Category: Govt Jobs

  • ನೇರ ಸಂದರ್ಶನಕ್ಕೆ ಆಹ್ವಾನ

    ನೇರ ಸಂದರ್ಶನಕ್ಕೆ ಆಹ್ವಾನ

    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಇಲಾಖೆಯಡಿ ಇವರ ಅಧೀನ‌ ಕೋವಿಡ್ ಕೇರ್ ಕೇಂದ್ರ ಮತ್ತು ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸಲು ವೈದ್ಯಾಧಿಕಾರಿಗಳು, ಶುಶ್ರೂಷಕರು, ಗ್ರೂಪ್ ಡಿ ಹುದ್ದೆಗಳಿಗೆ ಕೋವಿಡ್ 19 ಕರ್ತವ್ಯಕ್ಕಾಗಿ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ಮೆರಿಟ್ ಕಂ ರೊಸ್ಟರ್ ಆಧಾರ 06 ತಿಂಗಳ ಅವಧಿಗೆ ಅಥವಾ ನೇರ ನೇಮಕಾತಿ ಹುದ್ದೆಗಳು ಭರ್ತಿಯಾಗುವವರೆಗೆ, ನೇರ ಸಂದರ್ಶನದ ಮೂಲಕ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಆಸಕ್ತರು, ದಿನಾಂಕ : 30-04-2021 ರಂದು ಬೆಳಿಗ್ಗೆ 10:00 ಗಂಟೆಯಿಂದ ಜಿಲ್ಲಾ ಆರೋಗ್ಯ ಮತ್ತು ಕಲ್ಯಾಣಾಧಿಕಾರಿಗಳ ಕಛೇರಿ, ಎನ್.ಪಿ.ಸಿ ಆಸ್ಪತ್ರೆ, ಆವರಣ, ಮೈಸೂರು ಇಲ್ಲಿಗೆ ನೇರ ಸಂದರ್ಶನಕ್ಕೆ ಹಾಜರಾಗಬಹುದು.

    ಮೆಡಿಕಲ್ ಆಫೀಸರ್ :ಎಂಬಿಬಿಎಸ್ ವಿದ್ಯಾರ್ಹತೆಯನ್ನು ಹೊಂದಿದ್ದು, ಒಟ್ಟು 18 ಪೋಸ್ಟ್ ಗಳು ಇವೆ‌ ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 60,000/- ವೇತನವಿರುತ್ತದೆ.
    ನರ್ಸಿಂಗ್ ಆಫೀಸರ್ : ಬಿಎಸ್ಸಿ/ಜಿಎನ್ ಎಂ/ ಡಿಪ್ಲೋಮಾ ನರ್ಸಿಂಗ್ ರಿಜಿಸ್ಟ್ರರ್ಡ್ ಇನ್ ಕರ್ನಾಟಕ ನರ್ಸಿಂಗ್ ಕೌನ್ಸಿಲ್‌ ವಿದ್ಯಾರ್ಹತೆಯನ್ನು ಹೊಂದಿರಬೇಕು. ಒಟ್ಟು 18 ಹುದ್ದೆಗಳಿದ್ದು, ಮಾಸಿಕ ರೂ.25,000/- ವೇತನವಿರುತ್ತದೆ.

    ಗ್ರೂಪ್ ಡಿ ಎಸ್ ಎಸ್ ಎಲ್ ಸಿ ವಿದ್ಯಾರ್ಹತೆ ಹೊಂದಿದ್ದು, ಒಟ್ಟು 18 ಹುದ್ದೆ ಇದ್ದು, ಮಾಸಿಕ ರೂ.15,000/- ವೇತನ ಇರುತ್ತದೆ.

    ‌ವಯೋಮಿತಿ : ಜನರಲ್ ಅಭ್ಯರ್ಥಿಗಳಿಗೆ 35 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 38 ವರ್ಷ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ 1 ಅಭ್ಯರ್ಥಿಗಳಿಗೆ 40 ವರ್ಷ‌.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು 0821-2529205 ಗೆ ಸಂಪರ್ಕಿಸಬಹುದು.

  • ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯಾಲಯದಲ್ಲಿ ಖಾಲಿ ಹುದ್ದೆ ಭರ್ತಿಗೆ ನೇಮಕ

    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯಾಲಯದಲ್ಲಿ ಖಾಲಿ ಹುದ್ದೆ ಭರ್ತಿಗೆ ನೇಮಕ

    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯ ವಿಜಯಪುರ ಹೆಚ್ಚುವರಿ ಮಾನವ ಸಂಪನ್ಮೂಲಗಳನ್ನು 06 ತಿಂಗಳ ಮಟ್ಟಿಗೆ ಕೆಳಕಾಣಿಸಿದ ಹುದ್ದೆಗಳನ್ನು ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ರೋಸ್ಟರ್ ಕಂ ಮೆರಿಟ್ ನ್ನು ಅನುಸರಿಸು ಷರತ್ತುಗೊಳಪಟ್ಟು ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

    ತಜ್ಞ ವೈದ್ಯರು – ಒಟ್ಟು 06 ಹುದ್ದೆಗಳಿವೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಜನರಲ್ ಮೆಡಿಸಿನ್ (ಎಂಡಿ/ಡಿಪ್ಲೋಮಾ) ಮತ್ತು ಅನಸ್ತೇಶಿಯ (ಎಂಡಿ/ಡಿಪ್ಲೋಮಾ) ವಿದ್ಯಾರ್ಹತೆಯನ್ನು ಹೊಂದಿರಬೇಕು. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ. 1,20,000/- ಮಾಸಿಕ ವೇತನ ಇರುತ್ತದೆ. ಅಭ್ಯರ್ಥಿಗಳು ಜಿಲ್ಲಾ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸಬೇಕಾಗುತ್ತದೆ.

    ವೈದ್ಯಾಧಿಕಾರಿಗಳು : ಒಟ್ಟು 12+12=24 ಹುದ್ದೆಗಳಿದ್ದು ಎಂಬಿಬಿಎಸ್ ವಿದ್ಯಾರ್ಹತೆಯನ್ನು ಅಭ್ಯರ್ಥಿಗಳು ಹೊಂದಿರಬೇಕು. ಮಾಸಿಕ ವೇತನ ರೂ.60,000/- ನಿಗದಿಪಡಿಸಲಾಗಿದೆ. 12 ಜಿಲ್ಲಾಸ್ಪತ್ರೆಗೆ ಹಾಗೂ 12 ತಾ.ಆಸ್ಪತ್ರೆಗಳಿಗೆ ನೇಮಕಮಾಡಿಕೊಳ್ಳಲಾಗುತ್ತದೆ.

    ಸ್ಟಾಫ್ ನರ್ಸ್ : 18+12=30 ಹುದ್ದೆಗಳಿದ್ದು ಈ ಹುದ್ದೆಗಳಿಗೆ ಅಭ್ಯರ್ಥಿಗಳು ಡಿಪ್ಲೋಮಾ /ಬಿಎಸ್ಸಿ ನರ್ಸಿಂಗ್ ಮಾಡಿರಬೇಕು. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.25,000/- ವೇತನ ಇರುತ್ತದೆ. 18 ಜಿಲ್ಲಾಸ್ಪತ್ರೆಗೆ ಹಾಗೂ 12 ತಾ.ಆಸ್ಪತ್ರೆಗೆ ನೇಮಕ‌ಮಾಡಿಕೊಳ್ಳಲಾಗುವುದು.

    ಬಯೋಮೆಡಿಕಲ್ ಇಂಜಿನಿಯರ್ : ಇಲ್ಲಿ ಒಂದು ಉದ್ಯೋಗವಿದ್ದು ಅಭ್ಯರ್ಥಿಗಳು ಬಯೋ ಮೆಡಿಕಲ್ ಇಂಜಿನಿಯರ್ (ಬಿ.ಇ) ವಿದ್ಯಾರ್ಹತೆಯನ್ನು ಹೊಂದಿರಬೇಕು. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 30,000/- ವೇತನವಿರುತ್ತದೆ. ಅಭ್ಯರ್ಥಿಗಳನ್ನು ಜಿಲ್ಲಾಸ್ಪತ್ರೆಗೆ ಆಯ್ಕೆ ಮಾಡಲಾಗುತ್ತದೆ.

    ಮೆಂಟೆನೆನ್ಸ್ ಇಂಜಿನಿಯರ್ : ಇಲ್ಲಿ ಒಂದು ಉದ್ಯೋಗವಿದ್ದು, ಅಭ್ಯರ್ಥಿಗಳು ಬಯೋಮೆಡಿಕಲ್ ಇಂಜಿನಿಯರ್ (ಬಿ.ಇ) ಅಥವಾ ಹುದ್ದೆಗೆ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿರಬೇಕು. ಅಭ್ಯರ್ಥಿಗಳಿಗೆ ಮಾಸಿಕ ರೂ.30,000/- ವೇತನವಿರುತ್ತದೆ. ಜಿಲ್ಲಾ ಆಸ್ಪತ್ರೆಗೆ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಜಿಲ್ಲಾಸ್ಪತ್ರೆಗೆ ನೇಮಕ ಮಾಡಿಕೊಳ್ಳಲಾಗುತ್ತದೆ.

    ಐಸಿಯು ಟೆಕ್ನಿಶಿಯನ್ : 01 ಹುದ್ದೆಗಳಿದ್ದು, ಐಸಿಯು ಟೆಕ್ನಿಶಿಯನ್ ನಲ್ಲಿ ಒಂದು ಹುದ್ದೆಯಿದ್ದು ಬಯೋಮೆಡಿಕಲ್ ಇಂಜಿನಿಯರ್ (ಡಿಪ್ಲೋಮಾ) ಅಥವಾ ಹುದ್ದೆಗೆ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿರಬೇಕು. ಅಭ್ಯರ್ಥಿಗಳಿಗೆ ಮಾಸಿಕ ರೂ.30,000/- ವೇತನವಿರುತ್ತದೆ.

    ಗ್ರೂಪ್ ಡಿ :06+ 12= 18 ಒಟ್ಟು ಹುದ್ದೆಗಳಿದ್ದು ಎಸ್ ಎಸ್ ಎಲ್ ಸಿ ತೇರ್ಗಡೆ ಹೊಂದಿರಬೇಕು. ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 15,000/- ವೇತನವಿರುತ್ತದೆ. 06 ಜಿಲ್ಲಾಸ್ಪತ್ರೆಗೆ, 12 ತಾ.ಆಸ್ಪತ್ರೆಗೆ ಅಭ್ಯರ್ಥಿಗಳನ್ನು ನಿಯುಕ್ತಿ ಮಾಡಲಾಗುತ್ತದೆ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :30-04-2021

  • FDA ನೇಮಕ ಅಧಿಸೂಚನೆ ಪಾಲಿಸಲು ಕೆಎಟಿ ಸೂಚನೆ

    FDA ನೇಮಕ ಅಧಿಸೂಚನೆ ಪಾಲಿಸಲು ಕೆಎಟಿ ಸೂಚನೆ

    ರಾಜ್ಯದಾದ್ಯಂತ ವಿವಿಧ ಇಲಾಖೆಗಳ ಕಚೇರಿಗಳಲ್ಲಿ ಖಾಲಿ ಇರುವ FDA,SDA ಹುದ್ದೆಗಳಿಗೆ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳು 2018 ನೇ ಸಾಲಿನಿಂದಲೂ ನೇಮಕ ಆದೇಶಕ್ಕೆ ಕಾಯುತ್ತಿದ್ದಾರೆ. ನೇಮಕ ಪ್ರಕ್ರಿಯೆಗೆ ಹೊರಡಿಸಿ ನೋಟಿಫಿಕೇಶನ್ ಪ್ರಕಾರ ಕೌನ್ಸಲಿಂಗ್ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಕರ್ನಾಟಕ ಆಡಳಿತ ನ್ಯಾಯಮಂಡಳಿ (KAT) ತಿಳಿಸಿದೆ.

    ದಿನಾಂಕ 01-09-2017 ರಂದು ಕರ್ನಾಟಕ ಲೋಕಸೇವಾ ಆಯೋಗವು 961 ಪ್ರಥಮ ದರ್ಜೆ ಸಹಾಯಕ ಹುದ್ದೆಗಳ 851 ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳ ಭರ್ತಿಗೆ ಅಧಿಸೂಚನೆಯನ್ನು ಹೊರಡಿಸಿತ್ತು. 2018 ಲಿಖಿತ ಪರೀಕ್ಷೆ ನಡೆಸಿತ್ತು. ಆಯ್ಕೆಯಾದ ಅಭ್ಯರ್ಥಿಗಳ ಹೆಸರನ್ನು ಎರಡು ಹುದ್ದೆಗಳ ಪಟ್ಟಿಯಲ್ಲಿ ಇದ್ದಲ್ಲಿ ಆ ಅಭ್ಯರ್ಥಿಗಳನ್ನು ಕೌನ್ಸಲಿಂಗ್ ಮೂಲಕ ಒಂದು ಹುದ್ದೆಗೆ ನೇಮಿಸಿ ಆದೇಶ ನೀಡಲಾಗುವುದು ಎಂದು ನೋಟಿಫಿಕೇಶನ್‌ನಲ್ಲಿ ತಿಳಿಸಲಾಗಿತ್ತು.

    ಎಫ್‌ಡಿಎ ಪಟ್ಟಿಯಲ್ಲಿ ಇದ್ದ ಅಭ್ಯರ್ಥಿಗಳನ್ನು ಎಸ್‌ಡಿಎ ಪಟ್ಟಿಯಿಂದ ಕೌನ್ಸಲಿಂಗ್ ನಡೆಸದೆ ಕೈ ಬಿಟ್ಟಿದ್ದರಿಂದ ಅಭ್ಯರ್ಥಿ ಬಯಸದೇ ಇರುವ ಇಲಾಖೆ ನಿಯೋಜನೆ ಮಾಡಿದರೆ ಅನ್ಯಾಯವಾಗಲಿದೆ ಎಂದು ಈ ಹಿಂದೆ ಅಭ್ಯರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಆದ್ದರಿಂದ 2017 ರಲ್ಲಿ ಕೌನ್ಸಲಿಂಗ್ ನಡೆಸುವ ನಿರ್ಧಾರವನ್ನು ಕರ್ನಾಟಕ ಲೋಕಸೇವಾ ಆಯೋಗ ಕೈಗೊಂಡಿತ್ತು.

    ಇದಾದ ನಂತರ ಆಯೋಗದ ಕಾರ್ಯದರ್ಶಿ ಬದಲಾದ ಕಾರಣ ಕೌನ್ಸಲಿಂಗ್ ನಡೆಸುವುದು ಕೆಸಿಎಸ್‌ ( ಕರ್ನಾಟಕ ಸಿವಿಲ್ ಸೇವೆ) ನಿಯಮಗಳಿಗೆ ವಿರುದ್ಧ ಎಂದು ಹೊಸ ಕಾರ್ಯದರ್ಶಿ ತಡೆ ಹಿಡಿದಿದ್ದು , ಅತಂತ್ರಗೊಂಡಿದ್ದ ಅಭ್ಯರ್ಥಿಗಳು ಕರ್ನಾಟಕ ಆಡಳಿತ ನ್ಯಾಯಮಂಡಳಿಯ ಮೊರೆ ಹೋಗಿದ್ದರು. ಈ ಮನವಿಯನ್ನು ವಿಚಾರಣೆ ನಡೆಸಿದ ಕೆಎಟಿ, ‘ನೇಮಕಾತಿ ಅಧಿಸೂಚನೆ ಪ್ರಕಾರವೇ ಕೆಪಿಎಸ್‌ಸಿ ನೇಮಕಾತಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕು. ಕೌನ್ಸಲಿಂಗ್ ನಡೆಸುವುದು ಕರ್ನಾಟಕ ನಾಗರಿಕ ಸೇವೆಗಳ ನಿಯಮಗಳಿಗೆ ವಿರುದ್ಧ ಆಗುವುದಿಲ್ಲ’ ಎಂದು ಹೇಳಿದೆ.

  • ವಿಪ್ರೋ ಉದ್ಯೋಗವಕಾಶ

    ವಿಪ್ರೋ ಉದ್ಯೋಗವಕಾಶ

    ಭಾರತೀಯ ಮೂಲದ ಮಲ್ಟಿನ್ಯಾಷನಲ್ ಕಂಪನಿ ವಿಪ್ರೋನಲ್ಲಿ ವಿವಿಧ ಹುದ್ದೆಗಳಿದ್ದು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ‌.

    ಹುದ್ದೆ : ವಿಪ್ರೋ ಲಿಮಿಟೆಡ್, ‘ ಇನ್ ಫೊರ್ಮೇಶನ್ ಟೆಕ್ನಾಲಜಿ, ಕನ್ಸಲಿಂಗ್ ಮತ್ತು ಬ್ಯುಸಿನೆಸ್ ಪ್ರೋಸೆಸ್ ‘ ನಂತಹ ಕೆಲಸವನ್ನು ಮಾಡುತ್ತಿದೆ.ಈ ವಿಭಾಗಗಳಿಗೆ ಫ್ರೆಶರ್ ಗಳನ್ನು ನೇಮಕ ಮಾಡಿಕೊಳ್ಳಲಿದೆ.

    ಹುದ್ದೆಯ ಹೆಸರು : ಐಟಿ ಆಪರೇಷನ್ಸ್ ಮ್ಯಾನೆಜ್‌ಮೆಂಟ್‌ ಎಕ್ಸಿಕ್ಯುಟಿವ್

    ಹುದ್ದೆಯ ಸ್ಥಳ : ಅಹ್ಮದಾಬಾದ್

    ವಿದ್ಯಾರ್ಹತೆ : ಅಭ್ಯರ್ಥಿಗಳು ಬಿ.ಇ/ಬಿ.ಟೆಕ್/ಐಟಿ ಬಿಎಸ್ಸಿ/ ಬಿಸಿಎ ವಿದ್ಯಾರ್ಹತೆಯನ್ನು ಹೊಂದಿರಬೇಕು.

    ಫಂಕ್ಷನಲ್ ಎಕ್ಸಿಕ್ಯುಟಿವ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಸಹಕಾರ,ಸೆಡ್ಯೂಲಿಂಗ್, ಲಾಜಿಸ್ಟಿಕ್ ನಿರ್ವಹಣೆ ಮುಂತಾದ ಜವಾಬ್ದಾರಿಗಳನ್ನು ನಿರ್ವಹಿಸಬೇಕು.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ 94 ಹುದ್ದೆ

    ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ 94 ಹುದ್ದೆ

    ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ವಿವಿಧ ಹುದ್ದೆಗಳಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಎಪ್ರಿಲ್ 27 ಕೊನೆಯ ದಿನಾಂಕವಾಗಿದೆ. ಒಟ್ಟು ಹುದ್ದೆಗಳ ವಿವರ, ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಶುಲ್ಕ ಇತ್ಯಾದಿ ವಿವರಗಳನ್ನು ಮುಂದೆ ನೀಡಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

    ಹುದ್ದೆ : 94 ಸಿವಿಲ್ ನ್ಯಾಯಾಧೀಶ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆಸಕ್ತರು ಆನ್‌ಲೈನ್‌ ಮೂಲಕ ಎಪ್ರಿಲ್ 27, 2021 ರೊಳಗೆ ಅರ್ಜಿಯನ್ನು ಸಲ್ಲಿಸಬೇಕಿರುತ್ತದೆ.

    ಅರ್ಜಿ ಶುಲ್ಕ : ಅರ್ಜಿದಾರರು ರೂ.500/- ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ -1 ಅಭ್ಯರ್ಥಿಗಳು ರೂ.250/- ಪಾವತಿಸಬೇಕಾಗುತ್ತದೆ.

    ವೇತನ : ಸಿವಿಲ್ ನ್ಯಾಯಾಧೀಶ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 27,700/- ರಿಂದ ರೂ. 44,770/- ರೂ.ಗಳ ವರೆಗೆ ವೇತನವಿರುತ್ತದೆ.

    ವಿದ್ಯಾರ್ಹತೆ : ಕಾನೂನು ಪದವಿ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

    ವಯೋಮಿತಿ : ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ ಮೀರಿರಬಾರದು. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.

    ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಕರ್ನಾಟಕ ಉಚ್ಛ ನ್ಯಾಯಾಯಲಯದ ಅಧಿಕೃತವೆಬ್‌ಸೈಟ್ ಗೆ ಭೇಟಿ ನೀಡಿ ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಎಪ್ರಿಲ್ 27,2021 ರಾತ್ರಿ 11.59 ರೊಳಗೆ ಅರ್ಜಿಯನ್ನು ಸಲ್ಲಿಸಬಹದು.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

    ನೋಟಿಫಿಕೇಶನ್‌ಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • ಕೊಡಗು ಜಿಲ್ಲಾ ಪಂಚಾಯತ್ ನಲ್ಲಿ ವಿವಿಧ ಹುದ್ದೆ

    ಕೊಡಗು ಜಿಲ್ಲಾ ಪಂಚಾಯತ್ ನಲ್ಲಿ ವಿವಿಧ ಹುದ್ದೆ

    ಕೊಡಗು ಜಿಲ್ಲಾ ಪಂಚಾಯತ್ ನಲ್ಲಿ ವಿವಿಧ ಹುದ್ದೆಗಳಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಎಪ್ರಿಲ್ 06 ಕೊನೆಯ ದಿನಾಂಕವಾಗಿದೆ. ಒಟ್ಟು ಹುದ್ದೆಗಳ ವಿವರ, ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಶುಲ್ಕ ಇತ್ಯಾದಿ ವಿವರಗಳನ್ನು ಮುಂದೆ ನೀಡಲಾಗಿದೆ.

    ಕ್ವಿಕ್ ಲುಕ್
    ಅರ್ಜಿ ಸಲ್ಲಿಸುವುದು ಹೇಗೆ?: ಆಫ್ ಲೈನ್
    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 22-03-2021
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 06-04-2021
    ಅರ್ಜಿ ಶುಲ್ಕ: ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳು ಆಫ್ ಲೈನ್ ಮೂಲಕ ರೂ.100/- ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

    ಹುದ್ದೆ : ಟೆಕ್ನಿಶಿಯನ್, ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಒಟ್ಟು ಹುದ್ದೆ: 13

    ಹುದ್ದೆ ಸ್ಥಳ : ಮಡಿಕೇರಿ- ಕರ್ನಾಟಕ

    ಹುದ್ದೆಗಳ ವಿವರ : ಡಿಸ್ಟ್ರಿಕ್ಟ್‌ ಐಇಸಿ ಕೋರ್ಡಿನೇಟರ್-01
    ತಾಲೂಕು ಐಇಸಿ ಕೋರ್ಡಿನೇಟರ್ಸ್ – 02
    ಟೆಕ್ನಿಕಲ್ ಅಸಿಸ್ಟೆಂಟ್ ( ಅರಣ್ಯ) – 01
    ಟೆಕ್ನಿಕಲ್ ಅಸಿಸ್ಟೆಂಟ್ ( ಹೋರಿಕಲ್ಚರ್)-02
    ಬೇರ್ ಫೂಟ್ ಟೆಕ್ನಿಶಿಯನ್ (ಬಿಆರ್ ಟಿ)-07

    ವಿದ್ಯಾರ್ಹತೆ : ಡಿಸ್ಟ್ರಿಕ್ಟ್‌ ಐಇಸಿ ಕೋರ್ಡಿನೇಟರ್ ಮತ್ತು ತಾಲೂಕು ಐಇಸಿ ಕೋರ್ಡಿನೇಟರ್ಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಡಿಪ್ಲೋಮಾ, ಪೋಸ್ಟ್ ಗ್ರಾಜ್ಯುಯೇಶನ್ ಮಾಡಿರಬೇಕು.
    ಟೆಕ್ನಿಕಲ್ ಅಸಿಸ್ಟೆಂಟ್ ( ಅರಣ್ಯ) ಮತ್ತು ಟೆಕ್ನಿಕಲ್ ಅಸಿಸ್ಟೆಂಟ್ ( ಹೋರಿಕಲ್ಚರ್) ಹುದ್ದೆಗಳಿಗೆ ಅಭ್ಯರ್ಥಿಗಳು ಬಿ.ಎಸ್ಸಿ, ಎಂ.ಎಸ್ಸಿ ವಿದ್ಯಾರ್ಹತೆಯನ್ನು ಪಡೆದಿರಬೇಕು.
    ಬೇರ್ ಫೂಟ್ ಟೆಕ್ನಿಶಿಯನ್ (ಬಿಆರ್ ಟಿ) ಹುದ್ದೆಗೆ ಎಸ್ ಎಸ್ ಎಲ್ ಸಿ ಪಾಸಾಗಿರಬೇಕು.

    ವಯೋಮಿತಿ: ಕೊಡಗು ಜಿಲ್ಲಾ ಪಂಚಾಯತ್ ನೇಮಕಾತಿ ನಿಯಮಾನುಸಾರ ಅಭ್ಯರ್ಥಿಗಳು ವಯೋಮಿತಿ ಹೊಂದಿರಬೇಕು.

    ವೇತನ: ಡಿಸ್ಟ್ರಿಕ್ಟ್‌ ಐಇಸಿ ಕೋರ್ಡಿನೇಟರ್ ಹುದ್ದೆಗೆ ರೂ. 23,000/-, ತಾಲೂಕು ಐಇಸಿ ಕೋರ್ಡಿನೇಟರ್ಸ್ ಹುದ್ದೆಗೆ ರೂ.18,000/-, ಟೆಕ್ನಿಕಲ್ ಅಸಿಸ್ಟೆಂಟ್ ( ಅರಣ್ಯ) ಮತ್ತು
    ಟೆಕ್ನಿಕಲ್ ಅಸಿಸ್ಟೆಂಟ್ ( ಹೋರಿಕಲ್ಚರ್) ಹುದ್ದೆಗಳಿಗೆ ರೂ. 24,000/- ಬೇರ್ ಫೂಟ್ ಟೆಕ್ನಿಶಿಯನ್ (ಬಿಆರ್ ಟಿ) ರೂ.12,000/- ಮಾಸಿಕ ವೇತನ ನಿಗದಿಪಡಿಸಲಾಗಿದೆ.

    ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಿ ಅರ್ಜಿ ಡೌನ್‌ಲೋಡ್ ಮಾಡಿ, ಅಗತ್ಯ ದಾಖಲೆಗಳನ್ನು ಲಗತ್ತಿಸಿ ಈ ಕೆಳಗಿನ ವಿಳಾಸಕ್ಕೆ ದಿನಾಂಕ 06-04-2021 ರೊಳಗೆ ಸ್ಪೀಡ್ ಪೋಸ್ಟ್ ಅಥವಾ ರಿಜಿಸ್ಟರ್ ಪೋಸ್ಟ್ ಮೂಲಕ ಸಲ್ಲಿಸಬೇಕು.

    ವಿಳಾಸ:
    Chief Executive Officer, Office of Kodagu Zilla Panchayat, Madikeri, Karnataka.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ.