Category: Govt Jobs

  • NHIDCL : ವಿವಿಧ ಹುದ್ದೆಗಳ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

    ಭಾರತ ಸರಕಾರದಿಂದ ಸ್ಥಾಪಿತವಾದ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯದಡಿಯ ಒಂದು ನಿಗಮವೆಂದು ರಾಷ್ಟ್ರೀಯ ಹೆದ್ದಾರಿ ಹಾಗೂ ಮೂಲ ಸೌಕರ್ಯಗಳ ಅಭಿವೃದ್ಧಿ,ನಿಗಮ ನಿಯಮಿತರವರು, ಈಶಾನ್ಯ ವಲಯದ ಹಾಗೂ ನಮ್ಮ ನೆರೆಯ ದೇಶಗಳನ್ನುಹಂಚಿಕೊಳ್ಳುವ ಅಂತರಾಷ್ಟ್ರೀಯ ಗಡಿ ಪ್ರದೇಶದರಾಷ್ಟ್ರೀಯ ಹೆದ್ದಾರಿ ನಿರ್ಮಾಣ/ಮೇಲ್ದರ್ಜೆ ಅಗಲೀಕರಣಕ್ಕಾಗಿ ಅತ್ಯಂತ ಶೀಘ್ರಗತಿಯಲ್ಲಿ ಮಾಡಲು ನಿರ್ಧರಿಸಿದೆ.

    ಕೇಂದ್ರ ಸರಕಾರದ ಸಚಿವಾಲಯಗಳು/ ಇಲಾಖೆಗಳಿಂದ ಸೈನ್ಯೆ,ನೌಕಾಪಡೆ, ವಾಯುಪಡೆ ಬಿಆರ್‌ಒ(ಜಿಆರ್‌ಇಎಫ್‌) ಸ್ವಾಯತ್ತ ಸಂಸ್ಥೆಗಳು, ಸಾರ್ವಜನಿಕ ವಲಯ ಸ್ವಾಮ್ಯಕ್ಕೊಳಪಟ್ಟಿರುವಂತವುಗಳು. ರಾಜ್ಯ ಸರಕಾರದ ಇಲಾಖೆಗಳು ಹಾಗೂ ರಾಜ್ಯ ಸರಕಾರದ ಸಾರ್ವಜನಿಕ ವಲಯ ಸ್ವಾಮ್ಯಕ್ಕೊಳಪಟ್ಟಿರುವಂತಹುಗಳ ಅತ್ಯಂತ ಕ್ರಿಯಾತ್ಮಕ ಪರಿಣಾಮಕಾರಿ ಹಾಗೂ ಅನುಭವಿ ಅರ್ಹ ನಿವೃತ್ತ ಅಧಿಕಾರಿಗಳಿಂದ ಗುತ್ತಿಗೆ ಆಧಾರದ ಮೇಲೆ ಈ ಕೆಳಗಿನ ಷರತ್ತು ಹಾಗೂ ನಿಯಮಗಳಂತೆ ಅರ್ಜಿ ಆಹ್ವಾನಿಸುತ್ತಿದೆ.

    ಹುದ್ದೆ : ಜನರಲ್ ಮ್ಯಾನೇಜರ್, ಡೆಪ್ಯುಟಿ ಜನರಲ್ ಮ್ಯಾನೇಜರ್ (ಟಿಪಿ), ಡೆಪ್ಯುಟಿ ಜನರಲ್ ಮ್ಯಾನೇಜರ್ (ಫಿನಾನ್ಸ್‌),ಮ್ಯಾನೇಜರ್ (ಟಿ/ಪಿ), ಮ್ಯಾನೇಜರ್ ( ಫಿನಾನ್ಸ್‌), ಮ್ಯಾನೇಜರ್ ( ಲೀಗಲ್), ಅಸಿಸ್ಟೆಂಟ್ ಮ್ಯಾನೇಜರ್ ( ಹೆಚ್‌ಆರ್‌), ಜ್ಯೂನಿಯರ್ ಮ್ಯಾನೇಜರ್ ( ಹೆಚ್‌ ಆರ್), ಜ್ಯೂನಿಯರ್ ಮ್ಯಾನೇಜರ್ ( ಲೀಗಲ್), ಜ್ಯೂನಿಯರ್ ಮ್ಯಾನೇಜರ್ ( ರಾಜ್ಯ ಸಭಾ)

    ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ : 30-೦6-2021 ರಂದು ( ಬುಧವಾರ) 18.೦೦ ಗಂಟೆಯವರೆಗೂ ವಿಸ್ತರಿಸಲಾಗಿದೆ.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು NHIDCL ವೆಬ್‌ಸೈಟ್‌ನಲ್ಲಿ ಪಡೆದುಕೊಳ್ಳಬಹುದು.

  • ಯಾದಗಿರಿ ವೈದ್ಯಕೀಯ ವಿಜ್ಞಾಗಳ ಸಂಸ್ಥೆ : ನೇರ ನೇಮಕಾತಿ ಅಧಿಸೂಚನೆ

    ಯಾದಗಿರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಯಾದಗಿರಿ, ಇಲ್ಲಿ ಖಾಲಿ ಇರುವ ಈ ಕೆಳಕಂಡ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

    ಹುದ್ದೆಗಳ ವಿವರ : ಪ್ರಾಧ್ಯಾಪಕರು -06
    ಸಹ ಪ್ರಾಧ್ಯಾಪಕರು- 16
    ಸಹಾಯಕ ಪ್ರಾಧ್ಯಾಪಕರು- 29
    ಸೀನಿಯರ್ ರೆಸಿಡೆಂಟ್ ( ಗುತ್ತಿಗೆ ಆಧಾರದ ಮೇಲೆ ) – 17
    ಟ್ಯೂಟರ್ ( ಗುತ್ತಿಗೆ ಆಧಾರದ ಮೇಲೆ ) – 17
    ಒಟ್ಟು ಹುದ್ದೆಗಳು – 85

    ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಗಳನ್ನು ನಿರ್ದೇಶಕರು, ಯಾದಗಿರಿ, ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಹೊಸ ಜಿಲ್ಲಾ ಆಸ್ಪತ್ರೆ, ಚಿತ್ತಾಪುರ ಮೇನ್ ರೋಡ್, ಯಾದಗಿರಿ – ಈ ವಿಳಾಸಕ್ಕೆ ನಿಗದಿತ ದಿನಾಂಕದೊಳಗೆ ಸಲ್ಲಿಸತಕ್ಕದ್ದು.

    ಎಲ್ಲಾ ನೇಮಕಾತಿಗಳು ತಾತ್ಕಾಲಿಕವಾಗಿದ್ದು, ರಾಷ್ಟ್ರೀಯ ವೈದ್ಯಕೀಯ ಆಯೋಗದಿಂದ ಅನುಮೋದನೆಯ ಷರತ್ತಿಗೆ ಒಳಪಟ್ಟಿರುತ್ತದೆ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 21-06-2021 ಸಮಯ 05:00 ಗಂಟೆಗೆ
    ಸಂದರ್ಶನದ ದಿನಾಂಕ : 28-06-2021 ರಿಂದ, ನಿರ್ದೇಶಕರು, ಯಾದಗಿರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಹೊಸ ಜಿಲ್ಲಾ ಆಸ್ಪತ್ರೆ ಚಿತ್ತಾಪುರ ಮೇನ್ ರೋಡ್, ಯಾದಗಿರಿ – ದಲ್ಲಿ ನಡೆಸಲಾಗುವುದು.

    ವಯೋಮಿತಿ : ಪ್ರೊಫೆಸರ್ ಹುದ್ದೆಗೆ ಜಿಎಂ ಅಭ್ಯರ್ಥಿಗಳಿಗೆ ಗರಿಷ್ಟ 5೦ ವಯೋಮಿತಿ ಮೀರಿರಬಾರದು. 53 ವರ್ಷ ಒಬಿಸಿ ಅಭ್ಯರ್ಥಿಗಳಿಗೆ, 55 ವರ್ಷ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ.
    ಸಹ ಪ್ರಾಧ್ಯಾಪಕರು ಹುದ್ದೆ : ಜಿಎಂ ಅಭ್ಯರ್ಥಿಗಳಿಗೆ 45 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 48 ವರ್ಷ, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಗರಿಷ್ಟ 50 ವಯೋಮಿತಿ ಮೀರಿರಬಾರದು.
    ಸಹಾಯಕ ಪ್ರಾಧ್ಯಾಪಕ/ ಸೀನಿಯರ್ ರೆಸಿಡೆಂಟ್/ ಟ್ಯೂಟರ್ ಹುದ್ದೆಗೆ ಜಿಎಂ ಅಭ್ಯರ್ಥಿಗಳಿಗೆ 38 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 4೦ ವರ್ಷ, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 43 ವರ್ಷ.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ

  • RGRHCL : ವಿವಿಧ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ

    ರಾಜೀವ್ ಗಾಂಧಿ ವಸತಿ ನಿಗಮವು ಗುತ್ತಿಗೆ ಆಧಾರದಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು.

    ಹುದ್ದೆ : ಹಿರಿಯ ಪ್ರೋಗ್ರಾಮರ್ – 4 ಮತ್ತು ರೆಸಿಡೆನ್ಸಿಯಲ್ ಹಾರ್ಡ್ ವೇರ್ ಇಂಜಿನಿಯರ್-1 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಿದೆ.

    11 ತಿಂಗಳ ಅವಧಿಗೆ ತಾತ್ಕಾಲಿಕ ಮತ್ತು ಪೂರ್ಣ ಗುತ್ತಿಗೆ ಆಧಾರದಲ್ಲಿ ಈ ಮೇಲೆ ತಿಳಿಸಿದ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

    ವಿದ್ಯಾರ್ಹತೆ : ಹಿರಿಯ ಪ್ರೋಗ್ರಾಮರ್ ಹುದ್ದೆಗೆ ಅಥವಾ ಬಿಟೆಕ್ ಅಥವಾ ಕಂಪ್ಯೂಟರ್ ಸೈನ್ಸ್ ಅಥವಾ ಎಲೆಕ್ಟ್ರಾನಿಕ್ಸ್ ವಿದ್ಯಾರ್ಹತೆಯನ್ನು ಹೊಂದಿರಬೇಕು.

    ರೆಸಿಡೆನ್ಶಿಯಲ್ ಹಾರ್ಡ್ ವೇರ್ ಇಂಜಿನಿಯರ್ ಹುದ್ದೆಗೆ ಬಿ.ಟೆಕ್ ಅಥವಾ ಬ್ಯಾಚುಲರ್ ಇನ್ ಇಂಜಿನಿಯರಿಂಗ್ ಕನಿಷ್ಠ ಒಂದು ವರ್ಷದ ಅನುಭವ ಹೊಂದಿರಬೇಕು.

    ಅರ್ಹ ಅಭ್ಯರ್ಥಿಗಳು 19-06-2021 ರ ಸಂಜೆ 5.00 ಗಂಟೆಯೊಳಗೆ ಇ- ಮೇಲ್ [email protected] ಅಥವಾ naukari.com ಅಥವಾ Karnataka careers ಗೆ ಅರ್ಜಿಯನ್ನು ಕಳುಹಿಸಬಹುದು.

    ಅರ್ಹ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಹಾಜರಾಗಲು ಇ- ಮೇಲ್ ಮೂಲಕ ತಿಳಿಸಲಾಗುವುದು.

  • DHFWS ಚಿತ್ರದುರ್ಗ : ಎಂಬಿಬಿಎಸ್, ಆಯುಷ್ ಡಾಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ

    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ( ರಿ), ಚಿತ್ರದುರ್ಗ ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನದಡಿಯಲ್ಲಿ ಗುತ್ತಿಗೆ ಆಧಾರದಲ್ಲಿ ವೈದ್ಯರನ್ನು ನೇಮಕ ಮಾಡಲು ಅಧಿಸೂಚನೆ ಪ್ರಕಟಿಸಿದೆ.

    ಹುದ್ದೆ : ಎಂಬಿಬಿಎಸ್/ ಆಯುಷ್ ವೈದ್ಯರನ್ನು ನೇಮಕಾತಿ ಮಾಡಲು ಆದೇಶವಿರುತ್ತದೆ.

    ಮಾಸಿಕ ವೇತನ : ಎಂಬಿಬಿಎಸ್ ವೈದ್ಯರಿಗೆ ರೂ.35,000/- ಹಾಗೂ ಆಯುಷ್ ವೈದ್ಯರಿಗೆ ರೂ.26,000/-

    ಸೂಚನೆ : ಎಂಬಿಬಿಎಸ್ ವೈದ್ಯರು ಬಾರದೇ ಇದ್ದಲ್ಲಿ ಆಯುಷ್ ವೈದ್ಯರನ್ನು ಪರಿಗಣಿಸಲಾಗುವುದು.

    ಆಸಕ್ತಿಯುಳ್ಳ ಅಭ್ಯರ್ಥಿಗಳು ದಿ 02-06-2021 ರಿಂದ 10-06-2021 ರ ಸಂಜೆ‌ 5.00 ರೊಳಗೆ ಜಿಲ್ಲಾ ಯೋಜನಾ ನಿರ್ವಹಣಾ ಘಟಕ, ಎನ್.ಹೆಚ್.ಎಂ ಜಿಲ್ಲಾ ಪ್ರಯೋಗಶಾಲಾ ಆವರಣ, ಜಿಲ್ಲಾ ಆಸ್ಪತ್ರೆ ಹಿಂಭಾಗ, ಚಿತ್ರದುರ್ಗ ಇಲ್ಲಿಗೆ ಅರ್ಜಿ ಸಲ್ಲಿಸಬಹುದು.

  • GIMS ಗದಗ : ನರ್ಸಿಂಗ್ ಅಭ್ಯರ್ಥಿಗಳಿಗೆ ಅವಕಾಶ, ನೇರ ನೇಮಕಾತಿ ಅಧಿಸೂಚನೆ ಪ್ರಕಟ

    ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಕೋವಿಡ್ – 19ರ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಶ್ರುಶ್ರೂಷಾಧಿಕಾರಿಗಳ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಮಾನ್ಯ ನಿರ್ದೇಶಕರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಬೆಂಗಳೂರು ಇವರು ಅನುಮತಿ ನೀಡಿರುತ್ತಾರೆ.

    ಗದಗ ವೈದ್ಯಕೀಯ ವಿಜ್ಞಾನಿಗಳ ಸಂಸ್ಥೆ ಬೋಧಕ ಆಸ್ಪತ್ರೆಯಲ್ಲಿ ( ಜಿಲ್ಲಾ ಆಸ್ಪತ್ರೆಯಲ್ಲಿ) ಖಾಲಿ ಇರುವ 05 ಶುಶ್ರೂಷಾಧಿಕಾರಿಗಳ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ದಿನಾಂಕ 30-09-2021 ರ ವರೆಗೆ ಅಥವಾ ನೇರ ನೇಮಕಾತಿ ಹುದ್ದೆಗಳು ಭರ್ತಿ ಆಗುವವರೆಗೆ ವರ್ಗಾವಣೆ ಮೂಲಕ ಹುದ್ದೆಗಳು ಭರ್ತಿ ಆಗುವ ಅಥವಾ ಮುಂದಿನ ಆದೇಶದವರೆಗೆ ಇದರಲ್ಲಿ ಯಾವುದು ಮೊದಲು ಅಲ್ಲಿಯವರೆಗೆ.

    ಹುದ್ದೆ: 05 ಶ್ರುಶ್ರೂಷಾಧಿಕಾರಿಗಳ ಹುದ್ದೆ.

    ಅರ್ಜಿಯ ಜೊತೆಗೆ ರೂ.500/- ಗಳ ಡಿಡಿಯನ್ನು ನಿರ್ದೇಶಕರು, ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಗದಗ ಇವರ ಹೆಸರಿನಲ್ಲಿ ಪಡೆದು ಅರ್ಜಿಯೊಂದಿಗೆ ಸಲ್ಲಿಸುವುದು.

    ಅಭ್ಯರ್ಥಿಯು ಕಡ್ಡಾಯವಾಗಿ ಜಾತಿ, ಆದಾಯ ಪ್ರಮಾಣ ಪತ್ರ ಹಾಗೂ ಇತರೆ ದಾಖಲಾತಿಗಳನ್ನು ಸಲ್ಲಿಸತಕ್ಕದ್ದು.

    ವಯೋಮಿತಿ : ಅಭ್ಯರ್ಥಿಗಳು 40 ವರ್ಷ ವಯೋಮಿತಿ ಮೀರಿರಬಾರದು.

    ಪ್ರತಿ ಮಾಸಿಕ ರೂ.25,000/- ರಂತೆ ವೇತನ ನಿಗದಿಪಡಿಸಿ ದಿನಾಂಕ 08-06-2021 ರ ಬೆಳಿಗ್ಗೆ 10.00 ಗಂಟೆಗೆ ನೇರ ನೇಮಕಾತಿ ಸಂದರ್ಶನ ಏರ್ಪಡಿಸಿದೆ.

    ಅರ್ಹ ಅಭ್ಯರ್ಥಿಗಳು ಸಂಬಂಧಪಟ್ಟ ದಾಖಲೆಗಳೊಂದಿಗೆ ಸಂಸ್ಥೆಯ ವೆಬ್‌ಸೈಟ್‌ನಲ್ಲಿ www.karnataka.gov.in/gimsgadag. ನಲ್ಲಿ ಲಭ್ಯವಿರುವ ನಮೂನೆಯೊಂದಿಗೆ ನೇರ ನೇಮಕಾತಿ ಸಂದರ್ಶನಕ್ಕೆ ಹಾಜರಾಗಬಹುದು.

  • ಹುನಗುಂದ ಆರೋಗ್ಯ ಕೇಂದ್ರದಲ್ಲಿ ವಿವಿಧ ಹುದ್ದೆ, ನೇರ ಸಂದರ್ಶನದ ಮೂಲಕ ನೇಮಕ

    ಕೋವಿಡ್ ನಿಯಂತ್ರಣಕ್ಕಾಗಿ ಬಾಗಲಕೋಟೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಇಲ್ಲಿ ಖಾಲಿ ಇರುವ ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ಭರ್ತಿ ಮಾಡಲಾಗುತ್ತಿದೆ.

    ಹುನಗುಂದ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಮುದಾಯ ಕೇಂದ್ರದಲ್ಲಿ ಖಾಲಿ ಇರುವ ಹುದ್ದೆಗಳ ವಿವರಗಳನ್ನು ಈ ಕೆಳಗೆ ನೀಡಲಾಗಿದೆ.

    ಹುದ್ದೆಗಳ ವಿವರ :ಶ್ರುಶೂಷಾಧಿಕಾರಿಗಳು- 10, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ – 1, ಗಣಕಯಂತ್ರ ದತ್ತಾಂಶ ನಮೂದಕ – 1, ಗ್ರೂಪ್ ಡಿ ಹುದ್ದೆ – 15, ಕಿರಿಯ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ – 1, ಫಾರ್ಮಸಿ ಅಧಿಕಾರಿ – 1

    ನೇರ ಸಂದರ್ಶನ ದಿನಾಂಕ ಮತ್ತು ಸಮಯ : ಈ ಮೇಲಿನ ಎಲ್ಲಾ ಹುದ್ದೆಗಳಿಗೆ ದಿನಾಂಕ ಜೂನ್ 07 ರಂದು, ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ರವರೆಗೆ ಹುನಗುಂದ ತಾಲೂಕಿನ ಆರೋಗ್ಯಾಧಿಕಾರಿಗಳ ಕಾರ್ಯಾಲಯದಲ್ಲಿ ನಡೆಸಲಿದೆ.

    ಈ ಹುದ್ದೆಯು ತಾತ್ಕಾಲಿಕವಾಗಿದ್ದು 5 ತಿಂಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಸಂದರ್ಶನದ ಸಮಯದಲ್ಲಿ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯ ಅಗತ್ಯ ದಾಖಲೆಗಳೊಂದಿಗೆ ಹಾಜರಿರಬೇಕು. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು. 99001131419