Category: Bangalore Jobs

  • ಜನತಾ ಸೇವಾ ಕೋಅಪರೇಟಿವ್ ಬ್ಯಾಂಕ್ ನಲ್ಲಿ ವಿವಿಧ ಹುದ್ದೆ : ಈ ಕೂಡಲೇ ಅರ್ಜಿ ಸಲ್ಲಿಸಿ

    ಜನತಾ ಸೇವಾ ಕೋಅಪರೇಟಿವ್ ಬ್ಯಾಂಕ್ ( ಜೆಎಸ್ ಸಿಬಿ) ಬೆಂಗಳೂರು, ಇಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು.

    ಹುದ್ದೆ : ಡಾಟಾ ಬೇಸ್ ಅಡ್ಮಿನಿಸ್ಟ್ರೇಟರ್ ( ಡಿಬಿಎ)- 2 ಹುದ್ದೆಗಳು ಹಾಗೂ ಜ್ಯೂನಿಯರ್ ಅಸಿಸ್ಟೆಂಟ್ – 10 ಹುದ್ದೆಗಳು

    ವಯೋಮಿತಿ : ಅಭ್ಯರ್ಥಿಗಳಿಗೆ ಕನಿಷ್ಠ 18 ಹಾಗೂ ಗರಿಷ್ಠ 35 ವರ್ಷ ಮೀರಿರಬಾರದು.

    ಪರಿಶಿಷ್ಟ ಜಾತಿ/ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ಅಭ್ಯರ್ಥಿಗಳು ಅರ್ಜಿಯ ಜೊತೆಗೆ ದಾಖಲೆಗಳನ್ನು ಈ ಕೆಳಗಿನ ವಿಳಾಸಕ್ಕೆ ನವೆಂಬರ್ 30 ರೊಳಗೆ ಸಲ್ಲಿಸಬೇಕು.

    ವಿಳಾಸ : Janatha Seva Cooperative Bank, Post Box no.3, Hampinagara, Bangalore-560104

    ವಿದ್ಯಾರ್ಹತೆ : ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯದಿಂದ ಡಿಗ್ರಿಯನ್ನು ಪಡೆದಿರಬೇಕು.

    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 17-11-2021

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30-11-2021

    ಹೆಚ್ಚಿನ ಮಾಹಿತಿಗಾಗಿ ಈ ನೋಟಿಫಿಕೇಶನ್ ನೋಡಿ

  • ಬೆಂಗಳೂರು ನಗರ ಜಿಲ್ಲೆಯಲ್ಲಿ 357 ವಿವಿಧ ಹುದ್ದೆ ; ಈ ಕೂಡಲೇ ಅರ್ಜಿ ಸಲ್ಲಿಸಿ

    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಂಗಳೂರು ನಗರ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 06 ಶಿಶು ಅಭಿವೃದ್ಧಿ ಯೋಜನೆಗಳ ವ್ಯಾಪ್ತಿಯಲ್ಲಿ ಖಾಲಿ ಇರುವ 97 ಅಂಗನವಾಡಿ ಕಾರ್ಯಕರ್ತೆಯರ ಹಾಗೂ 260 ಅಂಗನವಾಡಿ ಸಹಾಯಕಿಯರ ಗೌರವ ಧನ ಆಧಾರಿತ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಆನ್ಲೈನ್ ಮೂಲಕ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

    ದಿನಾಂಕ : 16-09-2021 ರಿಂದ 16-10-2021 ರ ತನಕ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

  • ಭಾರತ್ ಎಲೆಕ್ಟ್ರಾನಿಕ್ಸ್ ನಲ್ಲಿ 511 ಹುದ್ದೆಗಳಿಗೆ ಅರ್ಜಿ ಆಹ್ವಾನ, ಅರ್ಜಿ ಸಲ್ಲಿಸಲು ಆಗಸ್ಟ್ 15 ಕೊನೇ ದಿನಾಂಕ

    ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಒಂದು ನವರತ್ನ ಕಂಪನಿ‌ ಮತ್ತು ರಕ್ಷಣಾ ಮಂತ್ರಾಲಯದ ಅಧೀನ ಭಾರತದ ಪ್ರಮುಖ ವೃತ್ತಿಪರ ಎಲೆಕ್ಟ್ರಾನಿಕ್ಸ್ ಕಂಪನಿಗೆ ಬೆಂಗಳೂರು ಸಂಕೀರ್ಣದಲ್ಲಿ ಗುತ್ತಿಗೆಯ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

    ಹುದ್ದೆ : ಶಿಕ್ಷಣಾರ್ಥಿ ಇಂಜಿನಿಯರ್- 1 –
    ಯೋಜನೆ ಇಂಜಿನಿಯರ್ – 1

    ವಿದ್ಯಾರ್ಹತೆ : ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ / ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯೂನಿಕೇಶನ್ / ಟೆಲಿಕಮ್ಯುನಿಕೇಶನ್/ ಕಮ್ಯೂನಿಕೇಶನ್/ ಮೆಕ್ಯಾನಿಕಲ್/ ಎಲೆಕ್ಟ್ರಿಕಲ್/ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ನ ಇಂಜಿನಿಯರಿಂಗ್ ವಿಷಯದಲ್ಲಿ ಮಾನ್ಯತೆ ಪಡೆದ ಸಂಸ್ಥೆ / ವಿಶ್ವವಿದ್ಯಾಲಯದಿಂದ ಪೂರ್ಣಕಾಲಿಕ ಬಿ.ಇ/ಬಿ.ಟೆಕ್ ಇಂಜಿನಿಯರಿಂಗ್ ಪಡೆದಿರಬೇಕು.

    ಹುದ್ದೆಗಳ ಸಂಖ್ಯೆ : ಶಿಕ್ಷಣಾರ್ಥಿ ಇಂಜಿನಿಯರ್ -1 – 308 ಹುದ್ದೆಗಳು. ವೇತನ : 1 ನೇ ವರ್ಷ – ರೂ.25,000/-
    2 ನೇ ವರ್ಷ – ರೂ.28,000/-
    3 ನೇ ವರ್ಷ – ರೂ. 31,000/-
    ಯೋಜನೆ ಇಂಜಿನಿಯರ್ -1 – 203 ಹುದ್ದೆಗಳು. 1 ನೇ ವರ್ಷ ರೂ.35,000/-, 2 ನೇ ವರ್ಷ : ರೂ.40,000/-, 3 ನೇ ವರ್ಷ : ರೂ.45,000/-, 4 ನೇ ವರ್ಷ : ರೂ.50,000/-

    ಹುದ್ದೆ ಸ್ಥಳ : ಬೆಂಗಳೂರು

    ವಯೋಮಿತಿ : ಶಿಕ್ಷಣಾರ್ಥಿ ಇಂಜಿನಿಯರ್ ಹುದ್ದೆಗೆ ಅಭ್ಯರ್ಥಿಗಳ ವಯೋಮಿತಿಯು ಗರಿಷ್ಠ 25 ವರ್ಷ, ಹಾಗೂ ಯೋಜನೆ ಇಂಜಿನಿಯರ್ ಹುದ್ದೆಗೆ ಗರಿಷ್ಠ 28 ವರ್ಷ ಮೀರಿರಬಾರದು.

    ಅರ್ಜಿ ಶುಲ್ಕ :ಶಿಕ್ಷಣಾರ್ಥಿ ಇಂಜಿನಿಯರ್ ಹುದ್ದೆಗೆ ಜನರಲ್,ಇಡಬ್ಲ್ಯುಎಸ್, ಒಬಿಸಿ ಅಭ್ಯರ್ಥಿಗಳು ರೂ.500/- ಅರ್ಜಿ ಶುಲ್ಕವನ್ನು ಪಾವತಿಸಬೇಕು. ಯೋಜನೆ ಇಂಜಿನಿಯರ್ ಹುದ್ದೆಗೆ ಜನರಲ್, ಇಡಬ್ಲ್ಯುಎಸ್, ಒಬಿಸಿ ಅಭ್ಯರ್ಥಿಗಳು ರೂ.200/- ಅರ್ಜಿ ಶುಲ್ಕವನ್ನು ಪಾವತಿಸಬೇಕು.

    ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15-08-2021

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು www.bel-india.in ಗೆ ಭೇಟಿ ನೀಡಬಹುದು.

  • ದಿ ಜನತಾ ಕೋ ಅಪರೇಟಿವ್ ಬ್ಯಾಂಕ್ ಲಿ ನಲ್ಲಿ ನೇಮಕಾತಿ ಪ್ರಕಟಣೆ

    ದಿ ಜನತಾ ಕೋ- ಅಪರೇಟಿವ್ ಬ್ಯಾಂಕ್ ಲಿ. ಮಲ್ಲೇಶ್ವರಂ ಬೆಂಗಳೂರು ಇಲ್ಲಿ ಖಾಲಿ ಇರುವ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗಾಗಿ ಸಂದರ್ಶನದ ಮೂಲಕ ನೇರ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ವಿದ್ಯಾರ್ಹತೆ : ಪದವಿ ಜೊತೆಗೆ (ಎ) ಸಿಎಐಐಬಿ/ಡಿಬಿಎಫ್/ಡಿಪ್ಲೋಮಾ ಇನ್ ಕೋ ಅಪರೇಟಿವ್ ಬಿಜಿನೆಸ್ ಮ್ಯಾನೇಜ್ಮೆಂಟ್ ಅಥವಾ ತತ್ಸಮಾನ ಅರ್ಹತೆ ಅಥವಾ (ಬಿ) ಚಾರ್ಟರ್ಡ್ / ಕಾಸ್ಟ್ ಅಕೌಂಟೆಂಟ್ಸ್ ಅಥವಾ ( ಸಿ) ಯಾವುದೇ ಸ್ನಾತಕೋತ್ತರ ಪದವಿ.

    ವಯೋಮಿತಿ: 35 ವರ್ಷ ಮೇಲ್ಪಟ್ಟು 65 ವರ್ಷದೊಳಗೆ.

    ವೇತನ : ಒಟ್ಟುಗೂಡಿಸಿದ ಮಾಸಿಕ ವೇತನ : ರೂ.1,00,000/-

    ಅನುಭವ: ಬ್ಯಾಂಕಿಂಗ್ ವಲಯದ ಒಂದು ಸಂಸ್ಥೆಯಲ್ಲಿ ಮಧ್ಯಮ/ಹಿರಿಯ ಹಂತದಲ್ಲಿ ಕನಿಷ್ಠ ಹತ್ತು ವರ್ಷಗಳ ಸತತ ಸೇವೆ ಸಲ್ಲಿಸಿದ ಅನುಭವ ಇರುವುದು ಕಡ್ಡಾಯ.

    ಅವಧಿ: ಹುದ್ದೆಯ ಅವಧಿ 6 ವರ್ಷಗಳು.
    ಈ ಹುದ್ದೆಯ ಸ್ವರೂಪ ಗುತ್ತಿಗೆ ನಿಯಮಗೊಳಪಟ್ಟಂತೆ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 09.08.2021

    ಅರ್ಜಿ ಸಲ್ಲಿಸುವ ವಿಧಾನ: ಅರ್ಹ ಅಭ್ಯರ್ಥಿಗಳು ನಿಗದಿತ ವೆಬ್‌ಸೈಟ್‌ ನಿಂದ ಅರ್ಜಿ ನಮೂನೆಯನ್ನು www.jcbank.in ನಿಂದ ಡೌನ್‌ಲೋಡ್ ಮಾಡಿಕೊಂಡು ಅಥವಾ ಬ್ಯಾಂಕಿನಿಂದ ಖುದ್ದಾಗಿ ಪಡೆದುಕೊಂಡು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಲಗತ್ತಿಸಿಕೊಂಡು ಮುಚ್ಚಿದ ಲಕೋಟೆಯಲ್ಲಿ ಬ್ಯಾಂಕಿನ‌ ವಿಳಾಸಕ್ಕೆ ಕಳುಹಿಸಬೇಕು.

    ಹೆಚ್ಚಿನ ವಿವರಗಳಿಗಾಗಿ: ದಿ ಜನತಾ ಕೋ ಅಪರೇಟಿವ್ ಬ್ಯಾಂಕ್ ಲಿ. ಮುಖ್ಯ ಕಾರ್ಯನಿರ್ವಹಣಾಧಿಕಾರಿ, 9449842016

  • ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿ ಕುಲಪತಿ ಹುದ್ದೆಯ ನೇಮಕಾತಿ

    ಕೋಲಾರದಲ್ಲಿರುವ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿಯ ಹುದ್ದೆಗೆ ಕರ್ನಾಟಕ ರಾಜ್ಯ ವಿಶ್ವ ವಿದ್ಯಾಲಯಗಳ ಅಧಿನಿಯಮ -2000 ಪ್ರಕರಣ 14(2) ರ ಉಪಬಂಧಗಳನುಸಾರ ನೇಮಕಾತಿ ಮಾಡಲು ಈ ಕೆಳಕಂಡ ಅರ್ಹತೆಯುಳ್ಳ ಪ್ರಾಧ್ಯಾಪಕರ/ ಶಿಕ್ಷಣ ತಜ್ಞರುಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

    ಉನ್ನತ ಮಟ್ಟದ ಆಡಳಿತ, ಶೈಕ್ಷಣಿಕ ಹಾಗೂ ಸಂಶೋಧನಾ ಸಾಮರ್ಥ್ಯ, ಪ್ರಾಮಾಣಿಕತೆ, ಸಮಗ್ರತೆ/ ಋಜತ್ವ ನೈತಿಕ ಮೌಲ್ಯಗಳನ್ನು ಹಾಗೂ ಸಾಂಸ್ಥಿಕ ಬದ್ಧತೆಯನ್ನು ಹೊಂದಿರತಕ್ಕದ್ದು.

    ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರಾಗಿ ಕನಿಷ್ಠ 10 ವರ್ಷಗಳ ಸೇವೆ ಸಲ್ಲಿಸಿದ ಅಥವಾ ವಿಖ್ಯಾತ ಸಂಶೋಧನಾ/ ಅಥವಾ ಶೈಕ್ಷಣಿಕ ಆಡಳಿತ ಸಂಸ್ಥೆಗಳಲ್ಲಿ ಕನಿಷ್ಠ 10 ವರ್ಷಗಳು ಕಾರ್ಯನಿರ್ವಹಿಸಿದ ಅನುಭವವನ್ನು ಹಾಗೂ ರುಜುವಾತದ ಶೈಕ್ಷಣಿಕ ಅಗ್ರಗಾಮಿತ್ವವನ್ನು ಹೊಂದಿರತಕ್ಕದ್ದು.

    ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಯ ನೇಮಕಾತಿಗೆ ಉಮೇದುವಾರಿಕೆ ಸಲ್ಲಿಸಬಯಸುವ ಆಸಕ್ತರು ತಮ್ಮ ವಿದ್ಯಾರ್ಹತೆ, ಸಂಶೋಧನೆ, ಶೈಕ್ಷಣಿಕ ಮತ್ತು ಆಡಳಿತಾತ್ಮಕ ಅನುಭವಗಳು, ಸಾಧನೆಗಳು ಹಾಗೈ ಇತರೆ ವಿವರಗಳನ್ನು ಯುಜಿಸಿಯಿಂದ‌ ನಿಗದಿಪಡಿಸಲಾಗಿರುವ ನಮೂನೆಯಲ್ಲಿ ಭರ್ತಿ ಮಾಡಿ ಮುದ್ರಿತ ಅರ್ಜಿಗಳನ್ನು ತ್ರಿಪ್ರತಿಗಳಲ್ಲಿ ಈ ನೇಮಕಾತಿ ಜಾಹೀರಾತು ಪ್ರಕಟಣೆಯಾದ 15 ದಿನದೊಳಗೆ ಸ್ವೀಕೃತವಾಗುವಂತೆ ” ಸರಕಾರದ ಅಪರ ಮುಖ್ಯ ಕಾರ್ಯದರ್ಶಿ, ಉನ್ನತ ಶಿಕ್ಷಣ ಇಲಾಖೆ, 6 ನೇ ಮಹಡಿ, ಬಹುಮಹಡಿಗಳ ಕಟ್ಟಡ, ಬೆಂಗಳೂರು – 560001 ” ಇವರಿಗೆ ಸಲ್ಲಿಸತಕ್ಕದ್ದು.

    ಹೆಚ್ಚಿನ ವಿವರ ಈ ಕೆಳಗೆ ನೀಡಲಾಗಿದೆ.

  • ಬೆಂಗಳೂರಿನ ಜಿಪಿಒ ಅಂಚೆ ವಿಭಾಗದಲ್ಲಿ ಕೆಲಸ, ನೇರ ಸಂದರ್ಶನ, ಎಸ್ ಎಸ್ ಎಲ್ ಸಿ ಪಾಸಾದವರಿಗೆ ಆದ್ಯತೆ

    ಭಾರತೀಯ ಅಂಚೆ ಇಲಾಖೆ ವತಿಯಿಂದ ಬೆಂಗಳೂರಿನ ಜಿಪಿಒ ಅಂಚೆ ವಿಭಾಗದಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ವಿವರಗಳನ್ನು ಈ ಕೆಳಗೆ ನೀಡಲಾಗಿದೆ.

    ಹುದ್ದೆ : ಅಂಚೆ ಜೀವ ವಿಮೆ ಏಜೆಂಟ್ ಆಗಿ ಕಾರ್ಯನಿರ್ವಹಿಸಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

    ವಯೋಮಿತಿ : 18 ರಿಂದ 60 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

    ವಿದ್ಯಾರ್ಹತೆ : ಎಸ್ ಎಸ್ ಎಲ್ ಸಿ ಪಾಸಾಗಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

    ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ತಮ್ಮ ಆಧಾರ್ ಕಾರ್ಡ್, ಪಾನ್ ಕಾರ್ಡ್, ಎಸ್ ಎಸ್ ಎಲ್ ಸಿ ಅಂಕಪಟ್ಟಿಯ ಮೂಲ ಪ್ರತಿ ಹಾಗೂ 2 ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳೊಂದಿಗೆ ಬೆಂಗಳೂರು ಜಿಪಿಓ ಅಂಚೆ ಕಚೇರಿಯಲ್ಲಿ ಆಗಸ್ಟ್ 5 ರಿಂದ 7 ರವರೆಗೆ ನಡೆಯುವ ಸಂದರ್ಶನದಲ್ಲಿ ಭಾಗಿಯಾಗಬಹುದು.

    ಹೆಚ್ಚಿನ ಮಾಹಿತಿಗಾಗಿ ದೂ.ಸಂ.080 22850002, 9901354022 ಗೆ ಸಂಪರ್ಕಿಸಬಹುದಾಗಿದೆ.