವಲಪ್ಮೆಂಟ್ ಎಕ್ಸಿಕ್ಯುಟಿವ್( ಡೈರಿ ಆಂಡ್ ಫುಡ್ ಪ್ರೊಸೆಸಿಂಗ್)-1-ಬಿ.ಟೆಕ್

    ಬ್ಯುಸಿನೆಸ್ ಡೆವಲಪ್ಮೆಂಟ್ ಎಕ್ಸಿಕ್ಯುಟಿವ್( ಡೈರಿ ಪ್ರೊಡಕ್ಷನ್)-1-ಬಿವಿಎಸ್ ಸಿ ಮತ್ತು ಎ.ಎಚ್

    ವಯೋಮಿತಿ: ಚೀಫ್ ಎಕ್ಸಿಕ್ಯುಟಿವ್ ಆಫೀಸರ್ (ಸಿಒಇ) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ 50 ವರ್ಷ ವಯಸ್ಸಾಗಿರಬೇಕು.

    ಬಿಸ್ಯುನೆಸ್ ಡೆವಲಪ್ಮೆಂಟ್ ಎಕ್ಸಿಕ್ಯುಟಿವ್ ಹುದ್ದೆಗೆ ಅರ್ಜಿ ಸಲ್ಲಿಸುವ ಆಸಕ್ತ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ ವಯಸ್ಸಾಗಿರಬೇಕು.

    ವೇತನ : ಸಿಓಇ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.1,00,000/- ವೇತನವಿರುತ್ತದೆ.

    ಬ್ಯುಸಿನೆಸ್ ಡೆವಲಪ್ಮೆಂಟ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ. 35,000/- ವೇತನ ನಿಗದಿಪಡಿಸಲಾಗಿದೆ.

    ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಿ ಅರ್ಜಿ ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಈ ಕೆಳಗಿನ ಇ-ಮೈಲ್ ಗೆ 04-03-2021 ( 5 pm)ರೊಳಗೆ ಇ- ಮೈಲ್ ಮೂಲಕ ಸಲ್ಲಿಸಬೇಕು.

    ಇ-ಮೈಲ್ ಐಡಿ – [email protected]

    ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

    http://www.ndri.res.in/ndri/Design/Index.html

  • ಕೆಐಒಸಿಎಲ್ ನಲ್ಲಿ ಉದ್ಯೋಗವಕಾಶ

    ಕೆಐಒಸಿಎಲ್ ನಲ್ಲಿ ಉದ್ಯೋಗವಕಾಶ

    ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಲಿಮಿಟೆಡ್ (ಕುದುರೆಮುಖ ಐರನ್ ಓರ್ ಕಂಪನಿ ಲಿಮಿಟೆಡ್) ( ಕೆಐಒಸಿಎಲ್ ) ನಲ್ಲಿ ವಿವಿಧ ಹುದ್ದೆಗಳಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಮಾರ್ಚ್ 4 ಕೊನೆಯ ದಿನಾಂಕವಾಗಿದೆ. ಒಟ್ಟು ಹುದ್ದೆಗಳ ವಿವರ, ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಶುಲ್ಕ ಇತ್ಯಾದಿ ವಿವರಗಳನ್ನು ಮುಂದೆ ನೀಡಲಾಗಿದೆ.

    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 27 ಜನವರಿ 2021
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 04-03-2021

    ಕೆಐಒಸಿಎಲ್ ನಲ್ಲಿ ಜನರಲ್ ಮ್ಯಾನೇಜರ್, ಜ್ಯೂನಿಯರ್ ಜನರಲ್ ಮ್ಯಾನೇಜರ್ (2) ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

    ಅರ್ಜಿ ಶುಲ್ಕ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಡಿಮಾಂಡ್ ಡ್ರಾಫ್ಟ್ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

    ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪಿಡ್ಬ್ಯುಡಿ/ಎಕ್ಸ್ ಸರ್ವಿಸ್ ಮೆನ್ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ. ಉಳಿದ ಎಲ್ಲಾ ಅಭ್ಯರ್ಥಿಗಳು ರೂ.500/- ಅರ್ಜಿ ಶುಲ್ಕ ಪಾವತಿಸ ಬೇಕಾಗುತ್ತದೆ.

    ಆಯ್ಕೆ ಪ್ರಕ್ರಿಯೆ : ಅಭ್ಯರ್ಥಿಗಳನ್ನು ಸಂದರ್ಶನ ದ ಮೂಲಕ ಆಯ್ಕೆ ಮಾಡಲಾಗುತ್ತದೆ.

    ವಯೋಮಿತಿ : ಜನರಲ್ ಮ್ಯಾನೇಜರ್ (HR) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ 55 ವರ್ಷ ಆಗಿರಬೇಕು. ಜ್ಯೂನಿಯರ್ ಜನರಲ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ 53 ವಯೋಮಿತಿ ಇರಬೇಕು.

    ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ,ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ,ಪಿಡ್ಬ್ಯುಡಿ ಒಬಿಸಿ ಅಭ್ಯರ್ಥಿಗಳಿಗೆ 8 ವರ್ಷ, ಪಿಡ್ಬ್ಯುಡಿ (ಎಸ್ಸಿ/ಎಸ್ಟಿ) ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ವಿದ್ಯಾರ್ಹತೆ : ಜನರಲ್ ಮ್ಯಾನೇಜರ್ (ಎಚ್. ಆರ್) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗ್ರಾಜ್ಯುಯೇಟ್,ಎಂಬಿಎ, ಎಂಎಸ್ ಡಬ್ಲ್ಯೂ ವಿದ್ಯಾರ್ಹತೆ ಹೊಂದಿರಬೇಕು. ಜ್ಯೂನಿಯರ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗ್ರಾಜ್ಯುಯೇಶನ್ ಜೊತೆಗೆ ಮೆಂಬರ್ ಆಫ್ ದಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ ಆಫ್ ಇಂಡಿಯಾ/ಇನ್ಸ್ಟಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ ಆಫ್ ಇಂಡಿಯಾ ಅರ್ಹತೆ ಹೊಂದಿರಬೇಕು.

    ವೇತನ : ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ. 1,95,000/- ವೇತನ ಇರುತ್ತದೆ.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ

    ನೋಟಿಫಿಕೇಶನ್ ಗಾಗಿ ಈ ಲಿಂಕ್ ಕ್ಲಿಕ್ ಮಾಡಿ

    ಓನ್ಲೈನ್ ಅಪ್ಲಿಕೇಶನ್ ಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • ಕೆವಿಎಸ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ : ನೇರ ಸಂದರ್ಶನ : ದಿನಾಂಕ 04-03-2021 ರಂದು

    ಕೆವಿಎಸ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ : ನೇರ ಸಂದರ್ಶನ : ದಿನಾಂಕ 04-03-2021 ರಂದು

    ಕೇಂದ್ರೀಯ ವಿದ್ಯಾಲಯ ಸಂಘಟನ್ ಬೆಂಗಳೂರು (ಕೆವಿಎಸ್) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅಭ್ಯರ್ಥಿಗಳು ದಿನಾಂಕ 04-03-2021 ರಂದು ನೇರ ಸಂದರ್ಶನಕ್ಕೆ ಹೋಗಬಹುದು. ಹುದ್ದೆಗಳ ವಿವರ, ವಿದ್ಯಾರ್ಹತೆ, ನೇಮಕಾತಿ, ಅರ್ಜಿ ಶುಲ್ಕ ಇತ್ಯಾದಿ ವಿವರಗಳನ್ನು ಮುಂದೆ ನೀಡಲಾಗಿದೆ.

    ಟೀಚರ್ಸ್, ಡಿಇಒ, ಇನ್ಸ್ಟ್ರಕ್ಟರ್ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ವಿವಿಧ ಹುದ್ದೆಗಳ ವಿವರ ಈ ಕೆಳಗಿನಂತಿವೆ :
    ಪ್ರೈಮರಿ ಟೀಚರ್ಸ್(ಪಿಆರ್ ಟಿ), ಪಿಆರ್ ಟಿ ಮ್ಯೂಸಿಕ್, ಟ್ರೈನ್ಡ್ ಗ್ರಾಜ್ಯುಯೇಟ್ ಟೀಚರ್ಸ್ (ಟಿಜಿಟಿ) ಕಂಪ್ಯೂಟರ್ ಇನ್ಸ್ಟ್ರಕ್ಟರ್, ಡಾಟಾ ಎಂಟ್ರಿ ಅಪರೇಟರ್ಸ್,ಕೋಚಸ್ (ಪಿಇಟಿ)

    ವಿದ್ಯಾರ್ಹತೆ : ಪ್ರೈಮರಿ ಟೀಚರ್ಸ್ (ಪಿಆರ್.ಟಿ)ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸೀನಿಯರ್ ಸೆಕೆಂಡರಿ, ಬಿಎಡ್,ಡಿಎಡ್ ಹೊಂದಿರಬೇಕು. ಪಿಆರ್ ಟಿ ಮ್ಯೂಸಿಕ್ ಹುದ್ದೆಗೆ ಡಿಪ್ಲೋಮಾ, ಡಿಗ್ರಿ ಹೊಂದಿರಬೇಕು.ಟ್ರೈನ್ಡ್ ಗ್ರಾಜ್ಯುಯೇಟ್ ಟೀಚರ್ಸ್(ಟಿಜಿಟಿ) ಹುದ್ದೆಗೆ ಬ್ಯಾಚುಲರ್ಸ್ ಡಿಗ್ರಿ, ಬಿ.ಎಡ್ ವಿದ್ಯಾರ್ಹತೆ ಪಡೆದಿರಬೇಕು.ಕಂಪ್ಯೂಟರ್ ಇನ್ಸ್ಟ್ರಕ್ಟರ್ ಹುದ್ದೆಗೆ ಡಿಗ್ರಿ, ಮಾಸ್ಟರ್ಸ್ ಡಿಗ್ರಿ, ಬಿ.ಇ ಅಥವಾ ಬಿ.ಟೆಕ್,ಬಿ.ಎಸ್ಸಿ,ಬಿಸಿಎ,ಎಂಸಿಎ, ಎಂಎಸ್ಸಿ ಪಡೆದಿರಬೇಕು. ಡಾಟಾ ಎಂಟ್ರಿ ಅಪರೇಟರ್ ಹುದ್ದೆಗೆ ಸೀನಿಯರ್ ಸೆಕೆಂಡರಿ ಸ್ಕೂಲ್ ಪಾಸಾಗಿರಬೇಕು, ಕೋಚಸ್ (ಪಿ.ಇ.ಟಿ) ಗೆ ಬಿ.ಪಿ‌ಎಡ್ ವಿದ್ಯಾರ್ಹತೆ ಹೊಂದಿರಬೇಕು.

    ಅರ್ಜಿ ಶುಲ್ಕ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ.

    ವಯೋಮಿತಿ : ಕೆವಿಎಸ್ ನೇಮಕಾತಿ ನಿಯಮಾನುಸಾರ ಅಭ್ಯರ್ಥಿಗಳು ವಯೋಮಿತಿ ಹೊಂದಿರಬೇಕು.

    ಆಸಕ್ತ ಅಭ್ಯರ್ಥಿಗಳು ತಮ್ಮ ಎಲ್ಲಾ ದಾಖಲೆಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ದಿನಾಂಕ 04-03-2021ರ ಬೆಳಗ್ಗೆ 10 ಗಂಟೆಗೆ ಹಾಜರಿರಬೇಕು.

    ಕಚೇರಿ ವಿಳಾಸ : Kendriya Vidyalaya, Railway colony, Yeshwanthpur, Bangalore-560022

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿಕ