Category: Govt Jobs

  • ದಕ್ಷಿಣ ಮಧ್ಯ ರೈಲ್ವೆ : 3322 ಅಪ್ರೆಂಟಿಸ್ ಹುದ್ದೆ

    ದಕ್ಷಿಣ ರೈಲ್ವೆಯ ನೇಮಕಾತಿ ಸೆಲ್, ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

    ಒಟ್ಟು ಹುದ್ದೆ : 3322 ಹುದ್ದೆ

    ಹುದ್ದೆಗಳ ವಿವರ : ಕ್ಯಾರೇಜ್ ವರ್ಕ್ಸ್, ಪೆರಂಬೂರು, ಸೆಂಟ್ರಲ್ ವರ್ಕ್ ಶಾಪ್, ಗೋಲ್ಡನ್ ರಾಕ್ ಮತ್ತು ಸಿಗ್ನಲ್ ಹಾಗೂ ದೂರಸಂಪರ್ಕ ಕಾರ್ಯಾಗಾರ, ಪೆಡನೂರಿಗಾಗಿ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ.

    ಅಭ್ಯರ್ಥಿಗಳು ಅರ್ಜಿಯನ್ನು ಆನ್ಲೈನ್ ಮೂಲಕ ಮಾತ್ರ ಸಲ್ಲಿಸಲು ಮಾತ್ರ
    ಅವಕಾಶವಿದೆ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಜೂನ್ 30, 2021 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

    ವಿದ್ಯಾರ್ಹತೆ : ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10 ನೇ ತರಗತಿ ( 10+2 ಸಿಸ್ಟಮ್ ನಡಿ) ತೇರ್ಗಡೆ ಹೊಂದಿರಬೇಕು. ಅಥವಾ ಶೇ.50 ಅಂಕಗಳೊಂದಿಗೆ ತತ್ಸಮಾನ ಅರ್ಹತೆಯನ್ನು ಪಡೆದು ಕೊಂಡಿರಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಐಟಿಐ ಕೋರ್ಸ್ ಮಾಡಿರಬೇಕು. ಎನ್ ಸಿವಿಟಿ/ಎಸ್ ಸಿವಿಟಿ ಮಾನ್ಯತೆ ಪಡೆದ ಸಂಸ್ಥೆಯಿಂದ ಐಟಿಐ ಕೋರ್ಸ್ ನಲ್ಲಿ ಪಾಸಾಗಿರಬೇಕು. ಉನ್ನತ ಶಿಕ್ಷಣ ಹೊಂದಿರುವ ಅಭ್ಯರ್ಥಿಯು ಅರ್ಜಿ ಸಲ್ಲಿಸುವಂತಿಲ್ಲ.

    ವಯೋಮಿತಿ : ಅಭ್ಯರ್ಥಿಗಳು ಕನಿಷ್ಠ 15 ಹಾಗೂ ಗರಿಷ್ಠ 24 ವರ್ಷ ವಯಸ್ಸಿನವರಾಗಿರಬೇಕು. ಸರಕಾರದ ಮಾನದಂಡಗಳ ಪ್ರಕಾರ ವಯೋಮಿತಿಯಲ್ಲಿ ಸಡಿಲಿಕೆಯನ್ನು ನೀಡಲಾಗಿದೆ.

    ತಮಿಳುನಾಡು, ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿ, ಕೇರಳ, ಅಂಡಮಾನ್ ನಿಕೋಬಾರ್ ಹಾಗೂ ಲಕ್ಷದ್ವೀಪ ಪ್ರದೇಶಗಳು, ಆಂಧ್ರಪ್ರದೇಶದ ನೆಲ್ಲೋರ್ ಹಾಗೂ ಚಿತ್ತೂರ್ ಜಿಲ್ಲೆಗಳು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯವರು ಮಾತ್ರ ಈ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು.

    ಕ್ಯಾರೇಜ್ ವರ್ಕ್ಸ್, ಪೆರಂಬೂರು – 936 ಹುದ್ದೆಗಳು, ಗೋಲ್ಡನ್ ರಾಕ್ ಕಾರ್ಯಾಗಾರ – 756 ಹುದ್ದೆಗಳು, ಸಿಗ್ನಲ್ ಮತ್ತು ಟೆಲಿಕಾಂ ಕಾರ್ಯಾಗಾರ, ಪೆಡನೂರ್ – 1686 ಹುದ್ದೆಗಳಿಗೆ ನೇಮಿಸಿಕೊಳ್ಳಲಾಗುವುದು.

    ತಿರುವನಂತಪುರ, ಪಾಲ್ಗಾಟ್, ಸೇಲಂ, ಪೆರಂಬೂರು ಮತ್ತು ಚೆನ್ನೈ ವಿಭಾಗಗಳಲ್ಲಿನ ರೈಲ್ವೆ ಆಸ್ಪತ್ರೆ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ.

    ವಿದ್ಯಾರ್ಹತೆ : ಮೆಟ್ರಿಕ್ಯುಲೇಷನ್ ಮತ್ತು ಐಟಿಐ ಪರೀಕ್ಷೆಯಲ್ಲಿ ಪಡೆದಿರುವ ಸರಾಸರಿ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳ ಆಯ್ಕೆ ನಡೆಯುತ್ತದೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳು ರೂ.100/- ಅರ್ಜಿ ಶುಲ್ಕವನ್ನು ಪಾವತಿಸಬೇಕು. ಎಸ್ ಸಿ/ಎಸ್ ಟಿ / ಪಿಡ್ಬ್ಯುಬಿಡಿ ಹಾಗೂ ಮಹಿಳಾ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.

    ಆಯ್ಕೆಯಾದ ಅಭ್ಯರ್ಥಿಗಳಿಗೆ ಯಾವುದೇ ಪರೀಕ್ಷೆ ಅಥವಾ ಸಂದರ್ಶನವಿರುವುದಿಲ್ಲ.

    ಆಸಕ್ತ ಅಭ್ಯರ್ಥಿಗಳು iroams.com ನಲ್ಲಿ ಅಪ್ರೆಂಟಿಸ್ ಹುದ್ದೆಯ ಅರ್ಹತೆಯನ್ನು ಪರಿಶೀಲಿಸಬಹುದು. ದಕ್ಷಿಣ ರೈಲ್ವೆಯ ಅಧಿಕೃತ ವೆಬ್‌ಸೈಟ್‌ https://sr.indianrailways.gov.in ನಲ್ಲಿ ಅರ್ಜಿ ನಮೂನೆಗಳು ಲಭ್ಯವಿದ್ದು, ಅಭ್ಯರ್ಥಿಗಳು ಪರಿಶೀಲಿಸಬಹುದು.

  • RDPR ಕರ್ನಾಟಕ : ಹುದ್ದೆಗಳ ನೇಮಕ

    ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಸನ‌ ವಿಭಾಗ, ಹಾಸನ ವ್ಯಾಪ್ತಿಯ ಜಿಲ್ಲಾ ಪ್ರಯೋಗಾಲಯಕ್ಕೆ ಕೆಳಕಂಡ ಸಿಬ್ಬಂದಿಯನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

    ಹುದ್ದೆಯ ವಿವರ : ಹಾಸನ ಜಿಲ್ಲಾ ಪ್ರಯೋಗಾಲಯಕ್ಕೆ ನೀರಿನ ಮಾದರಿಗಳ ಸಂಗ್ರಹಣಾಕೋಶದ ಉಸ್ತುವಾರಿ ಸಿಬ್ಬಂದಿ ( sample cell incharge)

    ಹುದ್ದೆ ಸಂಖ್ಯೆ : 01

    ವಿದ್ಯಾರ್ಹತೆ : ಅಭ್ಯರ್ಥಿಗಳು ಶೇ.60 ಅಂಕಗಳೊಂದಿಗೆ ವಿಜ್ಞಾನದ ವಿಷಯದಲ್ಲಿ ಬಿ.ಎಸ್ಸಿ ( ಕೆಮಿಸ್ಟ್ರಿ ಕಂಪಲ್ಸರಿ ಸಬ್ಜೆಕ್ಟ್ ಆಗಿರಬೇಕು) ಪದವಿಯನ್ನು ಪಡೆದಿರಬೇಕು.

    ವಯೋಮಿತಿ : ಅಭ್ಯರ್ಥಿಗಳ ವಯೋಮಿತಿಯು 45 ವರ್ಷ ಮೀರಿರಬಾರದು.

    ಅನುಭವ : ನೀರಿನ ಗುಣಮಟ್ಟ ವಿಶ್ಲೇಷಣೆಯ ಅನುಭವದೊಂದಿಗೆ ಕಂಪ್ಯೂಟರ್ ನಿರ್ವಹಣೆ ಅನುಭವ ಹೊಂದಿರಬೇಕು.

    ವೇತನ : ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.17,000/- ಮಾಸಿಕ ವೇತನವಿರುತ್ತದೆ.

    ಅರ್ಹ ಅಭ್ಯರ್ಥಿಗಳು ಎಲ್ಲಾ ಅಂಕಪಟ್ಟಿ, ಅನುಭವ ಪತ್ರಗಳ ನಕಲುಗಳೊಂದಿಗೆ ದಿನಾಂಕ 14-06-2021 ರ ಸಂಜೆ 5.30 ರ ಒಳಗೆ ಕಾರ್ಯಪಾಲಕ ಇಂಜಿನಿಯರ್ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಸನ‌ ವಿಭಾಗ ಜಿಲ್ಲಾ ಪ್ರಯೋಗಾಲಯ ಜಿಲ್ಲಾ ಪಂಚಾಯತ್ ಕಟ್ಟಡ ಹಾಸನ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

  • ಚರ್ಮ ಕುಶಲಕರ್ಮಿಗಳಿಗೆ ಪರಿಹಾರ ಧನ: ಆನ್ಲೈನ್ ಮೂಲಕ ಈ ಕೂಡಲೇ ಅರ್ಜಿ ಸಲ್ಲಿಸಿ

    ಕೊರೊನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ಪಾದರಕ್ಷೆ ತಯಾರಿಕೆ ಮತ್ತು ದುರಸ್ತಿ, ಚರ್ಮ ಹದ ಮಾಡುವ ಕೆಲಸದಲ್ಲಿ ತೊಡಗಿರುವ ಚಮ್ಮಾರರು ಹಾಗೂ ಚರ್ಮ ಕುಶಲಕರ್ಮಿಗಳು ಆರ್ಥಿಕ ಸಂಕಷ್ಟಕ್ಕೊಳಗಿರುವ ಹಿನ್ನೆಲೆಯಲ್ಲಿ ಕೆಲವೊಂದು ನಿಬಂಧನೆಗಳ ಮೂಲಜ ತಾತ್ಕಾಲಿಕವಾಗಿ ರೂ.2000/- ನ್ನು ಪರಿಹಾರ ಧನವಾಗಿ ನೀಡುತ್ತಿದೆ.

    ಜೂನ್ 3 ರಿಂದ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಈ ಪರಿಹಾರ ಧನವನ್ನು ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಡಿಬಿಟಿ ಮೂಲಕ ವರ್ಗಾಯಿಸಲಾಗುವುದು. ಅರ್ಹ ಫಲಾನುಭವಿಗಳು ಸೇವಾ ಸಿಂಧು ಪೋರ್ಟಲ್ ಮೂಲಕ ಜೂನ್ 15, 2021 ರೊಳಗೆ ಸಲ್ಲಿಸಲು ಅವಕಾಶವಿದೆ.

    ಆನ್ಲೈನ್ ಮೂಲಕ ಅರ್ಹ ಫಲಾನುಭವಿಗಳು ಅರ್ಜಿಯನ್ನು ಸಲ್ಲಿಸಬಹುದು.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಆಫೀಸರ್ಸ್ ನೇಮಕ, ಜುಲೈ7 ರ ಮೊದಲು ಅರ್ಜಿ ಸಲ್ಲಿಸಿ

    ವೈಜ್ಞಾನಿಕ ಅಧಿಕಾರಿಗಳ ಆಯ್ಕೆ ಸಮಿತಿಯ ಅಧ್ಯಕ್ಷರು ಮತ್ತು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು ರವರು, ಕರ್ನಾಟಕ ರಾಜ್ಯ ನ್ಯಾಯ ವಿಜ್ಞಾನ ಪ್ರಯೋಗಾಲಯ ಮಡಿವಾಳ, ಬೆಂಗಳೂರು ಮತ್ತು ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯಗಳಲ್ಲಿ ಖಾಲಿ ಇರುವ ಮಿಕ್ಕುಳಿದ ವೃಂದದ ವೈಜ್ಞಾನಿಕ ಅಧಿಕಾರಿ ಹುದ್ದೆಗಳಿಗೆ ನೇಮಕ‌ ಮಾಡಲು ಕರ್ನಾಟಕ ರಾಜ್ಯ ಅಧಿಕೃತ ಪ್ರಕಟಣೆ ಹೊರಡಿಸಿದೆ.

    ಅರ್ಜಿ ಸಲ್ಲಿಸಲು ಆರಂಭಿಕ‌ ದಿನಾಂಕ : 07-06-2021 ಬೆಳಿಗ್ಗೆ ‌10.00 ಗಂಟೆಗೆ
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 07-07-2021 ಸಂಜೆ 06.00 ಗಂಟೆಗೆ

    ಹುದ್ದೆಗಳ ವಿವರ : ಜೀವ ಶಾಸ್ತ್ರ ವಿಭಾಗ – 12
    ರಸಾಯನ ಶಾಸ್ತ್ರ ವಿಭಾಗ – 8
    ನಾರ್ ಕೋಟಿಕ್ಸ್ ವಿಭಾಗ – 2
    ಭೌತಶಾಸ್ತ್ರ ವಿಭಾಗ -5
    ಡಿ.ಎನ್.ಎ ವಿಭಾಗ -2
    ಪ್ರಶ್ನಿತ ದಸ್ತಾವೇಜು ವಿಭಾಗ ;10
    ಅಗ್ನಿ ಅಸ್ತ್ರ ವಿಭಾಗ – 6
    ಫೊರೊನ್ಸಿಕ್ ಮನೋ ವಿಜ್ಞಾನ – 1
    ಕಂಪ್ಯೂಟರ್ ಫೊರೆನ್ಸಿಕ್ ವಿಭಾಗ – 5
    ಮೊಬೈಲ್ ಫೊರೆನ್ಸಿಕ್ ವಿಭಾಗ -5
    ಆಡಿಯೋ ವಿಡಿಯೋ ವಿಭಾಗ- 5
    ವಿಷ ವಿಜ್ಞಾನ ವಿಭಾಗ -21
    ಫೊಟೋಗ್ರಪಿ‌ ವಿಭಾಗ -2

    ವಯೋಮಿತಿ : ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷ ವಯಸ್ಸಾಗಿರಬೇಕು. ಹಾಗೂ ಈ ಕೆಳಕಂಡಂತೆ ಗರಿಷ್ಠ ವಯೋಮಿತಿಯನ್ನು ಮೀರಿರಬಾರದು.

    ಸಾಮಾನ್ಯ ವರ್ಷ 35, 2ಎ, 2 ಬಿ, 3 ಎ, 3 ಬಿ ಅಭ್ಯರ್ಥಿಗಳಿಗೆ 38 ವರ್ಷ, ಪ.ಜಾತಿ/ ಪ.ಪಂಗಡ/ ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷ ವಯೋಮಿತಿ ಹೊಂದಿರಬೇಕು.

    ಅರ್ಜಿ ಶುಲ್ಕ : ಸಾಮಾನ್ಯ ವರ್ಗ, ಪ್ರವರ್ಗ 2 ಎ, 2 ಬಿ, 3 ಎ,‌ 3 ಬಿ ಅಭ್ಯರ್ಥಿಗಳಿಗೆ ರೂ. 250/- ( ಪ್ರತಿ ವಿಭಾಗಕ್ಕೆ)
    ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ , ಪ್ರವರ್ಗ 1 ಕ್ಕೆ ಸೇರಿದ ಅಭ್ಯರ್ಥಿಗಳಿಗೆ ರೂ.100/- ( ಪ್ರತಿ ವಿಭಾಗಕ್ಕೆ)

    ಅರ್ಜಿಗಳನ್ನು ಇಲಾಖೆಯ ಅಧಿಕೃತ ವೆಬ್‌ಸೈಟ್‌ https://recruitment.ksp.gov.in ಆನ್ಲೈನ್ ಮುಖಾಂತರ ಮಾತ್ರ ಸಲ್ಲಿಸಬೇಕು.

    ಅರ್ಜಿಗಳನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಲು ಅವಕಾಶವಿರುವುದಿಲ್ಲ.

  • ಭಾರತೀಯ ರಿಸರ್ವ್ ಬ್ಯಾಂಕ್ ಬೆಂಗಳೂರು : ವೈದ್ಯಕೀಯ ಸಲಹೆಗಾರ ಹುದ್ದೆಗೆ ಅರ್ಜಿ ಆಹ್ವಾನ

    ಭಾರತೀಯ ರಿಸರ್ವ್ ಬ್ಯಾಂಕ್, ಬೆಂಗಳೂರು ಇಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

    ಹುದ್ದೆ : ಅರೆಕಾಲಿಕ ಹಾಗೂ ಗುತ್ತಿಗೆ ಆಧಾರದ ಮೇಲೆ ಬ್ಯಾಂಕ್ ನ ವೈದ್ಯಕೀಯ ಸಲಹೆಗಾರರ ಸ್ಥಾನವನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಿದೆ.

    ಒಟ್ಟು ಹುದ್ದೆ : 01 ಸ್ಥಾನಕ್ಕೆ ಅರೆಕಾಲಿಕ ಹಾಗೂ ಗುತ್ತಿಗೆ ಆಧಾರದ ಮೇಲೆ ( ಕೆಲಸ ಮಾಡಿದ ಗಂಟೆಗಳ ಆಧಾರದ ಮೇಲೆ ಸಂಭಾವನೆ) ಕೆಲಸ ನಿಗದಿಪಡಿಸಲಾಗಿದೆ.

    ಹುದ್ದೆ ಸ್ಥಳ : ಆರ್ ಬಿಐ ಅಧಿಕಾರಿಗಳ ಕ್ವಾರ್ಟರ್ಸ್, ಕಪಿಲ ಬ್ಲಾಕ್, ನ್ಯಾಷನಲ್ ಗೇಮ್ಸ್ ವಿಲೇಜ್, ಕೋರಮಂಗಲದಲ್ಲಿರುವ ಔಷಧಾಲಯದಲ್ಲಿ ಕಾರ್ಯ ನಿರ್ವಹಿಸಲು ಸಾಮಾನ್ಯ ಪ್ರವರ್ಗಕ್ಕೆ ಸೇರಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಜೂನ್ 28, 2021

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು www.rbi.org.in ಗೆ ಭೇಟಿ ನೀಡಬಹುದು.

  • BIS ನಲ್ಲಿ ಸೈಂಟಿಸ್ಟ್ ಬಿ ಹುದ್ದೆಗಳ ನೇಮಕ : ಆನ್ಲೈನ್ ಅರ್ಜಿ ಆಹ್ವಾನ

    ಆಹಾರ ಮತ್ತು ನಾಗರಿಕ ಪೂರೈಕೆ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣ ಹಾಗೂ ಗ್ರಾಹಕರ ವ್ಯವಹಾರ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಪ್ರಮಾಣೀಕರಣ ಸಂಸ್ಥೆ ( ಬಿಐಎಸ್) ದೇಶದ ರಾಷ್ಟ್ರೀಯ ಪ್ರಮಾಣೀಕರಣ ಸಂಸ್ಥೆ ಆಗಿದೆ.

    ಉತ್ಪನ್ನ ಪ್ರಮಾಣ ಪತ್ರ ನೀಡುವುದು, ಆಭರಣ ಪ್ರಮಾಣೀಕರಣ, ಪ್ರಯೋಗಾಲಯದ ಪರೀಕ್ಷೆ ಇತ್ಯಾದಿ ಪ್ರಮುಖ ಕೆಲಸಗಳನ್ನು ಬಿಐಎಸ್ ಕಂಪನಿ ನಿರ್ವಹಿಸುತ್ತದೆ.

    ಇಲ್ಲಿ ಪ್ರಸ್ತುತ ವಿವಿಧ ವಿಭಾಗ ಮತ್ತು ವರ್ಗಗಳಲ್ಲಿ ಸೈಂಟಿಸ್ಟ್ ಬಿ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಹುದ್ದೆಗಳ ವಿವರ : ಸಿವಿಲ್ ಇಂಜಿನಿಯರಿಂಗ್ – 13
    ಇನ್ಸ್ಟ್ರುಮೆಂಟೇಶನ್ ಇಂಜಿನಿಯರಿಂಗ್- 02
    ಎನ್ವಾರ್ನ್ಮೆಂಟಲ್ ಇಂಜಿನಿಯರಿಂಗ್- 02
    ಕೆಮಿಸ್ಟ್ರಿ – 07
    ಟೆಕ್ಸ್ ಟೈಲ್ ಇಂಜಿನಿಯರಿಂಗ್ – 04

    ಒಟ್ಟು ಹುದ್ದೆಗಳು : 28

    ವಯೋಮಿತಿ : ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಗರಿಷ್ಠ 30 ವರ್ಷ ನಿಗದಿಪಡಿಸಲಾಗಿದೆ. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ, ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ, ಅಂಗವಿಕಲ ಅಭ್ಯರ್ಥಿಗಳಿಗೆ 10. ವರ್ಷಗಳ ವಯೋಮಿತಿ ಸಡಿಲಿಕೆ ಕೇಂದ್ರ ಸರಕಾರದ ನಿಯಮಾನುಸಾರ ಅನ್ವಯವಾಗಲಿದೆ.

    ಅಭ್ಯರ್ಥಿಗಳನ್ನು 2019, 2020, 2021 ನೇ ಸಾಲಿನಲ್ಲಿ ಗಳಿಸಿದ ಗೇಟ್ ಅಂಕಗಳ ಆಧಾರದಲ್ಲಿ ಶಾರ್ಟ್ ಲಿಸ್ಟ್ ಮಾಡಿ ಆಯ್ಕೆ ಮಾಡಲಾಗುತ್ತದೆ.

    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 05-06-2021
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 25-06-2021

    ಅಭ್ಯರ್ಥಿಗಳು ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಲು ಈ ಲಿಂಕ್ ಕ್ಲಿಕ್ ಮಾಡಿ