Category: Govt Jobs

  • IOCL : ವಿವಿಧ ಹುದ್ದೆ, ಈ ಕೂಡಲೇ ಅರ್ಜಿ ಸಲ್ಲಿಸಿ

    ಇಂಡಿಯನ್ ಆಯಿಲ್ ಕಾರ್ಪೋರೇಶನ್ ಲಿಮಿಟೆಡ್ (ಐಒಸಿಎಲ್) ನಲ್ಲಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆಸಕ್ತರು ಆನ್‌ಲೈನ್ ಮೂಲಕ 30, ಜೂನ್ 2021 ರೊಳಗೆ ಸಲ್ಲಿಸಬಹುದು.

    ಭೂಗರ್ಭ ಶಾಸ್ತ್ರ ಸಲಹೆಗಾರ : 1 ಹುದ್ದೆ : ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 65 ವರ್ಷ ಮೀರಿರಬಾರದು. ಅಭ್ಯರ್ಥಿಗಳು ಅಂಗೀಕೃತ ಯುನಿವರ್ಸಿಟಿಯಿಂದ ಜಿಯಾಲಜಿ ತೇರ್ಗಡೆ ಹೊಂದಿರಬೇಕು.ಅಭ್ಯರ್ಥಿಗಳಿಗೆ ಕನಿಷ್ಠ ಇಪ್ಪತ್ತು ವರ್ಷ ಪೆಟ್ರೋಲಿಯಂ ಎಕ್ಸ್‌ಪ್ಲೋರೇಷನ್ ನಲ್ಲಿ ಅನುಭವವಿರಬೇಕು.
    ಡ್ರಿಲ್ಲಿಂಗ್ ಇಂಜಿನಿಯರ್ ( ಕನ್ಸಲ್ಟೆಂಟ್ ) : 1 ಹುದ್ದೆ: ಹುದ್ದೆಯ ಸ್ಥಳ : ಡೆಲ್ಲಿ. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ 65 ವರ್ಷ ಮೀರಿರಬಾರದು. ಅಭ್ಯರ್ಥಿಗಳು ಬಿಇ/ಬಿಟೆಕ್‌(ಮೆಕ್ಯಾನಿಕಲ್/ಪೆಟ್ರೋಲಿಯಂ ಇಂಜಿನಿಯರಿಂಗ್) ಡಿಗ್ರಿಯನ್ನು ಪಡೆದುಕೊಂಡಿರಬೇಕು.

    ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಿಂದ ಅರ್ಜಿ ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿ ಇ-ಮೇಲ್ ಮಾಡಬೇಕು.
    ಇ-ಮೇಲ್ ವಿಳಾಸ : [email protected]

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30-06-2021
    ನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ.

    ಅಧಿಕೃತ ವೆಬ್‌ಸೈಟ್‌ಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • NMPT : ವಿವಿಧ ಹುದ್ದೆಗೆ ನೇರ ಸಂದರ್ಶನಕ್ಕೆ ಆಹ್ವಾನ

    ನ್ಯೂ ಮಂಗಳೂರು ಪೋರ್ಟ್‌ ಟ್ರಸ್ಟ್‌ ( ಎನ್‌ಎಂಪಿಟಿ ) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಧಿಕೃತ ವೆಬ್‌ಸೈಟ್‌ ನಲ್ಲಿ ಪ್ರಕಟಣೆ ಹೊರಡಿಸಿದೆ. ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಿ ಅರ್ಜಿಯನ್ನುಸಲ್ಲಿಸಬಹುದು.

    ವಿಟಿಎಸ್ ಮ್ಯಾನೇಜರ್ ( ಮಾಸ್ಟರ್ ಮ್ಯಾನೇಜರ್ ) -03 ಹುದ್ದೆಗಳು . ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ ೫೫ ವರ್ಷ ಮೀರಿರಬಾರದು.

    ಅಭ್ಯರ್ಥಿಗಳು ತಮ್ಮ ಬಯೋಡೇಟಾ ಜೊತೆಗೆ ಮೂಲ ದಾಖಲಾತಿಗಳೊಂದಿಗೆ ಎರಡು ಜೆರಾಕ್ಸ್ ಪ್ರತಿಗಳೊಂದಿಗೆ ಜೊತೆಗೆ ಎರಡು ಪ್ರತಿ ಇತ್ತೀಚಿನ ಪಾಸ್‌ಪೋರ್ಟ್‌ ಸೈಜಿನ ಫೊಟೋದೊಂದಿಗೆ ಹಾಜರಾಗಬೇಕು.

    ನೇರ ಸಂದರ್ಶನ ದಿನಾಂಕ ಮತ್ತು ಸಮಯ : ದಿನಾಂಕ 14-06-2021 ಅಥವಾ ನೇರ ನೇಮಕಾತಿ ಹುದ್ದೆ ಭರ್ತಿ ಆಗುವವರೆಗೆ ಯಾವುದು ಮೊದಲೋ ಅಲ್ಲಿಯವರೆಗೆ. ( ಸಮಯ 3.00 PM ರಿಂದ 4.00 PM ರವರೆಗೆ.

    ನೇರ ಸಂದರ್ಶನ ವಿಳಾಸ: Chamber of the Chairman, New Mangalore Port Trust, Panambur, Mangalore Karnataka- 575010

    ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು. 0824-2887250 ಸಮಯ ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ.

    ಅಭ್ಯರ್ಥಿಗಳು ನೋಟಿಫಿಕೇಶನ್‌ಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • ICAR NIVEDI : ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

    ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೆಟರಿನರಿ ಎಪಿಡೆಮಿಯೋಲಜಿ ಆಂಡ್ ಇನ್ಫಾರ್ಮೆಟಿಕ್ಸ್ ಬೆಂಗಳೂರು ಕಛೇರಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ವಿವರಗಳನ್ನು ಓದಿ ಅರ್ಜಿಯನ್ನು ಸಲ್ಲಿಸಬಹುದು.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 18-06-2021
    ಸಂದರ್ಶನದ ದಿನಾಂಕ : 23-06-2021 ಮತ್ತು 24-06-2021 ರಂದು ಬೆಳಿಗ್ಗೆ 10.30 ಗಂಟೆಯಿಂದ ಸಂದರ್ಶನ ನಡೆಯಲಿದೆ.
    ಸಂದರ್ಶನ ಸ್ಥಳ : ಐಸಿಎಆರ್ – ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೆಟರಿನರಿ ಎಪಿಡೆಮಿಯೋಲಜಿ ಆಂಡ್ ಡಿಸೀಸ್ ಇನ್ಫಾಎfಮೆಟಿಕ್ಸ್ ಯಲಹಂಕ, ಬೆಂಗಳೂರು – 560064

    ಹುದ್ದೆಗಳ ವಿವರ : ರಿಸರ್ಚ್‌ ಅಸೋಸಿಯೇಟ್ 111 -1
    ಜೂನಿಯರ್ ರಿಸರ್ಚ್ ಫೆಲೋ -1
    ಲ್ಯಾಬ್ ಅಸಿಸ್ಟೆಂಟ್ – 1
    ಪ್ರಾಜೆಕ್ಟ್ ಅಸೋಸಿಯೇಟ್ 1- 2
    ಫೀಲ್ಡ್ ಅಸಿಸ್ಟೆಂಟ್ – 1
    ಸೀನಿಯರ್ ರಿಸರ್ಚ್ ಫೆಲೋ-2
    ಯಂಗ್ ಪ್ರೊಫೆಷನಲ್ 11- 7

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

    ನೋಟಿಫಿಕೇಶನ್

  • ಸಶಸ್ತ್ರ ಮೀಸಲು ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್ ಹುದ್ದೆಗಳ ಆಯ್ಕೆ ಪಟ್ಟಿ ಬಿಡುಗಡೆ

    ಕರ್ನಾಟಕ ಪೊಲೀಸ್ ಇಲಾಖೆಯು 2019 ನೇ ಸಾಲಿನ ಸಶಸ್ತ್ರ ಮೀಸಲು ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 5 ನೇ ತತ್ಕಾಲಿಕ ಆಯ್ಕೆಪಟ್ಟಿಯನ್ನು ಈಗ ಬಿಡುಗಡೆ ಮಾಡಲಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಕೆಎಸ್‌ಪಿ ವೆಬ್‌ಸೈಟ್ ಗೆ ಭೇಟಿ ನೀಡಿ ಮಾಹಿತಿಯನ್ನು ಪಡೆದುಕೊಳ್ಳಬಹುದು.

    ಜುಲೈ 2019 ರಂದು ಪೊಲೀಸ್ ಇಲಾಖೆಯ 40 ಸಶಸ್ತ್ರ ಮೀಸಲು ಪೊಲೀಸ್ ಸಬ್‌ಇನ್ಸ್‌ಪೆಕ್ಟರ್‌ ನೇಮಕಕ್ಕೆ ಸಂಬಂಧಿಸಿದಂತೆ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿತ್ತು. 2020 ರ ಜನವರಿ 19 ರಂದು ಲಿಖಿತ ಪರೀಕ್ಷೆಯನ್ನು ನಡೆಸಲಾಗಿತ್ತು. ನೇಮಕ ಪ್ರಕ್ರಿಯೆ ಮುಗಿದ ನಂತರ ಈಗ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

    ಈ ಆಯ್ಕೆ ಪಟ್ಟಿಯು ನಿಯಮಗಳನುಸಾರ ರಚಿಸಿರುವ ವೈದ್ಯಕೀಯ ಮಂಡಳಿಯು ನಡೆಸುವ ವೈದ್ಯಕೀಯ ಪರೀಕ್ಷೆಯ ಫಲಿತಾಂಶಗಳಿಗೆ ಒಳಪಟ್ಟಿರುವುದರಿಂದ ಆಯ್ಕೆ ಪಟ್ಟಿಯಲ್ಲಿ ಹೆಸರು ಇದ್ದ ಕಾರಣದಿಂದ ಸದರಿಯವರಿಗೆ ಹುದ್ದೆಯ ನೇಮಕಾತಿಗೆ ಸಂಬಂಧಿಸಿದಂತೆ ಯಾವುದೇ ರೀತಯ ಕಾನೂನಾತ್ಮಕ ಹಕ್ಕು ಇರುವುದಿಲ್ಲ.

    ಸಶಸ್ತ್ರ ಮೀಸಲು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ತಾತ್ಕಾಲಿಕ ಆಯ್ಕೆ ಪಟ್ಟಿ ಚೆಕ್ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ

  • DHFWS ಚಾಮರಾಜನಗರ : ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ

    ಕೋವಿಡ್ -19 ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ, ಚಾಮರಾಜನಗರ ಈ ಕಚೇರಿಯ ಅಧೀನ ಸಂಸ್ಥೆಗಳಲ್ಲಿ ಖಾಲಿ ಇರುವ ಶುಶ್ರೂಷಕರು, ಕಿರಿಯ ವೈದ್ಯಕೀಯ ಪ್ರಯೋಗಶಾಲ ತಂತ್ರಜ್ಞರು ಹಾಗೂ ಫಾರ್ಮಸಿಸ್ಟ್ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನಿಯಮಾನುಸಾರ ಮೆರಿಟ್ ಕಂ ರೋಸ್ಟರ್ ಮೂಲಕ ದಿನಾಂಕ 30-09-2021 ರ ವರೆಗೆ ಅಥವಾ ನೇರ ನೇಮಕಾತಿ ಹುದ್ದೆಗಳು ಭರ್ತಿ ಮಾಡುವವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ನೇಮಕಾತಿ ಮಾಡಲು ಹಾಗೂ ಕಚೇರಿಯ ಅಧೀನ ತಾಲ್ಲೂಕು ಆಸ್ಪತ್ರೆಗಳಲ್ಲಿ ಕೋವಿಡ್-19 ಸೋಂಕಿತರಿಗೆ ಚಿಕಿತ್ಸೆ ನೀಡಲು 6 ಐಸಿಯು ಹಾಸಿಗೆಗಳನ್ನು ಕಾರ್ಯಗತಗೊಳಿಸುವ ಸಲುವಾಗಿ ವೈದ್ಯಾಧಿಕಾರಿ 8 ಹುದ್ದೆಗಳನ್ನು ತಾತ್ಕಾಲಿಕವಾಗಿ 06 ತಿಂಗಳ ಅವಧಿಗೆ ನೇಮಕಾತಿ ಮಾಡಲು ಹುದ್ದೆಗಳ ಮುಂದೆ ನಮೂದಿಸಿರುವ ದಿನಾಂಕದಂದು ನೇರ ಸಂದರ್ಶನವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಕೊಠಡಿ ಸಂಖ್ಯೆ 312, ಮೂರನೇ ಮಹಡಿ, ಜಿಲ್ಲಾಡಳಿತ ಭವನ, ಚಾಮರಾಜನಗರ ಇಲ್ಲಿ ಏರ್ಪಡಿಸಲಾಗಿದೆ. ಆಸಕ್ತರು ತಮ್ಮ ಮೂಲ ಅಂಕಪಟ್ಟಿ ಮತ್ತು ಪ್ರಮಾಣ ಪತ್ರಗಳು ( 1 ಜೊತೆ ಜೆರಾಕ್ಸ್ ಪ್ರತಿ) ಹಾಗೂ ಸ್ವ ವಿವರಗಳೊಂದಿಗೆ ನೇರಸಂದರ್ಶನಕ್ಕೆ ಹಾಜರಾಗುವುದು. ಹೆಚ್ಚಿನ ಮಾಹಿತಿಗಾಗಿ ಮೇಲ್ಕಂಡ ಕಚೇರಿಯನ್ನು ಕರ್ತವ್ಯದ ವೇಳೆಯಲ್ಲಿ ಸಂಪರ್ಕಿಸುವುದು.

    ಹುದ್ದೆಯ ಹೆಸರು : ವೈದ್ಯಾಧಿಕಾರಿ 8 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಎಂಬಿಬಿಎಸ್ ತೇರ್ಗಡೆ ಹೊಂದಿರಬೇಕು. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.60,000/- ವೇತನವಿರುತ್ತದೆ.

    ಶುಶ್ರೂಷಾಧಿಕಾರಿ: 04 ಹುದ್ದೆ : ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.25,000/- ಮಾಸಿಕ ವೇತನವಿರುತ್ತದೆ. ಅಭ್ಯರ್ಥಿಗಳು ಜಿಎನ್ ಎಂ ನ್ನು ಅಂಗೀಕೃತ ನರ್ಸಿಂಗ್ ಕೌನ್ಸಿಲ್ ನಿಂದ ಪಡೆದುಕೊಂಡಿರಬೇಕು.

    ಪ್ರಯೋಗ ಶಾಲಾ ತಂತ್ರಜ್ಞರು : 15 ಹುದ್ದೆಗಳು : ಈ ಹುದ್ದೆಗೆ ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ ಜೊತೆಗೆ ಡಿಎಂಎಲ್ ಟಿ ಅಥವಾ ಪಿಯುಸಿ ಜೊತೆಗೆ ಪ್ಯಾರಾಮೆಡಿಕಲ್ ಬೋರ್ಡ್ ಲ್ಯಾಬ್ ಟೆಕ್ನಿಶಿಯನ್ ಹೊಂದಿರ ಬೇಕು. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.20,000/- ವೇತನವಿರುತ್ತದೆ.

    ಫಾರ್ಮಸಿಸ್ಟ್ : 26 ಹುದ್ದೆಗಳು : ಈ ಹುದ್ದೆಗೆ 2 ವರ್ಷಗಳ ಡಿಪ್ಲೋಮಾ ಕೋರ್ಸ್ ಡಿಫಾರ್ಮಾ ದಲ್ಲಿ ಹೊಂದಿರಬೇಕು. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.20,000/- ವೇತನವಿರುತ್ತದೆ.

    ವಯೋಮಿತಿ : ಜನರಲ್ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 38 ವರ್ಷ, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಸಿಎಟಿ1 ಅಭ್ಯರ್ಥಿಗಳಿಗೆ 40 ವರ್ಷ ಮೀರಿರಬಾರದು.

    ನೇರ ಸಂದರ್ಶನ ನಡೆಯುವ ದಿನಾಂಕ ಮತ್ತು ಸಮಯ: 11-06-2021 ಸಮಯ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ.

  • ಕೃಷಿ ವಿಶ್ವವಿದ್ಯಾಲಯ ಧಾರವಾಡ : ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗೆ ನೇರ ಸಂದರ್ಶನ

    ಕೃಷಿ ವಿಶ್ವವಿದ್ಯಾಲಯ ಧಾರವಾಡ, ಸ್ನಾತಕೋತ್ತರ ಶಿಕ್ಷಣ ನಿರ್ದೇಶನಾಲಯ, ಕೃಷಿ ನಗರ ಧಾರವಾಡ ಅಡಿಯಲ್ಲಿ ವಿವಿಧ ಡಿಪ್ಲೋಮಾ ಮಹಾ ವಿದ್ಯಾಲಯದಲ್ಲಿ ತಾತ್ಕಾಲಿಕ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಿದೆ.

    ಹುದ್ದೆ: ಟೆಕ್ನಿಕಲ್ ಅಸಿಸ್ಟೆಂಟ್ – 01

    ಹುದ್ದೆ ಅವಧಿ : 179 ದಿನಗಳವರೆಗೆ ತಾತ್ಕಾಲಿಕವಾಗಿ ತೊಡಗಿಸಿಕೊಳ್ಳಲಾಗುವುದು.

    ವೇತನ : ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 21,600/- ವೇತನ ನಿಗದಿಪಡಿಸಲಾಗಿದೆ.

    ವಯೋಮಿತಿ : ಸಾಮಾನ್ಯ ಅಭ್ಯರ್ಥಿಗಳಿಗೆ 35 ವರ್ಷ, ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 38 ವರ್ಷ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

    ಸಂದರ್ಶನವು ದಿನಾಂಕ 21-06-2021 ರಂದು ಬೆಳಿಗ್ಗೆ 11 ಗಂಟೆಗೆ ಡೀನ್(ಸ್ನಾತಕೋತ್ತರ ಕಚೇರಿ), ಕೃ.ವಿ.ವಿ ಧಾರವಾಡದಲ್ಲಿ ಆನ್ಲೈನ್ ಮೂಲಕ ನಡೆಯಲಿದೆ.

    ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯ ಬಯೋಡೇಟಾ, ಮೂಲ ಅಂಕಪಟ್ಟಿಗಳು ಮತ್ತು ಕೆಲಸದ ಅನುಭವದ ಪ್ರಮಾಣ ಪತ್ರಗಳನ್ನು ಈ ಇ- ಮೇಲ್ [email protected] ವಿಳಾಸಕ್ಕೆ ದಿನಾಂಕ 19-06-2021 ರ ಬೆಳಿಗ್ಗೆ 10.00 ಗಂಟೆಯೊಳಗಾಗಿ ಸ್ಕ್ಯಾನ್ ಪ್ರತಿ ಸಲ್ಲಿಸತಕ್ಕದ್ದು.

    ಸಂದರ್ಶನದ ಆನ್ಲೈನ್ ಜ಼ೂಮ್ ಮೀಟಿಂಗ್ ಐಡಿ ಮತ್ತು ಪಾಸ್ ವರ್ಡ್ ನ್ನು ದಿನಾಂಕ 19-06-2021ರ ಸಾಯಂಕಾಲ 5.00 ರ ಒಳಗಾಗಿ ತಿಳಿಸಲಾಗುವುದು.

    ನೋಟಿಫಿಕೇಶನ್